Skip to main content

Posts

Showing posts from October, 2022

ಪ್ರಕೃತಿ ಸೌಂದರ್ಯ

ಪ್ರಕೃತಿ ಸೌಂದರ್ಯ ಮೂಡಣ ಬಾನಲಿ ಮೂಡಿದ ದಿನಕರ ತೊಡಿಸಿದ ಬಣ್ಣದ ಅಂಗೀಯನು ಮೋಡಿಯ ಮಾಡುತ ಕಣ್ಣನು ಸೆಳೆದನು ಕಾಡುತ ಮುದವನು ತುಂಬಿದನು ಕಾಡಿನ ಎಡೆಯಲಿ ನಲಿಯುತ ಹಕ್ಕಿಯು ಹಾಡಿತು ರಾಗದಿ ಮುದದಿಂದ ಬಾಡಿದ ಜೀವಕೆ ಹುರುಪನು ತುಂಬುತ ಹರಡಿದ  ಬಣ್ಣವ ಭರದಿಂದ ಹಕ್ಕಿಗಳೆಲ್ಲವು. ಬಾನಲಿ ಹಾರುತ ಚುಕ್ಕಿಗಳಂತೆಯೇ ಕಾಣುತಿವೆ ಮಕ್ಕಳ ಮನವನು ತನ್ನೆಡೆ ಸೆಳೆಯುತ ರೆಕ್ಕೆಯ ಬಡಿಯುತ ಹಾರುತಿವೆ ಹೂಗಳು ಅರಳುತ ಗಂಧವ ಚೆಲ್ಲುತ ಸೊಗದಲಿ ಸೆಳೆಯಿತು ರಸಿಕರನು ಬಗೆ ಬಗೆ ಬಣ್ಣವ ತುಂಬಿದ ಸುಮಗಳು ನಗುತಲಿ  ಕರೆದಿವೆ ದುಂಬಿಯನು ಸುಂದರ ಪ್ರಕೃತಿಯು ಮುದದಲಿ ನಲಿಯುತ ಕಂದನ ತೆರದಲಿ ಮನ ಸೆಳೆಯುತಿದೆ ಬಂಧವ ಬೆಸೆಯುತ ಮೈಮನ ಮರೆಯಿಸಿ ಕುಂದಿದ ಜೀವಕೆ ಮುದ ತುಂಬುತಿದೆ ಪಂಕಜಾ.ಕೆ. ಮುಡಿಪು

ಮನೆ ಬೆಳಗುವ ಹೆಣ್ಣು. ಲಲಿ ರಗಳೆ

  ಲಲಿತ ರಗಳೆ         ಮನೆ ಬೆಳಗುವ ಹೆಣ್ಣು ಅರಳಿರುವ ಮಲ್ಲಿಗೆಯ ಮಾಲೆಯನು ಕಟ್ಟುತಲಿ ಕರಗಳಲಿ ಹಿಡಿಯುತ್ತ  ನಡೆಯುವಳು ಹರುಷದಲಿ ಹರನನ್ನು ನೆನೆಯುತ್ತ ಭಕುತಿಯಲಿ ಬೇಡುವಳು ಶಿರಬಾಗಿ ನಮಿಸುತ್ತ ಮೈಮರೆತು ನಿಲ್ಲುವಳು ಕಂಗಳಲಿ ಕಾಂತಿಯನು  ತುಂಬುತಿದೆ   ಸವಿಕನಸು ಹೊಂಗನಸ ಕಾಣುತಿದೆ ತರುಣಿಯಾ ಮೈಮನಸು  ಮಂಗಳದ ಸುದಿನಕ್ಕೆ ಕಾಯುತಲಿ ನಿಂತಿಹಳು ರಂಗನ್ನು ಬಳಿಯುತಿದೆ ಇನಿಯನಾ ನಗೆಮುಗುಳು  ಹಸನಾದ  ಹೆಣ್ಣಿವಳು ಮನೆಬೆಳಗೊ ಮಗಳಿವಳು ನಸುನಗುತ ಮನೆಮಂದಿ ಜತೆಯಲ್ಲಿ ಬಾಳುವಳು ಹಸುವಂತ ಮನದವಳು ಮನೆ ಮನವ ತುಂಬಿದಳು ತುಸು ತುಸುವೆ ಅಮೃತವ ನೆಲ್ಲರಿಗೆ ಉಣಿಸುವಳು ಪಂಕಜಾ .ಕೆ. ಮುಡಿಪು  

ಜಾಲತಾಣ

  ಮಾಗಿಯ ಚಳಿ   ವಾರ್ಧಕ  ಷಟ್ಪದಿ   ಮಾಗಿಯಾ  ಚಳಿಗಾಳಿ ಬೀಸುತಿದೆ  ಬಿರುಸಿನಲಿ ಬಾಗುತಾ ತರುಲತೆಯು  ನಲಿಯುತಿದೆ ಹರುಷದಲಿ ತೂಗುತಿದೆ ನೋಡುಗರ ಮನಸನ್ನು ಸೆಳೆಯುತ್ತ ಹೊಸ ಕನಸು ಬಿತ್ತುತ್ತಲಿ ಸಾಗುತಿಹ ಮೋಡಗಳು ಚಿತ್ರಗಳ ಬರೆಯುತ್ತ ಬೀಗುತಿದೆ ಮರಗಿಡವು  ಹಸಿರುಟ್ಟು ನಲಿಯುತ್ತ ಬೇಗೆಯಲಿ ಬೇಯುತಿಹ  ಮನುಜನಾ ಮನಸಿನಲಿ  ಹುರುಪನ್ನು ತುಂಬುತ್ತಲಿ ಹಾಡುತಿದೆ ಕೋಗಿಲೆಯು ಮುದದಿಂದ  ಕುಣಿಯುತ್ತ ಕಾಡುತಿದೆ  ಚಿಗುರುತಿಹ ವನರಾಜಿ ಮೈಮನವ ಮಾಡುತಿದೆ   ಮೋಡಿಯನು  ಕೈಬೀಸಿ ಕರೆಯುತ್ತ   ರಸಿಕರಾ ತನುಮನವನು ಬಾಡಿರುವ  ಜೀವಕ್ಕೆ   ಹೊಸತನವ ಕೊಡುತಿದ್ದು ಜಾಡಿಸುತ   ತುಂಬಿರುವ ಜಡತೆಯನು ಕಳೆಯುತ್ತ ನಾಡಿನೆಲ್ಲರ ಮನಕೆ  ಸಡಗರವ  ತುಂಬಿಸುತ  ಬಂದಿಹುದು   ದೀಪಾವಳಿ ಪಂಕಜಾ.ಕೆ. ಮುಡಿಪು  

ಮಾಗಿಯ ಚಳಿ