Skip to main content

Posts

Showing posts from June, 2023

ಮರಳಿ ಗೂಡಿಗೆ ಕಥೆ

ಕಿರುಗತೆ* ಮರಳಿ ಗೂಡಿಗೆ ತಮ್ಮ ಮನೆಯ ವರಾಂಡದಲ್ಲಿ ಆರಾಮವಾಗಿ ಪೇಪರ್ ಓದುತ್ತಾ ಕುಳಿತಿದ್ದ ರಾಯರಿಗೆ ಮೊಬೈಲ್ನ ರಿಂಗ್  ಎಚ್ಚರಿಸಿತು.ಆ ಕಡೆಯಿಂದ ಬೀಗರು‌ ಶ್ಯಾಮಣ್ಣನವರ ಆತಂಕದ ಧ್ವನಿ ಕೇಳಿಸಿತು.ಅಂಜಲಿ ರಮೇಶ್ ಇಬ್ಬರೂ ಅಮೆರಿಕಾದಿಂದ ವಾಪಸ್ ಬರ್ತಾ ಇದ್ದಾರೆ.ಅವರಿಗೆ ಅಲ್ಲಿ ಏನೋ ತೊಂದರೆಯಾಗಿದೆ..ತುಂಬಾ ಒತ್ತಡದಲ್ಲಿದ್ದಾರೆ ಅನ್ನಿಸ್ತು ಇಂದು ಸಂಜೆ‌ ನೀವು‌ ಬನ್ನಿ.ಎಲ್ಲರೂ ಒಟ್ಟಿಗೆ ಕೂತು ಮಾತಾಡೋಣ ಎಂದರು ಶ್ಯಾಮಣ್ಣ..ಅವರ ಮಾತು ಕೇಳುತ್ತಲೇ ರಾಯರಿಗೆ ಸಿಡಿಲು ಬಡಿದಂತಾಯ್ತು.. ಖಾಸಗಿ ಕಂಪನಿಯೊಂದರಲ್ಲಿ ಗುಮಾಸ್ತರಾಗಿ ಬಡತನದಲ್ಲೇ ಬದುಕಿದ ರಾಯರು ಹೆಂಡತಿ ತೀರಿಕೊಂಡ ನಂತರ ಒಬ್ಬಳೇ ಮಗಳು ಅಂಜಲಿಗಾಗಿ ಬಹಳ ಕಷ್ಟದ ಬಾಳುವೆ‌ ನಡೆಸಿದ್ದರು..ತಾಯಿ ಇಲ್ಲದ ಮಗಳೆಂದು ಅಂಜಲಿಯನ್ನು ಅತ್ಯಂತ ‌ಪ್ರೀತಿಯಿಂದ‌ ಬೆಳೆಸಿದ್ದರು..ಅಂಜಲಿಯೂ ಸಹ‌ ಬಡತನವಿದ್ದರೂ ಜಾಣತನದಿಂದ ಅಚ್ಚುಕಟ್ಟಾಗಿ ಮನೆ ಕೆಲಸ, ಅಡುಗೆ,,ಕಾಲೇಜು ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಳು.ತಂದೆಯವರ,ಅತಿಥಿ ಅಭ್ಯಾಗತರ ಕಾಳಜಿ ವಹಿಸುತ್ತ ಎಲ್ಲರ ಅಚ್ಚುಮೆಚ್ಚಿನವಳಾಗಿದ್ದಳು. ಅಂಜಲಿ ಕಾಲೇಜು ಮುಗಿಸುವ ಮೊದಲೇ ವಿದೇಶದಲ್ಲಿ ನೌಕರಿ ಮಾಡುವ ವರ ಸಿಕ್ಕನೆಂದು ರಾಯರು ರಮೇಶ್ ನೊಡನೆ ಮದುವೆ ಮಾಡಿ ಕೊಟ್ಟಿದ್ದರು.ಮಗಳು ಅಳಿಯ ಇಬ್ಬರೂ ಅಮೆರಿಕಾಕ್ಕೆ ಹೋಗಿ ಆರು ತಿಂಗಳಲ್ಲೇ ಮತ್ತೆ ವಾಪಸ್ ಬರುತ್ತಿದ್ದಾರೆ.ಅವರಿಗೆ ದೇಶ ಬಿಟ್ಟು ಬರುವಂತಹ ಏನು ಸಮಸ್ಯೆ ಬಂದಿರಬಹುದೆಂಬ ರಾಯರಿಗೆ ಚಿಂತೆ ಕ

ಹೆತ್ತವರ ಮರೆಯದಿರು

ಹೆತ್ತವರ ಮರೆಯದಿರು ನಡೆಯುತ್ತ ಏರುತಿರೆ ಯಶಸ್ಸಿನ ಶಿಖರವನು ಹಿಂತಿರುಗಿ ನೋಡೊಮ್ಮೆ ನೀನಡೆದ ಹಾದಿಯನು ಕಷ್ಟದ ಪಯಣದಲಿ  ಹೆಗಲಾಗಿ ನಿಂದವರು  ನೋವಿನಲೂ ನಲಿವಿನಲೂ ಜತೆಯಾಗಿ  ಬಂದವರು ತನುಮನದ  ಬೇಸರವ  ಕಳೆದೊಯ್ದು ಬಿಟ್ಟವರು ದಿಟ್ಟ ಹೆಜ್ಜೆಯನಿಡಲು ಕೈ ಹಿಡಿದು ನಡೆಸಿದವರು   ಜೀವನದ ಗುರಿಯನ್ನು  ತೋರಿದಾ   ಹೆತ್ತವರನು ಎಂದೆಂದೂ ಮರೆಯದಿರು  ನೀನವರ  ಪ್ರೀತಿಯನು ಮುಪ್ಪಿನಲಿ ಅವರನ್ನು ಕಡೆಗಣಿಸದಿರು ನೀನು ಮತ್ತೆಂದೂ ಸಿಗಲಾರದ  ಮುತ್ತವರು ತಿಳಿ ನೀನು ಶ್ರೀಮತಿ ಪಂಕಜಾ. ಕೆ. ರಾಮಭಟ್

ಸಾವಿತ್ರಿ ಕವನ ಸಂಕಲನಡಬಗ್ಗೆ ಆತ್ಮೀಯರ ನುಡಿ

ಸಾವಿತ್ರಿಯ ಎದೆಯೊಳಗೊಂದು ಭಾವನಾತ್ಮಕ ಸುತ್ತು. **************** ಪುರಾಣ ಕಾಲದಿಂದಲೂ ಸತ್ಯವಾನ ಸಾವಿತ್ರಿ ಎಂದೇ ಹೆಸರಾದ  ಅದೇ ಹೆಸರಿನಿಂದ ಕೂಡಿದ    "ಸಾವಿತ್ರಿ" ಎಂಬ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕವಾಗಿದೆ. ಈ ಕವನ ಸಂಕಲನದ  ಕವಯತ್ರಿ ಅಂಚೆ ಇಲಾಖೆಯಿಂದ ನಿವೃತ್ತಿಗೊಂಡು ಮೊದಲಿನ ಕನಸುಗಳಿಗೆ ಸಮಯವನ್ನು ಜೋಡಿಸಿಕೊಂಡು‌ ಕವಿತೆ ಲೇಖನಗಳ ಬರೆಯುವ ಪ್ರವೃತ್ತಿಯವರಾದ "ಶ್ರೀಮತಿ ಪಂಕಜಾ ಕೆ ಮುಡಿಪು" ದಕ್ಷಿಣ ಕನ್ನಡ ಜಿಲ್ಲೆಯವರು. ನಿಸರ್ಗ, ದೇವರು, ಪ್ರೀತಿ, ಬಾಲ್ಯ, ಯೌವನ, ಮುಪ್ಪು, ದಾಂಪತ್ಯ.....ಹೀಗೆ ಹತ್ತಾರು ಸಂವೇದನೆಯ ರೂಪದಲ್ಲಿ ಕವಿತೆಗಳ ಅನಾವರಣಗೊಳಿಸಿದ ಈ ಕವಯತ್ರಿ ಅನೇಕ ಮಾಸಪತ್ರಿಕೆ, ಪಾಕ್ಷಿಕ ಪತ್ರಿಕೆ, ವಾರಪತ್ರಿಕೆಗಳಲ್ಲಿ ತಮ್ಮ ಬರಹಗಳ ಛಾಪನ್ನು ಮೂಡಿಸಿಕೊಂಡವರು. ಕವಿತೆಗಳ ಭಾವದೊಂದಿಗೆ ಹೆಚ್ಚು ಲೀನವಾಗುವ ಇವರ ಬರಹಗಳು ಓದುಗನೆದೆಗೆ Touch ಕೊಡುವುದು ಸತ್ಯ‌.ಮಾತೆಲ್ಲವೂ ಹಿತಮಿತವಾಗಿ ಭಾವನೆಯ ವಿಸ್ತರಣೆ ಇವರ  ಕವಿತೆಗಳ *Special lines*. ದೇಶ, ಭಾಷೆ, ಯೋಧನ ಮೇಲಿನ ಕವಿತೆಗಳು ಇವರ ಅದ್ಭುತ ವಾಕ್ ಚಾತುರ್ಯ ಹಾಗೂ ಒಳ‌ಮನಸ್ಸಿನ ಬಯಕೆಗಳನ್ನು ಉದ್ದೀಪನ ಗೊಳಿಸುತ್ತವೆ. ಹೇಳಬೇಕಾದ್ದನ್ನು ಎಲ್ಲೂ ನೋವಾಗದಂತೆ ಹೇಳುವ ಜಾಣ್ಮೆ ಈ ಕವಯತ್ರಿಯಲ್ಲಿ ಅಡಗಿದೆ. ಸಾವಿತ್ರಿ ಪುಸ್ತಕಕ್ಕೆ  ಶ್ರೀ ಗುಣಾಜೆ ರಾಮಚಂದ್ರ ಭಟ್ ಅವರ ಬಹು ಉತ್ತಮ ಮುನ್ನುಡಿಯಿದೆ. ಎಂ ಸುಬ್ರಹ್ಮಣ್ಯ ಭಟ್ಟ ಅವರ ಹ