Skip to main content

Posts

Showing posts from September, 2019

ಗಾಂಧಿ ತಾತ

ಗಾಂಧಿ ತಾತ ನುಡಿದಂತೆ ನಡೆದ ಕಾಯಕ ಯೋಗಿ ಸ್ವಚ್ಛ ಭಾರತದ ಕನಸನು ಕಂಡ ತ್ಯಾಗಿ ಆಡಂಬರದ ಬದುಕಿಗೆ ಬದ್ಧ ವಿರೋಧಿ ಇವರೇ ನಮ್ಮ ಗಾಂಧಿ ತಾತ ಶಾಂತಿಯ ಮಂತ್ರವ ಜಪಿಸಿದ ದೂತ ಭಾರತ ದೇಶಕೆ ಸ್ವಾತಂತ್ರ್ಯ ತಂದು ಕೊಟ್ಟ ಪಿತ ಅಹಿಂಸೆಯ ಮಂತ್ರವ ಜಗಕೆ ಸಾರಿದವರೀತ ಅವರೇ ನಮ್ಮ ಗಾಂಧಿ ತಾತ ಸರಳತೆ ಪ್ರಾಮಾಣಿಕತೆಯನು  ಮೆರೆದವರೀತ ಸತ್ಯಾಗ್ರಹ ಉಪವಾಸಗಳ ಮಹತ್ವವ ತೋರಿದವರೀತ ಬ್ರಿಟಿಷರ ಗುಂಡಿಗೆ ಎದೆಯನು ಒಡ್ಡಿದ ಧೀರ ಅವರೇ ನಮ್ಮ ಗಾಂಧಿ ತಾತ ಭಾರತ ಕೀರ್ತಿಯ ಜಗದಗಲ ಹರಡಿದ ಸುಪುತ್ರ ಅಸ್ಪೃಶ್ಯತೆ ಯ ನಿವಾರಣೆಗೆ ಪಣ ತೊಟ್ಟ ಸಂತ ಪಾರದರ್ಶಕತೆಯ ಮೆರೆದ ಮಹಾತ್ಮ ಅವರೇ ನಮ್ಮ ಗಾಂಧಿ ತಾತ ಪಂಕಜಾ.ಕೆ

ಸ್ವಚ್ಛ ಭಾರತ. 2

ಸ್ವಚ್ಛ ಭಾರತ ಮಹಾತ್ಮ ಗಾಂಧಿಯವರು ಕಂಡ ಕನಸು ಅದುವೇ ಸ್ವಚ್ಛ ಭಾರತದ ಕನಸು ನನಸಾಯಿತೆ ಅವರ ಈ ಕನಸು ಎಲ್ಲೆಲ್ಲೂ ತುಂಬಿದೆ ಕಸದ ತ್ಯಾಜ್ಯ ಸುರಿಯುವರು ರಸ್ತೆಗೆ ಮನೆ ಮನೆಯ ತ್ಯಾಜ್ಯ ಇದರಿಂದ ಹರಡುತಿದೆ ಹೆಸರಿಲ್ಲದ ರೋಗ ಆಗಬೇಕು ಸ್ವಚ್ಛತೆಯು ಜೀವನದ ಭಾ ಗ ಮಾತಿನಲಿ ಹೇಳದೆ ಮಾಡಬೇಕು ಕಾಯಕ ಪ್ರತಿಯೊಬ್ಬರ ಮನಸಿನಲ್ಲಿ ಇರಬೇಕು  ಸ್ವಚ್ಛತೆಯ ಪಾಕ ಸ್ವಚ್ಛ ಪರಿಸರ ತರುವುದು ಆರೋಗ್ಯ ಭಾಗ್ಯ ಆದಕಾಗಿ ಇಡಬೇಕು ಪರಿಸರವ ಸ್ವಚ್ಛ ಎಲ್ಲೆಂದರಲ್ಲಿಎಸೆಯಬಾರದು ಕಸದ ತ್ಯಾಜ್ಯ ತಿಳಿಯಬೇಕು ಇದನು ನಾವು ನಿತ್ಯ ಪಂಕಜಾ ಕೆ.

ಗೋಮುಖ ವ್ಯಾಘ್ರ ನ್ಯಾನೊ ಕಥೆ

ಗೋಮುಖ ವ್ಯಾಘ್ರ (ನ್ಯಾನೊ ಕಥೆ) ಆತ ಬಡವರ ಬಂಧು ದೀನ ದಲಿತರ ಕಣ್ಮಣಿ ಎನ್ನುವ ಬಿರುದಾಂಕಿತನಾಗಿದ್ದ ತನ್ನ ತಂದೆ ತಾಯಿಯರ ನೆನಪಿಗಾಗಿ ಪ್ರತೀವರ್ಷ ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಹಣ್ಣುಹಂಪಲು ಬಟ್ಟೆ ಸರಬರಾಜು ಮಾಡಿ ಫೋಟೋ ಕ್ಲಿಕ್ಕಿಸಿ ಹೆಮ್ಮೆ ಯಿಂದ ಹಾರ ತುರಾಯಿ  ಹಾಕಿಸಿಕೊಂಡು ಬೀಗುತ್ತಿದ್ದ  ತನ್ನ ಈ ಶ್ರೀಮಂತಿಕೆಯ ಜೀವನಕ್ಕೆ ಕಾರಣರಾದ ಆತನ ಹೆತ್ತವರು ಬೀದಿಯಲ್ಲಿ ಚಿಂದಿ ಆಯುವುದು ಕಂಡರೂ ಕಾಣದಂತೆ ತಿರುಗಾಡುತ್ತಿದ್ದ ಪಂಕಜಾ.ಕೆ

ಹಾಸ್ಯ ಚುಟುಕು 2 ಚಿನ್ನ. ಹುಡುಗಿ

ಹುಡುಗಿ(ಗ)  ಹಾಸ್ಯ ಚುಟುಕು 1 ಪೋನಿಟೈಲ್  ಹುಡುಗಿಯ ಕಂಡು ಅವಳ ಹಿಂದಿಂದೆ ಹೊರಟ ಗುಂಡ ಇನ್ನೇನು ಅವಳನ್ನು  ಮಾತಾಡಿಸಬೇಕು ತಿರುಗಿದ ಅವನನ್ನು ಕಂಡು ಅಲ್ಲೇ ಮೂರ್ಛೆ ಹೋದ  ಪಂಕಜಾ.ಕೆ. ಚಿನ್ನ ಮೈತುಂಬ ಧರಿಸಿದ್ದಳು ಚಿನ್ನ  ಬಾಳಸಂಗಾತಿಯಾದರೆ ಎಷ್ಟು ಚೆನ್ನ ಮದುವೆ ಆದ ಮಾರನೇ ದಿನವೇ ಗೊತ್ತಾಯ್ತು ಅದು  ಬಣ್ಣಹಾಕಿದ ಚಿನ್ನ ಪಂಕಜಾ.ಕೆ.

ಗಜಲ್ (ನಲ್ಲ)

ಗಜಲ್. ನಿನ್ನ ಮೋಹಕ ಕಾಂತಿಗೆ ಮರುಳಾದೆ ನಲ್ಲ ಕಣ್ಣ ನೋಟದ ಸೂಜಿಗಲ್ಲಿಗೆ ಬಲಿಯಾದೆ ನಲ್ಲ ಪ್ರೇಮವೆಂಬುದು ಹಾಗೆ ಮನಕೆ ಮುದವು ತುಂಟ ಕಣ್ಣಿನ ನೋಟಕೆ ಸೆರೆಯಾದೆ ನಲ್ಲ ಮೀಸೆಯಡಿಯ ನಗುವಿನಲಿದೆ ಏನೋಸೆಳೆತ ಭಾವನೆಗಳ ಕಡಲಲಿ ಮುಳುಗಿಸಿದೆ ನಲ್ಲ ಒಲವ ಜೇನನು ಹರಿಸುವೆಯೆಂದು ಕಾದೆ ನನ್ನೊಡಲ  ಬೇಗುದಿಯ ತಣಿಸಬಾರದೆ ನಲ್ಲ ನೀ ಮುಡಿಸಿದ ಮಲ್ಲಿಗೆ ಯಲಿದೆ ಘಮಲು ಮನಸು ಅಮಲಿನಲಿ ತೇಲುತಿದೆ ನಲ್ಲ ಪಂಕಜಾ ಳ ಮನದಲೆಲ್ಲಾ ನಿನ್ನದೇ ರೂಪ ಸವಿ ನೆನಪುಗಳನು ಮೆಲುಕು ಹಾಕುತಿದೆ ನಲ್ಲ ಪಂಕಜಾ.ಕೆ

ಗಜಲ್ (ಸೆಳೆತ ದಬಗ್ಗೆ)

ಗಜಲ್. (ಸೆಳೆತದ ಬಗ್ಗೆ ) ಈ ಸೌಂದರ್ಯದ ಹೊಳಪಿಗೆ ಮರುಳಾದೆ ನಲ್ಲೆ ಕಣ್ಣ ನೋಟದ ಸೂಜಿಗಲ್ಲಿಗೆ ಬಲಿಯಾದೆ ನಲ್ಲೆ ಪ್ರೇಮವೆಂಬುದು ಹಾಗೆ ಮನಕೆ ಮುದವು ಪ್ರೀತಿಯ ಮೋಹಕತೆಗೆ ಸೆರೆಯಾದೆ ನಲ್ಲೆ ಚೆಂದುಟಿಯ ನಗುವಿನಲಿದೆ ಏನೋ ಸೆಳೆತ ಭಾವನೆಗಳ ಕಡಲಲಿ ಮುಳುಗಿಸಿದೆ ನಲ್ಲೆ ಒಲವ ಜೇನನು ಹರಿಸುವೆಯೆಂದು ಕಾದೆ ನನ್ನೊಡಲ  ಬೇಗುದಿಯ ತಣಿಸಬಾರದೆ ನಲ್ಲೆ ನೀ ಮುಡಿದ ಮಲ್ಲಿಗೆ ಯಲಿದೆ ಘಮಲು ಮನಸು ಅಮಲಿನಲಿ ತೇಲುತಿದೆ ನಲ್ಲೆ ನಸು ನಾಚಿ ಬೀರುವ ನೋಟವದು ಬಲು ಚಂದ ಒಲಿದ ಜೀವ ಬಾಹು ಬಂಧನವ ಬಯಸಿದೆ ನಲ್ಲೆ ಕುಸುಮ ಕೋಮಲ ಪಂಕಜಾಳ‌ ಮನವಿದು ಸವಿ ನೆನಪುಗಳನು ಮೆಲುಕು ಹಾಕುತಿದೆ ನಲ್ಲೆ ಪಂಕಜಾ.ಕೆ

ಬಾನಾಡಿ. 2

ಬಾನಾಡಿ ರೆಕ್ಕೆ ಬಂದ ಹಕ್ಕಿಗಳು ಹಾರಡುತ್ತಿವೆ ಬಾನಿನಲಿ ತಾಯ ಬಿಸಿಯಪ್ಪುಗೆಯ ತೆಕ್ಕೆಯನುಸರಿಸಿಖುಷಿಯಲಿ ದೂರದೂರಿಗೆ ಹಾರಿ ಗೂಡುಕಟ್ಟಿ ನಲಿಯುತಿಹರಲ್ಲಿ  ಹೆತ್ತೊಡಲಿಗೆ ಬಟ್ಟೆ ಕಟ್ಟಿ ಮರೆತಿರುವರೇ ಹೆತ್ತ ತಾಯ ಮಮತೆ ಕಾದಿರುವಳು ಹೆತ್ತಬ್ಬೆ    ಕಳೆದು ಜಡತೆ ನೆನೆಯಬೇಕು ಆಕೆಯ ಪ್ರೀತಿಯ ಒರತೆ ಸಾಕಬೇಕುವೃದ್ಧಾಪ್ಯದಲಿಬಾರದಂತೆ ಕೊರತೆ ಪಂಕಜಾ.ಕೆ.

ನಗೆ ಮಲ್ಲಿಗೆ

ನಗೆ ಮಲ್ಲಿಗೆ ನಗೆ ಮಲ್ಲಿಗೆ ಅರಳಿಸುತ ನೀನಂದು ಬಂದೆ lಪl ಮನದ  ಬಯಲಲಿ ನೀ ಬಂದು ನಿಂತೆ llಅಪll ಚೆಲುವಾದ ಹೂವೊಂದು ಅರಳಿರುವ ಭಾವl ನಸು ನಗುವ ಮುಖದಲ್ಲಿ ನಗೆಮುಗುಳು ಹೂವll ಮನದಲ್ಲಿ ತುಂಬುತಿದೆ ನಿನ್ನೊಲವೇ ನಲ್ಲೆl ಕನಸಲ್ಲೂ ನೀ ಬಂದು ಕಾಡುತ್ತಿರುವೆಯಲ್ಲೆ l ಮಧುರಸವ ತುಂಬುತ್ತಾ ನಗು ಮುಖವ ತೋರಿl ಕನಸು ಮನಸಲ್ಲು ನೀನೇ ಇರುವೆ ಚಕೋರಿll ಬಾಳೆಲ್ಲ  ಹಬ್ಬಿತು ಚೆಲು ಹೂವ ಬಳ್ಳಿl ಕನಸೆಲ್ಲ ನನಸಾಗಿ ಮನಕದ್ದೆ ಕಳ್ಳಿll ಹರಿಸಿಬಿಡು ಒಲವೆಂಬ ಸವಿಜೇನ ಹೊನಲು l ಬಾಳಲ್ಲಿ ತುಂಬಲಿ ಸಂತಸದ ಅಮಲು ll ಪಂಕಜಾ ಕೆ.

ನಿಶೆ

ನಿಶೆ ನಿಶೆ ಯೊಡನಾಡಲು ರವಿ ತೆರಳುವ ಹೊತ್ತು ನಭದ ತುಂಬಾ ತುಂಬಿತು ಬೆಳ್ಳಿ ಚುಕ್ಕಿಗಳ ರಂಗೋಲಿ ಇರುಳ ಚೆಲುವನು ಸಾರಲು ಬಂದವುl ಅಂಬರದ  ತುಂಬೆಲ್ಲ ಮುತ್ತಿನ ಮಣಿಗಳ ಸಾಲುll ಅಗಸದಿ ತಾರೆಗಳು ಕಣ್ಣುಮಿಟಿಕಿಸುತಿರಲು l ನಭದ ತುಂಬಾ ಹರಡಿತು ಚಂದ್ರಮನ ಬೆಳಕುll ತಂಪು ಗಾಳಿಯು  ಬೀಸುತ ಮನವ ಕೆಣಕಲು l ಮೈ ಮನದ ತುಂಬೆಲ್ಲ ಆನಂದದ ಕಡಲು ll ರಾತ್ರಿಯನು ಹಗಲಾಗಿಸುವ ಪೂರ್ಣ ಚಂದಿರನ ಬಿಂಬ l ಮನವ  ಕೆಣಕುವ ನಿನ್ನ ಕುಡಿನೋಟದ  ಕಾವು ll ಹಗಲಿನೊಡನಾಟದಿ ಬಳಲಿದೆ  ಮೈಗೆ l ತಂದಿತು ಮುದವನು ರಾತ್ರಿಯ ತಂಪು ll ಪಂಕಜಾ.ಕೆ.

ಹಂಬಲ ಭಾವಗೀತೆಯ ಬಗ್ಗೆ ವಿಮರ್ಶೆ 26 9 2019

[25/09, 4:18 PM] pankajarambhat: ಪಂಕಜಾ.ಕೆ *ಹಂಬಲ* ಕಣ್ಣ ಮುಂದೆ ದೃಶ್ಯ ಸೃಷ್ಟಿಸುವ ಕವನ.ಮನ ತಲುಪುವ ರಚನೆಯಾಗಿದೆ.    ವೃದ್ಧ ತಾಯಿಯೋರ್ವಳು ತನ್ನ ಮಗನ ಬರುವಿಕೆಗಾಗಿ ದುಃಖತಪ್ತ ಕಣ್ಣುಗಳಿಂದ ದಿಟ್ಟಿಸಿತ್ಯ ಬಾಗಿಲ ಬಳಿ ಇಂದು ಬಂದಾನು ನಾಳೆ ಬಂದಾನು ಮರೆಯಲಾರ ನಾನಿತ್ತ ಕೈ ತುತ್ತನು ಎನ್ನುತ್ತ ಕಾಯುತ್ತಿದ್ದಾಳೆ. ಹೆತ್ತವಳ ಸಾಕಲಾಗದೆ ಅನಾಥಾಶ್ರಮಕೆ ದೂಡಿಹೋದವ ಹೆಗೆ ಬಂದಾನು? ಕಣ್ಣೀರು ಒರೆಸುವ ಕೈಯಿಲ್ಲ ಮನದ ಮಾತುಗಳ ಕೇಳುವವರಿಲ್ಲ‌ಕೊನೆಯ ದಿನಗಳನ್ನು ಕಣ್ಣೀರಲ್ಲಿ ದೂಡುವ ಕರುಣಾಜನಕ ಸ್ಥಿತಿ ಅವಳದು.   ವ್ಹಾವ್. ಸೂಪರ್ .👌🏼👌🏼 ಭಾವಗೀತೆಯನ್ನಾಗಿಸಲು ಇನ್ನೂ ಬಹಳಷ್ಟು ಕುಸುರಿ ಕೆಲಸವಾಗಬೇಕಿದೆ ತ್ರಿನೇತ್ರಜ್ [25/09, 4:18 PM] pankajarambhat: ಪಂಕಜ ಮುಡಿಪು ರವರ ಹಂಬಲ ದೇವಾ ಕರುಣೆ ತೋರೆನಗೆ ಕೈ ಮುಗಿದು ಬೇಡುತಿಹಳು  ಮಾತೆ ಈ ಸಾಲು ಮನಕರಗುವಂತೆ ಮಾಡುತ್ತದೆ.‌.‌ ಮಗನಿಗಾಗಿ ಕಾಯುತ್ತಿರುವ ವಯೋವೃದ್ಧತಾಯಿಯೊಬ್ಬಳು ರಾಮನಿಗಾಗಿ ಶಬರಿ ಕಾದಂತೆ‌‌‌.ಮಗನಿಗಾಗಿ ಇಂದು ಬರುವನೋ...ನಾಳೆ ಬರುವನೋ ....ಎಂದು ಎದುರು ನೋಡುವ ತಾಯಿಯ ಮನದಳಲು ಮನಕರಗುವಂತೆ ಭಾವಗೀತೆಯಾಗಿ ಹರಿದಿದೆ.... 👌👏🏻💐🙏 [25/09, 4:18 PM] pankajarambhat: ಪಂಕಜಾ.ಕೆ. ಅವರ ಹಂಬಲ ಭಾವಗೀತೆ ಕುರಿತು _____,,___________ ತಾಯಿಯ ಹೃದಯ ತುಡಿತವನ್ನು ಗಾಢವಾದ ಭಾವತುಂಬಿ ಚಿತ್ರಿಸಲಾಗಿದೆ.ಭಾವಗೀತೆಯಾಗಲು ಲಯದಲ್ಲಿ

ವಿಮರ್ಶೆ ನನ್ನೊಲವೇ ಭಾವಗೀತೆಯ ಬಗ್ಗೆ

*ಪಂಕಜರ ಒಲವಿನ ಕುರಿತು ಬರೆಯಹೊರಟರೆ.......* ಪ್ರೀತಿ ಟಸಿಲೊಡೆಯುವ ರೀತಿಯೇ ಹಾಗೆ ಅರಿವೇ ಇರದೆ ಚಿಗುರುವ ಬಳ್ಳಿ ಅದು. ಇಲ್ಲಿ ಕವಿ ಮನಸ್ಸು ಅದರ ಕುರಿತಂತೇ ಹೇಳ ಹೊರಟಿದೆ. ತನ್ನ ಇನಿಯನ ಮೇಲೆ ಅದ್ಹೇಗೆ ಪ್ರೀತಿ ಮೂಡಿತೋ ಯಾವತ್ತು ಆತ ಮನದಲ್ಲಿ ಮನೆ ಮಾಡಿದನೋ ತಿಳಿಯಲೇ ಇಲ್ಲ. ಆದರೆ ಮನದ ಗುಡಿಯಲಿ ಹೆಸರು ಇರುವುದಂತೂ ನಿಜ.  ನಿತ್ಯನೂತನ ಆ ಹೆಸರ ಆರಾಧನೆಯಾಗುತ್ತಿರುತ್ತದೆ. ಪ್ರೀತಿ ಧೋ ಎಂದು ಒಮ್ಮೆಗೆ ಧಾರೆಯಾಗಿ ಮರೆಯಾಗುವಂತದ್ದಲ್ಲ. ಅದು ಮುದಕೊಡುವ ಸೋನೆ. ಅದು ಮನದ ಚೈತನ್ಯವ ಬಡಿದೆಬ್ಬಿಸದಿರುವುದೇ?  ಚಂಚಲವಾಗಿದ್ದ ಮನಸ್ಸನ್ನು ನಿನ್ನ ಕುರಿತಂತೇ ಚಿಂತಿಸುವಂತೆ ಮಾಡಿರುವೆ. ನಿನ್ನ ನಗುವಲೇ ನಾನೆಲ್ಲವನು ಮರೆತು, ನನ್ನಲ್ಲಿ ನೀ ತುಂಬಿಕೊಂಡಿರುವೆ. ಕವಿ ಮನಸ್ಸು ಸಂಪೂರ್ಣ ವಾಗಿ ಪ್ರೀತಿಯಲಿ ಮುಳುಗಿ ಹೋಗಿ ಆ ಅದಮ್ಯ ಪ್ರೀತಿಯನು ಇನಿಯನಿಗೆ ತಿಳಿಸಬೇಕೆಂದು ತಹತಹಿಸುತಿದೆ.

ನನ್ನೊಲವೇ (ಭಾವಗೀತೆ) ಅಕ್ಕರೆಯ ಬಗ್ಗೆ

ನನ್ನೊಲವೇ ಹೇಗೆ ಬಂದೆ ಎಂದು ಬಂದೆ ಅರಿಯಲಾರೆನು l ನನ್ನ ಮನದ ಗುಡಿಯಲ್ಲಿಂದು ನಿನ್ನ ಹೆಸರಿದೆ ll ಪ್ರೀತಿ ಸೋನೆ ಮಳೆಯ ಹನಿಸಿ l ಒಲವ ಸುಧೆಯ ಸುರಿಸುತ್ತಾ l ಚೆಲುವ ನೀನು ಮನದ  ಕದವ ತೆರೆಸಿ ಬಿಟ್ಟೆಯೋ?ll ಅಲ್ಲಿ ಇಲ್ಲಿ ಓಡುತ್ತಿದ್ದ ಮನವ ಕದ್ದುl ಅಕ್ಕರೆಯ ಸಕ್ಕರೆಯ ತಿನಿಸುತಲಿl ನಲ್ಲ  ನಿನ್ನ ರೂಪವನ್ನು ತುಂಬಿಬಿಟ್ಟೆಯೋ?ll ಚೆಲುವ ತುಂಟ ನಗುವ ಬೀರಿ l ಮಾಡಿಬಿಟ್ಟೆ ಏನು ಮೋಡಿl ನನ್ನ ಮನವ ನಿನ್ನ ಕಡೆಗೆ ತಿರುಗಿಸಿಟ್ಟೆಯೊ?ll ನಿನ್ನ ನಗುವ ಕಂಡು ಮನವುl ತನ್ನ ತನವ ಮರೆಯಿತಿಂದುl ನನ್ನೊಲವೆ ನಿನಗೆ ಇದನು ಹೇಗೆ ಹೇಳಲೊ?ll ಪಂಕಜಾ.ಕೆ.

ಬಾವದಲೆ

ಬಾವದಲೆ ಮನದ ಮಲ್ಲಿಗೆ ಕನಸ ಹೆಣೆಯುತ ನೋವಿನ ತೆರೆಯನು ಸರಿಸಿದೆll ಬಾವದಲೆಗಳು ಮೈ ಮನವ ತುಂಬಿ ಜೀವಬಾವವು ನಲಿದಿದೆ l ಬಾಳಪಯಣದಿ ಜತೆಗೆ ಸೇರುತ ಹೊಸ ಕನಸುಗಳ ಮನದಲಿ  ಬಿತ್ತಿದೆ ll ಒಲವು ತುಂಬಿದ ಬಾಳತೇರನು ಜತೆಗೆ ಎಳೆಯುತ ತನುವು ನಲಿದಿದೆl ಕನಸು ನನಸಾದ ಖುಷಿಯಲ್ಲಿಂದು ಮನವು ನವಿಲಿನ ನರ್ತನ ಗೈದಿದೆ ll ಇನಿಯ  ನಿನ್ನಾಸರೆಯು ಬಾಳಿಗೆ ಎನಿತು ಸೊಗಸನು ತುಂಬಿದೆl ನಾನು ನೀನು ಒಂದೇ ಎನುತ ಬಾವದೊಲವನು ತಂದಿದೆ ll ಪಂಕಜಾ.ಕೆ.

ಮಾತೆ

ಮಾತೆ ಕಾಯುತಿದೆ ಜೀವವೊಂದು ಪ್ರೀತಿ ಸುರಿಸುವ ಕರಗಳಿಗಾಗಿ ನವಮಾಸಗಳು ಗರ್ಭದಲಿ ಹೊತ್ತು ಕಂದನ ಬೆಳವಣಿಗೆಯಲಿ ನಲಿದ ಹೊತ್ತು ಪ್ರತಿ ನಿತ್ಯ ದಿನಗಳನೆಣಿಸುತ ಕಾದು ಹೆತ್ತಳಾಕೆ  ನೂರು ಕಷ್ಟಗಳಲಿ ಬೆಂದು ಮಗುವಿನ ಬಾಲಲೀಲೆಯಲಿ ಮರೆತಳಾಕೆ ಕಷ್ಟ ನಷ್ಟಗಳ ಬೇಲಿ ಕಂದನ  ನಗುವಿನಲಿ ತಾ ನಕ್ಕು ಆತನ ಅಳುವಿನಲಿ ತಾ ಅತ್ತು ಕಷ್ಟಗಳ ಸೋಕಿಸದೆಯೆ ಬೆಳೆಸಿದಾ ತ್ಯಾಗಮಯಿ ಪಡೆದ ಪದವಿಯ ನಂಟು ಬೇಡವಾಯಿತವಗೆ ಮಮತೆಯ ಗಂಟು ಕಡಿದೊಗೆದ ತಾಯ ಮಮತೆಯನು ಅನಾಥಾಶ್ರಮಕೆ ದೂಡಿದನವಳನು ಕಣ್ಣೀರ ಕಡಲಲ್ಲಿ  ಹೆತ್ತು ಹೊತ್ತು ಸಾಕಿದ ಮಾತೆ ಕಂದನ ನೆನೆಯುತ ಹರಸುವ ಸಂಜಾತೆ ಕರುಣೆಯಿಲ್ಲದ ಆತನೊಬ್ಬ ಕಟುಕ ಹೆತ್ತಮ್ಮನ ಕರುಳ ಉರಿಸಿದ ಘಾತುಕ ಸಾಕಿ ಸಲಹಿದ ಮಾತೆಯ ಮಮತೆ ಮರೆಯುವರೇಕೋ  ಜನತೆ ಬರದಿರದೆ  ಅವರಿಗೂ ಅದೇ  ಗತಿ ಇರಲಾರದೇ ಅವರಿಗೆ ಆ ಭೀತಿ ಕಡೆಗಣಿಸದಿರಿ ವೃದ್ಧಾಪ್ಯದಲಿ ಹೆತ್ತವರ ಬಾಳು  ಗೋಳಾದೀತು  ಎಚ್ಚರ ಪಂಕಜಾ.ಕೆ.

ಹಂಬಲ. ಜೀವ ದ ಬಗ್ಗೆ ಬರೆದ ಭಾವಗೀತೆ

ಹಂಬಲ. (ಭಾವಗೀತೆ) ಜೀವವೊಂದು ಕಾಯುತಿದೆ ಕಾತರದ  ಕಣ್ಣುಗಳು ಬಾಗಿಲೆಡೆಗೆ ಸುಕ್ಕುಗಟ್ಟಿದ  ದೇಹ ಪರೆ ತುಂಬಿದ ಕಣ್ಣುಗಳು ನಡುಗುತಿದೆ ಕೈ ಕಾಲುಗಳು ಮಮತೆ ತುಂಬಿದ ಮನಸು ಅಡಿಗಡಿಗೆ ಒಸರುವ ಕಣ್ಣೀರು ಒರೆಸುತ್ತ ಕಾಯುವಳು ಬಾಗಿಲಲಿ ನಿತ್ಯ ಇಂದು ಬಂದಾನು ನಾಳೆ ಬಂದಾನು ಮರೆಯಲಾರ ನಾನಿತ್ತ ಕೈ ತುತ್ತನು ಹೊತ್ತು ಹೆತ್ತಳಾಕೆ ಮಮತೆಯಿಂದ ಕಷ್ಟ ನಷ್ಟಗಳ ಭರಿಸಿ ಸಾಕಿದಳು ಪ್ರೀತಿಯಿಂದ ರೆಕ್ಕೆಬಂದಹಕ್ಕಿಗೂಡ ಬಿಟ್ಟು ಹಾರಿಹೋಯಿತು ಹೆತ್ತಬ್ಬೆಯ ಬಾರ ಸಹಿಸದಾಯ್ತು ಹೆತ್ತು ಹೊತ್ತು ಸಾಕಿದ್ದಕ್ಕೆ ಮಾತೆಗಾಯ್ತು ಅನಾಥಾಶ್ರಮದ ಅನ್ನದ ತುತ್ತು ಕಣ್ಣೀರು ಒರೆಸುವ ಕೈಯಿಲ್ಲ ಮನದ ಮಾತುಗಳ ಕೇಳುವವರಿಲ್ಲ ಕಷ್ಟ ಸುಖಗಳಲಿ ಕರುಳ ಕುಡಿ ಜತೆಗಿಲ್ಲ ಒಬ್ಬಂಟಿ ದಿನಗಳ ನೂಕುತ ದಿನಗಣನೆ ಇನ್ನೆಷ್ಟು ದಿನ   ಬದುಕಿನ ಈ ಬವಣೆ ನಿಟ್ಟುಸಿರು  ಬಿಡುತಿಹಳು  ತಾಯಿ ದೇವ  ಕರುಣೆ  ತೋರೆನಗೆ ಕೈ ಮುಗಿದು ಬೇಡುತಿಹಳು ಮಾತೆ ಕಾಯುತಿರುವುದು ಜೀವ ಬಾಗಿಲಲಿ ಇಂದು ಬಂದಾನೋ ನಾಳೆ ಬಂದಾನೋ ಪಂಕಜಾ.ಕೆ

ಅರುಣ ರಾಗ ವಿಕ್ರಮ ವಾರಪತ್ರಿಕೆ 29..9 2019 ರಲ್ಲಿ ಪ್ರಕಟಿತ

ಅರುಣ ರಾಗ ಹಸಿರಿನ ಹುಲ್ಲಿನ ಮೇಲೆ ಹರಡಿರುವ ಇಬ್ಬನಿಯ ಹನಿಗಳು ಮುತ್ತಿನ ಮಣಿಗಳ ತೆರದಿ ತೋರುತಿದೆ ರವಿಕಿರಣದ ಸ್ಪರ್ಶಕ್ಕೆ ಕರಗಿ ನೀರಾಗುತ ಸಪ್ತವರ್ಣದ ತೋರಣವ ಕಟ್ಟಿ  ನಲಿಯುತ್ತಿದೆ ಮಂದ ಮಾರುತ ಬೀಸಿ ಮಲ್ಲಿಗೆಯ ಕಂಪನುಹೊತ್ತು ಮನಕೆ ಮುದ ತುಂಬಿ ಮನವ ಕೆಣಕುತಿದೆ ರವಿ ಉದಯಿಸುತ  ಬಂದ ಆಗಸದ ತುಂಬೆಲ್ಲ ತುಂಬಿದೆ ಅರುಣರಾಗ ಧರೆಗೆ ಮಿಂಚಿನ ಸಂಚಾರ ಉದಯರಾಗವ ಹಾಡಿ ಕೋಗಿಲೆಯು ಕುಹಿಲಿಡುತ ಮನಕೆ ಹೊಸ ಹುರುಪನು ತುಂಬಿ ಮೈಮನವು ಮತ್ತಿನಲಿ ತೇಲುತಿದೆ ಬುವಿಯಲಿ ಹರಡಿರುವ ಚೆಲುಬಣ್ಣಗಳ ನೋಟ ತಂಗಾಳಿಯ ತಂಪಿನಲಿ ಮೈಮನಕೆ ಉಲ್ಲಾಸ ಹಾಸ ಪಂಕಜಾ.ಕೆ.

ತಂಗಾಳಿ (ಹನಿಕವನ)

    ತಂಗಾಳಿ (ಹನಿಕವನ) ಪ್ರಕೃತಿಯ ಮಡಿಲಲಿ ವಿಹರಿಸುತಿರಲುl ತಂಗಾಳಿ ಬೀಸಿ ಮೈಮನಕೆ ಮುದ ತಂದ ಹೊತ್ತು ll ಕಚಗುಳಿಯಿಡುತಿದೆ ನಿನ್ನ ನೆನಪುಗಳ ತಂಗಾಳಿ l ಮೈಮನವನು ಆವರಿಸಲು ಮತ್ತು ಅದೇನಾಯಿತೋ ನನಗೇನು ಗೊತ್ತು ನಿನ್ನ ಒಡನಾಟದ ಆನುಭೂತಿ ಪ್ರಕೃತಿ  ಮಡಿಲಿನ  ತೆರದಿ  ತುಂಬುತಿದೆ ಮನಕೆ ಶಾಂತಿ ಪಂಕಜಾ.ಕೆ.

ಮಳೆಯ ಹನಿ

ಮಳೆಯ ಹನಿ ಬಾನಂಚಿನಲಿ ಹರಡಿರುವ ಮೋಡಗಳು ಮಳೆಯ ಹನಿಗಳ ಮುತ್ತುಗಳ ಸುರಿಸಿ ಇಳೆಯ ತಬ್ಬುತ ಸಂತೈಸಿತಂದು ಭೂರಮೆಯು ನಳ ನಳಿಸಿ ಬಿರಿದರಳಿ ಹಸಿರು ಹೂವು ಹಣ್ಣುಗಳ ತುಂಬಿ ನಗುವ ಚಂದವ ಕಂಡು ಮನ ತುಂಬಿತಿಂದು ಬಾನು ಸುರಿಸಿದ ಮುತ್ತಿನಾ ಹನಿಗಳು ಮೈ ಮನಕೆ ಮುದಕೊಟ್ಟು ಬಿರಿದರಳಿದೆ ಮೈ ತುಂಬ ಹೂಗಳರಳಿಸಿ ಕಂಪ ಸೂಸಿದೆ ಹೂವ ಗಂಧವ  ಎಲ್ಲೆಡೆಯೂ ಚೆಲ್ಲುತ ಮಂದ ಮಾರುತ ಬರುತಿರಲು ಮನಕೆ ಉಲ್ಲಾಸದ ಭಾವ ತುಂಬಿದೆ ಅರಳಿ ನಗುವ ವಸುಂಧರೆಯ ಚೆಲುವಿನ ಬಲೆ ಕವಿ ಮನದಲಿ ತುಂಬಿಸಿದೆ ಆನಂದದ ಅಲೆ ಮನದಿ ಬಾನಂಗಳದ ಕಾಂತಿ ತುಂಬಿದೆ ಪಂಕಜಾ.ಕೆ.

ಮುಂಗಾರು ಮಳೆ...3

ಮುಂಗಾರು ಮಳೆ ಹೊಸ ದಿನಕೆ ಹೊಸ ಕಿರಣದಲೆ ಹರಡುತ ಬಂದಿಹನು ಹೊನ್ನ ತೇರಿನಲೆ ಜಗವ ಬೆಳಗುವ ಆತುರ ಕಾತುರ ಬೆಂಕಿ ಉಂಡೆಯಂತೆ ಸುಡುತಿಹನು ಭಾಸ್ಕರ ಮುಂಗಾರು ಮಳೆಯ ಹನಿಗಳೆಲ್ಲಾ ರವಿಕಿರಣ ತಾಪಕೆ ನಲುಗಿದವಲ್ಲಾ ಜಡಿಮಳೆಯ ನೀರೀಕ್ಷೆಯಲಿ ಸೋತಿಹಳು ಭೂತಾಯಿ ಒಡಲು ಬಿರಿದು ನಿಂತಿಹಳು ಮಳೆಯ ಒಂದೊಂದು  ಹನಿಯು  ಮುತ್ತು ಉಣಿಸು   ಒಲವಿನ ಧಾರೆಯ  ತುತ್ತು ಮುಂಗಾರು ಮಳೆಯಲ್ಲಿ ಕುಡಿಯೊಡೆಯಲಿ ಹಸಿರ ಚಾವಣಿ ಹಾಸಿ ಭೂತಾಯಿ ನಲಿಯಲಿ ಎಲ್ಲೆಲ್ಲೂ ಹಸಿರು ಕಣ್ಣು ಮನ ತುಂಬಲಿ ಮನೆ ಮನೆಯಲ್ಲೂ  ಹರುಷ ತುಂಬಲಿ ಪಂಕಜಾ.ಕೆ.

ವಿಪರ್ಯಾಸ ನ್ಯಾನೊ ಕಥೆ

ವಿಪರ್ಯಾಸ (ನ್ಯಾನೋ ಕಥೆ) ಆತ ನೆರೆಮನೆಯವರನ್ನುಕಂಡು ನಿತ್ಯ ಕರುಬುತ್ತಿದ್ದ  .ಒಂದಲ್ಲ ಒಂದು ರೀತಿಯಲ್ಲಿ ಅವರಿಗೆ ತೊಂದರೆ ಕೊಟ್ಟು ಕುಶಿ ಪಡುವುದೇ ಅವನ ದಿನಚರಿಯಾಗಿತ್ತು.  ಆ ದಿನ ಆತ ನೆರೆಮನೆಯವರು ಇಲ್ಲದ ಸಮಯದಲ್ಲಿ  ಅವರ  ತೆಂಗಿನ ಮರದಿಂದ ಕಾಯಿ ಕೀಳಬೇಕೆಂದು ಮರಕ್ಕೆ ಹತ್ತಿದ್ದೆ ಬುಸುಗುಟ್ಟುವ ದೊಡ್ಡ ಸರ್ಪ ಕಂಡು ಮೂರ್ಛೆ ಹೋದವ ಇಂದಿನವರೆಗೂ ಎದ್ದಿಲ್ಲ. ಪಂಕಜಾ.ಕೆ

ಮುಯ್ಯಿಗೆ ಮುಯ್ಯಿ ನ್ಯಾನೊ ಕಥೆ

ಮುಯ್ಯಿಗೆ ಮುಯ್ಯಿ (ನ್ಯಾನೋ ಕಥೆ) ಆತ ದಿನಕ್ಕೊಬ್ಬ ಹೆಣ್ಣಿನ ಜತೆ ತಿರುಗುವ ಚಪಲ ಚೆನ್ನಿಗರಾಯ, ಮನೆಯಲ್ಲಿ ಹೆಂಡತಿಯ ಹತ್ತಿರ ಈ ಬಗ್ಗೆ ಜಂಬ ಕೊಚ್ಚಿಕೊಂಡು ಇರುತ್ತಿದ್ದ  .ಇದರಿಂದ ಹೆಂಡತಿ ರೋಸಿ ಹೋಗಿದ್ದಳು  .ಆ ದಿನ ಆತ ನಂದಿಹಿಲ್ ನಲ್ಲಿ ಪ್ರೇಯಸಿಯೊಡನೆ ಸುತ್ತಾಡಲೆಂದು ಬಂದಾಗ  ಅಲ್ಲಿ ತನ್ನ ಹೆಂಡತಿ ಇನ್ನೊಬ್ಬನ ಜತೆ ಇರುವುದು ಕಂಡು ಮಾತಿಲ್ಲದೆ ಮೌನವಾದ. ಪಂಕಜಾ.ಕೆ

ಗೋವಿನ ಮಹತ್ವ ಕಥೆ

    ಗೋವಿನ ಮಹತ್ವ ಬೆಳಗಿನ ಜಾವ ಐದು ಗಂಟೆಗೆ ಎದ್ದು, ಸ್ನಾನ ಮಾಡಿ ಬಾಗಿಲಿಗೆ ರಂಗೋಲಿ ಇಟ್ಟು, ದನಕರುಗಳ ಮೈಯನ್ನು ಉಜ್ಜಿ ,ಅವುಗಳಿಗೆ ತಿನ್ನಲು ಕುಡಿಯಲು ಕೊಟ್ಟು ಹಾಲು ಕರೆದು ಒಳಗೆ ಬರುವ ಅಭ್ಯಾಸ ಸೌಜನ್ಯನದ್ದು. 3 ದನ 4 ಕರುಗಳು ಹಟ್ಟಿಯಲ್ಲಿ ಹಾಗೂ ಅವರ ಮನೆ ಅಂಗಳದಲ್ಲಿ ಹಾಯಾಗಿ ಅಡ್ಡಾಡುತ್ತ ಇರುತ್ತಿರುವ ದೃಶ್ಯ ಸಾಮಾನ್ಯ. ಕರುಗಳ ನೆಗೆದಾಟ, ಒಂದನ್ನು ಇನ್ನೊಂದು ಅಟ್ಟಿಸಿಕೊಂಡು ಹೋಗುವ  ಚಂದ ನೋಡುತ್ತಾ ಇದ್ದರೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಸೌಜನ್ಯ ಗಂಗೆ ಗೌರಿ ಎಂದು ಕರೆದರೆ ಸಾಕು ಎಲ್ಲಿದ್ದರೂ ಓಡಿ ಬಂದು ಅವಳ ಕೈ ನೆಕ್ಕುತ್ತಾ ಇರುತ್ತವೆ ಅಷ್ಟು ಪ್ರೀತಿ ಗೋವುಗಳಿಗೆ ತನ್ನ ಒಡತಿಯ ಮೇಲೆ.                 ಆದಿನ ಅದೇನಾಯಿತೋ ಸೌಜನ್ಯನಿಗೆ ಬೆಳಿಗ್ಗೆ ಎಂದಿನಂತೆ 5 ಗಂಟೆಗೆ ಎಚ್ಚರಿಕೆ ಆಗಲಿಲ್ಲ. ಹಟ್ಟಿಯಲ್ಲಿ ದನ ಕರುಗಳು ಒಂದೇಸಮನೆ  ಕೂಗುವುದು ಕೇಳಿ ,ಸೌಜನ್ಯ ದಡಬಡಿಸಿ ಎದ್ದು ಛೇ ಇಂದು ನನಗೆ ಏನಾಗಿದೆ ಇಷ್ಟು ಹೊತ್ತು ಮಲಗಿ ಬಿಟ್ಟೆನಲ್ಲ  ಪಾಪ ದನಗಳಿಗೆ ಹೊಟ್ಟೆ ಹಸಿವೆ ತಡೆಯಲಾಗುವುದಿಲ್ಲ ಏನೋ ಇವರಿಗಾದರು ತನ್ನನ್ನು ಏಳಿಸಬಹುದಿತ್ತು ಎಂದು ಯೋಚಿಸುತ್ತಾ ಸೌಜನ್ಯ ಬೇಗ ಬೇಗನೆ ತನ್ನ ನಿತ್ಯ ಕರ್ಮ ತೀರಿಸಿ  ಹಟ್ಟಿಗೆ ಕಾಲು ಇಟ್ಟದ್ದೇ ತಡ ದನ ಕರುಗಳು ಕೆನೆಯಲು ಪ್ರಾರಂಭ ಮಾಡಿದವು. ಸೌಜನ್ಯ ದನಗಳ ಮೈಯನ್ನು ತಿಕ್ಕಿ, ಈ ದಿನ ನನಗೆ ಎಚ್ಚರಿಗೆ ಆಗಲಿಲ್ಲ  ಕ್ಷಮಿಸಿ ಪುಟ್ಟ ಎಂದು ದನಗಳ ಹತ್ತಿರ ಮಾತಾಡುತ್ತಾ ,ಅವುಗಳಿಗೆ ತ

ಗಜಲ್ ನಿನ್ನೊಡನಾಟ

ಗಜಲ್ ನಿನ್ನೊಡನಾಟವು ಮನಕೆ ಮುದ ತಂದಿದೆ ಇನಿಯಾ ಮುಚ್ಚಿರುವ ಮನದ ಗುಡಿಯ ಕದತೆರೆದಿದೆ ಇನಿಯಾ ನಿನ್ನ ಬಾಹುಬಂಧನದಲ್ಲಿ ಸದಾ ಇರುವ ಆಶೆ ಮೈ ಮನಸಿನಲಿ ಖುಷಿಯು ತುಂಬಿದೆ ಇನಿಯಾ ಆತುರದಿ ಕಾಯುತ್ತಿದೆ ನಿನ್ನಾಗಮನಕಾಗಿ ತನುವು ಒಂದಾಗಿರುವ ಬಯಕೆಯ ಹೊಮ್ಮಿಸಿದೆ ಇನಿಯಾ ತಂಪುಗಾಳಿಯು ಬೀಸಿ ಭಾವ ಕೆರಳಿಸಿತು ಒಲವ ಕಡಲಲಿ ಮೀಯಬೇಕೆನಿಸಿದೆ ಇನಿಯಾ ಕನಸುಕಂಗಳ ತುಂಬ ನಿನ್ನ ರೂಪ ತುಂಬಿಹುದು ಪಂಕಜಾಳ ಬಾಳಿನಲ ಜೀವಸೆಲೆ ಉಕ್ಕಿಸಿದೆ  ಇನಿಯಾ ಪಂಕಜಾ. ಕೆ.

ಗಜಲ್ ನಮ್ಮದು

ಗಜಲ್. ಹಸಿರು ಕಾನನದಿಂದ ತುಂಬಿದ ನಾಡು ನಮ್ಮದು ತರುಲತೆಗಳು ತೂಗಿ ಬಾಗುವ ಬೀಡು ನಮ್ಮದು ಪರ್ವತ ಶ್ರೇಣಿಗಳ ಸಾಲು ತುಂಬಿದೆ  ದೇಶದೆಲ್ಲೆಡೆ ಪ್ರಾಕೃತಿಕ ಸಂಪತ್ತು ತುಂಬಿ ತುಳುಕುವ ಕಾಡು ನಮ್ಮದು ಉಳಿಸಿ ಬೆಳೆಸಬೇಕು ನಾವು ಸಸ್ಯಸಂಕುಲಗಳ ಬಾಳು  ಬಂಗಾರವಾದೀತು ಬದುಕು ನೋಡು ನಮ್ಮದು ಮಳೆ ಬಂದಾಗ ನೀರ ಹರಿವಿಗೆ ತಡೆಯುಂಟೆ ? ಜುಳು ಜುಳು ಹರಿಯುವ ನದಿ ತೋಡು ನಮ್ಮದು ಪಂಕಜಾಳಿಗೆ ಪ್ರಕೃತಿಯಲ್ಲಿ ವಿಹರಿಸುವುದೆಂದರೆ ಖುಷಿ ಸಂತಸವ ನೀಡಿ ರಚಿಸಿದ ಹಾಡು ನಮ್ಮದು ಪಂಕಜಾ.ಕೆ

ಗಜಲ್ 25 ನಮ್ಮದು

ಗಜಲ್. ಹಸಿರು ಕಾನನದಿಂದ ತುಂಬಿದ ನಾಡು ನಮ್ಮದು ತರುಲತೆಗಳು ತೂಗಿ ಬಾಗುವ ಬೀಡು ನಮ್ಮದು ಪರ್ವತ ಶ್ರೇಣಿಗಳಿಂದ ತುಂಬಿದೆ  ದೇಶದೆಲ್ಲೆಡೆ ಪ್ರಾಕೃತಿಕ ಸಂಪತ್ತು ತುಂಬಿ ತುಳುಕುವ ಕಾಡು ನಮ್ಮದು ಉಳಿಸಿ ಬೆಳೆಸಬೇಕು ನಾವು ಸಸ್ಯಸಂಕುಲಗಳ ಬಾಳು  ಬಂಗಾರವಾದೀತು ನೋಡು ನಮ್ಮದು ಮಳೆ ಬಂದಾಗ ನೀರ ಹರಿವಿಗೆ ತಡೆಯುಂಟೆ ? ಜುಳು ಜುಳು ಹರಿಯುವ ನದಿ ತೋಡು ನಮ್ಮದು ಪಂಕಜಾಳಿಗೆ ಪ್ರಕೃತಿಯಲ್ಲಿ ವಿಹರಿಸುವುದೆಂದರೆ ಖುಷಿ ವ್ಯಕ್ತ ಪಡಿಸುತ್ತಿದೆ  ರಚಿಸಿದ ಹಾಡು ನಮ್ಮದು ಪಂಕಜಾ.ಕೆ

ಗಜಲ್ 25 ನೀರಲ್ಲಿ ಆಡುವಆಶೆ

ಗಜಲ್ ಮಳೆ ಬಂದಾಗ ಹರಿವ ನೀರಿನಲಿ ಆಡುವಾಸೆ ಸಖಿ ಹಕ್ಕಿಗಳಂತೆ ಬಾನಿನಲಿ ಹಾರಡುವಾಸೆ ಸಖಿ ಜೀವನದಲ್ಲಿ ಮೇಲೆರಲು ಇರಬೇಕು ಬಾಳಿಗೆ ಗುರಿ ಪ್ರಯತ್ನಪಟ್ಟರೆ ಫಲ ಸಿಗಬಹುದೆಂಬಾಸೆ ಸಖಿ ಹೂವ ಜೇನನು ಸವಿಯಲು ಬರುತಿದೆ ದುಂಬಿಗಳು ಮನಸಾರೆ ಒಮ್ಮೆ ಹೂತೋಟದಲಿ ಅಡ್ಡಾಡುವಾಸೆ ಸಖಿ ಭಾವನೆಗಳ ಬೆನ್ನೇರಿ ಓಡಿಯಾಡಲು ಬಹುದೇ? ಚೆಲುವಾದ ಕನಸುಗಳ ಕಟ್ಟಿ ನಲಿಯುವಾಸೆ ಸಖಿ ಆತುರಪಟ್ಟು ಹೂವುಗಳನ್ನು ಕೀಳಬಾರದು ಪಂಕಜಾಳ  ಜತೆ ಪ್ರಪಂಚವೆಲ್ಲ ವಿಹರಿಸುವಾಸೆ ಸಖಿ ಪಂಕಜಾ.ಕೆ.

ಗಜಲ್. 24 ನಿನ್ನೊಡನಾಟವ ಇನಿಯಾ

ಗಜಲ್ ನಿನ್ನೊಡನಾಟವು ಮನಕೆ ಮುದ ತಂದಿದೆ ಇನಿಯಾ ಮುಚ್ಚಿರುವ ಮನದ ಗುಡಿಯ ಕದತೆರೆದಿದೆ ಇನಿಯಾ ಅನುದಿನವು ನಿನ್ನ ಬಾಹುಬಂಧನದಲ್ಲಿ ಇರುವ ಆಶೆ ಮೈ ಮನಸಿನಲಿ ಖುಷಿಯು ತುಂಬಿದೆ ಇನಿಯಾ ಆತುರದಿ ಕಾಯುತ್ತಿದೆ ನಿನ್ನಾಗಮನಕಾಗಿ ತನುವು ಒಂದಾಗಿರುವ ಬಯಕೆಯನು ಹೊಮ್ಮಿಸಿದೆ ಇನಿಯಾ ತಂಪುಗಾಳಿಯು ಬೀಸಿ ಮನವ  ಕೆರಳಿಸಿತು ಒಲವರಸದಲಿ ಮೀಯಬೇಕೆನಿಸಿದೆ ಇನಿಯಾ ಕನಸುಕಂಗಳ ತುಂಬಾ ತುಂಬಿಹುದು ನಿನ್ನ ರೂಪ ಪಂಕಜಾಳ ಬಾಳಿನಲ್ಲಿ ಜೀವಸೆಲೆಯನು ಉಕ್ಕಿಸಿದೆ  ಇನಿಯಾ ಪಂಕಜಾ. ಕೆ.

ನಮನ

ನಮನ ವಿದ್ಯೆ ಬುದ್ದಿಗಳ ಕಲಿಸಿ ಬಾಲ್ಯದಲ್ಲಿ ಕೈ ಹಿಡಿದು ಅಕ್ಷರವ ತಿದ್ದಿಸಿದ ಓ ನನ್ನ ಪ್ರೀತಿಯ ಅಮ್ಮ ಅಪ್ಪl ನೀವೆನ್ನ ಮೊದಲ ಗುರು ಸಲ್ಲಿಸುವೆ ನಿಮಗಿಂದು ನನ್ನ ನಮನ ll ಮನೆಯೇ ಮೊದಲ ಪಾಠಶಾಲೆ ಎನ್ನುವ ತತ್ವವ ಪಾಲಿಸಿl ಕಲಿಸಿದಿರಂದು ನನಗೆ ಒಳ್ಳೆ ವಿದ್ಯೆ ಬುದ್ದಿಗಳ ಸಲ್ಲಿಸುವೆ ನಿಮಗಿದೋ ನನ್ನ  ಮೊದಲ ವಂದನೆll ಅಕ್ಷರಗಳ ತಿದ್ದಿ ತೀಡಿ ಜ್ಞಾನದ ದಾಹವ ಹೆಚ್ಚಿಸುತ ಕಲಿಸಿದಿರಂದು l ಉತ್ತಮಗುಣ ನಡತೆಗಳ ಓ ನನ್ನಪ್ರೀತಿಯ ಶಿಕ್ಷಕ ನಿಮಗಿದೋ ನನ್ನ ವಂದನೆll ಅನುದಿನವು ಹಲವು ವಿಷಯಗಳ ತಿಳಿಸುತ್ತಾ ಜ್ಞಾನದ ಹಸಿವನ್ನು ತಣಿಸುತ್ತಾ ಇರುವ ಗೂಗಲ್ ಅಜ್ಜನೇ l ಇಂದೀಗ ನನ್ನ ಶಿಕ್ಷಕ ನಿನಗಿದೋ ನನ್ನ ನಮll 😀😀 ಪಂಕಜಾ.ಕೆ.

ವ್ಯವಸ್ಥೆ

ವ್ಯವಸ್ಥೆ ಮನುಜ ಮನುಜರ ನಡುವೆ ಜಾತಿ  ಬೀಜವ ಬಿತ್ತಿ ತಮ್ಮ ಕಾರ್ಯ ಸಾಧಿಸುವರಯ್ಯ ಕೈ ಕೈ ಬದಲಿಸುವ ಹಣಕ್ಕೆಎಲ್ಲಿದೆ ಜಾತಿ ನೀತಿ ಪಾಠವ ಹೇಳುತ ಮಾಡುವರು ಜಾತಿ ಬೇಧ ಕುಡಿಯುವ ನೀರಿಗಿಲ್ಲದ ಜಾತಿ ಅನ್ನ ನೀರು ಗಾಳಿಗಿಲ್ಲದ  ಜಾತಿ ಬೇಕಿದೆಯೇ ಈ ಜಾತಿ ವ್ಯವಸ್ಥೆ? ಉದ್ದುದ್ದ ಭಾಷಣ ವ ಬಿಗಿಯುತ್ತ ಜಾತಿ ಪೋಷಣೆ ಮಾಡಿ ಎಬ್ಬಿಸುವರು ದೊಡ್ಡ ಗೋಡೆ ಎಲ್ಲರ ಮೈಯಲ್ಲಿ ಹರಿಯುವುದುಒಂದೇ ರಕ್ತ ರಕ್ತ ಪಡೆಯುವ ಸಂಧರ್ಭದಲಿ ಜಾತಿ ನೋಡುವರೇ? ಪಂಕಜಾ.ಕೆ.

ಮಳೆ ಇಳೆ ಭಾವಗೀತೆ

ಮಳೆ  ಇಳೆ (ಭಾವಗೀತೆ) ಏಕೆ ಮುನಿದೆ ಹೇಳುವರುಣ ಇಂದು ನನ್ನಲಿ?l ಸಾಕು ಸಾಕು ನಿನ್ನ ಕಾಟ ತಾಳಲಾರೆನುll ನಲ್ಲೇ ನಿನ್ನ ಬಿಸಿಯುಸಿರು ನನಗೆ ತಟ್ಟಿತುl ರವಿಕಿರಣದ ಬಿಸಿಗೆ ನೀನು ಸುಟ್ಟೆಯಲ್ಲವೇ?ll ಬಿಡು ಬಿಡು ಇಷ್ಟು ದಿನ ಕಾಟ ಕೊಡುವುದೇ?l ತನು ಮನವೆಲ್ಲ ಕೊಚ್ಚುತ್ತಿರುವುದು ಕಾಣದೆll ಏನು ಮಾಡಲಿ ನಲ್ಲೇ ನಿನ್ನ ಮೈಯಲೇನಿದೆ?l ಉಬ್ಬುತಗ್ಗು  ಎಲ್ಲಾ ಅಳಿದು ನೆಲೆಯು ಎಲ್ಲಿದೆ?ll ನಲ್ಲ ನಿನ್ನ ಒಲವ ಹನಿಯು ಜಾಸ್ತಿಯಾಗಿದೆl ಮನೆ ಮಠ ಎಲ್ಲವಿಂದು ಕೊಚ್ಚಿ ಹೋಗಿದೆll ಕಾಡು ಬೆಟ್ಟ ಇದ್ದರಲ್ಲೇ ನಾನು ಇಂಗಿ ಹೋಗುವೆl ಕಾಡು ಕಡಿದು ನಾಡು ಮಾಡಿದ ಮನುಜ ತಿಳಿಯನೇ?ll ತಿಳಿದಾನು ಇದನು ಅವನು ಇನ್ನು ಕ್ಷಮಿಸಿ ಬಿಡುವೆಯl ಸಾಕು ಮಾಡು ನಿನ್ನ ಲೀಲೆ ಈಗ ಸದ್ಯಕೆll ಪಂಕಜಾ.ಕೆ.

ಪರಿಭ್ರಮಣ ಬಗ್ಗೆ ಇನಿಯಾ ಗಜಲ್23

ಗಜಲ್. 23 ಮನಸು ಎತ್ತೆತ್ತಲೋ  ಅಲೆಯುತಿದೆ  ಇನಿಯಾ ಭಾವನೆಗಳ ಅಲೆಗಳು ಅಪ್ಪಳಿಸುತಿದೆ  ಇನಿಯಾ ಹೃದಯಗಳ ನಡುವಿನಲಿ ಬೆಸುಗೆ ಇದ್ದೇ ಇರುವುದು ಮನೆಯೊಂದು ನಂದನವನ ಎನಿಸುತಿದೆ ಇನಿಯಾ ಒಲವಿನ ಆಸರೆಯು ಬಾಳಿಗೆ ಸದಾ ಇರಬೇಕು ಹೂಬನದಲ್ಲಿ ಕನಸುಗಳ ಅರಳಿಸುತಿದೆ ಇನಿಯಾ ಭೂಮಿಯ ಪರಿಭ್ರಮಣ ಎಂದೂ ನಿರಂತರವಾಗಿದೆ ಭಾವಲಹರಿಗಳು ನಿನ್ನ ಸುತ್ತಲೇ ಸುತ್ತುತಿದೆ ಇನಿಯಾ ಪಂಕಜಾಳು ಭಾವಜೀವಿ ಯಾಗಿಹಳು ಬಲ್ಲೆಯಾ ಮನ ಕಷ್ಟದಲಿ ಗಟ್ಟಿಯಾಗಿರಲು ಬಯಸುತಿದೆ ಇನಿಯಾ ಪಂಕಜಾ.ಕೆ.

ಗಜಲ್ ಎಂದರೇನು

ಗಜಲ್ ಎಂದರೇನು? ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳಿಂದ ಗಜಲ್ ರಚಿತವಾದವೆಂದು ಹೇಳುವರಾದರೂ ಅದು ಬೆಳೆದದ್ದು ಈರಾನ್‌ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಮುಂದೆ ಫಾರ್ಸಿ ಭಾಷೆಯಿಂದ ಉರ್ದು ಭಾಷೆಯಲ್ಲಿ ಬಂದ ಗಜಲ್ ಫಾರ್ಸಿಯ ಅನುಕರಣವಾಗಿರಲಿಲ್ಲ. ಹಿಂದುಸ್ತಾನಕ್ಕೆ ಬಂದ ಗಜಲ್‌ನಲ್ಲಿ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಉರ್ದು ಭಾಷೆಯ ಗಜಲ್‌ನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದವರು ಶಾಂತರಸರು. ಉರ್ದು ಮಾಧ್ಯಮದಲ್ಲಿಯೇ ಅವರು ಅಭ್ಯಾಸ ಮಾಡಿದ್ದುದರಿಂದ ಗಜಲ್‌ನ ಪ್ರಕಾರದ ಸಂಪೂರ್ಣ ಆಳ, ವಿಸ್ತಾರಗಳ ಅರಿವು ಅವರಿಗಿತ್ತು. ಹಾಗಾಗಿಯೇ ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಗಜಲ್ ಎಂಬ ಹೆಸರಿನ ಪ್ರೇಮಗೀತೆಗಳನ್ನು ಅವರು ವಿರೋಧಿಸುತ್ತಿದ್ದರು. ಅದನ್ನು ನನ್ನ ಮುಂದೆ ವ್ಯಕ್ತ್ಪಪಡಿಸಿಯೂ ಇದ್ದರು. ಹಾಗಾದರೆ ಈ ಕುರಿತು ಪತ್ರಿಕೆಗಳಲ್ಲಿ ಏಕೆ ಸ್ಪಷ್ಟನೆ ನೀಡಬಾರದು? ಎಂದು ಅವರನ್ನು ಕೇಳಿದ್ದೆ. ತಮ್ಮ ಕೃತಿಯಲ್ಲಿ ಅದನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದರು. ಅಂತ