Skip to main content

Posts

Showing posts from July, 2021

ಪರಿಸರ ಜಾಗೃತಿ ಲೇಖನ

ನೆನಪಿನ ನಾವಿಕ  ಸಾಹಿತ್ಯವೇದಿಕೆ ಲೇಖನ ಸ್ಪರ್ಧೆಗಾಗಿ     ವಿಷಯ..ಪರಿಸರ ಜಾಗೃತಿ ಹಸಿರು ಕಾಡು ಗುಡ್ಡಗಳಿಂದ ತುಂಬಿದ ಪ್ರಕೃತಿಯೇ ಪರಿಸರ. ಪರಿಸರದ ಅಳಿವು ಉಳಿವು ಮನುಜನ  ಕೈಯಲ್ಲಿದೆ. ಪ್ರತಿಯೊಬ್ಬರೂ ತಮ್ಮ ಸುತ್ತುಮುತ್ತಲಿನ ಪರಿಸರ ಹಸಿರಾಗಿ ಇರುವಂತೆ ನೋಡಿಕೊಳ್ಳಬೇಕು .ಹಸಿರು ಇದ್ದರೆ ಮಾತ್ರ ನಾವು ಉಸಿರಾಡಲು ಸಾಧ್ಯ . ಮಾನವನ ದುರಾಸೆಗೆ ಇಂದು ಪ್ರಕೃತಿ ನಾಶವಾಗುತ್ತಿದೆ .ಎಲ್ಲೆಂದರಲ್ಲಿ ಕಸದ ತ್ಯಾಜ್ಯಗಳನ್ನು ಎಸೆದು  ಕಾಡು ಗುಡ್ಡಗಳನ್ನು ಕಡಿದು ಕಾಂಕ್ರೀಟ್ ಕಟ್ಟಡಗಳನ್ನು ಕಟ್ಟುತ್ತಾ  ಭೂಗರ್ಭಕ್ಕೆ ಕನ್ನ ಹಾಕಿ ನೀರಿನ ಒರತೆಯನ್ನು ಬತ್ತಿಸಿ,ಪ್ರಕೃತಿಯನ್ನು  ಮಲಿನ ಮಾಡುವ ಮನುಜ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ.ಪರಿಸರ ನಾಶದಿಂದ ಕೊರೊನಾದಂತ ಕಂಡು ಕೇಳದ ರೋಗವು ಮಾನವನನ್ನು ಬಾಧಿಸುತ್ತಿದೆ..ಸ್ವಚ್ಛ ಸುಂದರ ಪರಿಸರ ಆರೋಗ್ಯವನ್ನು ಕೊಡುತ್ತದೆ.ದೇವರು ಯಥೇಚ್ಛವಾಗಿ ಕೊಟ್ಟ ಶುದ್ಧ ಗಾಳಿ ನೀರು  ಜಗದ ಜೀವಿಗಳಿಗೆ ಒಂದು ವರವಿದ್ದಂತೆ  ಬುದ್ದಿಜೀವಿಯಾದ ಮನುಜ  ಪರಿಸರದ ಉಳಿವಿನ ಬಗ್ಗೆ ತಿಳಿದುಕೊಂಡು ಅದರ  ರಕ್ಷಣೆ  ತನ್ನ ಹೊಣೆಯೆಂದು ತಿಳಿಯಬೇಕು  ಪರಿಸರ ದಿನಾಚಾರಣೆಯು ಕೇವಲ ಆಚರಣೆಯಾಗದೆ ಕಾರ್ಯರೂಪಕ್ಕೆ ಬರುವಂತಾಗಬೇಕು .ಪ್ರಚಾರಕ್ಕಾಗಿ ಗಿಡಗಳನ್ನು  ನೆಡದೆ  ಸ್ವ ಇಚ್ಛೆಯಿಂದ ಗಿಡಗಳನ್ನು ನೆಟ್ಟು ಪೋಷಿಸಿ ಪ್ರಕೃತಿ ರಕ್ಷಣೆ ಮಾಡಿದರೆ  ಮುಂಬರುವ ದಿನಗಳಲ್ಲಿ ಮಾನವ ಆರೋಗ್ಯವಂತನಾಗಿ ದೀರ್ಘಾಯುಷಿಗಳಾಗಿ ಬಾಳಬಹುದು ಈ

ತುಮಕೂರು ಘಟಕ

[14/03, 4:33 pm] Pankaja K: ಗುರುಕುಲಾ ಜಿಲ್ಲಾ ಘಟಕ ತುಮಕೂರು ವಾರಕ್ಕೊಂದು ಸ್ಪರ್ಧೆಗಾಗಿ.ಟಂಕಾಗಳು ಟಂಕಾ.1. ಲಲಿತಕಲೆ        ಒಂದು ದಾರಿಯು        ಮನದ ಉಲ್ಲಾಸಕ್ಕೆ        ಲಲಿತಕಲೆ        ನಿವಾರಿಸುವುದಿದು        ಏಕತಾನತೆಯನ್ನು ಟಂಕಾ..2   ಕಾರಣ ಸುಖದುಃಖಕ್ಕೆ ಮಾನವನ ಮನಸು ಒಂದು ಕಾರಣ ಒತ್ತಡಗಳಿಲ್ಲದ  ಬದುಕು ಸುಂದರವು ಶ್ರೀಮತಿ.ಪಂಕಜಾ.ಕೆ. ಮುಡಿಪು ಕುರ್ನಾಡು.ದ.ಕ.574153 [21/03, 7:55 pm] Pankaja K: ಗುರುಕುಲಾ ಕಲಾ ಪ್ರತಿಷ್ಠಾನ ಜಿಲ್ಲಾ ಘಟಕ  ತುಮಕೂರು ಸ್ಪರ್ಧೆಗಾಗಿ ಕವನ ದತ್ತಪದ. ಸ್ನೇಹ ಸ್ನೇಹದ  ಕಡಲು  ಪ್ರೀತಿ ವಿಶ್ವಾಸದ ಕಡಲು ನಂಬಿಕೆ  ಭರವಸೆಯ ತೊಟ್ಟಿಲು ರಕ್ತ ಸಂಬಂಧಕ್ಕಿಂತ ಮಿಗಿಲು ಸಾಂತ್ವನಕೆ ಸಿಗುವ ಹೆಗಲು ಕಷ್ಟಕ್ಕೆ  ಸ್ಪಂದಿಸುವ ಗುಣ ಎಂದಿಗೂ ಬಯಸನು ಹಣ ಶುದ್ಧ ಸ್ನೇಹ ಸಿಗಲು ಬೇಕು ಋಣ ಸ್ನೇಹಿತರಿಲ್ಲದ  ಜೀವನ ಭಣ ಭಣ ಯಾವುದೋ ಜನ್ಮದ ಅನುಬಂಧ ಸ್ನೇಹವೆಂಬ ಈ ಮಧುರ ಸಂಬಂಧ ಕಷ್ಟ ನಷ್ಟಗಳಿಗೆ ಜತೆಯಾಗುವ ಬಂಧ ಸುಖ ದುಃಖಗಳಿಗೆ ಹೆಗಲಾಗುವ ಚಂದ ಶ್ರೀಮತಿ.ಪಂಕಜಾ.ಕೆ. ಮುಡಿಪು ಕುರ್ನಾಡು.ದ.ಕ [28/03, 8:19 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ತುಮಕೂರು ವಾರಕ್ಕೊಂದು  ಸ್ಪರ್ಧೆಗಾಗಿ ವಚನಕ್ಕೊಂದು ವಿಮರ್ಶೆ ಆಸೆಯೇ ಮಾಯೆ ಹೆಣ್ಣು ಹೊನ್ನು ಮಣ್ಣುಗಳನು  ಮಾಯೆಯೆಂದರು ಹಿರಿಯರು ಇವುಗಳಾವುವೂ ಮಾಯೆಯಲ್ಲ ಮೂಢನಂಬಿಕೆ ಇದು ತಿಳಿಯಿರಿ ಹುಚ್ಚುಕುದುರೆಯಂತೆ ಓಡುವ ಮನವು ಒಂದು

ಧಾರವಾಡ ಯುವ ಬರಹ ಗಾರರು

[07/03, 3:16 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ. ಚಿತ್ರಕವನ ಸ್ಪರ್ಧೆಗಾಗಿ ವಿಷಯ..ಪ್ರೇಮದ ಪಯಣ ಒಲವಿನ ಜತೆಗಾರ ಪ್ರೇಮದ ಪಯಣಕೆ ನೀ ಜತೆಯಾಗುತ ನಲಿವಲಿ  ಕಳೆಯಿತು ದಿನವೆಲ್ಲಾ ಜೋಡಿ ಹಕ್ಕಿಗಳ ತೆರದಲಿ ನಲಿಯುತ ಬಾಳದು ಸಾಗಿತು ಮುದದಿಂದ ಖುಷಿಯಲಿ ಇರುವ ಕ್ಷಣದಲೇ ಬಂದಿತು ಗಡಿಯ ರಕ್ಷಣೆಯ ಕರೆಯೊಂದು ಅವಸರದಲೇ ಹೊರಟೇ ಬಿಟ್ಟನು ಒಲವಿನಾಟಕೆ ತೆರೆಯನು ಎಳೆಯುತಲಿ ಗಡಿಯನು ಕಾಯುವ  ವೀರಯೋಧನ  ಮನದಲಿ ತುಂಬಿದೆ ತಲ್ಲಣವು ಮುದ್ದು ಮಡದಿಯ ಎದೆಯಲಿ  ಹರಿದಿದೆ ವಿರಹದ ಉರಿಯ ರಿಂಗಣವು ಮನದ ದುಗುಡವ ಇನಿತೂ ತೋರದೆ ಹರಸಿ ಕಳಿಸುವ ಕ್ಷಣವದು ಕಣ್ಣು ತುಂಬಿದ ಮುದ್ದು ಹುಡುಗಿಯ ಸಂತೈಸಿ ಹೊರಟನು ಕರ್ತವ್ಯಕೆ ಹೇಳಲಿ ಹೇಗೆ ವಿರಹದ ಕ್ಷಣವ ಭಾವನೆಗಳೆಲ್ಲವೂ ಬತ್ತಿಹುದು ಶ್ರೀಮತಿ.ಪಂಕಜಾ.ಕೆ. ಮುಡಿಪು ಅಂಚೆ.ಕುರ್ನಾಡು. ದ..ಕ. [14/03, 9:14 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ ಕವನ ಸ್ಪರ್ಧೆಗಾಗಿ ವಿಷಯ..ವಿಸ್ಮಯ ಬದುಕು           ದೇವನ ಸೃಷ್ಟಿ ಯ ಅದ್ಬುತ            ದೂರದ ಗಗನದಿ  ಮೂಡುವ ರವಿಯು ವಿಸ್ಮಯ ತುಂಬಿದನು ಜಗಕೆಲ್ಲಾ ಕತ್ತಲೆ ರಾತ್ರಿಯು ಕಳೆಯುತಲಿರಲು ಬೆಳಕದು ಹರಡಿತು ಬುವಿಗೆಲ್ಲಾ ಬಾನಿನ ತುಂಬಾ ತುಂಬಿದ ಬಣ್ಣವು ವಿಸ್ಮಯದ ಬದುಕನು ತೋರುತಿದೆ ಸರ ಸರ ಸರಿಯುವ ಮೋಡಗಳಾಟವು ಮನದಲಿ ಸಂತಸ ತುಂಬುತಿದೆ ನೀಲಾಕಾಶವ ಮುತ್ತಿದ ಕರಿ  ಮೋಡಗಳು ಮಳೆಯನು ಸುರಿಸುವ ಪರಿಯೆಂತು ಭೂಮಿಯ ಒಡಲಲಿ ಹುದುಗಿದ ಬೀಜಗಳು ತಲೆಯನು