Skip to main content

Posts

Showing posts from December, 2018

ನಗು

ನಗು ನಗಬೇಕು ನಾವೆಲ್ಲ ಹೂವೊಂದು ಬಿರಿದಂತೆ ನಕ್ಕು ಒಮ್ಮೆ ನೋಡಿ ಹೇಗಿರುವುದು ಮೋಡಿ ಹುದುಗಿರುವ  ತಲೆನೋವು ನಕ್ಕಾಗ ಮಾಯ ಮೈಕೈಯ ನೋವೆಲ್ಲ ನಗುತಿರಲು ಕಾಣ ನಗುವೊಂದು ಮಂತ್ರ ತಿಳಿಯಬೇಕು ಅದರ ತಂತ್ರ ಮುಖದಲ್ಲಿ ನಗುವಿರಲಿ ಮನದಲ್ಲಿ ಖುಷಿಯಿರಲಿ ಬಿಟ್ಟುಬಿಡಿ ಕೊಂಕು ನಗೆ ಉರಿದೀತು ಮನ ಹಲವು ಬಗೆ ಜೀವನದ ಜಂಜಾಟಗಳಿಗೆ ಜೀವಜಲವೇ  ನಗು ಜೀವಿಗಳನೊಡನಾಟಕ್ಕೆ ಬೇಕು ಸುಂದರ ನಗು ನಗಬೇಕು ನಕ್ಕು ನಲಿಯಬೇಕು ಮನಸು ಹಗುರವಾಗಲು ನಗಬೇಕು ಪಂಕಜಾ.ಕೆ

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡೆವ ದಾರಿಯಲಿ ಹೂವು ಮುಳ್ಳುಗಳಿತ್ತು ಬಾಳಿನಲಿ ನೋವು ನಲಿವು ಗಳಿತ್ತು ಕಷ್ಟ ಸುಖಗಳಎದುರಿಸುವ  ಛಲವಿತ್ತು ಕಳೆದ ಕ್ಷಣಗಳುಮರೆಯಲಾರದ ಹೊತ್ತು ಮುದ್ದು ಮಕ್ಕಳ ಆಟ ಪಾಠದಲಿ ಅವರನೊಂದು ಗುರಿಸೇರಿಸುವ ಭರದಲಿ ಕಳೆಯಿತು ವರ್ಷಗಳು ಉರುಳಿ ದಿನದಿನಕೂ ಗಟ್ಟಿಯಾಯಿತು ಒಲವು ಇಂದೀಗ ಬಾಳ ಸಂಜೆಯ ಪಯಣ ತೊಟ್ಟಿರುವೆ ನಗುವಿನಾಭರಣ ಒಲವಿನ ಬಳ್ಳಿ ಲತೆಯಂತೆ ಹಬ್ಬಲಿ ದೇವ ದೇವತೆಗಳು ಬಾಂದಳದಿ ನಿಂತು ಹರಸಲಿ ನಿತ್ಯ ವಸಂತವು ಬಾಳಲಿತುಂಬಿ ತುಳುಕಿ ಸಾಗಲಿ ನಮ್ಮ ಒಲವಿನ ಪಯಣ ಪಂಕಜಾ.ಕೆ. ವಿವಾಹ ವಾರ್ಷಿಕೋತ್ಸವದ ಶುಭಾವಸರದಲ್ಲಿ ಹೀಗೊಂದು  ಕವನ

ಕಪ್ಪು ಮೋಡ

ಕಪ್ಪು ಮೋಡ ಕಪ್ಪು ಮೋಡದ ದಂಡು  ತುಂಬಿ ಬುವಿ ಯಲಿ ತುಂಬಿತು ಕತ್ತಲೆ ರವಿಯು ಮೋಡದ ಮರೆಯಲಿ ಮುಖವ ಮರೆಸುತ ಓಡಿದ ಮಿಂಚು ಗುಡಿಗಿನ ಆರ್ಭಟ ವರುಣ ಬಂದನು ಓಡುತಾ ಬುವಿಯು ಕುಣಿದಳು ಹರ್ಷದಿ ತೊನೆದು ನಲಿದಳು  ಮಳೆಯಲಿ ಕಾದ ಬುವಿಗೆ ತಂಪು ತಂತು ಮುನಿಸು ಬಿಟ್ಟ ನಲ್ಲೆಯ ತೆರದಲಿ ಜೀವ ಕೋಟಿಗೆ ಗೆಲುವು ತಂತು ಮನಕೆ ಮುದವನು ತುಂಬಿತು ಚಿಗುರು ಹೂವು ತುಂಬಿ ತುಳುಕಿ ಕಣ್ಣು ಮನವನು ತುಂಬಿತು ಕಪ್ಪು ಮೋಡದ ದಂಡು ಕರಗಿ ಮಳೆಯ ಸುರಿಸುತ ಬಳಲಿತು ಪಂಕಜಾ.ಕೆ.

ಚೋರ

ಚೋರ ಮೆಲ್ಲ ಮೆಲ್ಲನೆ ಬಂದು ಮನಕೆ ಲಗ್ಗೆಯನಿಟ್ಟು ಮನವ ಕೆಣಕುತನಿಂದು ಮನದ ಮಲ್ಲಿಗೆಯೊಳಗೆ ಮೌನ ರಾಗದಿ ಹಾಡಿ ಮನಕೆ ಮುದ ತಂದೆ ಮನವ  ಕದ್ದಿಹ ಚೋರ ಮುತ್ತೊಂದ ಕೊಟ್ಟಾಗ ಮೂಡಿತಲ್ಲಿ ಕಾಮನಬಿಲ್ಲು ಮಿನುಗುತ್ತಿದೆ ಬಾಳಿನಲಿ ಚುಕ್ಕಿ ಮನಸು ಆಗಿದೆ ಆಗಸದ ಹಕ್ಕಿ ಮೂಡಿದ ಕನಸುಗಳ ಹೆಕ್ಕಿ ಮಾಲೆಯನು ಮಾಡಿಕಟ್ಟಿ ಮನಕೆ ತೋರಣವ ಕಟ್ಟಿ ಮನದಲ್ಲಿ ನಿಂತೆ ನೀ ಬಾಳ ಚೋರ ಪಂಕಜಾ.ಕೆ.

ಸ್ವಾಭಿಮಾನದ ಹರಿಕಾರ

ಸ್ವಾಭಿಮಾನದ ಹರಿಕಾರ ಚಹಾ ಮಾರುತ್ತಿದ್ದ ಹುಡುಗನೇ ಇಂದೀಗ ದೇಶದ ಪ್ರಧಾನಿಯಾದನೇ ಅವರ ಆಡಳಿತದ ವೈಖರಿ ಜಗತ್ತೇ ನೋಡುತ್ತಿದೆ ಅಚ್ಚರಿ ರಾಜಕೀಯ  ಮುತ್ಸದ್ದಿ  ಈತ ಭಾರತದಹೆಮ್ಮೆಯ ಪುತ್ರ ಈತ ಜಗದಗಲ ಭಾರತ ಕೀರ್ತಿಯು ಹಬ್ಬಿ ಇಂದೀಗ ಭಾರತ ಮಾತೆ ಉಬ್ಬಿ ಭಯೋತ್ಪಾದನೆಗಳು ಕುಗ್ಗಿ ಅಭಿವೃದ್ಧಿಯತ್ತ  ಭಾರತ ನುಗ್ಗಿ ದೊಡ್ಡಣ್ಣನಿಗೆ ಕೊಟ್ಟರು  ಗುದ್ದು ಸ್ವಾಭಿಮಾನದಿ  ಬದುಕನ್ನು  ಗೆದ್ದು ಸ್ವಾಭಿಮಾನದ ಬಾವುಟವ ಏರಿಸಿ ಭಾರತಾಂಬೆಗೆ ಹಿರಿಮೆಯ ಗರಿ ತೊಡಿಸಿ ಮೆರೆದ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಆತನೇ ಜಗಮೆಚ್ಚಿದ  ನರೇಂದ್ರ ಮೋದಿ ಭಾರತ ಕಂಡ ಮಹಾನ್ ನಾಯಕ ಹಾರಿಸುವನು ಭಾರತದ ಕೀರ್ತಿ ಪತಾಕೆ ಬದುಕಿದರೆ ಇವರಂತೆ ಬದುಕಬೇಕು ಸ್ವಾಭಿಮಾನ ತುಂಬಿ ನಡೆಯಬೇಕು ತನಗಾಗಿ ಏನನ್ನೂ ಬಯಸದ ಸಂತ ತಾಯ್ನಾಡಿನ ಏಳಿಗೆಯೇ ಇವರ ಮಂತ್ರ ಸ್ವಾಭಿಮಾನದ.   ಹರಿಕಾರ ಜಗತ್ತೇ ಹಾಕುತ್ತಿದೆ  ಇವರಿಗೆ ಜೈಕಾರ ಪಂಕಜಾ.ಕೆ. ಮುಡಿಪು

ಖುಷಿ

ಖುಷಿ ಮಂಜು ತುಂಬಿದ ಹಾದಿಯಲಿ ಮೈಯ ಕೊರೆಯುವ ಚಳಿಯಲಿ ಬೀಳುತ್ತಿರುವ ಹಿಮ ಮಳೆಯಲಿ ರವಿಯ ಕಿರಣದ ಬೆಚ್ಚನೆ ಸ್ಪರ್ಶ ಕೊಡುವ ಖುಷಿಯನು ಬಲ್ಲಿರಾ ಪಡುಗಡಲಲಿ ಮುಳುಗುತ್ತಿರುವ ರವಿಯ ಕಿರಣದ ತಂಪಲಿ ಬಾನುತುಂಬಾ ತುಂಬಿ ನಿಂತ ಸಪ್ತವರ್ಣದ ತೇರ ನೋಡುವ ಖುಷಿಯ ವರ್ಣಿಸಲರಿಯೆನು ಕಾರಿರುಳ ರಾತ್ರಿಯಲ್ಲಿ ತಾರೆಗಳ ಮಧ್ಯದಲ್ಲಿ ಹೊಳೆಯುತಿರುವ ಶಶಿಯನು ನೋಡುತಿರಲುಸಿಗುವ ಖುಷಿಯ ಹೇಳಲರಿಯೆನು   ಗೆಳೆಯರೇ ಮುಗ್ದ ಮಗುವಿನ ನಗುವಿನಲ್ಲಿ ತೊದಲು ನುಡಿಯ ಮಾತಿನಲ್ಲಿ ಮುದ್ದು ಮಕ್ಕಳ ನಲಿವಿನಲ್ಲಿ ಮನದಿ ತುಂಬಿದ ಖುಷಿಯನು ಹೇಳಲೇಗೆ  ಅರಿಯೆನು ಹೂವು ತುಂಬಿದ ಗಿಡಗಳ ಹಾರುತಿರುವ ದುಂಬಿಗಳ ಮಧುರ ಝೇಂಕಾರದಲಿ ಕಣ್ಣು ತುಂಬುವ ಚೆಲುವು ಕೊಡುವ ಖುಷಿಯನೀವು ಬಲ್ಲಿರಾ ಬೋರ್ಗರೆಯುವ ಜಲಪಾತವು ಏಕತಾನತೆಯನ್ನು ಸರಿಸಿ ಮನಕೆ ಕೊಡುವುದು ಖುಷಿಯನು ಪ್ರಕೃತಿ ಪ್ರೀತಿಲಿ ನಲಿಯುತ್ತಿದ್ದರೆ ಖುಷಿಯು ಮನದಲಿ ತುಂಬುವುದು ಜೀವನೋತ್ಸಾಹ ಹೆಚ್ಚಿಸುವ ಪ್ರಕೃತಿಯೊಡನೆ ನಲಿಯುತ ಪ್ರಕೃತಿ ಪ್ರೀತಿಯ ಬೆಳೆಸಿಕೊಂಡು ನಿತ್ಯ ಖುಷಿಯಲಿ ಕಳೆಯುವ ಪಂಕಜಾ.ಕೆ.

ಬೆಳ್ಳಿಯ ತಟ್ಟೆ

ಬೆಳ್ಳಿಯ ತಟ್ಟೆ ಬಾನಲಿ ಹೊಳೆಯುವ ಬೆಳ್ಳಿಯ ರೇಖೆ ದಿನ ದಿನ ಬೆಳೆಯುವ ಬೆಳ್ಳಿಯ ರೇಖೆ ಹುಣ್ಣಿಮೆ ದಿನದಲಿಹೊಳೆಯುವ ತಟ್ಟೆ ನಮ್ಮಯ ಜತೆಯಲಿ ಬರುತಿಹ ತಟ್ಟೆ ಹಾಲಿನ ಬೆಳಕನು ಧರೆಯಲ್ಲಿ ತುಂಬಿ ಮೈ ಮನಸಿಗೆ ತಂಪಿನ ಕಂಪನು ತುಂಬಿ ತಾರೆಗಳೊಡನಾಡುತನಲಿಯುವ ಚಂದ ಕೊಳದಲಿ ಅರಳುವ ನೈದಿಲೆ ಅಂದ ಮೋಡದಮರೆಯಲಿಮುಖವನು ಮರೆಸಿ ದಿನ ದಿನ ಕರಗುತ ಬಾನಲಿ ಚಲಿಸಿ ಕತ್ತಲೆ ರಾತ್ರಿಯ ಧರೆಯಲ್ಲಿ ತುಂಬಿ ವಿರಹದ ನೋವನು ಮನದಲಿ ತುಂಬಿ ತೆರಳಿದ ಕಾಣದ ಲೋಕಕೆ ಇಂದು ಹರಡಿತು ಬುವಿಯಲಿ ಕತ್ತಲು ಇಂದು ಪಂಕಜಾ.ಕೆ

ಒಲವೇ ಜೀವನ

ಒಲವೇ ಜೀವನ ಬಾಳೊಂದು ಭಾವಗೀತೆ ನೀ ಬರೆದೆ ಪ್ರೇಮಗೀತೆ ಹಾಡುತಿದೆ ಒಲವ ಗೀತೆ ಸುತ್ತೆಲ್ಲ ತುಂಬಿರುವ ಒಲವ ರಸ ಪ್ರೇಮ  ಜ್ಯೋತಿಯ ಹೂರಣ ತುಂಬಿದೆಬಾಳಲಿಸವಿಜೇನಹೊನಲು ಮನಸಿಂದು ನಿನ್ನನೇ ನೆನೆದಿದೆ ಇನಿಯ ನಿನ್ನೊಲವ ಉಣಿಸು ಬಾ ತನಿರಸವ ಸವಿಯುತ್ತಾ ನಲಿಯುವ ನೀ ಎನ್ನ ಜೀವನದ ಭಾಗ್ಯನಿಧಿ ದೇವನಿತ್ತ  ವರ ಈ ಸೌಭಾಗ್ಯ ನಿಧಿ ನೀ ಎನ್ನ  ಒಲವ  ಜೀವನದಿ ಒಂದಾಗಿ ಜೀವನವನ ಕಳೆಯುವ ಒಲವಿಂದ  ಜತೆಯಾಗಿಹಾಡುವ ಸುಖ ಸಂತೋಷವ ಬಾಳಲ್ಲಿ ಸವಿಯುವ ಪಂಕಜಾ.ಕೆ.

ಕನಸು

ಕನಸು ಕನಸುಗಳ ಕಾಣುತಹಾರಾಡುವ ಹಕ್ಕಿ ಕತ್ತರಿಸಿದ ರೆಕ್ಕೆಗಳ ಕಂಡು  ಬಿಕ್ಕಿ ಕನಸುಗಳ ನನಸಾಗಿ ನೀನಂದು ಸಿಕ್ಕೆ ಸಿಕ್ಕುಗಳ ಬಿಡಿಸುತ್ತ ನಾನಿಂದು ನಕ್ಕೆ ಹೂವಿನಲಿ ಪರಿಮಳವು ತುಂಬಿರುವಂತೆ ನನ್ನುಸಿರಿನಲ್ಲೆಲ್ಲನೀನಿರುವೆಯಂತೆ ಹೊಸತೊಂದು ಭಾವನೆಯು ಮನದಲ್ಲಿ ತುಂಬಿ ಇಂದೀಗ  ಹಾಡುತಿದೆ ಸಂತಸದ ದುಂಬಿ ಕಾಡುತಿಹ ಕಹಿನೆನಪುಗಳ ನೆರಳು ಬಾಡದಿರಲಿ ನಿನ್ನೊಲವಿನ ಹರಳು ಎಲ್ಲೆಲ್ಲೂ ತುಂಬಿರುವ ಸವಿಜೇನ ಹೊನಲು ಬಾಳಲ್ಲಿ ತುಂಬಿರುವ ನಿನ್ನೊಲವ ಅಮಲು ಇನಿಯ ನೀಬಂದ ಕ್ಷಣದಿಂದ ಬಾಳೆಲ್ಲ ಬೆಳಗು ನಿನ್ನೊಲವ ಸವಿಜೇನೇ ಈ ಬಾಳಿನೊಳಗು ಮೂಡುತಿಹೆ ಕನಸುಗಳು ಆಗಸದೆತ್ತರ ಹೊಸತನದ ರೆಕ್ಕೆಗಳು ಬಂದೀಗ ತತ್ತರ ಪಂಕಜಾ.ಕೆ.

ಆಶೆ ಒಂದಾಶೆ

ಆಶೆ ಒಂದಾಶೆ ಮಾಗಿಯ ಚಳಿಯಲ್ಲಿ ಮೈ ನಡುಗುತಿರಲು ನಿನ್ನೊಲವ ಹೊದಿಕೆಯೊಳಗೆ ಹುದುಗುವಾಸೆ ಬಾನಲ್ಲಿ ಹಾರುತಿಹ ಹಕ್ಕಿಗಳ ಕಂಡು ನಿನ್ನೊಡನೆ ಬಾನೆತ್ತರ ಹಾರುವಾಸೆ ಮಕರಂದ ಹೀರುತಿರುವ ದುಂಬಿಗಳ ಕಂಡು ನಿನ್ನ ಅಧರಗಳ ಮಧುವ ಸವಿಯುವಾಸೆ ಗಿಡದಲ್ಲಿ  ಅರಳಿರುವ ಹೂವುಗಳ ಕಂಡು ನಿನ್ನ ಮುಡಿಗದನು ಮುಡಿಸುವಾಸೆ ತಾರೆಗಳನೊಡನಾಡುತಿರುವ ಚಂದಿರನ ಕಂಡು ನಿನ್ನೊಡನೆ ಅನುದಿನವು ಸುಖಿಸುವಾಸೆ ಬಾಳಲ್ಲಿ ತುಂಬಿರಲು ಸವಿಜೇನ ಹೊನಲು ಸವಿಯುತ್ತಾನೀಜತೆಯಲಿದ್ದರೆ ಸಾಕೆಂಬಾಸೆ ಪಂಕಜಾ.ಕೆ.