Skip to main content

Posts

Showing posts from August, 2018

ಸೆಖೆಗಾಲ

ಸೆಖೆಗಾಲ ಸೆಖೆ ಸೆಖೆ ಸೆಖೆ ಸೆಖೆ ತಾಳೆನು ಈ ಸೆಖೆಯ ವರುಣನು ಬಾರೆಯ ಇಳೆಗೆ ತಂಪನು ತಾರೆಯ ಧರೆಗೆ ಮಳೆ ಬರುವ ಸೂಚನೆ ತೋರಿ ಓಡುವ ಮೋಡ ವ ನೋಡಿ ತಂಪಿನ ಗಾಳಿಯು ಕೂಡಾ ತನ್ನಯ ಪಯಣ ವ ನಿಲ್ಲಿಸಿತು ಬಾಂದಳವೆಲ್ಲಾ ಮುಗಿಲೇ ಇದ್ದರೂ ಹನಿ ಮಳೆಯ ಸುಳಿವಿಲ್ಲ ಕಾದೂ ಕಾದು ಸಾಕಾಯ್ತಲ್ಲಾ ಈ ಸೆಖೆಯ ತಾಳೆನಲ್ಲ ಆಶೆಯ ತೋರಿಸಿ ಮುಗಿಲನು ಕಟ್ಟಿ ಓಡುವೆ  ಎಲ್ಲಿಗೆ ನೀನು ಮಳೆಯನು ಸುರಿಸದೆ ಮುಂದೆ ಕಾಯುತಲಿರುವೆವು ನಾವೆಲ್ಲ ನಿನ್ನಯ ಆಗಮನಕಾಗಿ ಸಹಿಸಲಾರೆವು ಈ ಉರಿ ಸೆಖೆಯ ಮಳೆಯನುಸುರಿಸಿತಂಪನುತಾ ವರುಣ ಪಂಕಜಾ.ಕೆ. ಮುಡಿಪು ಕುರ್ನಾಡು

ಮುಂಜಾನೆ

ಮುಂಜಾನೆ ಬಾನಿನಂಗಳದಲ್ಲಿ ರವಿ ಮೂಡಿ ಬಂದ ಬೆಚ್ಚನೆ ಮಲಗಿದ್ದ ಕೆನ್ನೆಯನು ಮುದ್ದಿಸುತ ಬೆಳಗಾಯಿತೇಳೆಂದು ಎಚ್ಚರಿಸುತ ಹಕ್ಕಿಗಳು  ಮೈ ಮರೆತು ಮೀಯುತಿವೆ ತಾವರೆ ಕೊಳದಲಿ ಚಿಲಿಪಿಲಿ ಎಂದು ಉದಯರಾಗವಹಾಡುತ ಮಧುಹೀರ ಬರುತಿವೆ ದುಂಬಿಗಳದಂಡು ಅರಳಿ ನಗುತಿರುವ ಹೂವುಗಳ ಕಂಡು ತೊನೆಯುತಿದೆ ಮರಗಿಡಗಳು ಉಲ್ಲಾಸದಿಂದ ಎಲ್ಲೆಲ್ಲೂ ತುಂಬಿಹುದು ನವೋಲ್ಲಾಸದಗುಂಗು ಬಾನಲ್ಲಿ ಕಲಸಿಹುದುಬಣ್ಣ ಬಣ್ಣದ ರಂಗು ಕವಿಮನಕೆ ತುಂಬುತಿದೆ ಗುಂಗು ಮುಂಜಾನೆಯ ಈ ಸೊಬಗು ಕಣ್ಣು ತುಂಬಲು ಬೇಕು ಹಾಸಿಗೆಯ ಬಿಟ್ಟೆದ್ದು  ಬಂದು ನವೋಲ್ಲಾಸವ ಉಕ್ಕಿಸುವ ಸೊಬಗು ನಿತ್ಯ ನೋಡುವ ದೃಶ್ಯ ನಿತ್ಯ ನೂತನ ವಿಹುದು ಬಾಳಿನಲಿ ಉಲ್ಲಾಸ ಉತ್ಸ್ತಾಹ  ತುಂಬುತಿಹುದು ಪಂಕಜಾ. ಕೆ. ಮುಡಿಪು ಕುರ್ನಾಡು

ಕುಣಿಯೋಣ ಬಾರ

ಕುಣಿಯೋಣ ಬಾರ ಬೆಳದಿಂಗಳ ಈ ದಿನಗಳಲಿ ಅಂಗಳ ತುಂಬಾ ತುಂಬಿದೆ ಚಂದ್ರನ ಶೀತಲ ಕಿರಣಗಳು ಹಾಲಿನ ಹೊಳೆಯೇ ಹರಿದಂತೆ ತಾವರೆ ಕೊಳದಲಿ ಹೂವಿನ ಜತೆಗೆ ಸ್ಪರ್ಧೆಗೆ ಇಳಿದಿದೆ ಶಶಿ ಬಿಂಬ ಅಂಗಳ ತುಂಬಾ ಅರಳಿದ ಹೂಗಳು ಕಂಪನು ಸೂಸುತಿವೆ ರಾತ್ರಿರಾಣಿ ಮಲ್ಲಿಗೆ ಹೂಗಳ ಕಂಪನು  ತರುತಿದೆ ಬೀಸುವ ತಂಗಾಳಿ ಕೊಳದಲಿ ಅರಳಿದ ನೈದಿಲೆ ಶಶಿಯನು ಕಂಡು ಕುಣಿಯುತಿದೆ ಹಾಲಿನ ಮಳೆಯಲಿ ಮಿಂದ ಹಸಿರಿನ ಕಾನನವು ಜೀರುಂಡೆಯ ಝೇಂಕಾರಕೆ ನಲಿಯುತ ತಾಳವಹಾಕುವುದು ಬಾಬಾರೊ ನಾವುಕುಣಿಯೋಣ ಪ್ರಕೃತಿಯಮಡಿಲಲಿ ನಲಿಯೋಣ ಮನದಲಿ ತುಂಬಾ ಮುದವನು ತುಂಬುತ ಹಾಡುತ ಮೈಮರೆಯೋಣ ಬಾರೋ ಬಾರ ಕುಣಿಯೋಣ ಪಂಕಜಾ ಕೆ.ಮುಡಿಪು. ಕುರ್ನಾಡು

ಶುಭ ಮುಂಜಾನೆ

ಶುಭ ಮುಂಜಾನೆ –-------–---------------- ಶುಭಮುಂಜಾನೆಯಲಿ ರವಿಮೇಲೇರುತ ಬಾನಲಿಬರುತಿಹನುಹೊಸ ದಿನಕೆ  ಹೊಸರಾಗವಮನಕೆತುಂಬುತಲಿಹನು ಸುತ್ತಲೂ   ತುಂಬಿದ ಹಸಿರಿನ     ಸಿರಿ ಎಲ್ಲೆಡೆ   ಧುಮುಕುವನೀರಿನ. ಝರಿ ಹಕ್ಕಿಗಳುಲಿಯುವಚಿಲಿಪಿಲಿ  ಗಾನ ನಿತ್ಯದ  ಕಾಯಕಕೆತೆರಳುವ   ಮನ ಕೊಳದಲಿಅರಳಿದತಾವರೆ ಯಿಂದ ತೇಲುತ ನಲಿಯುವ ಹಂಸ ಗಳಂದ ಬಾನಲಿ ತುಂಬಿದ ಬಣ್ಣಗಳಿಂದ ಹಾರುತಿರುವ ಹಕ್ಕಿಗಳಿಂದ ಮನದಲಿ ತುಂಬಿತುರಂಗಿನ  ಮಾಟ ಸುತ್ತಲ  ಪ್ರಕೃತಿಯಚೆಲುವಿನ ನೋಟ ಸ್ವಾಗತ ಬಯಸುವ. ಮೊಡಗಳಾಟ ಶುಭ ಮುಂಜಾನೆಯಸುಂದರ ನೋಟ ಪಂಕಜಾ. ಕೆ ಮುಡಿಪು. ಕುರ್ನಾಡು

ಭೂ ಸ್ವರ್ಗ

ಭೂ ಸ್ವರ್ಗ ಕಾರ್ಮೋಡಗಳು ನಭವನು ತುಂಬಿ ಬುವಿಯದು ಮುಳುಗಿತು ಕತ್ತಲಲಿ ಕೋಲ್ಮಿಂಚುಗಳು ಕೋರೈಸಿ ಗುಡುಗಿನ ಅಬ್ಬರ ಮೇಳೈಸಿ ಸುರಿಯಿತು ಮಳೆ ಬಿರುಸಿನಲಿ ತುಂಬಿತು ಕೆರೆ ಕಟ್ಟೆಗಳು ಹರಿಯಿತು ಉಕ್ಕಿ  ಕಡಲು ಎಲ್ಲೆಡೆ ತುಂಬಿತು ನೀರು ಗಿಡಮರಗಳು ನೀರನು ಕುಡಿದು ಸಂತಸದಿಂದ ಬೀಗುತಿವೆ ನೀರಲಿ ಮಿಂದ  ಪ್ರಕೃತಿ ಹೊಸಮದುಮಗಳಂದದಿ ನಾಚಿ ತಲೆಯನು ಬಾಗುತಿದೆ ಹಸಿರಿನ ಸೀರೆ ಯ ಹೊದ್ದು ಪ್ರಕೃತಿಯು ಕುಣಿಯುತಿದೆ ದಟ್ಟೈಸಿ  ಬರುವ ಮೊಡಗಳಾಟ ಬಿಸಿಲು ಮಳೆಯಲಿ ವರುಣನ ಆಟ ಮನಕೆ ಮುದವನು ತುಂಬುತಿದೆ ಗಿಡಮರಗಳಲಿ ಹೂಗಳು ಅರಳಿ ದುಂಬಿಗಳನ್ನು ಕರೆಯುತಿದೆ ಬಾನಂಚಿನಲಿ ಮಳೆಬಿಲ್ಲಿನ ನೃತ್ಯ ಬುವಿಯಲಿಕುಣಿಯುವ ನವಿಲಿನ ನಾಟ್ಯ ಬಿರಿದರಳಿದ ಹೂಗಳ ಗಂಧ ಮೈ ಮನಕೆ ಮುದವನು ತುಂಬಿ ಮೈಯನು ಮರೆಸುತಿದೆ ಸ್ವರ್ಗದ ಬಾಗಿಲು ತೆರೆದಂತೆ ಭೂತಾಯಿಯ ಮಡಿಲಿನ ಸ್ಪರ್ಶ ಸ್ವರ್ಗವೇ ಧರೆಗಿಳಿದಂತ ಚೆಲುವಿನ ನೋಟವು ಕಣ್ಮನ ತುಂಬುತಿದೆ ಪಂಕಜಾ .ಕೆ. ಮುಡಿಪು

ಪ್ರಕೃತಿ ಉಳಿಸಿ

ಮಳೆಯು ಸುರಿದು ಇಳೆಯ ತಬ್ಬಿ ಹರುಷ ತಂದಿತು ಮನಸಿಗೆ ನೀರ ಹರಿವು ತುಂಬಿ ತುಳುಕಿ   ಆಯಿತಲ್ಲಿ ಹೊಳೆ ಕೊಚ್ಚಿಹೋಯಿತು ಕೊಳೆ ಬಿಸಿಲ ಬೇಗೆಗೆ ಹೊತ್ತಿ ಉರಿದ ಧರೆಗೆ ತಂದಿತು ತಂಪು ಕಂಪಿನ ಉಸಿರನು ಕೆರೆಕೊಳ ಕಟ್ಟೆಗಳು ಉಕ್ಕಿ ಹರಿದವು ಭರದಲ್ಲಿ ತುಂಬಿ ನಿಂತಿತು ನೀರು ಚಂಡಮಾರುತ  ಬಂದು ಜನಜೀವನ  ತತ್ತರ ಮನೆ ಮಠ ಮುಳುಗಿ ಹೋಗಿ ಬಾಳು ಆಯಿತು ದುರ್ಭರ ಜೀವ ಕೋಟಿಗಳೆಲ್ಲ ನರಳಿ ನಾಶವಾಯಿತು ಜೀವನ ಹಸಿರು ಕಾಡನು  ಕಡಿದು ಮನುಜ  ಕಾಂಕ್ರೀಟ್ ಕಾಡನು ಕಟ್ಟಿದ ನೀರ ಹರಿವಿಗೆ ಜಾಗವಿಲ್ಲದೆ ಕುಸಿದು ಹೋಯಿತು ಮನೆ ಮಠ ಹಸಿರು ಕಾಡಿನ ಬದಲು ಕಾಂಕ್ರೀಟ್ ಕಾಡು ಬೆಳೆಸಿದ ಫಲವಿದು  ಪ್ರಕೃತಿ  ಉಳಿವು ನಮ್ಮಉಳಿವು ತಿಳಿಯುವುದೆಂದಿಗೆ ಮನುಜಗೆ ಪಂಕಜಾ. ಕೆ. ಮುಡಿಪು ಕುರ್ನಾಡು

ಅಪ್ಪನ ದಿನ

ಅಪ್ಪನೆಂಬುವ ವಿಶಾಲ ಆಲದ ಮರದಡಿ ಭಯವಿಲ್ಲದೆ ಬಾಳು ಸಾಗಿ ಕಷ್ಟ ದುಃಖಗಳ ಮೆಟ್ಟಿ ತಲೆಯೆತ್ತಿ ಬಾಳಲು ಕಲಿಸಿದೆ ನೀ ನಮಗೆ ಅಪ್ಪಾ ಕಷ್ಟದಲಿ ಧೈರ್ಯ ತುಂಬಿ ಸುಖದಲ್ಲಿ  ಹಾರೈಸಿ ಬದುಕ ಕಲಿಸಿದ ಧೀರ ನನ್ನ ಅಪ್ಪ ಅಪ್ಪನೆಂಬುವ ಎರಡಕ್ಷರ ಕರೆಯಲೆಷ್ಟು ಮಧುರ ನೀವು ಕಲಿಸಿದ ಆ ಪಾಠ ಮರೆಯಲೇಗೆ ಹೇಳು ನೀಅಪ್ಪ ಪ್ರತಿಯೊಂದು ಕೆಲಸಕ್ಕೂ ಮೆಚ್ಚುಗೆಯ ನುಡಿಯಾಡಿ ಪ್ರೋತ್ಸಾಹಿಸಿ ಮುಂದೆ ತಂದೆ ನೀ ಎನ್ನ ಅಪ್ಪ ನೀನಿದ್ದರೆ  ಮನೆ ತುಂಬಿದಂತೆ ಮಕ್ಕಳ ಶ್ರೇಯಸ್ಸಿಗೆ ನೀ ಮೌನವಾಗಿ ದುಡಿದೆ ಎಲೆಮರೆಯ ಕಾಯಿಯಂತೆ ನಿನ್ನ ನೋವು ಬೇಸರವ ತೋರಿಸದೆಯೇ ನಗು ನಗುತ ಸಂಸಾರ ನೌಕೆಯನು ದಡ ಸೇರಿಸಿದೆ ನೀ ಎನ್ನ ಅಪ್ಪ ನಂದಗೋಕುಲದಂತಿದ್ದ ಮನೆ ನೀ ನಿಲ್ಲದೆ ಈಗಸುರಿಯುತ್ತಿದೆಹಾಳು ನಿಮ್ಮ ನೆನಪೇ ಈಗ ಆ ಮನೆಯ ಶಕ್ತಿ ಅಪ್ಪ ನಿಮ್ಮ  ನೆನಪಿಗೆ ಒಂದು ದಿನ ವೇಕೆ ನಿತ್ಯವೂ ನಿಮ್ಮ ನೆನಪೇ ಈ ಬಾಳ ಬುತ್ತಿ ಪಂಕಜಾ. ಕೆ. ಮುಡಿಪು ಕುರ್ನಾಡು

ಸ್ವಾತಂತ್ರೋತ್ಸವ

ವರ್ಷ ವರ್ಷ ಬರುತಿದೆ ಸ್ವಾತಂತ್ರೋತ್ಸವ ಎಲ್ಲೆಡೆಯೂ ಹಾರುತಿರುವುದು ನಮ್ಮ ಬಾವುಟ ಬಂದಿತಲ್ಲ ಅಂದು ನಮಗೆ ಸ್ವಾತಂತ್ರ್ಯ ಕತ್ತಲೆ ಕಳೆದು ಬೆಳಕು ಬಂದಂತೆ ಅದಕಾಗಿ ದುಡಿದು ಹುತಾತ್ಮರಾದರೆಷ್ಟು ಮಂದಿಯೋ ಆದರೀಗ ಸ್ವಾತಂತ್ರವು ಸ್ವೇಚ್ಛೆಯಾಗಿದೆ ಸ್ವಾತಂತ್ರ್ಯಕ್ಕೂ ಸ್ವೇಚ್ಚೆಗೂ ವ್ಯತ್ಯಾಸ ತಿಳಿಯದ ಮೂರ್ಖರಿಂದ ತುಂಬಿಹುದು ನಮ್ಮ ಭಾರತ ಎಲ್ಲಿ ಇದೆ ನಮಗೆ ಈಗ ಸ್ವಾತಂತ್ರ್ಯ ನಿತ್ಯವೂ ಕಾಣುತ್ತಿರುವುದು ಕೊಲೆ ಸುಲಿಗೆ ದರೊಡೆಗಳ ಚಿತ್ರಣ ಎಳೆಯ ಮಕ್ಕಳನ್ನುಕೂಡ ಕಾಡುವ ಕಾಮುಕರೆ ತುಂಬಿಹರು ಈಗ ಎಲ್ಲೆಡೆಯು ಕಾಶ್ಮೀರದಲ್ಲಿ ತುಂಬಿಹುದು ಭಯೋತ್ಪಾದನೆ ಜೀವಕೋಟಿ ಗಿದೆಯೆ ಅಲ್ಲಿ ರಕ್ಷಣೆ ಅಜ್ಞಾನ ಅಹಂಕಾರ ತುಂಬಿ ತುಳುಕಿದೆ ಎಲ್ಲವನ್ನು ಮೆಟ್ಟಿ ನಾವು ಬೆಳೆಯ ಬೇಕಿದೆ ರೋಷ ದ್ವೇಷ ಮತ್ಸರವ ಮರೆತು ಮೇಲು ಕೀಳು ಜಾತಿ  ಮತ ಬೇಧ ಮರೆತು ಒಂದಾಗಬೇಕಿದೆ ಸೋದರತೆ ಬೆಸುಗೆಯಿಂದ ಬಾಳಬೇಕಿದೆ ಒಂದೇ ತಾಯ ಮಕ್ಕಳೆಂದು ತಿಳಿದು ರಾಮ ರಹಿಮ ಏಸು ಬುದ್ಧ ಎಲ್ಲ ಒಂದೇ ದೇವರೆಂದು ತಿಳಿಯಬೇಕಿದೆ ಸ್ವಾತಂತ್ರ್ಯದ ಯಜ್ಞದಲ್ಲಿ ಬದುಕು ತೆತ್ತ ಕಲಿಗಳಿಗೆ ಕೀರ್ತಿಯನ್ನು ತರಬೇಕಿದೆ ಭಾರತದ ಕೀರ್ತಿಯನ್ನು ಜಗದಗಲ ಹರಡುವಂತೆ ಹಿಂದೂ ಮುಸ್ಲಿಂ ಕ್ರಿಸ್ತ ರೆಲ್ಲ ಒಂದಾಗಬೇಕಿದೆ ಪ್ರೀತಿ ಗಂಧ ಪರಿಮಳವ ಎಲ್ಲೆಡೆ ಹರ ಡ ಬೇಕಿದೆ ಪಂಕಜಾ .ಕೆ. ಮುಡಿಪು ಕುರ್ನಾಡು

ಮುಸ್ಸಂಜೆ

ಮುಸ್ಸಂಜೆಯ  ಈ ಇಳಿ ಹೊತ್ತಿನಲ್ಲಿ ಸೂರ್ಯನು ಮುಳುಗಿದ ಪಡುವಣದಿ ಕಾಮನ ಬಿಲ್ಲಿನ ಬಣ್ಣಗಳಿಂದ ಓಕುಳಿಯಾಡಿದ ತೆರದಿ ಬಾನಲಿ  ಮೂಡಿತು ಚೆಲುವಿನ ಚಿತ್ತಾರ ಹಕ್ಕಿಗಳೆಲ್ಲ ಹಾರಡುತ್ತ ಮನೆ  ಕಡೆ ಸಾಗಿದವು ಚಂದಿರ ಮರೆಯಲಿ ಇಣುಕುತ ಬಂದ ಸುತ್ತಲೂ ತುಂಬಿದ ತಾರೆಗಳಂದ ರಾತ್ರಿಯ ಹೂಗಳು ಅರಳಿ ಪರಿಮಳ ಹರಡಿತು ಭರದಿ ಕಂಪನು ಸೂಸುವ ಮಲ್ಲಿಗೆ ಜಾಜಿ   ಸಂಜೆ ಮಲ್ಲಿಗೆ ಸೊಬಗು ಮಂದ ಮಾರುತ ಬೀಸುತ  ಕಂಪನು ಎಲ್ಲೆಡೆ ಪಸರಿಸಿತು ತಂಪಿನ ಗಾಳಿಯು  ಕಂಪನು ತರಲು ತುಂಬಿತು ಮನದಲಿ ಆನಂದ ಪಂಕಜಾ.ಕೆ. ಮುಡಿಪು ಕುರ್ನಾಡು