Skip to main content

Posts

Showing posts from May, 2019

ಆಸೆ

////--ಆಸೆ//// ಸಂಜೆಯಾಯಿತೆಂದರೆ ಬಾನಲಿ ಮೇಲೇರಿ ಬರುತಿದೆ ಕರಿ ಮೋಡಗಳು ಆಸೆಯ ಅಲೆಗಳನು ಎಬ್ಬಿಸುತ ತಂಪಿನ  ಗಾಳಿಯು ಬೀಸಿ ಕರಿಮೋಡಗಳು ಚದುರಿ ನೀಲಕಾಶದಲಿ ಮಿನುಗುವ ನಕ್ಷತ್ರಗಳ ಕಂಡು ನಿಟ್ಟುಸಿರು ತಂಪು ತಾರದ   ಬಿಸಿ ಗಾಳಿ ಸೆಖೆಯ ಉರಿಯನು ಹೆಚ್ಚಿಸಿ ಮೈಮನದಲಿ ತುಂಬಿತು ತಾಪ ಮನದಲ್ಲಿ ತುಂಬುವ ಆಲಸ್ಯ ಆಶೆ ನಿರಾಸೆಯಾದಾಗ ಕುದಿವ ಲಾವಾರಸ ಮೈಯಲಿ ಬೆವರ ಹನಿ ಮನದಲಿ  ತುಂಬುವ ಆಕ್ರೋಶ ಪಂಕಜಾ.ಕೆ.

ನೀನೆಂದು ಬರುವೆ

ನೀನೆಂದು ಬರುವೆ ಮನಸೆಲ್ಲಾ ಖಾಲಿ ಖಾಲಿ ಯಾಯಿತು ಮೋಡಗಳಿಲ್ಲದ  ಬಾನಿನಂತೆ ಕವಿತೆಯ ಒರತೆ ಬತ್ತಿ ಹೋಯಿತು ನೀರಒರತೆಯಿಲ್ಲದ ಬಾವಿಯಂತೆ ಕವಿಮನದಲಿ ಕವಿತೆಯ ಒರತೆ ಉಕ್ಕಿಸಲು ಮಳೆಯೇ ನೀನೆಂದು ಬರುವೆ ಉರಿ ಸೆಖೆ ತುಂಬಿದೆ ಬುವಿಯಲಿ ಇರುವೆ ನಾ ಮಳೆಯ ತಪದಲಿ ಗಿಡಮರಗಳು ಒಣಗಿ ಹೋಗುತಿದೆ ಮಳೆಯ ನೀರೀಕ್ಷೆಯಲಿ ಸೋತಿದೆ ಜೀವಜಲವೆಬತ್ತಿಹೋದರೆ ಬದುಕುಮಸಣ ಜೀವಸೆಲೆ ಉಕ್ಕಿಸಲು ಬೇಗ ಬಾ ವರುಣ ಪಂಕಜಾ.ಕೆ.

ಮುನಿಸು

ಮುನಿಸು ಏಕೆ ಮುನಿದೆ  ಹೇಳು ವರುಣ ಇಲ್ಲವೇ ನಿನಗೆ ಇನಿತೂ ಕರುಣ ಬಾನು ತುಂಬಾ ಮುಗಿಲು ಕಟ್ಟುವೆ ಮಳೆಸುರಿಸದೆ ಎಲ್ಲಿಗೆ ಹೋಗುವೆ ಆಶೆಯಮೋಡವನುಕಟ್ಟಿಹನುರೈತ ಮಳೆಯ ನಿರೀಕ್ಷೆಯಲಿ ಆನವರತ ನಿನ್ನಾಗಮನಕೆಕಾಯುತಿಹರೆಲ್ಲ ಬಂದೊಮ್ಮೆ ತಣಿಸಬಾರದೆ ನಲ್ಲ ನೀನಿಲ್ಲದೆ ಸೊರಗಿವೆ ಮರಗಿಡಗಳು ನೀಬಂದರೆ ಅರಳಬಹುದು ಹೂಗಳು ಬಿರುಬಿಸಿಲಿಗೆ ಸೊರಗುತ್ತಿದೆ ಮೈ ಮನ ಕೋಪ ಬಿಟ್ಟು ಬೇಗ ಬಾ ವರುಣ ಪಂಕಜಾ.ಕೆ.

ಸಿಹಿ ನೆನಪು

ಸಿಹಿ ನೆನಪು ಸಂಜೆ ಅಂಗಳದಲಿರಂಜೆ ಹೂವನು ಕಟ್ಟಿ ಮುಡಿದ ಗಳಿಗೆಯ  ಆ ಮಧುರ ನೆನಪು ನಿನ್ನ ಒಲವಿನಾಸರೆಯಲ್ಲಿಕನಸು ಕಟ್ಟುತ ಬದುಕು ಅರಳಿ ನಕ್ಕ ಆ ದಿನಗಳ ನೆನಪು ನೆನಪುಗಳ ಸುಳಿಯಲ್ಲಿಮುಳುಗಿರಲು ಗುಳಿಕೆನ್ನೆಯಲಿ ಕೂಡಾ ತುಂಬಿತುಕನಸು ಕಾಡುತಿಹ  ನೆನಪುಗಳ  ಮಾಲೆ ಒಡಲಾಳದಲ್ಲೆಲ್ಲ ಸಂತಸದ ಅಲೆ ಕನಸುಗಳ ತುಂಬೆಲ್ಲ ತುಂಬಿರುವೆ ನೀನು ಬಾಳಿನಂಗಳದಲಿ ಬೆಳಗುವಸೂರ್ಯ ಚಂದ್ರ ನೀನು ನೆನಪುಗಳು ನೂರಾರುಬಾಳಸಂಜೆಯಲದರ ಮೆಲುಕು ಮನದಲ್ಲಿತುಂಬುತಿದೆ ಯವ್ವನದ ಹುರುಪು ಪಂಕಜಾ.ಕೆ.

ನೀರಿನ ಮಹತ್ವ

ನೀರಿನ ಮಹತ್ವ ಸುಡುಬಿಸಿಲ ಬೇಗೆಗೆ ಹೊತ್ತಿ ಉರಿಯುತಿದೆ ಧರೆ ಅಂತರ್ಜಲವ ಕೊರೆದು ಬತ್ತಿ ಹೋಯಿತು ನೀರ ಒರತೆ ಸಾಲು ಸಾಲು  ಮರಗಳ ಕಡಿದು ಕಟ್ಟುತಿಹರು ಕಾಂಕ್ರೀಟ್ ಕಾಡು ನೀರಿಂಗಿಸಲು ಜಾಗವಿಲ್ಲ ಭೂಮಿಕೊರೆದು ನೀರ ಸೆಲೆಯನರಸುವಿಯಲ್ಲ ಹನಿ ನೀರಿಗೆ ಬಾಯ್ಬಿಡುತ್ತಿದೆ ಇಳೆ  ಮಳೆಮುಗಿಲ ಸುಳಿವಿಲ್ಲ ಕಾರಣವ ಬಲ್ಲೆಯೇನು ಮನುಜ ಅತಿ ಆಶೆ ತಂದಿತು  ಈ ಪರಿಯ ಭೂತಾಯಿ ಕೊಟ್ಟಿಹಳು ಹಸಿರು  ಕಾಡು ಸಂಪತ್ತು ಉಳಿಸಿ ಬೆಳೆಸಬೇಕು ನಾವು ಹಸಿರು ಉಸಿರು ಆಗಲು ನೀರಿಗಾಗಿ  ಈಗ ಬಾಯಿ ಬಿಡುವ ಬದಲು ಉಳಿಸಿ ಕೊಳ್ಳಬೇಕು ನೀರ  ಸೆಲೆಯ ಮಳೆಯು ಬರುವ ದಿನದಲಿ ಅಲ್ಲಲ್ಲಿ ಇಂಗು ಗುಂಡಿಗಳ ಮಾಡಿ ಹರಿವ ನೀರಿಗೆ ಒಡ್ಡು ಕಟ್ಟಿ ಉಳಿಸಬೇಕು ನೀರ ಒಂದೊಂದು ಬಿಂದ ನೀರು  ಇಲ್ಲದಿದ್ದರೆ ನಾಶವಾದೀತು ಪ್ರಕೃತಿ ಮನುಜ ಕುಲಕೆ ಬೇಕು ಶುದ್ಧ  ಗಾಳಿ ನೀರು ಪ್ರಕೃತಿ ಪಂಕಜಾ.ಕೆ.ಮುಡಿಪು

ಹಳ್ಳಿಯ ನೋಟ

ಹಳ್ಳಿಯ ನೋಟ ಸುತ್ತಲೂ ತುಂಬಿದಹಸಿರಿನ ಬೆಟ್ಟ ಕಂಗುತೆಂಗುಗಳ ತೊನೆಯುವ ಮಾಟ ಜುಳುಜುಳುಹರಿಯುವನೀರಿನ ತೊರೆ ಬಾಗುತ ಕುಣಿಯುವಭತ್ತದ ತೆನೆ ಹಾಡುವ ಹಕ್ಕಿಗಳಚಿಲಿಪಿಲಿ ಗಾನ ಮಂಜುಳ ನಾದದಿತೇಲುವ ಮನ ದೂರದಿ ತೋರುವ ಮಂಜಿನ ಬೆಟ್ಟ ಸರಿಸುತ ಬರುತಿಹ  ರವಿಕಿರಣದ ನೋಟ ಕರಗುವ ಮಂಜಿನ ಹನಿ ಗಿಡ ಮರಗಳಲ್ಲಿ ಕುಳಿತಿಹ ಹನಿ ಅರಳುವ ಹೂಗಳ ನರುಗಂಪು ಬೀಸುವಗಾಳಿಯು ತರುತಿದೆ ಕಂಪು ಹಾಡುವಕೋಗಿಲೆ ಗಾನದ ಇಂಪು ಹಾರಾಡುವ  ಬಣ್ಣ ಬಣ್ಣದ ಚಿಟ್ಟೆಗಳಗುಂಪು ಹೂವಿಂದಹೂವಿಗೆಹಾರುವ ಚಿಟ್ಟೆಗಳ ದಂಡು ಮಕರಂದ ಹೀರುತ ನಲಿಯುವುದ ಕಂಡು ಕಣ್ಮನ ತುಂಬಿತುಹಳ್ಳಿಯ ನೋಟ ಪ್ರಕೃತಿಯ ಉಸಿರಿನ ಚೆಲುವಿನ ತೋಟ ಪಂಕಜಾ.ಕೆ. ಮುಡಿಪು

ಇಳೆಯ ನಿರೀಕ್ಷೆ 10.5.2019

ಇಳೆಯ ನಿರೀಕ್ಷೆ ಹೊದ್ದಿರುವಉರಿಮುಖವನೊಮ್ಮೆಸಡಿಲಿಸಲಾರೆಯಾ ಇಳೆಯ ಕಾತರದನಿರೀಕ್ಷೆಯ ತಪವ ಗಮನಿಸಲಾರೆಯ ಕಾದಿರುವ ಬುವಿಗೆ ತಂಪನುಣಿಸಲು ವರುಣ ನೀ ಬೇಗ ಬಾರೆಯ ಇಳೆಯ ಬಿಸಿಯನು ತಣಿಸಿ ಮನಸಿಗೆ ಮುದವನು ತಾರೆಯಾ ಹಸಿರ ಸೆರಗನು ಸರಿಸಿ ನಿಂತಿಹಳು ಪ್ರಕೃತಿ ಮಳೆ ಮೋಡಗಳಲೆಲ್ಲಾ ತುಂಬಿದೆ  ವಿಕೃತಿ ಇಂದುಬಂದಾನುನಾಳೆಬಂದಾನುನಿರೀಕ್ಷೆಯಲಿರುವಳು ಇಳೆ ಕಾಯುವುದು ಬಲು ಕಷ್ಟ ಅಲ್ಲವೇ ಹೇಳು ಇನಿಯಾ ಜೀವನದಿಗಳು ಬತ್ತಿದೆ ಒಲವ ರಸವ ಸ್ಪುರಿಸದೆ ಒಮ್ಮೆ ನೀನು ಬಂದು ಅಪ್ಪಿ ತನುಮನವನು ಅರಳಿಸು ಹಸಿರು ಸೆರಗಲಿ ಹೂವು ಅರಳಲಿ ದುಂಬಿಗಳು ಮಧುವ ಹೀರುತ ನಲಿಯಲಿ ತಪವ ಗೈಯುತ ಇಳೆಯುನಿಂತಿಹಳು ಮಳೆಯ ನೀರೀಕ್ಷೆಯಲಿ ತನುಮನವನು ಅರಳಿಸಿ ಪಂಕಜಾ ಕೆ.

ಭಾಸ್ಕರ 12..5 2019

ಭಾಸ್ಕರ ಬಿಸಿಲಿನ ತಾಪ ದಿನ ದಿನಕೂ ಏರುತಿದೆ ಮುದ್ದಿಸಲು ಬರುತಿಹನು ಭಾಸ್ಕರ ಸೆಖೆಯಉರಿ ತಾಳಲಾರದಾಗಿದೆ ಮುರುಟಿ ಹೋದಳು ಸಸ್ಯ ರಾಶಿ ಬಾನಲಿ ತುಂಬಿದ ಕಪ್ಪು ಮೋಡದ ಸಾಲು ಹೊರಟು ಹೋಗುತ್ತಿದೆ ಮಳೆಯಸುರಿಸದೆ ನಿಟ್ಟುಸಿರು ಬಿಡುತಿಹನು ರೈತ ಕೃಷಿಯನಂಬಿ ಬದುಕುತಿರುವನವ ಕೆಟ್ಟ ಪಂಖದ ಗಾಳಿಯೂ ಬಿಸಿಯೇರುತಿದೆ ಭೂತಾಯಿ ಒಡಲಲ್ಲಿ ನೀರ ಸೆಳೆ ಅಳಿಯುತಿದೆ ಪಶು ಪಕ್ಷಿಗಳು ನೀರಿಲ್ಲದೆ ಜೀವ ಕಳೆದುಕೊಳ್ಳುತ್ತಿವೆ ಬಾಂದಳವ ನಿಟ್ಟಿಸುತ  ನಿಡುಸುಯ್ಯುವುದೇ ಆಯಿತಲ್ಲ ದೇವಾ ನಿನಗೆ ಇನಿತೂ  ಇಲ್ಲವೇ ಕರುಣೆ ನಿನ್ನ ಈ ಮಕ್ಕಳ ಮೇಲೆ ನಿನಗೇಕೆ ಬಾರದು ಕರುಣೆ ಸುಡಬೇಡ  ತನು ಮನವ ಭಾಸ್ಕರ ದಾರಿಬಿಡು ವರುಣನಿಗೆ  ಓ ರವಿತೇಜ ಬೇಡುವೆನು ನಿನ್ನ ಬಿಡು ನಿನ್ನ ಉರಿಮುಖವ ಬರಲಿ ಒಮ್ಮೆ ಮಳೆ ತಂಪಾಗಲಿ ಇಳೆ ಪಂಕಜಾ.ಕೆ.

ಶಾರದಾ ಸ್ತುತಿ. 2 ಕವನ ಸಂಕಲನ

ಶಾರದಾಸ್ತುತಿ. 2 ವಿದ್ಯಾಧಿದೇವತೆ  ಶಾರದೇ ವಂದಿಸುವೆ  ನಿನಗೆ  ಇಂದೇ ಕರಮುಗಿದು   ಬೇಡುವೆ ಭಕುತಿಯಲಿ  ಶಿರಬಾಗುವೆ ವಿದ್ಯೆಬುದ್ಧಿಗಳ ರಾಣಿ  ನೀನು ಶರಣು ಬಂದಿಹ ದೀನ ನಾನು ವಿದ್ಯೆಬುದ್ದಿಗಳ ಕೊಡು ತಾಯೇ ನಿತ್ಯವೂ ಬೇಡುವೆನು ತಾಯೇ ಅನುದಿನವು ಕೈ ಹಿಡಿದು ನಡೆಸು ಲೇಖನಿಯ  ಸರಾಗ  ಹರಿಸು ಮನದ ಭಾವನೆಗಳ ಅಕ್ಷರವಾಗಿಸಿ ಸ್ತುತಿಸುವೆನು ದೇವಿ ನಿನಗೆ ನಮಿಸಿ ಶೃಂಗೇರಿ   ಪುರವಾಸಿನಿ ಅಭಯ  ಹಸ್ತವ ತೋರುನಿ ನಿನ್ನ ಅಡಿದಾವರೆಗಳಿಗೆ ಎರಗಿ ಶರಣು ಬಂದಿಹೆ  ಕೊರಗಿ ಕರಗಿ ದೇವಿ ಶಾರದೆ ಕೈ ಹಿಡಿದು ನಡೆಸು ಒಲುಮೆಯಲಿ  ನನ್ನನ್ನು ಹರಸು ಶೃಂಗೇರಿ ಪುರವಾಸಿನಿ ತುಂಗತೀರ ವಿಹಾರಿಣಿ ವೀಣಾಪಾಣಿಯಾಗಿ ಮೆರೆದೆ ನಿನ್ನ ಅಭಯ ಹಸ್ತವ ತೋರು ನೀ ಪಂಕಜಾ.ಕೆ.

ಉತ್ತರಾಯಣ ಕಾಲ book2

ಉತ್ತರಾಯಣ ಕಾಲ ನೇಸರನು ಬದಲಿಸಿದ ತನ್ನ ಪಥ ತುಂಬಿತು ಮನೆ ಮನದಲ್ಲಿ ಸಂತಸ ಉತ್ತರಾಯಣದ ಪುಣ್ಯಕಾಲ ಧ್ಯಾನ ಜಪ ತಪಕ್ಕಿದು ಸಕಾಲ ಮಾಗಿಯ ಚಳಿಗಾಳಿಯು ಕಳೆದು ಮೂಡುತಿದೆ ತನುಮನದಲ್ಲಿ ಚುರುಕು ಸುಗ್ಗಿಯ  ಸಂಭ್ರಮದ ಹಬ್ಬ ಮನೆಯಲ್ಲಿ ಫಸಲು ತುಂಬಿದ ಹರ್ಷ ಎಳ್ಳು  ಬೆಲ್ಲದ  ಹೂರಣ ತರಲಿ ಸುಖಶಾಂತಿಯ ಜೀವನ ಎಳ್ಳು ಬೆಲ್ಲವ ಮನೆಮನೆಗೆ ಬೀರಿ ಸಂತಸವ ಮನೆ ಮನದಲ್ಲಿ ತೂರಿ ಮಾಗಿಯ ಚಳಿಯ ಜಡತೆ ಕಳೆಯಲಿ ಹೊಸ ಹುರುಪನು ಜೀವನಕೆ ತುಂಬಲಿ ಮಕರಸಂಕ್ರಾಂತಿಯ ಜ್ಯೋತಿ ಕಳೆಯಲಿ  ನಮ್ಮೆಲ್ಲರ  ಭೀತಿ ಅರಳಲಿ ಹೊಸತನದ ಹೂವು ತುಂಬಲಿ ಪ್ರೀತಿವಿಶ್ವಾಸದ  ಕಾವು ಪಂಕಜಾ.ಕೆ

ಆಶೆ..ನಿರಾಶೆ

ಆಶೆ..ನಿರಾಶೆ ಮುಂಜಾನೆಯರವಿಕಿರಣದ ಬಿಸಿ ಸ್ಪರ್ಶಕ್ಕೆ ಅರಳುತಿರುವ ಹೂಗಳು ಮಕರಂದವನು ಕುಡಿದು ನಲಿಯುತ್ತಿದೆ ದುಂಬಿಗಳು ಬಾನ ತುಂಬಾ ತುಂಬಿರುವ ಕರಿಮುಗಿಲು ಮಳೆಯನಿರೀಕ್ಷೆಯಲಿ ತಪವಗೈಯುತ್ತಿದೆ ಬಯಲು ಮೋಡಗಳು ಮಳೆಯ ಸುರಿಸದೆ ಹೊರತು ಹೋಗುತ್ತಿದೆ ಸೂರ್ಯನ ಬಿಸಿ ಕಿರಣಗಳು ಮೈಯ ಸುಡುತ್ತಿದೆ ನೀರು ಕುಡಿದರೂ ತೀರದ ದಾಹ ನಿತ್ಯವೂ ಮಳೆ ಬರಬಹುದೆನ್ನುವ ಮೋಹ ಆಶೆ....ನೀರೀಕ್ಷೆಯಲಿಮನವು ತುಂಬಿ ಮಳೆ ಎಂದು ಬಂದೀತು ಕಾಯುವುದೇ ಆಯ್ತು ದೇವರ ನಂಬಿ ಕರುಣೆಯಿಲ್ಲದೆ ಸುಡುತಿಹನು ರವಿ ಮನವು ಬಯಸುತ್ತಿದೆ ಮಳೆಯ ಸವಿ ಪಂಕಜಾ. ಕೆ.

ಗಜಲ್ 10 ಆದೀತೆ

ಗಜಲ್. 10 ಮಳೆಗಾಲದಲಿ ನೀರು ಇಂಗಿಸದಿದ್ದರೆ ಆದೀತೆ ಬೇಸಿಗೆಯಲ್ಲಿ ಬಿಸಿಲಿನ ಝಳಸಹಿಸದಿದ್ದರೆ ಆದೀತೆ ಕಾಲಕಾಲಕ್ಕೆ ಸರಿಯಾಗಿ ಮಳೆ ಬರಬೇಕು ಇಳೆಯಲಿ ಚೆನ್ನಾಗಿ ಬೆಳೆ ಬಾರದಿದ್ದರೆ ಆದೀತೆ ಜೀವಕೋಟಿಯ ಉಳಿವಿಗೆ ಭೂಮಿಯೇ ಆಧಾರ ಹಸಿರು ಕಾಡಿನ ಮಹತ್ವ ತಿಳಿಯದಿದ್ದರೆ ಆದೀತೆ ಮಾನವತೆಯನುಮರೆತು ಬದುಕುವುದು ಸಲ್ಲ ಸುಂದರ ಪ್ರಕೃತಿಯಲಿ ವಿಹರಿಸದಿದ್ದರೆ ಆದೀತೆ ಪಂಕಜಾಳ ಗಮನವೆಲ್ಲ ಇರುವುದು ಗುರಿಯತ್ತ ಕರುಬುವವರ ಜತೆ ಹೊಂದಾಣಿಕೆಯಲಿ ಇರದಿದ್ದರೆ ಆದೀತೆ ಪಂಕಜಾ.ಕೆ.

ಗಜಲ್ 12.ಗೆಳೆಯ

ಗಜಲ್ 12 ಬಾಳಪಯಣದಲಿಜತೆಯಾಗುವೆಯಾಗೆಳೆಯ ನೋವುನಲಿವುಗಳಲ್ಲಿಒಂದಾಗುವೆಯಗೆಳೆಯ ಮುಳ್ಳು  ಹಾದಿಯಲಿ ನಡೆಯುವುದು ಸುಲಭವಲ್ಲ ಹೆಜ್ಜೆಗೆಹೆಜ್ಜೆಸೇರಿಸಿನನ್ನೊಡನೆಬರುವೆಯಾಗೆಳೆಯ ಕಷ್ಟ ನಷ್ಟಗಳು ಇರಬಹುದು ಅನುದಿನವು ಎದುರಿಸುತನಗುವಹಂಚುವೆಯಾ ಗೆಳೆಯ ಜೀವನ ಹೂವಿನ ಹಾಸಿಗೆ ಯಲ್ಲ ಮುಳ್ಳುಗಳ ಸರಿಸಿ ಕೈಹಿಡಿದು ನಡೆಸುವೆಯಾ ಗೆಳೆಯ ಪಂಕಜಾಳ ಹೃದಯದ ತುಂಬಾ ತುಂಬಿರುವುದು ಒಲವು ಸವಿಯುತ್ತಾ ಜತೆಯಾಗಿ ನಲಿಯುವೆಯಾ ಗೆಳೆಯ ಪಂಕಜಾ.ಕೆ.

ಗಜಲ್ 11..ನೀನಲ್ಲವೇ

ಗಜಲ್  11 ಒಲವ ತೇರನು ಏರಿ ಬಂದವಳು ನೀನಲ್ಲವೇ ಬಾಳಪಯಣದಲಿ ಜತೆಯಾಗಿ ನಿಂದವಳು ನೀನಲ್ಲವೇ ನೀನಿರಲು  ನನ್ನ  ಮನದಲ್ಲಿ ತುಂಬಿದೆ  ಅಮಲು ಬಿಸಿಯೇರುವ ಮೈಯನು ತಣಿಸುವವಳು  ನೀನಲ್ಲವೇ ಒಲವ  ಧಾರೆಯ  ಹರಿಸಿ ಹುಸಿಮುನಿಸು ತೋರಿ ತಂಗಾಳಿಯ ಕಂಪನು ಮನಕೆ ತುಂಬಿದವಳು ನೀನಲ್ಲವೇ ನಗು ನಗುತ ಪ್ರೀತಿ ಸೋನೆಯ ಹರಿಸುತ ಬಂದು ನನ್ನೆದೆಯ ಬಾಂದಳದಿ ಬಂದು  ಕುಳಿತವಳು ನೀನಲ್ಲವೇ ನಮ್ಮೊಲವಿಗೆಲ್ಲಿರುವುದು   ಎಲ್ಲೆ  ಹೇಳು ತಾವರೆಯಚೆಲುವಿನಂದದಿಬಾಳಿಗೆಬಣ್ಣಬಳಿದವಳುನೀನಲ್ಲವೇ ಪಂಕಜಾ.ಕೆ.ಮುಡಿಪು