Skip to main content

Posts

Showing posts from July, 2020

ಹನಿ ಹನಿ ಇಬ್ಬನಿ ಸಮಾಧಾನಕರ ಬಹುಮಾನ ಹನಿಕವನ. ಬಿರಡೆ

ಹನಿಕವನ ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ  ಬಿರಡೆ ನನ್ನವರ. ಮೆಚ್ಚಿಸಲು  ಕವಿತೆ ಬರೆಯಲು ಹೊರಟೆ ಈಗ ಅವರದು  ಒಂದೇ ಗಲಾಟೆ ಇಡಲೇನು  ನನ್ನ ಕಿವಿಗೊಂದು ಬಿರಡೆ ಪಂಕಜಾ ಕೆ ಮುಡಿಪು

ಚಿತ್ರಕ್ಕೊಂದು ಮಕ್ಕಳ ಕವನ ಆನೆ ಬಂತೊಂದಾನೆ

ಚಿತ್ರಕ್ಕೊಂದು ಮಕ್ಕಳ ಕವನ ಆನೆ ಬಂತೊಂದಾನೆ ಹಕ್ಕಿಯು ಹಾರುತ ಬರುತಿದೆ ಬೆನ್ನಿಗೆ ಆನೆಯು ಸರ ಸರ ಓಡುತಿದೆ ಸೊಂಡಿಲಲೊಂದು ಹೂವನು ಹಿಡಿದು ದೇವರ ಪೂಜೆಗೆ ಸಾಗುತಿದೆ ಹಕ್ಕಿಯ ಜತೆಯಲಿ ಹಾಡನು ಗುನುಗುತ ನಡೆಯುವ ಆನೆಯ ಚಂದ ಉದ್ದನೆ ಸೊಂಡಿಲು ಸಣ್ಣನೆ ಬಾಲ ಬಾಯಲಿ ಇರುವುದು ಕೋರೆ ಹಲ್ಲು ದೊಡ್ಡ ಹೊಟ್ಟೆಯ ಸಣ್ಣ ಕಣ್ಣಿನ ಕಾಡಿನ ಗಜರಾಜನಿವನು ದಪ್ಪನೆ ಕಾಲ್ಗಳ ಎತ್ತುತ ಓಡಿತು ಬಾರಿ ಗಾತ್ರದ ಈ ಆನೆ ಆನೆ ಬಂತೊಂದು ಆನೆ ದೇವರ ಸೇವೆಯ ಆನೆ ಮದವೂರ ದೇವರ ಮುದ್ದಾನೆ ಪಂಕಜಾ .ಕೆ.ಮುಡಿಪು

ನಮ್ಮ ಶಾಲೆ 28.7.2019 ನವಪರ್ವ

  ನಮ್ಮ ಶಾಲೆ    ನಮ್ಮ ಊರ ಮೊದಲ ಶಾಲೆ ನಮ್ಮ ಶಾಲೆಯು ಸುತ್ತಲೆಲ್ಲಾ ಹಸಿರಿನಿಂದ ಇರುವ ಶಾಲೆಯು ವಿದ್ಯೆಗಾಗಿ ನನ್ನ ಅಜ್ಜ ಕಟ್ಟಿಸಿರುವರು ದೂರದೂರಿನಿಂದ  ಬಂದು ವಿದ್ಯೆ ಕಲಿವರು ನಮ್ಮ ದೇಶ ಭಾರತದ ಹೆಸರನ್ನೇ ಇದಕೆ ಇಟ್ಟರು ಭಾರತೀ ಶಾಲೆಯೆಂದು ಹೆಸರು ವಾಸಿಯು ವರ್ಣಮಾಲೆ ಅಕ್ಷರವ ತೀಡಿ ತಿದ್ದುತ ಕಲಿಕೆ ಜತೆ ಆಟ ಪಾಠವೆಲ್ಲವನ್ನು ಕಲಿಸುವರು ಓದು ಬರಹ ಕಲಿಸಿ ನಮ್ಮ ಜ್ಞಾನ ಬೆಳೆಸುತ ಪುಟ್ಟ ಪುಟ್ಟ ಕಥೆಗಳನ್ನು ಹೇಳಿ ನಗಿಸುತ ಇಲ್ಲಿ ಕಲಿತ ಮಕ್ಕಳೆಲ್ಲಾ  ಜಾಣರಾದರು ದೇಶ ವಿದೇಶದಲ್ಲೂ ಹೆಸರು ಪಡೆದರು. ಮಧುರ ಮಧುರ ನೆನಪುಗಳು ಕಾಡುತಿರುವುದು ಕನ್ನಡದ   ಕಂಪನ್ನು ಹರಡುತಿರುವುದು ಹೆತ್ತವರ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗುತ ತುಂಬಿ ತುಳುಕುವ  ಶಾಲೆಯಿಂದು ನಿರ್ಮಾನುಷ್ಯ ಪಂಕಜಾ.ಕೆ.ಮುಡಿಪು

ಚಿತ್ರಕ್ಕೊಂದ ಕಥೆ ಕಲಾಕಾರ

 ಕವಿ ಸಾಹಿತಿಗಳ ಜೀವಾಳ ಚಿತ್ರ ಕಥಾ ಸ್ಪರ್ಧೆಗಾಗಿ   ಕಲಾಕಾರ ಶಿವಪ್ಪ ಒಬ್ಬ ಅದ್ಬುತ ಶಿಲ್ಪಿ.ಕಲ್ಲಿನಿಂದ ವಿವಿಧ ಶಿಲ್ಪಕಲೆಗಳನ್ನು ಮಾಡುವುದರಲ್ಲಿ ಸಿದ್ದಹಸ್ತರೆಂದು ಹೆಸರುವಾಸಿಯಾಗಿದ್ದರು. ಕಲ್ಲಿನಲ್ಲಿ ಅನೇಕ ದೇವರ ಮೂರ್ತಿ ಗಳನ್ನು ಆತ  ಕೆತ್ತಿದ್ದ . ಭಾರತದ ಹೆಚ್ಚಿನ ದೇವಸ್ಥಾನಗಳ ಶಿಲ್ಪಗಳು ಆತನ ಕೈ ಚಳಕದಿಂದ ನಿರ್ಮಾಣವಾಗಿದ್ದುದಾಗಿತ್ತು. ಬಾಲ್ಯದಿಂದಲೂ  ಬಿಡದೆ ಮಾಡಿದ ಕಾಯಕವಾಗಿದ್ದರೂ .ಪ್ರಾಯಸಂದ ಆತನಿಗೆ ಇಂದು ಅದು ಅನಿವಾರ್ಯವಾಗಿತ್ತು .         .        ತನ್ನ ಒಬ್ಬನೇ ಮಗ ಹಾಗೂ ಸೊಸೆಯನ್ನು ಒಂದೇ ದಿನದಲ್ಲಿ ಕಳೆದುಕೊಂಡ ಶಿವಪ್ಪನಿಗೆ  ಮೊಮ್ಮಗಳು ಶ್ರುತಿಯೇ ಈಗ  ಬಾಳಿನ ಬೆಳಕು .ಅವಳನ್ನು ದೂರದ ಹಾಸ್ಟೆಲ್ ನಲ್ಲಿ ಬಿಟ್ಟು ವಿದ್ಯೆಕಲಿಸುತ್ತಿದ್ದ  ಶಿವಪ್ಪನಿಗೆ ತನ್ನ ನಂತರ ತನ್ನ ಕುಲಕಸುಬನ್ನು ಮುಂದುವರಿಸಲು ಯಾರೂ ಇಲ್ಲವೆನ್ನುವ ಚಿಂತೆಯಿದ್ದರೂ  ಮೊಮ್ಮಗಳ ನಗುಮುಖವನ್ನು ನೋಡಿ ತನ್ನ ದುಃಖವನ್ನು ಮರೆಯುತ್ತಿದ್ದ.         ಆ ದಿನ ಮೊಮ್ಮಗಳು ಓದು ಮುಗಿಸಿ ಅಜ್ಜನ ಮನೆಗೆ ಬಂದಿದ್ದಳು.ಅಜ್ಜನ ಕೆಲಸವನ್ನು ನೋಡುತ್ತಾ ಅಜ್ಜನಿಗೆ ತನ್ನ ಕಾಲೇಜಿನ ಅನುಭವಗಳನ್ನು  ರಸವತ್ತಾಗಿ ಹೇಳುತ್ತಾ ನಗುತ್ತಿದ್ದ ಅವಳನ್ನು ಕಂಡು ಶಿವಪ್ಪ ತನ್ನ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ಮೊಮ್ಮಗಳಿಗೆ ಆದಷ್ಟು ಬೇಗ ಒಂದು ದಾರಿ ಮಾಡಬೇಕು ಅನ್ನುವ ಚಿಂತೆ ಅವನದಾದರೆ ಮೊಮ್ಮಗಳು ರಶ್ಮಿಗೆ ತಾನು ಆದಷ್ಟು ಬೇಗ ಕೆಲಸಕ್ಕೆ ಸೇರಿ ಅಜ್ಜನನ

ಚಿತ್ರಕ್ಕೊಂದು ಕವನ ಬೇರು ಬಳಗ ಬೆಂದ ಬದುಕು

ಬೇರು ಬಳಗ ಸ್ಪರ್ಧೆಗಾಗಿ ಚಿತ್ರಕ್ಕೊಂದು ಅಶುಕವನ ಬೆಂದ ಬದುಕು ಹರಿದ ಚಪ್ಪಲಿ ಕೈಯಲಿ ಡಿದು ಹೊಲಿಯುತಿರುವನು ಮೋಚಿಯು ಕುಲದ ಕಸುಬನು ಬಿಡದೆ ಉಳಿಸಲು ಶ್ರಮದಿ ದುಡಿಯುವನು ಮೋದದಿ ದುಡಿದು ದಣಿದಿದೆ ದೇಹ ಸೊರಗಿದೆ ಕಣ್ಣು ಕೈಗಳು ಸೋತಿದೆ ಬೆನ್ನು ಬಾಗಿದೆ  ಕಾಯ ನಶಿಸಿದೆ ಜೀವನ ಭಾರವೆನಿಸಿದೆ ಹೊಟ್ಟೆ ಬಟ್ಟೆಯ ಚಿಂತೆಕಳೆಯಲು ದುಡಿಯಬೇಕಿದೆ ನಿತ್ಯವೂ ಪಂಕಜಾ.ಕೆ.ಮುಡಿಪು

ಲೇಖನ ಶ್ರಾವಣ ಸಂಭ್ರಮ

ಶ್ರಾವಣ ಸಂಭ್ರಮ( ಲೇಖನ) ಮಾಸಗಳಲ್ಲೆಲ್ಲಾ ಅತಿ ಹೆಚ್ಚು ಹಬ್ಬಗಳು ಬರುವ ಮಾಸವೆಂದರೆ ಅದು ಶ್ರಾವಣ. ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು ಸಾಲೇ ಬರುತ್ತದೆ. ಭಾರತೀಯ ಸಂಸ್ಕೃತಿ ಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಹಬ್ಬಗಳು ಮನೆ ಮಂದಿಯರನ್ನು ಒಟ್ಟಾಗಿಸಿ ಸಂಭ್ರಮದ ವಾತಾವರಣವನ್ನು ಮನೆಯಲ್ಲಿ ತುಂಬುತ್ತದೆ .ಆಷಾಢದ ಬಿಸಿಲಿಗೆ ಬೇಸತ್ತ ಮನ ಶ್ರಾವಣದ ತಂಪನ್ನು ಅನುಭವಿಸುತ್ತ ತೆರೆದುಕೊಳ್ಳುತ್ತದೆ. ಮನುಷ್ಯರಿಗೆ ಮಾತ್ರವಲ್ಲದೆ ಪ್ರಕೃತಿಗೂ ಈ ಮಾಸ ಸಂಭ್ರಮದ ಮಾಸವಾಗಿದೆ.ಹಿತವಾದ ಮಳೆಯಿಂದ ನೆನೆದ ಪ್ರಕೃತಿಯು ಹಚ್ಚ ಹಸಿರಾಗಿ ಹಸಿರಿನ ಹಂದರವೇ ಹಾಸಿದಂತೆ ಕಣ್ಮನ ತಣಿಸುತ್ತದೆ .. ಆಗಾಗ ಇಣುಕುವ ಸೂರ್ಯನ ಹೊಂಬಿಸಿಲು ,ತುಂತುರು ಮಳೆಯಲ್ಲಿ ನೆನೆಯುವ ಆಹ್ಲಾದ, ಬಾನಿನಲಿ ತೇಲಿ ಬರುವ ಮೋಡಗಳ ದಂಡು,ಗಿಡ ಮರಗಳಲ್ಲಿ ತುಂಬಿದ ಹೂಗಳು ,ಅದರ ಮತ್ತೇರಿಸುವ ಪರಿಮಳ ಎಲ್ಲವೂ  ನಮ್ಮನ್ನು ಕವಿಯಾಗಿಸುತ್ತದೆ.                 ಶ್ರಾವಣ ಮಾಸದಲ್ಲಿ ಬರುವ ಪ್ರತಿಯೊಂದು ಹಬ್ಬವೂ ವೈವಿದ್ಯತೆಯಿಂದ ಕೂಡಿದ್ದು, ಹಬ್ಬದ ತಿಂಡಿ ತಿನಿಸುಗಳು ಮಳೆಗಾಲದಲ್ಲಿ ಶರೀರದ ರಕ್ಷಣೆಯನ್ನು ಮಾಡಲು ಸಹಕಾರಿಯಾಗಿದೆ. ಪೂಜೆ ವ್ರತ ಉಪವಾಸಗಳನ್ನು ಮಾಡುವುದರಿಂದ ಶರೀರದಲ್ಲಿ ತುಂಬಿದ ಕೆಟ್ಟ ಶಕ್ತಿಯು ಹೊರಟು ಹೋಗಿ ಸಾತ್ವಿಕತೆ ತುಂಬಿ ಬರುವುದು ಭೀಮನ ಅಮವಾಸ್ಯೆಯಿಂದಲೇ ಶ್ರಾವಣ ಮಾಸದ ಹಬ್ಬಗಳು  ಪ್ರಾರಂಭವಾಗುತ್ತದೆ.                   ಹಿಂದಿನ ಕಾಲದಲ್ಲಿ ಮನೆಮಂದಿಯೆಲ್

ಮಕ್ಕಳ ಕವನ ನಮ್ಮ ಮನೆಯ ಬೆಕ್ಕು

ನಮ್ಮ ಮನೆಯ ಬೆಕ್ಕು (ಶಿಶುಗೀತೆ) ನಮ್ಮ ಮನೆಯಲೊಂದು ಪುಟ್ಟ ಬೆಕ್ಕು ಇರುವುದು  ಅಲ್ಲಿ ಇಲ್ಲಿ ತಿರುಗಿಕೊಂಡು ಕಾಲಕಳೆಯುವುದು  ಹಾಲು ಕುಡಿದು ಇಲಿಯ ಹಿಡಿದು ತಿನ್ನುವುದು  ಹಲ್ಲಿ ಜಿರಳೆ ಎಲ್ಲವನ್ನು ಹಿಡಿದು ಜಗಿಯುವುದು   ಶುಭ್ರಬಣ್ಣದಿಂದ ಅದು ಕಣ್ಣು ಸೆಳೆಯುವುದು ಕಾಲು ಸುತ್ತ ತಿರುಗಿ  ಮಿಯಾಮ್ ಎನ್ನುವುದು ರಾತ್ರಿಯಲಿ ಹಾಸಿಗೆಯಲ್ಲಿ ಜತೆಗೆ ಮಲಗುವುದು ಮೈಯ ಒರೆಸಿ  ಮುದ್ದು ಮಾಡಲೆಂದು ಬಯಸುವುದು ಅಪ್ಪನನ್ನು ಕಂದರದು ಓಡಿ ಹೋಗುವುದು ನನ್ನ ಜತೆ ಮುದ್ದು ಮುದ್ದಾಗಿ ಆಟ ಆಡುವುದು ಕೋಪ ಬಂದರೆ ಉಗುರಿನಿಂದ ಪರಚುತಿರುವುದು ಅಟ್ಟಿದರೂ ಮತ್ತೆ ಬಂದು ಸುತ್ತಿಕೊಳ್ಳುವುದು ಬಾಯಿ ಬಾರದ ಮೂಕ ಪ್ರಾಣಿ ಪಾಪ ಇರುವುದು ತಿಂಡಿ ತಿನಿಸು ಎಲ್ಲದಕ್ಕೂ ಬಾಯಿ ಹಾಕುವುದು ಮೀಸೆ ಆಡಿಸಿ ಕಣ್ಣು ಬಿಟ್ಟು ಬಾಯಿ ತೆರೆಯುವುದು ಮಿಯಾಮ್ ಮಿಯಾಮ್ಎಂದು ಕೂಗುತಿರುವುದು ಪಂಕಜಾ.ಕೆ.ಮುಡಿಪು

ಚಿತ್ರಕ್ಕೊಂದು ವಿಮರ್ಶೆ ವಿಪರ್ಯಾಸ ಕಂಡ ಅಳುವ ಗಮನವಿಲ್ಲದೆ ಮೊಬೈಲ್ ನಲ್ಲಿ ಮಗ್ನವಾಗಿದ್ದು ಹಾಲಿನ ಬಾಟಲ್ ಹಿಂದೆ ಚಾಚಿ ಮೊಬೈಲ್ ನಲ್ಲಿ ಮುಳುಗಿದ ಚಿತ್ರ ಮಗು ಮಂಚದಿಂದ ಕೆಳಗೆ ಬಿದ್ದು ಅಳುುತ್ತಿದೆ

 ಕವಿಶೈಲ ಸ್ಪರ್ಧೆಗಾಗಿ    ಚಿತ್ರಕ್ಕೊಂದು ವಿಮರ್ಶೆ   ವಿಪರ್ಯಾಸ ಇಂದಿನ ದಿನಗಳಲ್ಲಿ ಮೊಬೈಲ್  ಒಂದು ಅನಿವಾರ್ಯ ವಸ್ತುವಾಗಿದೆ ..ಲಾಕ್ ಡೌನ್ ನಿಂದಾಗಿ ಮಕ್ಕಳ ಪಾಠಗಳು ಒನ್ಲೈನ್ ನಲ್ಲಿ ಆದ್ದರಿಂದ ಮೊಬೈಲ್ ಬಳಕೆ ಮಕ್ಕಳಿಗೂ ಅಗತ್ಯವಾಗಿದೆ. ಪ್ರಸ್ತುತ ಚಿತ್ರದಲ್ಲಿ ಮೊಬೈಲ್ ಗೀಳಿನಲ್ಲಿ ಮೈಮರೆತ ತಾಯಿ ತನ್ನ ಮಗು  ಮಂಚದಿಂದ ಕೆಳಗೆ ಬಿದ್ದು ಅಳುತ್ತಿರುವುದು ತಿಳಿಯದೆ ಮೊಬೈಲ್ ನಲ್ಲೆ ಮಗ್ನಳಾಗಿದ್ಫು ಬಾಟಲ್ ನ್ನು ಹಿಡಿದು ಕುಳಿತಿರುವುದು ಕಂಡುಬರುತ್ತದೆ . ಹಿಂದಿನ ಕಾಲದಲ್ಲಿ ಮಗು, ಅದರ ಆಟಪಾಠ ,ಬೆಳವಣಿಗೆಗಳ ಲ್ಲಿ ಸಮಯ ಕಳೆಯುತ್ತಿದ್ದಾಕೆ ಇಂದು ಮಗುವಿನ ಅಳುವನ್ನು ಕೇಳಲಾರದಷ್ಟು ಮೊಬೈಲ್ ನಲ್ಲಿ ತಲ್ಲೀನಳಾಗಿರುವುದು  ವಿಪರ್ಯಾಸ  . ಯಾವುದೇ ವಸ್ತುವಿನ ಅತಿಯಾದ ಬಳಕೆ ವ್ಯಕ್ತಿ ಅದಕ್ಕೆ ದಾಸನಾಗುವಂತೆ ಮಾಡುತ್ತದೆ ಮೊಬೈಲ್  ಅತಿಯಾದ ಬಳಕೆಯ ದುಷ್ಪರಿಣಾಮ  ತಾಯಿ ಮಗು ಹಾಗೂ ಕುಟುಂಬದ ಆರೋಗ್ಯಕ್ಕೂ  ಅಪಾಯಕಾರಿ ಪಂಕಜಾ.ಕೆ.ಮುಡಿಪು

ಹಾಯ್ಕುಗಳು ಮುತ್ತು ಅಮ್ಮ ಸ್ನೇಹ ಸಂಫಾಮ ದ್ವಿತೀಯ

 ಹಾಯ್ಕುಗಳು   1 ಮುತ್ತು ಪ್ರೀತಿ ಎಂಬುದು ಸಾಗರದಲೆಯಲಿ ಸಿಕ್ಕ ಮುತ್ತಂತೆ 2. ಅಮ್ಮ ಅಮ್ಮನ ಪ್ರೀತಿ ಜಗದಲಿ ಬೇರಿಲ್ಲ ಅರಿವಿರಲಿ ಪಂಕಜಾ.ಕೆ.ಮುಡಿಪು

ವಿಧುಷಿ ಹಾಸ್ಯ ಹನಿ

ವಿದುಷಿ ಸಂಗೀತ ವಿಧುಷಿ ಎಂದು  ತಿಳಿಸಿದ್ದ ಅವಳ ಅಪ್ಪ ಇಂದು ಮನೆಯಲ್ಲಿ ನಿತ್ಯ ಅವಳದೇ ರಾಗ ನಾನಂತೂ ಕಿವಿಗೆ ಹತ್ತಿಯಿಟ್ಟು ತಿರುಗುತ್ತಿರುವೆ ಸರಾಗ ಪಂಕಜಾ ಕೆ ಮುಡಿಪು

ಹಾಸ್ಯ ಹನಿ ಕಾಗೆ..ಕೋಗಿಲೆ

 ಕಾಗೆ..ಕೋಗಿಲೆ (ಹಾಸ್ಯ ಹನಿ ಕವನ)    ನೀನು ಸಂಗೀತ ಹಾಡಿದರೆ  ಕೋಗಿಲೆಯು ನಾಚೀತು  ಎಂದಿದ್ದ ಹುಡುಗ ಇಂದು  ನಿನ್ನ ಸಂಗೀತ ಕೇಳಿ  ಕಾಗೆಗಳ ದಂಡೇ ಬರುತ್ತಿದೆ   ಎನ್ನುವುದೇ   ಪಂಕಜಾ.ಕೆ.ಮುಡಿಪು

ಚಿತ್ರಕ್ಕೊಂದು ಕವನ ಶಿಲ್ಪಿ

ಕವಿ ಸಾಹಿತಿಗಳ ಜೀವಾಳ ಚಿತ್ರ ಕವನ ಸ್ಪರ್ಧೆಗಾಗಿ        ಶಿಲ್ಪಿ ಕಲ್ಲಕುಟ್ಟುತ ಕೆತ್ತುತಿರುವನು ಚೆಲುವ ಮೂರ್ತಿಯ ಶಿಲ್ಪದಿ ದೇವಮೂರ್ತಿಯು ಕೈಯ ಚಳಕದಿ ಮೂಡಿ ಬಂದಿದೆ ಬೇಗನೆ ನಗುತ ಕುಳಿತಳು ಬಾಲೆ ಬಳಿಯಲಿ ಲಂಗದಾವಣಿಯಲಿರುತಲಿ ಕಪ್ಪು ಲಂಗಕೆ ಹಳದಿ ದಾವಣಿ ಕೈಯ ಬಳೆಗಳ ನಾದವೂ ಕಿವಿಯಲಾಡುವ ಜುಮುಕಿಯಂತೆ ಮನವು ತೂಗಿದೆ  ತರುಣಿಯ ತಲೆಯ ತುಂಬಾ ಮುಡಿದ ಹೂಗಳು ಹೆಚ್ಚಿಸಿದೆ ಅವಳ ಚೆಲುವನು ಅಜ್ಜ ಮಾಡುವ ಕೆಲಸವನ್ನು ಬಿಟ್ಟಕಣ್ಣಲಿ ನೋಡುತ ಮಾತು ಮಾತಿಗೆ ನಗುವು ಚೆಲ್ಲುವ ಚೆಲುವ ವದನದ ಸುಂದರಿ ಪ್ರಾಯ ಸಂದರೂ ಬಿಡದ ಕಾಯಕ ಉಳಿಯ ಪೆಟ್ಟಿಗೆ ಕಲ್ಲದು ಶಿಲ್ಪವಾಗುತ ಜನರ ಸೆಳೆದಿದೆ ಶಿಲ್ಪಿ ಶ್ರಮವನು ತಿಳಿಸಿದೆ ಪಂಕಜಾ.ಕೆ.ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಮದುವೆಯ ಬಂಧ ವಿಶ್ವ ಕನ್ನಡ ಸಾಂಸ್ಕೃತಿಕ ಸಂಸ್ಥೆ ಸ್ಪರ್ಧೆಗಾಗಿ

ಶ್ರಾವಣ ಮಾಸದ ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕವನ ಸ್ಪರ್ಧೆಗಾಗಿ ಮದುವೆಯ ಬಂಧ ಹುಟ್ಟಿನಿಂದಲೇ ಬೆಳೆದ ಮನೆಯನು ಬಿಟ್ಟು ಹೋಗುವ ನೋವದು ತಂದೆ ತಾಯಿ ಒಡಹುಟ್ಟಿದವರ ಅಗಲಿಕೆಯಲಿ  ಮೂಕ ಸಂಕಟ ತುಂಬಿದೆ ಅಗಲಿಕೆಯ ದುಃಖವಿರಲು ಇನಿಯನೊಲವಿನ ನಿರೀಕ್ಷೆಯು ಬಾಳಹಂದರ ಭಧ್ರವಾಗುವ ಖುಷಿಯು ತುಂಬಿದ ಕ್ಷಣವದು ಅತ್ತೆ ಮಾವ ನಾದಿನಿಯರ ಪ್ರೀತಿ ನಿರೀಕ್ಷೆಯ ತಪದಲಿ ತವರ ತೊರೆದು ಬರುವ ಹೆಣ್ಣು ಮನೆಯ ನಂದಾದೀಪವು ಅಪರಿಚಿತರ ಜತೆ  ಹೊಂದಿಕೊಳ್ಳುತ ಬಾಳಲೇ ಬೇಕಾದ ಸಂದಿಗ್ದತೆಯಲಿ ಎಲ್ಲರನು ಮೆಚ್ಚಿಸಲು ಪಡುವ ಪಾಡದು ಇನಿಯನೊಲವಲಿ ಅರಳಿ ನಗುವ ಬಾಳದು ಅತ್ತೆ ಮಾವರನೇ ತನ್ನ ತಂದೆ ತಾಯಿ ಎಂದು  ತಿಳಿದು ಬಾಳುವ ಆಸೆಯು ಮನೆಯ ಜನರ ಸಹಕಾರಪಡೆಯಲು ಶ್ರಮಿಸ ಬೇಕಿದೆ ನಿತ್ಯವೂ ಒಲಿಸಿ ಕೊಳ್ಳುತ ಮನೆಯ ಜನರನು ಪ್ರೀತಿ ಪ್ರೇಮದ ಬಲೆಯಲಿ ಹೊಂದಿ ಬಾಳುತ ಮನೆಗಳೆರಡನು ಬೆಳಗುವಂದದ ಜೀವವು ಪಂಕಜಾ ಕೆ .ಮುಡಿಪು ಹೆಸರು..ಪಂಕಜಾ.ಕೆ.ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಶ್ರೀ ಗಣೇಶ ಕೃಪಾ ಮುಡಿಪು ಅಂಚೆ..ಕುರ್ನಾಡು.. 574153 ದ.ಕ. ಮೊಬೈಲ್ ನಂಬರ್ 9964659620

ಕರುನಾಡ ಹಣತೆ ಕೂಡು ಕುಟುಂಬ

ಕರುನಾಡ ಹಣತೆ ಬಳಗದ  ಸ್ಪರ್ಧೆಗಾಗಿ ಕೂಡು ಕುಟುಂಬ ಕೂಡಿ ಬಾಳುವುದೇ  ಇದರ ಸೂತ್ರ ಪ್ರೀತಿ ಒಗ್ಗಟ್ಟುಗಳೇ ಮೂಲಮಂತ್ರ ಅವಿಭಕ್ತ ಕುಟುಂಬದ ಆಶಯವ್ಯಕ್ತ ಎಲ್ಲರೂ ಒಂದಾಗಿ ಬಾಳುವುದೇ ಸೂಕ್ತ ಉತ್ತಮ ಸಂಸ್ಕೃತಿರೂಪಿಸುವ ಕಾರ್ಯಾಗಾರ ಅವಿಭಕ್ತ ಕುಟುಂಬವೆಂಬ ಮಾಯಾಗಾರ ಅದ್ಬುತ ತುಂಬಿದ ಜೀವನದ ಸಾರ ಆಗಲಾರದೆಂದಿಗೂ ಜೀವನ ಬಾರ ಕೂಡು ಕುಟುಂಬವು ಭದ್ರತೆಯ ನೆಲೆವೀಡು ಕಷ್ಟ ಸುಖದಲಿ ಹೆಗಲಾಗುವ ಭಾವಬೀಡು ಅಜ್ಜಯಜ್ಜಿಯರ ಮಾರ್ಗದರ್ಶನದಲ್ಲಿ ಮಗು ನಿರಾಳ ಪ್ರೀತಿ ಮಮತೆಯ ರಕ್ಷಣೆಯಲ್ಲಿ ಬಾಳಾಗದು ಕರಾಳ ಶಿಥಿಲಗೊಳ್ಳುತ್ತಿದೆ  ಇಂದೀಗ ಈ  ಅನು ಬಂಧ ಸ್ವತಂತ್ರ ಮನೋಭಾವ ದ ಜನರೇ ಇದಕ್ಕೆಕಾರಣ ನಾನು ನನ್ನದೆನ್ನುವ ಸ್ವಾರ್ಥ ತುಂಬಿದ ಮನವು ಹೊಂದಾಣಿಕೆಯ ಕೊರತೆಯಲಿ ನರಳುತಿರುವವು ಪಾಶ್ಚಿಮಾತ್ಯಸಂಸ್ಕೃತಿಯ  ಕೆಟ್ಟ ಪರಿಣಾಮವಿದು ವಿಭಕ್ತ ಕುಟುಂಬಗಳು ಹೆಚ್ಚಳವಾಗುತ್ತಿರುವುದು ಒಬ್ಬಂಟಿ ಯಾಗಿರುತ ಬಾಳಲೇನಿದೆ  ಸೊಗಸು ಮೌನ ಸಾಮ್ರಾಜ್ಯದಲಿ ತುಂಬಿದೆ ಇರುಸು ಮುರುಸು ಹಬ್ಬ ಹರಿದಿನಗಳಲ್ಲೂ ಮನೆ ಭಣ ಭಣ ತೀರಿಸಲಾದೀತೆ ಹೆತ್ತ ತಂದೆ ತಾಯಿಯ ಋಣ ಪಂಕಜಾ.ಕೆ.ಮುಡಿಪು ಹೆಸರು...ಪಂಕಜಾ.ಕೆ.ಮುಡಿಪು ವಿಳಾಸ...ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಚಿತ್ರಕ್ಕೊಂದು ಕವನ ಖಿದ್ಮಾ ಪೌಂಡೇಶನ್ ಮುತ್ತಿನ ಹಾರ

ಖಿದ್ಮಾ ಪೌಂಡೇಶನ್  ಚಿತ್ರಕ್ಕೊಂದು ಕವನ  ಸ್ಪರ್ಧೆಗಾಗಿ ಮುತ್ತಿನ ಹಾರ ಕಲೆಯ ಬಲೆಯದು ಗಮನ ಸೆಳೆದಿದೆ ರಸಿಕ ಕಂಗಳ ಸೆಳೆದಿದೆ ಹಿಮದ ಮಣಿಯಲಿ ಮಾಲೆ ಪೋಣಿಸಿ ಪ್ರೇಮಗೀತೆಯ ಹಾಡಿದೆ ಕುಶಲ ಕಲೆಗಾರನ ಕಲೆಯ ಬಲೆಯಲಿ ಅದ್ಬುತ ಸೃಷ್ಟಿಯ ಕಂಡಿದೆ ಧರಣಿ ದೇವಿಗೆ ಕೊರಳಹಾರವು ವರುಣನೊಲವಿಗೆ ಸಾಕ್ಷಿಯು ಹಬ್ಬಿ ನಿಂತಿದೆ ಹಸಿರು ಹಂದರ ತಬ್ಬಿ ನಿಂತಿದೆ ಮಳೆ ಹನಿ ಭೂದೇವಿಯ ಸೊಬಗು ಸೆಳೆದಿದೆ ಕಣ್ಣನು ಜೇಡ ಕಟ್ಟಿದ ಬಲೆಯಲಿ ಮಳೆ ನೀರಿನ ಹನಿಯಲಿ ಅದ್ಬುತ ಕಲೆಯು ಅರಳಿ  ನಗುತಿದೆ ನೋಡಿರಿ ಧವಳಾದ್ರಿಯ ಸೊಬಗು ಹೆಚ್ಚಲು ಮುತ್ತು ಮಣಿಗಳ ಮಾಲೆ ಪೋಣಿಸಿ ವರುಣ  ತೊಡಿಸಿದ ಒಲವಲಿ ಮುತ್ತಿನ ಮಾಲೆ ಪಂಕಜಾ.ಕೆ.ಮುಡಿಪು ಹೆಸರು...ಪಂಕಜಾ.ಕೆ ವಿಳಾಸ...ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಮುತ್ತಿನ ಹಾರ ಚಿತ್ರಕ್ಕೊಂದು ಕವನ ಕಾವ್ಯಕೂಟ

ಕಾವ್ಯಕೂಟ ಸ್ಪರ್ಧೆಗಾಗಿ ಮುತ್ತಿನ ಹಾರ  (ಚಿತ್ರಕ್ಕೊಂದು ಕವನ) ಇಬ್ಬನಿಯು ತಬ್ಬಿರುವ  ವನರಾಜಿಯ  ಹಸಿರ ಸಿರಿ ಭೂತಾಯಿ ಮಂಜಿನಲಿ  ಮಿಂದೆದ್ದ  ಸುಂದರಿ ಭೂರಮೆಯ ಸಿಂಗಾರಕೆ ವರುಣ ಕಳಿಸಿದ  ಮುತ್ತಿನಹಾರ ಇನಿಯನೊಲವಿನ ಒಡವೆ ಧರಣಿ ದೇವಿಯ ಕೊರಳ ಹಾರ ಅದ್ಭುತ ಕಲಾಕಾರನ ಜೋಡಣೆ ಪ್ರಕೃತಿ ನಿರ್ಮಿತ  ಸುಂದರ ಹಾರ ದವಳಾದ್ರಿಯ ಸೊಬಗು ಕಣ್ಣು ತುಂಬಿದೆ ಪ್ರಕೃತಿ ವಿಸ್ಮಯಕೆ ಮನ ಬೆರಗಾಗಿದೆ ಒಲವಿನೊಸಗೆಯು ತಂದಿದೆ ಅಮಲು ಇಮ್ಮಡಿಸಿದೆ ಇಳೆಯ ಸೌಂದರ್ಯ  ಬಾಂದಳದ ತುಂಬೆಲ್ಲ ಕಟ್ಟಿದ ತೋರಣ ಮನಸು ತುಂಬಾ ಕನಸುಗಳ ಹೂರಣ ಪಂಕಜಾ.ಕೆ.ಮುಡಿಪು

ಚಿತ್ರಕ್ಕೊಂದು ಕವನ ನಿಜ ಭಕುತಿ

 ಚಿತ್ರಕ್ಕೊಂದು ಕವನ    ನಿಜ ಭಕುತಿ   ನಾಗರಪಂಚಮಿ ನಾಡಿಗೆ ಹಬ್ಬವು ನಾರಿಯರೆಲ್ಲರಿಗೆ ನಲಿವಿನ ಕಬ್ಬವು ಕಲ್ಲಿನ ನಾಗಗೆ ಹಾಲನು ಎರೆದು ಹೂ ಹಣ್ಣುಗಳ ಅರ್ಪಿಸಿ ಪೂಜಿಸುವರು ನಿಜದ ನಾಗನ ಕಾಣುತಲಿರಲು ಭಯದಲಿ ಕಲ್ಲಲಿ ಹೊಡೆಯುವರು ನಾಗನ ಕೊಂದ  ದೋಷವು ಕಾಡಲು ಪುರೋಹಿತರ ಕರೆಸಿ ಪೂಜೆಯ ಮಾಡುವರು ಏನಿದು ಮನುಜರ ಈ ಪರಿ ನೀತಿ  ಭಕ್ತಿಯು ಇಲ್ಲದೆ ಹಾಲನು  ಸುರಿದು  ಒಲಿಸಲು ಬಹುದೇ ದೇವನನು ಒಂದುದಳ ತುಳಸಿಯೇ ಸಾಕು ದೇವನ ಒಲಿಸಲಿಕೆ   ಹಾಲನು  ಎರೆದು ವ್ಯರ್ಥವ ಮಾಡದೆ  ಬಡವರ ಮಕ್ಕಳಿಗೆ ಕೊಡಬಾರದೆ ಮಕ್ಕಳೇ ದೇವರು ಎನ್ನುತಲಿರುವರು ಕಾಣುವ ದೇವರೇ ಅವರಹುದು ಹಬ್ಬಗಳೆಲ್ಲಕು ಭಕ್ತಿಯೇ ಸಾಕು ದೇವನು  ಅದಕೆ ಒಲಿಯುವನು ನಿತ್ಯವೂ ದೇವನ ಮನದಲಿ ನೆನೆಯುತ ಭಕ್ತಿಯಲಿ ಬೇಡಿರಿ ಅವನನ್ನು ಪಂಕಜಾ ಕೆ.ಮುಡಿಪು ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್

ಮುತ್ತಿನ ಹಾರ 3 ಚಿತ್ರಕ್ಕೊಂದು ಕವನ

 ಮುತ್ತಿನ ಹಾರ   ಎನಿತು ಚಂದದ ಕುಸುರಿ ಕಲೆಯೋ ಜೇಡ ಮಾಡಿದ ಕಲೆಯಬಲೆಯೋ ಪ್ರಕೃತಿ ನಿರ್ಮಿತ ಸುಂದರ ಹಾರ ಜೇಡನ ಕಲೆಯಲಿ ಮುತ್ತಿನ ಹಾರ ಮಳೆಯ ತುಂತುರ ಹನಿಗಳು  ಕೂಡಿ ನಿರ್ಮಿಸಿತು ಸುಂದರ ಹಾರವ ನೋಡಿ ಭೂದೇವಿಯ ಮುಕುಟಕ್ಕೆ ವರುಣನ ಹಾರ ಒಲವಲಿ  ತೊಡಿಸಿದ ಮುತ್ತಿನ ಹಾರ ಕಣ್ಮನ ಸೆಳೆದಿದೆ ಇದರ ಸೊಬಗು ಮೈಮನಕೆಲ್ಲಾ ತುಂಬಿತು ಬೆರಗು ವಸುಂಧರೆ ಧರಿಸಿದಳು ಹಸಿರಿನ ಉಡುಗೆ ಭುವಿಯ ಕೊರಳಿಗೆ ವರುಣನ ಕೊಡುಗೆ ಪಂಕಜಾ.ಕೆ.ಮುಡಿಪು

ಚಿತ್ರಕ್ಕೊಂದು ಹನಿಕವನ ಮುಗ್ಧ ನಗೆ ನವಪರ್ವ

ನವಪರ್ವ ಬಳಗದ  ಚಿತ್ರಕ್ಕೊಂದು ಹನಿ ಕವನ ಸ್ಪರ್ಧೆಗಾಗಿ ಮುಗ್ಧನಗೆ ಮೋಡಿ ಬೀರುವ ಮುಗ್ಧನಗೆಯಲಿ ಗುಳಿಯ ಕೆನ್ನೆಯು ಸೆಳೆದಿದೆ ನೀಲ ಕಣ್ಣಿನ  ಮುಗ್ಧ ಭಾವಕೆ ಮನ ಸೋಲದವರಿರುವರೆ ಸುರುಳಿಕೂದಲು ಕೆಂಪು ಲಂಗವು ಕುಣಿವ ನವಿಲಿನ ನಾಟ್ಯವು ಮುಗ್ಧತೆಯೆ ಹಾಸು ಹೊದ್ದ ಬಳುಕಿ ಸೆಳೆದಿದೆ ಕಣ್ಣನು ಪಂಕಜಾ.ಕೆ.ಮುಡಿಪು

ಚಿತ್ರಕ್ಕೊಂದು ನ್ಯಾನೊ ಕಥೆ ಶ್ರಮದ ಬೆಲೆ

  ಚಿತ್ರಕ್ಕೊಂದು ನ್ಯಾನೊ ಕಥೆ      ಶ್ರಮದ ಬೆಲೆ     ಯಾವ ಕೆಲಸವನ್ನೂ ಮಾಡದೆ ಉಂಡಾಡಿಯಾಗಿ  ತಿರುಗಾಡುತ್ತಿದ್ದ ಮಗನಿಗೆ ,ರಾಮಣ್ಣ ನಿತ್ಯ ಬುದ್ದಿ ಹೇಳಿ ತನ್ನ ಜತೆ ಗದ್ದೆ ಉಳುಮೆಗೆ ಬರಲು ಹೇಳುತ್ತಿದ್ದ.  ಅಲ್ಲಿ ಇಲ್ಲಿ ತಿರುಗಾಡುವುದೇ ಕಸುಬಾಗಿದ್ದ  ಪ್ರಥಮ ನಿಗೆ ತಂದೆಯ ಮಾತುಗಳು ಹಿಡಿಸುತ್ತಿರಲಿಲ್ಲ .ಕೊರೊನಾ ಬಂದು ಸರಕಾರ ಲಾಕ್ ಡೌನ್  ಆದೇಶಿಸಿದಾಗ ಅನಿವಾರ್ಯವಾಗಿ ಮನೆಯಲ್ಲೇ ಉಳಿಯಬೇಕಾದ ಅವನನ್ನು ತಂದೆ ತನ್ನ ಜತೆ ಗದ್ದೆಗೆ ಕರೆದು ಕೊಂಡು ಹೋಗಿ ಉಳುಮೆ ಮಾಡುವುದನ್ನು ಕಲಿಸಿದ  .ಕೆಲಸ ಮಾಡಿ ಅಭ್ಯಾಸವಿಲ್ಲದ ಆತ ದಣಿದರೂ ರಾತ್ರಿ ಮಲಗಿದ ಕೂಡಲೇ ಇಷ್ಟರ ತನಕ ಬಾರದೆ ಇದ್ದ  ಸುಖ ನಿದ್ರೆ  ಬಂದಾಗ ಶ್ರಮದ ಬೆಲೆ ಆತನಿಗೆ ಗೊತ್ತಾಯಿತು  ಪಂಕಜಾ.ಕೆ ಮುಡಿಪು

ಅಂತರ್ಜಾಲ ಆಧಾರಿತ ಕವನ ಸ್ಪರ್ಧೆ ಇಳೆಯ ಸೊಬಗು

ಅಂತರ್ಜಾಲ ಆಧಾರಿತ ಕವನ ರಚನೆ ಮತ್ತು ವಾಚನ ಸ್ಪರ್ಧೆಗಾಗಿ    ಇಳೆಯ ಸೊಬಗು ಬಾನ ಬಯಲಲಿ ಮುಗಿಲು ಕಟ್ಟಿದೆ ಚೆಲುವ ಬಣ್ಣವ ಕಲಸಿದೆ ಮೋಡಿ ಮಾಡುವ ಚೆಲುವ ಸವಿಯುತ ಕಣ್ಣು ಮನವು ತುಂಬಿದೆ ಏನು ಹೇಳಲಿ ಪ್ರಕೃತಿ ವೈಭವ ಎನಿತು ಚಂದದ ಸಿರಿಯಿದು ನೋಡ ನೋಡುತ ತುಂಬಿ ತುಳುಕಿತು ಕಪ್ಪು  ಮೋಡವು ಗಗನದಿ  ಗುಡುಗು ಸಿಡಿಲಿನ ಆರ್ಭಟಕೆ  ಬೆಚ್ಚಿ ಬೆರಗಿನ ನೋಟವು ಸುರಿದ ಮಳೆಯು ಇಳೆಯ ತಣಿಸಿ ಹಸಿರ  ಹಂದರ  ಹಾಸಿದೆ ಕೆರೆಕೊಳಗಳು ತುಂಬಿ ಹರಿಯಿತು ಬಿರಿದ  ಭೂಮಿಯು ತಣಿಯಿತು ನಲಿವು ತುಂಬಿತು ಇಳೆಯ ಮಡಿಲಲಿ ಚಿಗುರು ಹೂಗಳು ಬಿರಿಯಿತು ಹೂವ ಗಂಧವು ಹಬ್ಬಿ ಎಲ್ಲೆಡೆ ದುಂಬಿಗಳನು ಕರೆಯಿತು ಹಾರಿ ಬರುವ ದುಂಬಿಗಳಿಗೆ ತನಿರರಸವನು ಉಣಿಸಿತು ಪಂಕಜಾ.ಕೆ.ಮುಡಿಪು

ಚುಟುಕು

ಚುಟುಕು ಹೂವಿನ ಹಾಸಿಗೆಯಾಗಲಿ ಜೀವನ ಹೊರಟು ಹೋಗಲಿ ಮಾರಿ ಕೊರೊನ ಸಾಮಾಜಿಕ ಅಂತರ ಕಾಯೋಣ ಮಾಸ್ಕ್ ಧರಿಸಿ ವೈರಿಯ ಗೆಲ್ಲೋಣ ಪಂಕಜಾ.ಕೆ.ಮುಡಿಪು

ಹನಿ ಅಹಂಕಾರದ ಫಲ

 ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ    ಅಹಂಕಾರದ ಫಲ ಸುಳಿವು ಕೊಡದೆ ಬಂದ ಮಾರಿ ಮನುಜನ ಅಹಂಕಾರ ಪರಾರಿ ಪರಿಸರ ಮಲಿನ ಮಾಡಿದ ಫಲ ಬಂಧಿಯಾಗಿರಬೇಕಾಯಿತಲ್ಲ ಪಂಕಜಾ.ಕೆ.ಮುಡಿಪು

ದೂಡುಕಿನ ಫಲ್ ನ್ಯಾನೊ ಕಥೆ

 ದುಡುಕಿನ ಫಲ ನ್ಯಾನೊ ಕಥೆ   ಜೀವನ್ ಬಾಳಿನಲ್ಲಿ ತುಂಬಾ ಕಷ್ಟ ಅನುಭವಿಸಿದ್ದ ತಾನು ಉನ್ನತ ಅಧಿಕಾರಿಯಾಗಿ ಒಳ್ಳೆಯ ಹೆಸರು ಗಳಿಸಿದ್ದ. ಆತನಿಗೆ ಮುಂಗೋಪ ಜಾಸ್ತಿ ಅದೊಂದು ದಿನ ತನ್ನ ಕೈ ಕೆಳಗಿನ ಕೆಲಸಗಾರ ಮೋಹನ್ ಮೇಲೆ ಯಾವದೋ ಚಿಕ ಕಾರಣಕ್ಕೆ ಕೋಪದಿಂದ ಬಾಯಿಗೆ ಬಂದಂತೆ ಬೈದು ಬಿಟ್ಟ ಪರಿಣಾಮ ಮೋಹನ್ ಕೆಲಸ ಬಿಟ್ಟು  ಹೊರಟುಹೋದ.  ಪ್ರಾಮಾಣಿಕತೆಯಿಂದ ಚೆನ್ನಾಗಿ ಕೆಲಸಮಾಡುತ್ತಿದ್ದ ಮೋಹನ್ ಹೊರಟು ಹೋಗಿದ್ದು ಜೀವನ್ ನ ಒಂದು ಕೈ ಮುರಿದಂತಾಯಿತು.ತನ್ನ ದೂಡುಕಿನ ಫಲ ಈ ರೀತಿಯಾದುದು ತಿಳಿದು ಜೀವನ್ ನೊಂದುಕೊಂಡ .ಮುಂದೆಂದೂ ಆತ  ಈ  ರೀತಿ ದುಡುಕಿ ಮಾತಾಡುವುದು ಬಿಟ್ಟು ಬಿಟ್ಟ  ನೀತಿ..ಮಾತನಾಡುವಾಗ ಎಚ್ಚರ ಇರಬೇಕು    ಪಂಕಜಾ.ಕೆ.ಮುಡಿಪು

ಮಕ್ಕಳಾಟ ನವಪರ್ವ

ನವಪರ್ವ ಸ್ಪರ್ಧೆಗಾಗಿ  ಮಕ್ಜಳಗೀತೆ ಚಿತ್ರ ಕವನ  ಮಕ್ಕಳಾಟ   ಹಸಿರ ಬಯಲಲಿ ಸೇರಿ ಮಕ್ಕಳು ಗಾಳಿ ಗುಳ್ಳೆಯ ಊದುತಾ ರಜೆಯ ಮಜವನು ಸವಿಯುತಿರುವರು ಮೋದದಿಂದಲಿ ಆಡುತ ಆಕ್ಜ ತಮ್ಮ ರು ಜತೆಗೆ ಸೇರಿ ಕೂಡಿ ಆಡುತ ನಲಿವರು ಗಾಳಿ ಗುಳ್ಳೆಯು  ನಭವ ಸೇರುತ ಒಡೆವ ಚಂದವ ನೋಡುವರು ಹಸಿರು ಹಳದಿ ಕೆಂಪುಬಣ್ಣವು ಹಾರಿ ಗುಳ್ಳೆಯು ಮೇಲ್ಗಡೆ ಸೆಳೆಯುತಿರುವುದು ಚಿಣ್ಣರೆಲ್ಲರ ಕಣ್ಣನು ಏನು ಬೆರಗಿನ ನೋಟ  ಕೈಯ ತಟ್ಟುತ ಕುಣಿವ  ಪುಟ್ಟನ  ಹೇಳತೀರದ ಸಂಭ್ರಮ ಪಂಕಜಾ.ಕೆ.ಮುಡಿಪು

ಮೊರೆ ಹನಿ ಕವನ

ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ ಹನಿಕವನ ಮೊರೆ ಕಾಣದ ವೈರಿಯ ಆರ್ಭಟಕೆ ನಲುಗಿತು ಮನುಜರ ಜೀವನ ಮುಖವಾಡದ ಮುಸುಕಿನಲಿ ಕಳೆಯುತ್ತಿದೆ ಮನೆಯಲೇ ಬಂದಿ ಶರಣು ಬಂದಿಹೆನು ದೇವಾ ನಿನ್ನೆಡೆ ದಯೆಯ ತೋರಿಸಿ ಕರುಣೆಯಿಂದಲಿ ಪೊರೆ  ನಮ್ಮನೆಲ್ಲರ ಮೊರೆಯ ಅಲಿಸಿ ಪಂಕಜಾ.ಕೆ.ಮುಡಿಪು

ಆಧುನಿಕ ವಚನ

ಆಧುನಿಕ ವಚನ ಕರೋನ ಬಂತೆಂದುಕುಗ್ಗಬೇಡ ರೋಗಗಳು ಮನುಜನಿಗೆ ಬರದೆ ಮರಕ್ಕೆ ಬರುವುದೇ  ಹೇಳು ಪಂಕಜಾರಾಮ 2  ಅಳುವ  ಕಂದನಿಗೆ   ಹಾಲನ್ನು ಕೊಡದೆ ಗುಡಿಯ  ದೇವರಿಗೆ ಹಾಲನೆರೆಯುವರಯ್ಯ ಭಕ್ತಿಯು ಎಳ್ಳಷ್ಟೂ ಇಲ್ಲದೆ ಗುಡಿ ಗೋಪುರ ಸುತ್ತಿ ಫಲವೇನು ಪಂಕಜಾರಾಮ ಪಂಕಜಾ.ಕೆ.ಮುಡಿಪು

ಧರಣಿ ದೇವಿಗೆ ಸಿಂಗಾರ ಕಾವ್ಯಾಕುಟ ಚಿತಕ್ಕೊಂದು ಕವನ

 ಕಾವ್ಯಕೂಟ ಚಿತ್ರಕವನ ಸ್ಪರ್ಧೆಗಾಗಿ   ಧರಣಿ ದೇವಿಗೆ ಸಿಂಗಾರ ಮಳೆಯ  ಸಿಂಚನ ಇಳೆಗೆ ಕಂಪನ ಅರಳಿ ನಗುತಿದೆ ಹಸಿರ ವನಸಿರಿ ಉಳಿಸಿ ಬೆಳೆಸಿದರದು ಕೊಡುವುದು ಸ್ವಚ್ಛ  ಶುದ್ಧ ತಂಪು ಗಾಳಿಯನು ಅಂಗೈಯಲ್ಲೇ ಅರಮನೆ ಇರಲು ಕಡಿದು ಉರುಳಿಸಿ ಅಳಿಸಬೇಡಿರಿ ಉಳಿಸಿ ಮರಗಳ ಧರಣಿದೇವಿಗೆ ಉಡಿಸಿ ನಿರಂತರ ಹಸಿರ ಸಿಂಗಾರ ಅಂಗೈಯಲ್ಲಿ  ಗಾಜಿನ ಜಾಡಿಯಲಿ ಬೆಳೆಸಿ ಬೋನ್ಸಾಯ್ ಗಿಡಗಳ ತೋರುತಿರುವರು  ಹರಣ ಮಾಡುತ ಪ್ರಕೃತಿ ನಿರ್ಮಿತ ಹಸಿರ ಹಂದರವ ಹಸಿರು ಇದ್ದರೆ ಉಸಿರು ಇರುವುದು ಬೆಳೆಸಿ ಉಳಿಸುತ ಹಸಿರು ವನಗಳ ಸ್ವರ್ಗಸದೃಶ ವಸುಂಧರೆಯ ಚೆಲುವ    ಬಲೆಯನು ಸವಿಯುವಾತುರದಿ ಪಂಕಜಾ.ಕೆ.ಮುಡಿಪು  

ಕಾವ್ಯಮೈತ್ರಿ ಶ್ರಾವಣ ಮಂಗಳವಾರ

ಕಾವ್ಯ ಮೈತ್ರಿ ಸ್ಪರ್ಧೆಗಾಗಿ ಶ್ರಾವಣ ಮಂಗಳಗೌರಿ ಬಂದಿತು ಶ್ರಾವಣ ತಂದಿತು ಹರುಷವ ವ್ರತ ಉಪವಾಸಗಳ ಆಚರಿಸುವ  ಸಾತ್ವಿಕ ಉಪಾಸನೆಯ ಮಾಸ ಶ್ರಾವಣ ಮಾಸದ  ಐದು ಮಂಗಳವಾರ ಮಂಗಳ ಗೌರಿಯ  ಪೂಜಿಸಿ ಹೆಂಗಳೆಯರು ಮುತ್ತೈದೆ ಭಾಗ್ಯವನು ಬೇಡುವರು ದಾಂಪತ್ಯದ ಉಳಿವಿಗೆ ದೇವಿಯ ಹಾರೈಕೆ ಕುಟುಂಬದ ಸಂತೋಷ ಸಮೃದ್ಧಿಗಾಗಿ ಹರನರಸಿ  ಪಾರ್ವತಿಯನು ಪೂಜಿಪರು ದುಷ್ಟ ನಾಸಿನಿ ಶಿಷ್ಟ ಪೋಷಿಣಿ ಸರ್ವ ಮಂಗಳೇ ಶುಭಕಾರಿಣಿ ದೇವಿ ಗೌರಿಯ ಚರಣಕೆರಗುತಲಿ ಐದು ವರುಷವು ಯಾರು ಆಚರಿಸಿದರೂ ವರವ ಕೊಡುವಳು ಮಂಗಲಾಂಬಿಕೆ ಬಾಳು ಸಂತಶದ ಹೊನಲು ಆಗುವುದು ಪಂಕಜಾ.ಕೆ.ಮುಡಿಪು

ಸ್ನೇಹ ಸಂಗಮ ಶ್ರವಣ ಮಾಸ

ಸ್ನೇಹ ಸಂಗಮ ಸ್ಪರ್ಧೆಗಾಗಿ ಶ್ರಾವಣ ಮಾಸ ಬಂದಿತು  ಬಂದಿತು ಶ್ರಾವಣ ಮಾಸ ಸಾತ್ವಿಕ ಭಕ್ತಿಯು ತುಂಬುವ ಮಾಸ ನವಿರಾದ ರವಿ ಕಿರಣದ ಸ್ಪರ್ಶಕೆ ಮುದವು ತುಂತುರು ಮಳೆಯಸಿಂಚನದಲಿ ನಲಿವು ನದಿ ತೊರೆಗಳು ಹರಿಯುವ ಮಂಜುಳ ನಾದ ಅರಳಿದ ಹೂಗಳ ಸುಮಧುರ ಗಂಧ   ಹಬ್ಬದ ಸಡಗರ ಮನೆಯನು ತುಂಬಿ ಪ್ರಕೃತಿಯು ಮುದದಲಿ ಮೈತುಂಬಿ ಬರುತಿದೆ ಹಬ್ಬಗಳ ಸಾಲು ಸಾಲು ಮನೆಮಂದಿಯರೆಲ್ಲಇದರಲಿ ಪಾಲು ಆಷಾಡದಲ್ಲಿ ಮುದುಡಿದ ಮನವು ಶ್ರಾವಣದಲಿ  ಗರಿಗೆದರುತ ನವಿಲು ಮುದವನು ಕೊಡುತಿದೆ ಪ್ರಕೃತಿಯ ಚೆಲುವು ಮೈ ಮನಕೆಲ್ಲಾ   ತುಂಬುವುದು  ಬಲವು ಪಂಕಜಾ.ಕೆ.ಮುಡಿಪು

ದೇಶಭಕ್ತಿ ಗೀತೆ ರಾಷ್ಟ್ರ ನಮನ

ಕಾವ್ಯದೀಪ ಸಾಹಿತ್ಯ ಕಲಾವೇದಿಕೆ ಅಖಿಲ ಭಾರತ ಕವನ ಸ್ಪರ್ಧೆಗಾಗಿ ವಿಷಯ.    ರಾಷ್ಟ್ರ ನಮನ ದೇಶಭಕ್ತಿ ಗೀತೆ ತಾಯಿ ಭಾರತಿ ನಿತ್ಯ ನೂತನ ತಾಯಿ ಭಾರತಿ ಸರ್ವ ಹೃದಯದ ಸುಂದರಿ ಗುಡಿ ಗೋಪುರ ಶಿಲ್ಪ ವೈಭವ ಸಾರುತಿರುವಳು  ಮೋದದಿ ಹಸಿರು ಹಾಸಿದ ಗಿರಿ ಕಂದರ ದೇವನದಿಗಳ ಬೀಡಿದು ಪೈರು ಪಚ್ಚೆ ತುಂಬಿ ತುಳುಕುವ ದೇವ ಸದೃಶ ನಾಡಿದು ಸಿಂಧು ಯಮುನೆ ದೇವಗಂಗೆ ಸಲಿಲ ತೀರ್ಥವು ಹರಿಯುವುದು ದೇಶಭಕ್ತಿಯ ಬಿಸಿಯ ರಕ್ತವು ಚಿಮ್ಮುತ್ತಿರುವುದು  ನಮ್ಮಲಿ ವಿಶ್ವಪ್ರೇಮ ಶಾಂತಿ  ಮಂತ್ರವು ಮೊಳಗುತ್ತಿರುವುದು ಎಲ್ಲೆಡೆ ಸಕಲ ಧರ್ಮ ಸಮನ್ವಯವನು ಸಾರುತಿರುವುದು ಭಾರತ ಮಾತೃಭೂಮಿಯ ಮಣ್ಣ ಕಣ ಕಣ ಕ್ಷಾತ್ರ ತೇಜವ ತುಂಬಿದೆ ಕೋಟಿ ಜನ್ಮವು ಇರುವುದಿದ್ದರೂ ಹುಟ್ಟಿ ಬರುವೆನು ಇಲ್ಲಿಯೇ ಪಂಕಜಾ.ಕೆ .ಮುಡಿಪು ಹೆಸರು..ಪಂಕಜಾ.ಕೆ. ವಿಳಾಸ ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್  ಮಾಸ್ಟರ

ಶ್ರಾವಣ ಮಾಸ ಸ್ನೇಹ ಸಂಗಮ

ಸ್ನೇಹ ಸಂಗಮ ಸ್ಪರ್ಧೆಗಾಗಿ ಶ್ರಾವಣ ಮಾಸ ಬಂದಿತು  ಬಂದಿತು ಶ್ರಾವಣ ಮಾಸ ಸಾತ್ವಿಕ ಭಕ್ತಿಯು ತುಂಬುವ ಮಾಸ ನವಿರಾದ ರವಿ ಕಿರಣದ ಸ್ಪರ್ಶಕೆ ಮುದವು ತುಂತುರು ಮಳೆಯಸಿಂಚನದಲಿ ನಲಿವು ನದಿ ತೊರೆಗಳು ಹರಿಯುವ ಮಂಜುಳ ನಾದ ಅರಳಿದ ಹೂಗಳ ಸುಮಧುರ ಗಂಧ   ಹಬ್ಬದ ಸಡಗರ ಮನೆಯನು ತುಂಬಿ ಪ್ರಕೃತಿಯು ಮುದದಲಿ ಮೈತುಂಬಿ ಬರುತಿದೆ ಹಬ್ಬಗಳ ಸಾಲು ಸಾಲು ಮನೆಮಂದಿಯರೆಲ್ಲಇದರಲಿ ಪಾಲು ಆಷಾಡದಲ್ಲಿ ಮುದುಡಿದ ಮನವು ಶ್ರಾವಣದಲಿ  ಗರಿಗೆದರುತ ನವಿಲು ಮುದವನು ಕೊಡುತಿದೆ ಪ್ರಕೃತಿಯ ಚೆಲುವು ಮೈ ಮನಕೆಲ್ಲಾ   ತುಂಬುವುದು  ಬಲವು ಪಂಕಜಾ.ಕೆ.ಮುಡಿಪು

ಚಿತ್ರಕ್ಕೊಂದು ಕಥೆ ಕವಿ ಸಾಹಿತಿಗಳ ಜೀವಾಳ ಮೆಚ್ಚುಗೆಮರಳಿ ಗೂಡಿಗೆ

ಕವಿ ಸಾಹಿತಿಗಳ ಜೀವಾಳ ಚಿತ್ರ ಕಥಾ ಸ್ಪರ್ಧೆಗಾಗಿ ಮರಳಿ ಗೂಡಿಗೆ ಪಟ್ಟಣದ ಇಟ್ಟಿಗೆಯಯಂತ ಸಣ್ಣ ಮನೆಯಲ್ಲಿ ಬೆಳೆದಿದ್ದ ಸಾರಿಕಾಳಿಗೆ ಹಳ್ಳಿಗೆ ಹೋಗುವುದೆಂದರೆ ಎಲ್ಲಿಲ್ಲದ ಹಿಗ್ಗು.ಆದರೆ ಪ್ರತಿ ಸಲ ರಜೆಯಲ್ಲಿ ಹಳ್ಳಿಗೆ ಹೋಗುವ ಎಂದರೆ ತಂದೆ ತಾಯಿ ಇಬ್ಬರೂ ಒಂದಲ್ಲ ಒಂದು ನೆಪ ಹೇಳಿ ಹಳ್ಳಿಗೆ ಹೋಗುವುದನ್ನು  ಮುಂದಕ್ಕೆ ಹಾಕುತ್ತಿದ್ದರು. ಹಳ್ಳಿಯಲ್ಲಿ ಅಜ್ಜ ಅಜ್ಜಿಯ ಒಡನಾಟ  ವಿಶಾಲ ತೋಟ ಬಯಲು ಜುಳು ಜುಳು ಹರಿಯುವ ತೊರೆ ಕಾಡಿನ ಹಕ್ಕಿಗಳ ಮಧುರ ಗಾನ ಎಲ್ಲವೂ ಅವಳನ್ನು ಕಾಡುತ್ತಿದ್ದವು.ಬಾಲ್ಯದಲ್ಲಿ ಒಂದೆರಡು ಬಾರಿ ಹೋಗಿದ್ದು ಬಿಟ್ಟರೆ ಅಲ್ಲಿಗೆ ಹೋಗುವ ಅವಕಾಶವೇ ಸಿಗಲಿಲ್ಲ .ಅದಕ್ಕೆ ಕಾರಣ ಪಟ್ಟಣದ ಬೆರಗಿನ ಲೋಕಕ್ಕೆ ಮರುಳಾದ ಅವಳ ತಂದೆ ತಾಯಿಯರು.                       ಹೀಗಿರಲಾಗಿ ಒಂದುದಿನ ಅವರಿದ್ದ ಪಟ್ಟಣಕ್ಕೆ ಹೊಸದಾದ ರೋಗವೊಂದು ಸದ್ದಿಲ್ಲದೆ ಬಂದು ಎಲ್ಲರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಸರಕಾರ  ಎಲ್ಲರನ್ನು ಮನೆಯಲ್ಲೇ ಕುಳಿತಿರಲು ಅದೇಶಿಸಿತು ಇದರಿಂದಾಗಿ ಕೆಲಸ ಕಳೆದುಕೊಳ್ಳಬೇಕಾದ ಸ್ಥಿತಿ ರಾಜೇಶನದಾಯಿತು ಆತ ಹಳ್ಳಿಗೆ ಹೋಗುವ ನಿರ್ಧಾರ ಕೈಕೊಂಡ.ಅದರಂತೆ ಹಳ್ಳಿಗೆ ಬಂದ ಅವರು ಅಲ್ಲಿಯೇ ಇರಬೇಕಾಯಿತು .ಸಾರಿಕಾಳಿಗೆ  ತುಂಬಾ ಖುಷಿ ಆಯಿತು ಆಕೆ ಸುತ್ತ ಮುತ್ತಲ ಮನೆಯ ಮಕ್ಕಳ ಜತೆ ತೋಟ ಗುಡ್ಡ ತಿರುಗಿ  ಬಾಲ್ಯದ ಆಟವನ್ನು ಆಡುತ್ತಾ ಇದ್ದಳು.ಅದೊಂದು ದಿನ ಎಲ್ಲರೂ ಬಾಳೆಯ ತೋಟದಲ್ಲಿ ತಿರುಗಾಡುತ್ತಾ ಇದ್ದಾಗ , ಬಾಳೆ ಹೂವಿನ ಮಕರಂ

ಚಿತ್ರಕ್ಕೊಂದು ಕವನ ಬೇರುಬಳಗ ಚಿಣ್ಣರ ಆಟ

ಬೇರು ಬಳಗ ಸ್ಪರ್ಧೆಗಾಗಿ. ಚಿತ್ರ ಕವನ  ಚಿಣ್ಣರ ಆಟ ಶಾಲೆಗೆ ಬಂದಿತು ರಜೆ ಚಿಣ್ಣರಮನದಲಿ ತುಂಬಿತು ಹರುಷ ಹೊರಟಿತು ದಂಡು ಬಯಲ ಕಡೆ ಹಾರಿತು  ಬಣ್ಣದ. ಗಾಳಿಪಟ ಕುಣಿಯಿತು ಬಾನಲಿ ತಟ ಪಟ ಆದಿದರೆಲ್ಲರು ಸೇರುತ ಆಟ ಹೆಣ್ಣು ಗಂಡು ಬೇಧವು ಇಲ್ಲದೆ ಆಡುತಲಿರುವರು ಬಯಲಿನಲಿ ಹಬ್ಬಿತು ಎಲ್ಲೆಡೆ ಮಕ್ಕಳ ಕಲರವವು ಗೋಲಿ ಬುಗರಿ  ಚಿನ್ನಿದಾಂಡು ಆಡುತ ಮೈ ಮರೆಯುವರು ಮಕ್ಕಳ ಮೈ ಮನಕೆ ವ್ಯಾಯಾಮ ಹಬ್ಬಿತು ಎಲ್ಲೆಡೆ ಕೊರೊನಾ ಮಾರಿ ಎಲ್ಲರೂ ಕುಳಿತರು ಮನೆಯಲೇ ಬಂದಿ ಆಟದ ಮಜವನು ಕಸಿಯಿತು ಮಾರಿ ಏನಿದು ದೇವನ ಈ ಆಟ ಕಳೆಯಲಿ ಬೇಗನೆ ರೋಗದ ಕಾಟ ಮಕ್ಕಳು ಕುಣಿಯಲಿ ಬಯಲಿನಲಿ ಪಂಕಜಾ ಕೆ.ಮುಡಿಪು

ಲಾಲಿ ಹಾಡು ಸ್ನೇಹ ಸಂಗಮ ಉತ್ತಮ

ಲಾಲಿ ಹಾಡು ಸ್ನೇಹ ಸಂಗಮ ಸ್ಪರ್ಧೆಗಾಗಿ 20 ..7   2020 ಜೋಜೋ ಲಾಲಿ ಹಾಡುವೆ ನನಕಂದ ಮಲಗು ಮಲಗೆನ್ನ ಮುದ್ದು ಕಂದ ನನ್ನ ಬಾಳಿನ ಬಂಗಾರ ನೀನು ಸಾಸಿರ ಕನಸಿನ ಸರದಾರ ನೀನು ತೊಟ್ಟಿಲಲ್ಲಿ ಮಲಗಿರುವ ಶ್ರೀ ಹರಿಯೇ ತೂಗುವೆ ರಂಗನ ಜೋ ಜೋ ಲಾಲಿ ಬಾನಲ್ಲಿ ಹೊಳೆಯೊ ಸೂರ್ಯಪ್ಪ ಮಲಗಿದ ಕತ್ತಲಾಯಿತು ನೋಡು ಇನ್ನು ಮಲಗು ಕೈತುಂಬಾ ಕೆಲಸ  ಕಾದೈತೆ ನನಗೆ ಅಳದೆ ನೀನು ಮಲಗು ನನ ಕಂದ ಜೋಗುಳ ಹಾಡುವೆ ಮಲಗು ಮಲಗು ಹೊಳೆಯುವ ಚಂದಿರ ಬರುವನು ನೋಡು ಜೋ ಜೋ ಪಂಕಜಾ.ಕೆ.ಮುಡಿಪು

ದಾಂಪತ್ಯ ಗೀತೆ ಒಲವೇ ಜೀವನ ಖಿದ್ಮಾ

ಖಿದ್ಮಾ ಪೌಂಡೇಶನ್ ಸ್ಪರ್ಧೆಗಾಗಿ ದಾಂಪತ್ಯ ಗೀತೆ ಒಲವೇ ಜೀವನ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಕದ್ದೊಯ್ದೆ  ನೀಬಂದು ಕನಸುಗಳ ಸೆಳೆದು ಮನಸು ಮನಸುಗಳು ಕೂಡಿ ಗೆಲುವು ಬೆಸುಗೆಯಾಯಿತು ನಮ್ಮಿಬ್ಬರ ಒಲವು ಎರಡು ಜೀವ ಎರಡು ದೇಹವಾದರೂ  ಮನಸು ಒಂದಾಗಿ ಕೂಡಿಸಿದವರಾರು ದಾಂಪತ್ಯದ ಬೆಸುಗೆಯಲಿ ನಾವಂದು ಬಂಧಿ ಒಲವ ಹೀರುತ ನೀನಾದೆ ಮಧುಹೀರುವ ದುಂಬಿ ಸಪ್ತಪದಿ ತುಳಿದು  ನಾ ಬಂದೆ ಕನಸುಗಳ ತುಂಬಿ ಯಾವ ಜನ್ಮದ ಮೈತ್ರಿಯೋ ನಾವಿಬ್ಬರು ಒಂದು ಸುಖ ದುಃಖಗಳಲಿ ಜತೆಯಾಗುವ ಫಣ ಬರಬಾರದೆಂದಿಗೂ ಪ್ರತಿಷ್ಠೆ ಎಂಬ ಹಣ ಒಬ್ಬರ ಪ್ರೀತಿಗೆ ಇನ್ನೊಬ್ಬರು ಒಲಿಯುತ ಬಾಳನು  ಸವೆಸುವ ಜತೆಯಾಗಿ ನಗುತ ಜನುಮ ಜನುಮದ ಅನುಬಂಧ ಪ್ರೀತಿಯ ಸವಿಯುವ ಈ ಬಂದ ಪಂಕಜಾ .ಕೆ .ಮುಡಿಪು

ಕವಿ ಸಾಹಿತಿಗಳ ಜೀವಾಳ ಮುಗ್ಧ ಮಕ್ಕಳು

  ಕವಿ ಸಾಹಿತಿಗಳ  ಜೀವಾಳ ಬಳಗದ ವಾರದ ಸ್ಪರ್ಧೆಗಾಗಿ  ಚಿತ್ರ ಕವನ    ಮುಗ್ಧ ಮಕ್ಕಳು   ಮುಗ್ದ ಮಕ್ಕಳ ದಂಡ ಜತೆಯಲಿ ಚೆಲುವೆ  ಹೊರಟಳು ಬಾಳೆ ತೋಟಕೆ ಬಾಳೆಹೂವಿನ ಮಕರಂದವ ಸವಿಯುವಾತುರದಿ   ಎತ್ತರೆತ್ತರ ಬೆಳೆದ ಬಾಳೆಯು ಗೊನೆಯ ಹಾಕಿದ ಚಂದ ನೋಡುತ ಮಕ್ಕಳೆಲ್ಲರು ಬೆರಗು ಕಣ್ಣಲಿ ತೋರಿ ನಿಂತಿಹರು ಕೆಂಪು ಅಂಚಿನ ಕಪ್ಪು ಸೀರೆಯು ಕೆಂಪು ರವಿಕೆಯ ಕುಸುಮ ಕೋಮಲೆ ಕಾಲನೆತ್ತುತ ಹೂವ ಕೊಯ್ಯಲು ಕೈಯ ಚಾಚಿಹಳು ಆಸೆ ತುಂಬಿದ  ಬೆರಗು ಕಂಗಳು ಅಚ್ಚರಿಯಲಿ  ಅರಳಿ ನಿಂತಿವೆ ಬಾಳೆ ಹಣ್ಣಿನ ಗೊನೆಯ ನೋಡುತ ಕಣ್ಣು ತುಂಬುವರು ಬಾಲ್ಯ ಕಳೆದರು ಮುಗ್ದತೆ ಅಳಿಯದ ಚೆಲುವೆ ನಗುತಲಿ  ಬಾಲರೆಲ್ಲರ ಜತೆಗೆ ಸೇರುತ ತೋಟ ಗುಡ್ಡೆಯ ಸುತ್ತಿ ಕುಣಿಯುವಳು  ಹಂಚಿ ಹಣ್ಣನು ಕೊಟ್ಟು ತಿನ್ನುತ ಬಾಲರೆಲ್ಲರ ಜತೆಗೆ ನಲಿಯುವ ಚೆಲುವೆ ಮೊಗದಲಿ ಖುಷಿಯು ತುಂಬಿಹುದು ಪಂಕಜಾ.ಕೆ .ಮುಡಿಪು

ಇಳೆಯ ಕನಸು ನನ್ನ ಕವನದ. ಬಗ್ಗೆ ಅನಿಸಿಕೆಗಳು

[29/07, 7:18 PM] +91 91483 34022: ಪ್ರಕೃತಿಯ ಸೊಬಗನ್ನು ಹಿಡಿದಿಟ್ಟಿರುವ ನಿಮ್ಮ ಕವನ ಇಷ್ಟವಾಯಿತು. ಪಂಕಜಾರವರಿಗೆ ಧನ್ಯವಾದಗಳು.               ಜಲಜಾ ಬಿ.ಜಿ. [29/07, 7:25 PM] +91 94495 52369: ಇಳೆಯ ಕನಸು ಉತ್ತಮ ಶೀರ್ಷಿಕೆ, ಉತ್ತಮ ರಚನೆ ಧನ್ಯವಾದಗಳು. [29/07, 7:33 PM] +91 90082 69720: ಶ್ರಾವಣಕ್ಕೆ ಹೊಂಗನಸು ಹಸಿರು ಸೀರೆ ಕಂಪು ಮುಡಿಗೆ ಮಲ್ಲಿಗೆ ಕಂಪು ಪ್ರಕೃತಿಯ ತಂಪು ಕವಿಮನಕೆ ಬರಹದ ಇಂಪು  ವ್ಹಾವ್ ....ಸೂಪರ್🌸 [29/07, 7:35 PM] Saroja Nagaraja: ಮುಂಗಾರಿನ ಮಳೆಗೆ ಇಳೆ ಹೊಸ ಸೀರೆ ಉಟ್ಟಂತೆ ಕವಿತೆ ಚನ್ನಾಗಿದೆ..

ನ್ಯಾನೊ ಕಥೆ ನನಸಾದ ಕನಸು ಕಾವ್ಯಕೂಟ ದಲ್ಲಿ ಉತ್ತಮವೆಂದು ಆಯ್ಜೆ

 ನನಸಾದ ಕನಸು  (ನ್ಯಾನೊ ಕಥೆ )    ವಿನ್ಯಾಸ್ ಬಡವನಾಗಿದ್ದರೂ  ಮಹತ್ವಾಕಾಂಕ್ಷಿ ಯುವಕ . ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದ ಆತನಿಗೆ, ತಾನು ದೊಡ್ಡ ಡಾಕ್ಟರ್ ಆಗಿ ಬಡ ರೋಗಿಗಳ ಸೇವೆ ಮಾಡಬೇಕೆನ್ನುವ ಆಸೆ . ಆದರೆ ಆತನ ಕನಸು ಕೈಗೂಡಿತೆನ್ನುವಾಗ ಕಾಣದ ಕೈಗಳ ಕಪಿಮುಷ್ಠಿಗೆ  ಸಿಕ್ಕಿ ಅವಕಾಶ ತಪ್ಪಿತು . ದೃತಿಗೆಡದ ವಿನ್ಯಾಸ್ ಬೇರೊಂದು ರೀತಿಯಲ್ಲಿ  ತನ್ನ ಕನಸನ್ನು ನನಸಾಗಿಸಿಕೊಂಡ    ಪಂಕಜಾ.ಕೆ.ಮುಡಿಪು

ವಿಜಯ ಪತಾಕೆ ಖಿದ್ಮಾ ವಿಜಯಗಾನ

ಖಿದ್ಮಾ ಪೌಂಡೇಶನ್  ಕರ್ನಾಟಕ   ಕವನ ಸ್ಪರ್ಧೆಗಾಗಿ ವಿಷಯ....ವಿಜಯ ಪತಾಕೆ  ಶೀರ್ಷಿಕೆ.   ವಿಜಯ ಗಾನ ಭಾರತಾಂಬೆಯ ಸೇವೆಗೈಯುವ ಫಣವ ಮನದಲಿ ತುಂಬುತ ಹೊರಟು ಬಿಟ್ಟರು ಗಡಿಯ ಕಾಯಲು ಮನೆ ಮಠಗಳನು ಮರೆಯುತ ಪ್ರಾಣವೆಂಬ ಹಂಗು ತೊರೆದು ಕಾದುತಿರುವರು ಧೈರ್ಯದಿ ಗಡಿಯ ಎಡೆಯಲಿ ನುಸುಳುತಿರುವ ದುರುಳರನು ಸದೆ ಬಡಿಯುತ ಹಸಿವು ನಿದ್ದೆಯ ಪರಿವೆಯಿಲ್ಲದೆ ದುಡಿಯುತಿರುವರು ನಿಸ್ವಾರ್ಥದಿ ಮಡದಿ ಮಕ್ಕಳ ಬಿಟ್ಟು ಬರುತಲಿ ದೇಶ ಕಾಯುತ ಮಡಿವರು ಧೈರ್ಯದಲಿ ಸದೆಬಡಿದು ದುರುಳರ ತಾಯ ಮಾನವ ಕಾಯ್ದರು ಸಲ್ಲಿಸುವೆನು ನಮ್ಮ ನಮನವ ಓ ವೀರ  ಶೂರ ಯೋಧನೆ ರಾಷ್ಟ್ರಕ್ಕಾಗಿ ಪ್ರಾಣತೆತ್ತರೂ ವಿಜಯ ಪತಾಕೆಯು  ಹಾರಿತು ತಾಯಿ ಭಾರತಿ ಧನ್ಯಳಾದಳು ವೀರಯೋಧನ ತ್ಯಾಗದಿ ಪಂಕಜಾ.ಕೆ.ಮುಡಿಪು

ಚುಟುಕು

ಚುಟುಕು ಹೂವಿನ ಹಾಸಿಗೆಯಾಗಲಿ ಜೀವನ ಹೊರಟು ಹೋಗಲಿ ಮಾರಿ ಕೊರೊನ ಸಾಮಾಜಿಕ ಅಂತರ ಕಾಯೋಣ ಮಾಸ್ಕ್ ಧರಿಸಿ ವೈರಿಯ ಗೆಲ್ಲೋಣ ಪಂಕಜಾ.ಕೆ.ಮುಡಿಪು

ಕವಿಶೈಲ ದೇಶಭಕ್ತಿ ಗೀತೆ ನಮ್ಮದೇಶ ಭಾರತ

ಕವಿ ಶೈಲ  ವಾರದ  ಸ್ಪರ್ಧೆಗಾಗಿ ದೇಶ ಭಕ್ತಿ ಗೀತೆ ದತ್ತ ಪದ ..ಹುಡುಕು ನಮ್ಮ ದೇಶ ಭಾರತ ಹಿಮಾಲಯದಿಂದ ಕನ್ಯಾಕುಮಾರಿಯ ವರೆಗೆ ಹಬ್ಬಿ ನಿಂತಿದೆ ನಮ್ಮ ದೇಶ ಭಾರತ ದೇಶಕಾಗಿ ದುಡಿದುಮಡಿದ ವೀರ ಧೀರರ ನಾಡಿದು ವೀರವನಿತೆಯರು ಕೆಚ್ಚೆದೆಯಿಂದ  ಬದುಕಿ ಬಾಳಿದ ಬೀಡಿದು ಹಸಿರು ವನರಾಜಿಯಿಂದ ತುಂಬಿ ತುಳುಕಿದ ನಾಡಿದು ಸರ್ವಧರ್ಮ ಸಮನ್ವತೆಯನು ಸಾರುತಿದ್ದ ನಾಡಿದು ಗಂಗೆ ತುಂಗೆ ಸಲಿಲ  ತೀರ್ಥವು ಉಕ್ಕಿ ಹರಿದ ನಾಡಿದು ಚಿನ್ನ ಬೆಳ್ಳಿ ಮುತ್ತು ರತ್ನಗಳು ತುಂಬಿ ತುಳುಕಿದ ಬೀಡಿದು ಎಲ್ಲಿ ಹೋಯಿತು   ಈಗ ಭರತಖಂಡದ ಹಿರಿಮೆ ಗರಿಮೆಯು ಹುಡುಕುತಿರುವೆನು  ಎಲ್ಲ ಕಡೆಯೂ ಭವ್ಯ  ಭಾರತ ಸಂಸ್ಕೃತಿಯನು ತಾಯಿ ಭಾರತಿ  ನಲುಗಿ ಹೋದಳು ಮಾನವನ ಅತಿ ದುರಾಸೆಗೆ ಮತ್ತೆ ಬಂದೀತೆ ಕಳೆದು ಹೋದ ಭವ್ಯ ದಿವ್ಯ ಸಂಸ್ಕೃತಿ ಪಂಕಜಾ.ಕೆ. ಮುಡಿಪು

ಕವಿ ಸಾಹಿತಿಗಳ ಜೀವಾಳ ಚಿತ್ರ ಕವನ

  ಕವಿ ಸಾಹಿತಿಗಳ  ಜೀವಾಳ ಬಳಗದ ವಾರದ ಸ್ಪರ್ಧೆಗಾಗಿ  ಚಿತ್ರ ಕವನ   ಮುಗ್ಧ ಮಕ್ಕಳು ಮುಗ್ದ ಮಕ್ಕಳ ದಂಡ ಜತೆಯಲಿ ಚೆಲುವೆ  ಹೊರಟಳು ಬಾಳೆ ತೋಟಕೆ ಬಾಳೆಹೂವಿನ ಮಕರಂದವ ಸವಿಯುವಾತುರದಿ ಎತ್ತರೆತ್ತರ ಬೆಳೆದ ಬಾಳೆಯು ಗೊನೆಯ ಹಾಕಿದ ಚಂದ ನೋಡುತ ಮಕ್ಕಳೆಲ್ಲರು ಬೆರಗು ಕಣ್ಣಲಿ ತೋರಿ ನಿಂತಿಹರು ಕೆಂಪು ಅಂಚಿನ ಕಪ್ಪು ಸೀರೆಯು ಕೆಂಪು ರವಿಕೆಯ ಕುಸುಮ ಕೋಮಲೆ ಕಾಲನೆತ್ತುತ ಹೂವ ಕೊಯ್ಯಲು ಕೈಯ ಚಾಚಿಹಳು ಆಸೆ ತುಂಬಿದ  ಬೆರಗು ಕಂಗಳು ಅಚ್ಚರಿಯಲಿ  ಅರಳಿ ನಿಂತಿವೆ ಬಾಳೆ ಹಣ್ಣಿನ ಗೊನೆಯ ನೋಡುತ ಕಣ್ಣು ತುಂಬುವರು ಬಾಲ್ಯ ಕಳೆದರು ಮುಗ್ದತೆ ಅಳಿಯದ ಚೆಲುವೆ ನಗುತಲಿ  ಬಾಲರೆಲ್ಲರ ಜತೆಗೆ ಸೇರುತ ತೋಟ ಗುಡ್ಡೆಯ ಸುತ್ತಿ ಕುಣಿಯುವಳು ಹಂಚಿ ಹಣ್ಣನು ಕೊಟ್ಟು ತಿನ್ನುತ ಬಾಲರೆಲ್ಲರ ಜತೆಗೆ ನಲಿಯುವ ಚೆಲುವೆ ಮೊಗದಲಿ ಖುಷಿಯು ತುಂಬಿಹುದು ಪಂಕಜಾ.ಕೆ .ಮುಡಿಪು

ಕಾವ್ಯ ಕೂಟ ಚುಟುಕು

ಕಾವ್ಯಕೂಟ ಸ್ಪರ್ಧೆಗಾಗಿ ಚುಟುಕು ದತ್ತಪದ.ಸದ್ಗುಣ ಹೆಜ್ಜೇನು ಸದ್ಗುಣಿಯ ಸಂಗವದು ಹೆಜ್ಜೇನು  ಕುಡಿದಂತೆ ದುರ್ಗುಣಿಯ ಸ್ನೇಹವದು ಹೆಜ್ಜೇನು ಕಡಿದಂತೆ ಸುಗಂಧ ಭರಿತ ಪುಷ್ಪವದು ಸದ್ಗುಣ ಎಲ್ಲೆಡೆಯೂ ಸಲ್ಲುವನು ಸದ್ಗುಣಿ ಪಂಕಜಾ.ಕೆ.ಮುಡಿಪು

ಲಾಲಿ ಹಾಡು ಸ್ನೇಹ ಸಂಗಮ ಮೆಚ್ಚುಗೆ

ಲಾಲಿ ಹಾಡು ಸ್ನೇಹ ಸಂಗಮ ಸ್ಪರ್ಧೆಗಾಗಿ 20 ..7   2020 ಜೋಜೋ ಲಾಲಿ ಹಾಡುವೆ ನನಕಂದ ಮಲಗು ಮಲಗೆನ್ನ ಮುದ್ದು ಕಂದ ನನ್ನ ಬಾಳಿನ ಬಂಗಾರ ನೀನು ಸಾಸಿರ ಕನಸಿನ ಸರದಾರ ನೀನು ತೊಟ್ಟಿಲಲ್ಲಿ ಮಲಗಿರುವ ಶ್ರೀ ಹರಿಯೇ ತೂಗುವೆ ರಂಗನ ಜೋ ಜೋ ಲಾಲಿ ಬಾನಲ್ಲಿ ಹೊಳೆಯೊ ಸೂರ್ಯಪ್ಪ ಮಲಗಿದ ಕತ್ತಲಾಯಿತು ನೋಡು ಇನ್ನು ಮಲಗು ಕೈತುಂಬಾ ಕೆಲಸ  ಕಾದೈತೆ ನನಗೆ ಅಳದೆ ನೀನು ಮಲಗು ನನ ಕಂದ ಜೋಗುಳ ಹಾಡುವೆ ಮಲಗು ಮಲಗು ಹೊಳೆಯುವ ಚಂದಿರ ಬರುವನು ನೋಡು ಜೋ ಜೋ ಪಂಕಜಾ.ಕೆ.ಮುಡಿಪು

ಖಿದ್ಮಾ ದಾಂಪತ್ಯ ಗೀತೆ

ಖಿದ್ಮಾ ಪೌಂಡೇಶನ್ ಸ್ಪರ್ಧೆಗಾಗಿ ದಾಂಪತ್ಯ ಗೀತೆ ಒಲವೇ ಜೀವನ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಕದ್ದೊಯ್ದೆ  ನೀಬಂದು ಕನಸುಗಳ ಸೆಳೆದು ಮನಸು ಮನಸುಗಳು ಕೂಡಿ ಗೆಲುವು ಬೆಸುಗೆಯಾಯಿತು ನಮ್ಮಿಬ್ಬರ ಒಲವು ಎರಡು ಜೀವ ಎರಡು ದೇಹವಾದರೂ  ಮನಸು ಒಂದಾಗಿ ಕೂಡಿಸಿದವರಾರು ದಾಂಪತ್ಯದ ಬೆಸುಗೆಯಲಿ ನಾವಂದು ಬಂಧಿ ಒಲವ ಹೀರುತ ನೀನಾದೆ ಮಧುಹೀರುವ ದುಂಬಿ ಸಪ್ತಪದಿ ತುಳಿದು  ನಾ ಬಂದೆ ಕನಸುಗಳ ತುಂಬಿ ಯಾವ ಜನ್ಮದ ಮೈತ್ರಿಯೋ ನಾವಿಬ್ಬರು ಒಂದು ಸುಖ ದುಃಖಗಳಲಿ ಜತೆಯಾಗುವ ಫಣ ಬರಬಾರದೆಂದಿಗೂ ಪ್ರತಿಷ್ಠೆ ಎಂಬ ಹಣ ಒಬ್ಬರ ಪ್ರೀತಿಗೆ ಇನ್ನೊಬ್ಬರು ಒಲಿಯುತ ಬಾಳನು  ಸವೆಸುವ ಜತೆಯಾಗಿ ನಗುತ ಜನುಮ ಜನುಮದ ಅನುಬಂಧ ಪ್ರೀತಿಯ ಸವಿಯುವ ಈ ಬಂದ ಪಂಕಜಾ .ಕೆ .ಮುಡಿಪು

ಕವಿ ಸಾಹಿತಿಗಳ ಜೀವಾಳ ಚಿತ್ರಕಥೆ ಮರಳಿ ಗೂಡಿಗೆ

ಕವಿ ಸಾಹಿತಿಗಳ ಜೀವಾಳ ಚಿತ್ರ ಕಥಾ ಸ್ಪರ್ಧೆಗಾಗಿ ಮರಳಿ ಗೂಡಿಗೆ ಪಟ್ಟಣದ ಇಟ್ಟಿಗೆಯಯಂತ ಸಣ್ಣ ಮನೆಯಲ್ಲಿ ಬೆಳೆದಿದ್ದ ಸಾರಿಕಾಳಿಗೆ ಹಳ್ಳಿಗೆ ಹೋಗುವುದೆಂದರೆ ಎಲ್ಲಿಲ್ಲದ ಹಿಗ್ಗು.ಆದರೆ ಪ್ರತಿ ಸಲ ರಜೆಯಲ್ಲಿ ಹಳ್ಳಿಗೆ ಹೋಗುವ ಎಂದರೆ ತಂದೆ ತಾಯಿ ಇಬ್ಬರೂ ಒಂದಲ್ಲ ಒಂದು ನೆಪ ಹೇಳಿ ಹಳ್ಳಿಗೆ ಹೋಗುವುದನ್ನು  ಮುಂದಕ್ಕೆ ಹಾಕುತ್ತಿದ್ದರು. ಹಳ್ಳಿಯಲ್ಲಿ ಅಜ್ಜ ಅಜ್ಜಿಯ ಒಡನಾಟ  ವಿಶಾಲ ತೋಟ ಬಯಲು ಜುಳು ಜುಳು ಹರಿಯುವ ತೊರೆ ಕಾಡಿನ ಹಕ್ಕಿಗಳ ಮಧುರ ಗಾನ ಎಲ್ಲವೂ ಅವಳನ್ನು ಕಾಡುತ್ತಿದ್ದವು.ಬಾಲ್ಯದಲ್ಲಿ ಒಂದೆರಡು ಬಾರಿ ಹೋಗಿದ್ದು ಬಿಟ್ಟರೆ ಅಲ್ಲಿಗೆ ಹೋಗುವ ಅವಕಾಶವೇ ಸಿಗಲಿಲ್ಲ .ಅದಕ್ಕೆ ಕಾರಣ ಪಟ್ಟಣದ ಬೆರಗಿನ ಲೋಕಕ್ಕೆ ಮರುಳಾದ ಅವಳ ತಂದೆ ತಾಯಿಯರು.                       ಹೀಗಿರಲಾಗಿ ಒಂದುದಿನ ಅವರಿದ್ದ ಪಟ್ಟಣಕ್ಕೆ ಹೊಸದಾದ ರೋಗವೊಂದು ಸದ್ದಿಲ್ಲದೆ ಬಂದು ಎಲ್ಲರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಸರಕಾರ  ಎಲ್ಲರನ್ನು ಮನೆಯಲ್ಲೇ ಕುಳಿತಿರಲು ಅದೇಶಿಸಿತು ಇದರಿಂದಾಗಿ ಕೆಲಸ ಕಳೆದುಕೊಳ್ಳಬೇಕಾದ ಸ್ಥಿತಿ ರಾಜೇಶನದಾಯಿತು ಆತ ಹಳ್ಳಿಗೆ ಹೋಗುವ ನಿರ್ಧಾರ ಕೈಕೊಂಡ.ಅದರಂತೆ ಹಳ್ಳಿಗೆ ಬಂದ ಅವರು ಅಲ್ಲಿಯೇ ಇರಬೇಕಾಯಿತು .ಸಾರಿಕಾಳಿಗೆ  ತುಂಬಾ ಖುಷಿ ಆಯಿತು ಆಕೆ ಸುತ್ತ ಮುತ್ತಲ ಮನೆಯ ಮಕ್ಕಳ ಜತೆ ತೋಟ ಗುಡ್ಡ ತಿರುಗಿ  ಬಾಲ್ಯದ ಆಟವನ್ನು ಆಡುತ್ತಾ ಇದ್ದಳು.ಅದೊಂದು ದಿನ ಎಲ್ಲರೂ ಬಾಳೆಯ ತೋಟದಲ್ಲಿ ತಿರುಗಾಡುತ್ತಾ ಇದ್ದಾಗ , ಬಾಳೆ ಹೂವಿನ ಮಕರಂ

ಮಂಜುವಾಣಿ ಯಲ್ಲಿ ಪ್ರಕಟ ಮಳೆಗಾಲದಲ್ಲಿ ನಮ್ಮ ಆರೋಗ್ಯ

ಮಳೆಗಾಲದಲ್ಲಿ ಮಕ್ಕಳು ವೃದ್ಧರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ  ಬೇಸಿಗೆಯ ಸುಡು ಬಿಸಿಲು ಕಳೆದು.ಮಳೆಗಾಲವು ಮೆಲ್ಲ ಮೆಲ್ಲನೆ ಕಾಲಿಟ್ಟಿತು .ಬೇಸಿಗೆಯ ಬಿರುಬಿಸಿಲಿನಲ್ಲಿ ಬಸವಳಿದ ದೇಹ, ಮನಸು ಮಳೆಗಾಲದ ತಂಪಿಗೆ ಖುಷಿಯಿಂದ  ಮೈ ತೆರೆದುಕೊಳ್ಳುವುದು ಸಹಜ                ಮಳೆಗಾಲ ಹಲವು ರೋಗಗಳನ್ನು ತನ್ನೊಂದಿಗೆ ತರುತ್ತದೆ .ವೃದ್ಧರು ಮಕ್ಕಳು ಬಹುಬೇಗನೆ  ಇದರ ದಾಳಿಗೆ ತುತ್ತಾಗುವರು.ಅದಕ್ಕೆ ಕಾರಣ  ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದು.ಆದ್ದರಿಂದ ಮಳೆಗಾಲದಲ್ಲಿ ಮಕ್ಕಳು ವೃದ್ಧರು ತುಂಬಾ ಎಚ್ಚರಿಕೆಯಿಂದ ಇರಬೇಕು . ರೋಗ ಬಂದಮೇಲೆ ಚಿಕಿತ್ಸೆ ಮಾಡುವುದಕ್ಕಿಂತ  ಮೊದಲೇ ಜಾಗ್ರತೆಯಿಂದ ಇರುವುದು ಒಳ್ಳೆಯದು  ಈ ದಿನಗಳಲ್ಲಿ ಮಳೆಯಲ್ಲಿ ನೆನೆಯುವುದಾಗಲಿ  ಶೀತಗಾಳಿಗೆ  ಮೈಯೊಡ್ಡುವುದಾಗಲಿ ಮಾಡದೆ ಬೆಚ್ಚಗಿನ ಉಡುಪು ಧರಿಸಿ ಮೈಯನ್ನು ಮುಚ್ಚಿಕೊಳ್ಳಬೇಕು. ಕುದಿಸಿಅರಿಸಿದ ನೀರನ್ನು ಸೇವಿಸಬೇಕು, ನಿತ್ಯ ತುಳಸಿ ಕಷಾಯ  ಕುಡಿದರೆ ಶೀತ ಕೆಮ್ಮು ಹತ್ತಿರ ಸುಳಿಯಲಾರದು ಮಳೆಗಾಲದಲ್ಲಿ ಉಂಡ ಆಹಾರ ಜೀರ್ಣವಾಗುವುದು ನಿಧಾನ ಆದ್ದರಿಂದ ಸಮತೋಲಿತ ಆಹಾರವನ್ನು ಆಗಾಗ ಸ್ವಲ್ಪ ಸ್ವಲ್ಪ ತಿನ್ನುವುದು ಒಳ್ಳೆಯದು.ಕುಡಿಯುವ ನೀರು ತಿನ್ನುವ ಆಹಾರದ ಬಗ್ಗೆ ಕಾಳಜಿ ಇರಬೇಕು.                ಹಸಿಯಾಗಿ ಸೇವಿಸುವ  ತರಕಾರಿಗಳಿಗಿಂತ ಬೇಯಿಸಿದ  ತರಕಾರಿ ಈ ದಿನಗಳಲ್ಲಿ ಉತ್ತಮ. ಹಣ್ಣು ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಿಸಬೇಕು.ಐಸ್ ಕ್ರೀಮ್

ನವಪರ್ವ ಸಾಹಿತ್ಯ ಸಂಕ್ರಾಂತಿಯಲ್ಲಿ ಲೇಖನ ಸ್ಪರ್ಧೆಮೆಚ್ಚುಗೆ

ನವಪರ್ವ ಸಾಹಿತ್ಯ ಸಂಕ್ರಾಂತಿ ಸ್ಪರ್ಧೆಗಾಗಿ ನಮ್ಮ ಮನೆಯ ಕೈತೋಟ (ಲೇಖನ)       ಹಸಿರೇ. ...ಉಸಿರು ಮುಂಗಾರು ಮಳೆ ಪ್ರಾರಂಭವಾಯಿತೆಂದರೆ ಮನೆಯ ಸುತ್ತು ಮುತ್ತು ಗಿಡಗಳನ್ನು ನೆಟ್ಟು ಬೆಳೆಸುವುದು ನನ್ನ ಹವ್ಯಾಸಗಳಲ್ಲಿ ಒಂದು. ಕೈತೋಟ ಮಾಡುವುದು ಎಂದರೆ ನನಗೆ ಎಲ್ಲಿಲ್ಲದ ಆಸಕ್ತಿ,ಅದಕ್ಕಾಗಿ  ನರ್ಸರಿ ಮತ್ತು ಸ್ನೇಹಿತರ ಮನೆಗಳಿಂದ ಗಿಡಗಳನ್ನು ತಂದು  ನೆಟ್ಟು ಬೆಳೆಸುತ್ತೇನೆ. ಕೈತೋಟದಲ್ಲಿ ಕೆಲಸಮಾಡುತ್ತಿದ್ದರೆ ಸಮಯ ಸರಿದುದೇ ತಿಳಿಯುವುದಿಲ್ಲ. ಹಿಂದಿನ ವರ್ಷ ಜತನದಿಂದ ಕಾದಿಟ್ಟ ತರಕಾರಿ ಬೀಜಗಳನ್ನು ಹಾಕಿ ಅದು ಇರುವೆಗಳ ಪಾಲಾಗದಂತೆ ಜಾಗ್ರತೆವಹಿಸಿ ಉತ್ತಮವಾಗಿ ಬೆಳೆದು ಫಲ ಸಿಗುವಂತೆ ಮಾಡುವುದು ಸುಲಭದ ಕೆಲಸವಲ್ಲ.                ನಮ್ಮ ಮನೆಯ ಹಿತ್ತಲಿನಲ್ಲಿ  ಹಲವಾರು ಹೂಗಿಡಗಳನ್ನು , ಔಷಧೀಯ ಗಿಡಗಳನ್ನು, ತರಕಾರಿ ಹಣ್ಣಿನ ಗಿಡಗಳನ್ನೂ ನಾನು ಬೆಳೆಸಿರುತ್ತೇನೆ. ಇದರಿಂದ ಮನೆಗೆ ಬೇಕಾದ ತರಕಾರಿಯನ್ನು ಮಾರ್ಕೆಟ್ ನಿಂದ ತರುವ ಶ್ರಮಮತ್ತು ಹಣದ ಉಳಿತಾಯವಾಗುತ್ತದೆ,ಅಲ್ಲದೆ ಸಾವಯವ ತರಕಾರಿ  ಸಿಗುತ್ತದೆ .ಮನೆಯಲ್ಲೇ ಬೆಳೆಸಿದ ಹಸಿರು ಸೊಪ್ಪು ತರಕಾರಿಗಳು ರಾಸಾಯನಿಕ ಮುಕ್ತವಾಗಿದ್ದು ಆರೋಗ್ಯವರ್ಧಕವೂ ಆಗಿರುತ್ತದೆ                      ಹೂವು   ತರಕಾರಿಗಳನ್ನು ಮನೆಯಂಗಳದಲ್ಲಿ ಬೆಳೆಸುವುದರಿಂದ  ಮನೆಗೆ ಬೇಕಾದ ಹೂವು ತರಕಾರಿಗಳನ್ನು ಕೊಂಡು ತರಬೇಕಾಗಿಲ್ಲ  .ಮಳೆಗಾಲದಲ್ಲಿ ಅವುಗಳ ಆರೈಕೆ,  ಬೇಸಿಗೆಯಲ್ಲಿ ನೀರುಣಿಸುವ ಕೆಲಸ, ಇತ್ಯಾದ

ಬೇರು ಬಳಗ ಚಿಣ್ಣರ ಆಟ

ಬೇರು ಬಳಗ ಸ್ಪರ್ಧೆಗಾಗಿ. ಚಿತ್ರ ಕವನ ಚಿಣ್ಣರ ಆಟ ಶಾಲೆಗೆ ಬಂದಿತು ರಜೆ ಚಿಣ್ಣರಮನದಲಿ ತುಂಬಿತು ಹರುಷ ಹೊರಟಿತು ದಂಡು ಬಯಲ ಕಡೆ ಹಾರಿತು  ಬಣ್ಣದ. ಗಾಳಿಪಟ ಕುಣಿಯಿತು ಬಾನಲಿ ತಟ ಪಟ ಆದಿದರೆಲ್ಲರು ಸೇರುತ ಆಟ ಹೆಣ್ಣು ಗಂಡು ಬೇಧವು ಇಲ್ಲದೆ ಆಡುತಲಿರುವರು ಬಯಲಿನಲಿ ಹಬ್ಬಿತು ಎಲ್ಲೆಡೆ ಮಕ್ಕಳ ಕಲರವವು ಗೋಲಿ ಬುಗರಿ  ಚಿನ್ನಿದಾಂಡು ಆಡುತ ಮೈ ಮರೆಯುವರು ಮಕ್ಕಳ ಮೈ ಮನಕೆ ವ್ಯಾಯಾಮ ಹಬ್ಬಿತು ಎಲ್ಲೆಡೆ ಕೊರೊನಾ ಮಾರಿ ಎಲ್ಲರೂ ಕುಳಿತರು ಮನೆಯಲೇ ಬಂದಿ ಆಟದ ಮಜವನು ಕಸಿಯಿತು ಮಾರಿ ಏನಿದು ದೇವನ ಈ ಆಟ ಕಳೆಯಲಿ ಬೇಗನೆ ರೋಗದ ಕಾಟ ಮಕ್ಕಳು ಕುಣಿಯಲಿ ಬಯಲಿನಲಿ ಪಂಕಜಾ ಕೆ.ಮುಡಿಪು

ಸ್ನೇಹಸಂಗಮ ಮೆಚ್ಚುಗೆ ಶ್ರಾವಣ ಮಾಸ

ಸ್ನೇಹ ಸಂಗಮ ಸ್ಪರ್ಧೆಗಾಗಿ ಶ್ರಾವಣ ಮಾಸ ಬಂದಿತು  ಬಂದಿತು ಶ್ರಾವಣ ಮಾಸ ಸಾತ್ವಿಕ ಭಕ್ತಿಯು ತುಂಬುವ ಮಾಸ ನವಿರಾದ ರವಿ ಕಿರಣದ ಸ್ಪರ್ಶಕೆ ಮುದವು ತುಂತುರು ಮಳೆಯಸಿಂಚನದಲಿ ನಲಿವು ನದಿ ತೊರೆಗಳು ಹರಿಯುವ ಮಂಜುಳ ನಾದ ಅರಳಿದ ಹೂಗಳ ಸುಮಧುರ ಗಂಧ   ಹಬ್ಬದ ಸಡಗರ ಮನೆಯನು ತುಂಬಿ ಪ್ರಕೃತಿಯು ಮುದದಲಿ ಮೈತುಂಬಿ ಬರುತಿದೆ ಹಬ್ಬಗಳ ಸಾಲು ಸಾಲು ಮನೆಮಂದಿಯರೆಲ್ಲಇದರಲಿ ಪಾಲು ಆಷಾಡದಲ್ಲಿ ಮುದುಡಿದ ಮನವು ಶ್ರಾವಣದಲಿ  ಗರಿಗೆದರುತ ನವಿಲು ಮುದವನು ಕೊಡುತಿದೆ ಪ್ರಕೃತಿಯ ಚೆಲುವು ಮೈ ಮನಕೆಲ್ಲಾ   ತುಂಬುವುದು  ಬಲವು ಪಂಕಜಾ.ಕೆ.ಮುಡಿಪು

ಕಾವ್ಯ ಕೂಟ ಚಿತ್ರಕವನ ತೃತೀಯ ಧರಣಿ ದೇವಿಗೆ ಶೃಂಗಾರ

 ಕಾವ್ಯಕೂಟ ಚಿತ್ರಕವನ ಸ್ಪರ್ಧೆಗಾಗಿ   ಧರಣಿ ದೇವಿಗೆ ಸಿಂಗಾರ ಮಳೆಯ  ಸಿಂಚನ ಇಳೆಗೆ ಕಂಪನ ಅರಳಿ ನಗುತಿದೆ ಹಸಿರ ವನಸಿರಿ ಉಳಿಸಿ ಬೆಳೆಸಿದರದು ಕೊಡುವುದು ಸ್ವಚ್ಛ  ಶುದ್ಧ ತಂಪು ಗಾಳಿಯನು ಅಂಗೈಯಲ್ಲೇ ಅರಮನೆ ಇರಲು ಕಡಿದು ಉರುಳಿಸಿ ಅಳಿಸಬೇಡಿರಿ ಉಳಿಸಿ ಮರಗಳ ಧರಣಿದೇವಿಗೆ ಉಡಿಸಿ ನಿರಂತರ ಹಸಿರ ಸಿಂಗಾರ ಅಂಗೈಯಲ್ಲಿ  ಗಾಜಿನ ಜಾಡಿಯಲಿ ಬೆಳೆಸಿ ಬೋನ್ಸಾಯ್ ಗಿಡಗಳ ತೋರುತಿರುವರು  ಹರಣ ಮಾಡುತ ಪ್ರಕೃತಿ ನಿರ್ಮಿತ ಹಸಿರ ಹಂದರವ ಹಸಿರು ಇದ್ದರೆ ಉಸಿರು ಇರುವುದು ಬೆಳೆಸಿ ಉಳಿಸುತ ಹಸಿರು ವನಗಳ ಸ್ವರ್ಗಸದೃಶ ವಸುಂಧರೆಯ ಚೆಲುವ    ಬಲೆಯನು ಸವಿಯುವಾತುರದಿ ಪಂಕಜಾ.ಕೆ.ಮುಡಿಪು  

ಕಾವ್ಯ ಮೈತ್ರಿ ಶ್ರಾವಣ ಮಂಗಳವಾರ

ಕಾವ್ಯ ಮೈತ್ರಿ ಸ್ಪರ್ಧೆಗಾಗಿ ಶ್ರಾವಣ ಮಂಗಳಗೌರಿ ಬಂದಿತು ಶ್ರಾವಣ ತಂದಿತು ಹರುಷವ ವ್ರತ ಉಪವಾಸಗಳ ಆಚರಿಸುವ  ಸಾತ್ವಿಕ ಉಪಾಸನೆಯ ಮಾಸ ಶ್ರಾವಣ ಮಾಸದ  ಐದು ಮಂಗಳವಾರ ಮಂಗಳ ಗೌರಿಯ  ಪೂಜಿಸಿ ಹೆಂಗಳೆಯರು ಮುತ್ತೈದೆ ಭಾಗ್ಯವನು ಬೇಡುವರು ದಾಂಪತ್ಯದ ಉಳಿವಿಗೆ ದೇವಿಯ ಹಾರೈಕೆ ಕುಟುಂಬದ ಸಂತೋಷ ಸಮೃದ್ಧಿಗಾಗಿ ಹರನರಸಿ  ಪಾರ್ವತಿಯನು ಪೂಜಿಪರು ದುಷ್ಟ ನಾಸಿನಿ ಶಿಷ್ಟ ಪೋಷಿಣಿ ಸರ್ವ ಮಂಗಳೇ ಶುಭಕಾರಿಣಿ ದೇವಿ ಗೌರಿಯ ಚರಣಕೆರಗುತಲಿ ಐದು ವರುಷವು ಯಾರು ಆಚರಿಸಿದರೂ ವರವ ಕೊಡುವಳು ಮಂಗಲಾಂಬಿಕೆ ಬಾಳು ಸಂತಶದ ಹೊನಲು ಆಗುವುದು ಪಂಕಜಾ.ಕೆ.ಮುಡಿಪು

ಮೊರೆ ಹನಿ ಹನಿ ಇಬ್ಬನಿ ಹನಿಕವನ

ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ ಹನಿಕವನ ಮೊರೆ ಕಾಣದ ವೈರಿಯ ಆರ್ಭಟಕೆ ನಲುಗಿತು ಮನುಜರ ಜೀವನ ಮುಖವಾಡದ ಮುಸುಕಿನಲಿ ಕಳೆಯುತ್ತಿದೆ ಮನೆಯಲೇ ಬಂದಿ ಶರಣು ಬಂದಿಹೆನು ದೇವಾ ನಿನ್ನೆಡೆ ದಯೆಯ ತೋರಿಸಿ ಕರುಣೆಯಿಂದಲಿ ಪೊರೆ  ನಮ್ಮನೆಲ್ಲರ ಮೊರೆಯ ಅಲಿಸಿ ಪಂಕಜಾ.ಕೆ.ಮುಡಿಪು

ಆಧುನಿಕ ವಚನ

ಆಧುನಿಕ ವಚನ ಕರೋನ ಬಂತೆಂದುಕುಗ್ಗಬೇಡ ರೋಗಗಳು ಮನುಜನಿಗೆ ಬರದೆ ಮರಕ್ಕೆ ಬರುವುದೇ  ಹೇಳು ಪಂಕಜಾರಾಮ 2  ಅಳುವ  ಕಂದನಿಗೆ   ಹಾಲನ್ನು ಕೊಡದೆ ಗುಡಿಯ  ದೇವರಿಗೆ ಹಾಲನೆರೆಯುವರಯ್ಯ ಭಕ್ತಿಯು ಎಳ್ಳಷ್ಟೂ ಇಲ್ಲದೆ ಗುಡಿ ಗೋಪುರ ಸುತ್ತಿ ಫಲವೇನು ಪಂಕಜಾರಾಮ ಪಂಕಜಾ.ಕೆ.ಮುಡಿಪು

ಮಕ್ಕಳಾಟ ನವಪರ್ವ

ನವಪರ್ವ ಸ್ಪರ್ಧೆಗಾಗಿ  ಮಕ್ಜಳಗೀತೆ ಚಿತ್ರ ಕವನ  ಮಕ್ಕಳಾಟ   ಹಸಿರ ಬಯಲಲಿ ಸೇರಿ ಮಕ್ಕಳು ಗಾಳಿ ಗುಳ್ಳೆಯ ಊದುತಾ ರಜೆಯ ಮಜವನು ಸವಿಯುತಿರುವರು ಮೋದದಿಂದಲಿ ಆಡುತ ಆಕ್ಜ ತಮ್ಮ ರು ಜತೆಗೆ ಸೇರಿ ಕೂಡಿ ಆಡುತ ನಲಿವರು ಗಾಳಿ ಗುಳ್ಳೆಯು  ನಭವ ಸೇರುತ ಒಡೆವ ಚಂದವ ನೋಡುವರು ಹಸಿರು ಹಳದಿ ಕೆಂಪುಬಣ್ಣವು ಹಾರಿ ಗುಳ್ಳೆಯು ಮೇಲ್ಗಡೆ ಸೆಳೆಯುತಿರುವುದು ಚಿಣ್ಣರೆಲ್ಲರ ಕಣ್ಣನು ಏನು ಬೆರಗಿನ ನೋಟ  ಕೈಯ ತಟ್ಟುತ ಕುಣಿವ  ಪುಟ್ಟನ  ಹೇಳತೀರದ ಸಂಭ್ರಮ ಪಂಕಜಾ.ಕೆ.ಮುಡಿಪು

ಒಲವೇ ಜೀವನ ಕಾವ್ಯಕೂಟ

ಕಾವ್ಯಾಕೂಟ ಚಿತ್ರಕವನ ಸ್ಪರ್ಧೆಗಾಗಿ.  ಒಲವೇ ಜೀವನ ಮುಂಗಾರು ಮಳೆ ಸುರಿದು ಮೈಮನಕೆ ಮುದ ತಂದಿದೆ ನಿನ್ನೊಲವ ಧಾರೆಯಲಿ ತನುಮನಕೆ  ಉಲ್ಲಾಸ ತುಂಬಿದೆ ಈ ಕೆಂಗುಲಾಬಿಯು ನಮ್ಮಿಬ್ಬರ ಒಲವಿಗೆ ಸಾಕ್ಷಿಯಾಗಿದೆ  ನಾವಿಬ್ಬರೊಂದಾಗಿ ಒಲವ ಸವಿ ಸವಿಯೋಣ ಬಾ ನಲ್ಲೆ  ಬಿಸಿಲು ಮಳೆಯ ಎಡೆಯಲಿ ಮೂಡುತಿದೆ ಕಾಮನಬಿಲ್ಲು ಹೊಸರಾಗವ ಹಾಡುತ ಕುಣಿಯುತ್ತಿದೆ  ಜೋಡಿ ನವಿಲು ತುಂತುರು ಮಳೆಯಲಿ ನಮ್ಮಿಬ್ಬರ ಈ ಪ್ರೇಮಬಂಧ ಒಲವಿನ ಓಲೆಯಲಿ ನಿನಗಾಗಿ ಬರೆದೆ ಈ ಪ್ರೇಮಸಂದೇಶ ನಮ್ಮಿಬ್ಬರ ಮಿಲನದಾ ಈ ಶುಭಗಳಿಗೆಯಲಿ ಮೂಡಿದೆ ಕಾಮನಬಿಲ್ಲು ನಿನಗಾಗಿ ತಂದಿರುವೆ  ಈ ಚಂದದ ಕೆಂಗುಲಾಬಿಯ ನಲ್ಲೆ ಕೈಯಲ್ಲಿರುವ ಕೊಡೆ ಯ ಹಂಗು ನಮಗೇಕೆ  ಹೇಳು ನಲ್ಲೆ ನಲಿಯೋಣ ತುಂತುರು ಮಳೆಯಲಿ ಒಂದಾಗಿ ನಲ್ಲೆ ಬಾಳೊಂದು ಭಾವಗೀತೆ ಹಾಡೋಣ ಜತೆಯಾಗಿ ನಲ್ಲೆ ಒಲವೇ ಜೀವನ  ಅನುದಿನವೂ  ಬಾಳೋಣ ಬಿಗಿಯಪ್ಪುಗೆಯಲಿ ನಲ್ಲೆ ನಿನ್ನ ಪ್ರೇಮದುಸಿರಲ್ಲಿ ಒಂದಾಗುವಾಸೆ  ನನಗೆ ನಲ್ಲ ಪ್ರೇಮ ಮುದ್ರೆಯ ಒತ್ತಿ ಬಂಧನವ ಬಿಗಿ ಗೊಳಿಸು ನಲ್ಲ ಪಂಕಜಾ.ಕೆ.ಮುಡಿಪು

ಪರಿಸರವಾದಿ ಸಾಲು ಮರದ ತಿಮ್ಮಕ್ಕ

ನವಪರ್ವ ಬಳಗದ ಸ್ಪರ್ಧೆಗಾಗಿ ವಿಷಯ..ಸಾಲುಮರದ ತಿಮ್ಮಕ್ಕ ಪರಿಸರವಾದಿ ಮಕ್ಕಳಿಲ್ಲದ ನೋವ ಕಳೆಯಲು ನೆಟ್ಟು ಬೆಳೆಸಿದರಂದು ಗಿಡಗಳ ಪರಿಸರ ರಕ್ಷಣೆಗೆ ಕಂಕಣವ ತೊಟ್ಟು ಸಾಲು ಸಾಲು ಮರಗಳನು ನೆಟ್ಟು ಕಷ್ಟಗಳ ಕಡೆಗಣಿಸಿ ನಡೆದಾಕೆ ಹಲವು ಹತ್ತು ಪ್ರಶಸ್ತಿಗಳ ಪಡೆದಾಕೆ ಫಲಾಪೇಕ್ಷೆಯಿಲ್ಲದೆ  ನಿತ್ಯ ದುಡಿದಾಕೆ ಪ್ರಕೃತಿ ಮಾತೆಯ ಬೆಳೆಸಿ ಪೋಷಿಸಿದಾಕೆ ಅನಕ್ಷರಸ್ಥಳಾದರೂ ಪರಿಸರವಾದಿಯಾಗಿ ಪರಿಸರ ಕಾಳಜಿಯನೇ  ಮಂತ್ರವಾಗಿಸಿದಾಕೆ ಬಡತನದ ಬದುಕಿನಲೂ ವೃಕ್ಷ ಪ್ರೀತಿಯ ಬೆಳೆಸಿ ಕೊಂಡಾಕೆ ಸಾಲು ಮರದ ತಿಮ್ಮಕ್ಕನೆಂದೆ ಹೆಸರುವಾಸಿ ಯಾದಾಕೆ ಸಾಲು ಮರದ ತಿಮ್ಮಕ್ಕನ ಸಾಧನೆಯ ತಿಳಿಸುತ ರಸ್ತೆ ಇಕ್ಕೆಡೆಗಳಲೂ ತಲೆಯೆತ್ತಿ ನಿಂತಿದೆ ಮರಗಳು ಪರಿಸರ ಉಳಿಸುವ ಕಾರ್ಯಕ್ಕೆಸ್ಪೂರ್ತಿ ಈಕೆ ನಿಸ್ವಾರ್ಥ ಸೇವೆಯ ಜಗಕೆ ಸಾರಿದ ಮಾತೇ ಈಕೆಯ ಹಾದಿಯಲಿ ನಾವೆಲ್ಲ  ನಡೆಯೋಣ  ಮರಗಿಡ ಗಳ ಮನೆ ಸುತ್ತಲೂ ನೆಟ್ಟು ಬೆಳೆಸೋಣ ಮಳೆನೀರ ಇಂಗಿಸುತ ಪ್ರಕೃತಿಯನು ರಕ್ಷಿಸೋಣ ಪರಿಸರ ಸಂರಕ್ಷಣೆಯ ಮಾಡುತ ಮನುಕುಲ ಉಳಿಸೋಣ ಪಂಕಜಾ.ಕೆ ಮುಡಿಪು ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್

ಗಜಲ್ ನಿನ್ನ ನಂದು ಕಂಡಾಗ

ಗಜಲ್  (ಸ್ಪರ್ಧೆಗಾಗಿ) ನಿನ್ನನಂದು ಕಂಡಾಗ ಮನಸು ನವಿಲಂತೆ ಕುಣಿಯಿತು ನಲ್ಲ ಹೊಸಭಾವದಲೆಗಳಲಿ ತೇಲಿ ಮನ ನಲಿದಾಡಿತು ನಲ್ಲ ಕಣ್ಣೋಟದ ತುಂಟಾಟದ ಕಾಟಕೆ ನಾ ಸೋತೆ  ಅಂದು ಬಾಳ ತೇರನೆಳೆಯಲು  ನಿನ್ನೊಡನೆ ಸೇರುವಾಸೆ ಕಾಡಿತು ನಲ್ಲ ಬಾಳಿನ ಪುಟಗಳಲಿ ಒಲವ   ಓಲೆಯ ಬರೆದೆ ನೀನು ಉಕ್ಕಿ ಹರಿಯುವ  ಕಡಲಂತೆ  ಪ್ರಕ್ಷುಬ್ಧಗೊಂಡಿತು ನಲ್ಲ ಬೆಳದಿಂಗಳ ಬೆಳಕಿನಲಿ  ಮಿಂದೆದ್ದ ಭಾವ ತುಂಬಿದೆ ಮನದಲಿ ಗರಿಗೆದರಿದ ಹಕ್ಕಿಯಂತೆ  ನನ್ನೆದೆಯಲಿ ಉಲ್ಲಾಸ ಹಾಸ ತುಂಬಿತು ನಲ್ಲ ಪಂಕಜಾಕ್ಷಿಗೆ ನಿನ್ನೊಡನೆ ಕಲೆತು  ಅನುದಿನವೂ  ಮೈಮರೆವಾಸೆ ನಿನ್ನ ಒಡನಾಟದಲ್ಲಿ ಬಾಳು ಸುಗಂಧಸೂಸುವ ಹೂವಾಗಿತ್ತು ನಲ್ಲ ಪಂಕಜಾ.ಕೆ.ಮುಡಿಪು

ಮುತ್ತಿನಹಾರ ಕವನ ಕಾವ್ಯಕೂಟ

ಕಾವ್ಯಕೂಟ ಸ್ಪರ್ಧೆಗಾಗಿ ಮುತ್ತಿನ ಹಾರ  (ಚಿತ್ರಕ್ಕೊಂದು ಕವನ) ಇಬ್ಬನಿಯು ತಬ್ಬಿರುವ  ವನರಾಜಿಯ  ಹಸಿರ ಸಿರಿ ಭೂತಾಯಿ ಮಂಜಿನಲಿ  ಮಿಂದೆದ್ದ  ಸುಂದರಿ ಭೂರಮೆಯ ಸಿಂಗಾರಕೆ ವರುಣ ಕಳಿಸಿದ  ಮುತ್ತಿನಹಾರ ಇನಿಯನೊಲವಿನ ಒಡವೆ ಧರಣಿ ದೇವಿಯ ಕೊರಳ ಹಾರ ಅದ್ಭುತ ಕಲಾಕಾರನ ಜೋಡಣೆ ಪ್ರಕೃತಿ ನಿರ್ಮಿತ  ಸುಂದರ ಹಾರ ದವಳಾದ್ರಿಯ ಸೊಬಗು ಕಣ್ಣು ತುಂಬಿದೆ ಪ್ರಕೃತಿ ವಿಸ್ಮಯಕೆ ಮನ ಬೆರಗಾಗಿದೆ ಒಲವಿನೊಸಗೆಯು ತಂದಿದೆ ಅಮಲು ಇಮ್ಮಡಿಸಿದೆ ಇಳೆಯ ಸೌಂದರ್ಯ  ಬಾಂದಳದ ತುಂಬೆಲ್ಲ ಕಟ್ಟಿದ ತೋರಣ ಮನಸು ತುಂಬಾ ಕನಸುಗಳ ಹೂರಣ ಪಂಕಜಾ.ಕೆ.ಮುಡಿಪು

ಮುತ್ತಿನಹಾರ

ನವಪರ್ವ ಸ್ಪರ್ಧೆಗಾಗಿ   ಚಿತ್ರ ಹನಿಕವನ   ಮುತ್ತಿನ ಹಾರ ಅದ್ಭುತ ಕಲಾಕಾರನ ಜೋಡಣೆ ಪ್ರಕೃತಿ ನಿರ್ಮಿತ ಸುಂದರ ಹಾರ ಭೂರಮೆಯ ಶೃಂಗಾರಕೆ ವರುಣನೊಲವಿನ ಮುತ್ತಿನ ಹಾರ ಸೃಷ್ಟಿಯ ವೈಚಿತ್ರವ ಕಂಡು ಬೆರಗಾಗಿದೆ ನನ್ನೀ ಮನ ಪಂಕಜಾ.ಕೆ.ಮುಡಿಪು

ಭೂರಮೆಯ ಚೆಲುವು ಕವಿತಾಗೋಷ್ಠಿ

ವಾಹಿನಿ ಕಲಾ ಸಂಘ 5..7.2020 .ರ ಕವಿತಾ ಗೋಷ್ಟಿಗಾಗಿ ಭೂರಮೆಯ ಚೆಲುವು  ನಳನಳಿಸಿ ನಲಿಯುತಿದೆ ಭೂತಾಯಿ ಒಡಲು ಕಂಗು ತೆಂಗುಗಳಿಂದ  ತುಂಬಿದೆ ಬಯಲು ಹಸಿರು ಹೊದಿಕೆಯ ಹಾಸಿ ನಲಿಯುತಿದೆ ಪ್ರಕೃತಿ ಮಾನವನ ದುರಾಶೆಗೆ ಆಗದಿರಲಿ ಅದು ವಿಕೃತಿ ಮಳೆ ಬಂದು ತಂಪಾಗಿ ರೈತನ ಮೊಗದಲಿ ನಲಿವು ಹೊಲದ ತುಂಬಾ ಪಚ್ಚೆತೆನೆ ಬರಲು ಗೆಲುವು ಉತ್ತು ಬಿತ್ತಿ  ಹಸಿರನ್ನು ತುಂಬಿಸಿದ ಇಳೆಯಲಿ ಶುಕ ಪಿಕಗಳು ಹಾಡಿ ನಲಿಯುತಿದೆ ಹಸಿರಲಿ ಹಸಿರ ಹೊದಿಕೆಯಲಿ ಭೂರಮೆಯ ಶೃಂಗಾರ ಅರಳಿರುವ ಹೂಗಳ  ಮಾಲೆಯದೆ ಅಲಂಕಾರ ಎಲ್ಲೆಲ್ಲೂ ಹಚ್ಚ ಹಸಿರಿನ ಸಿರಿ ಮೈತುಂಬಿ ನಿಂತಿದೆ ಭುವನ ಸುಂದರಿಯನ್ನೂ ಮೀರಿಸುವಂತಿದೆ ಬಣ್ಣಬಣ್ಣದ ಹೂಗಳ ಚೆಲುವು ಕಣ್ಣು ತುಂಬಿದೆ ಮೈ ಮನಸು  ಹಸಿರಲಿ ನಲಿದು ಮಗುವಾಗಿದೆ ಮಧುಹೀರಲು ಬರುತಿರುವ ದುಂಬಿಗಳ ದಂಡು ಕವಿ ಮನವು ಗುನುಗುತಿದೆ ಕವಿತೆಯ  ತುಂಡು ಭೂರಮೆಯ ತುಂಬೆಲ್ಲ ಹಾಸಿದೆ ಹಸಿರ ಸೆರಗು ವಸುಂಧರೆಯ ಒಡಲೆಲ್ಲಾ ಹೂಗಳ ಮೆರುಗು ಕಣ್ಣು ತುಂಬುತಿದೆ ಪ್ರಕೃತಿಯ  ಈ ಚೆಲುವು ವರುಣನ ಒಲವ ಮಳೆಯಲಿ ಪ್ರಕೃತಿಯ ಗೆಲುವು ಪಂಕಜಾ.ಕೆ.ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಸಿನೆಮಾಕ್ಕಾಗಿ duet ಸಾಂಗ್

ಸಿನೇಮಕ್ಕಾಗಿ ಹಾಡು  2. Duet  ಗಂಡು..ನಿನ್ನ ನೋಡಿ ನನಗೆ ಆಸೆ ಹೆಚ್ಗಾಗಿದೆ ಹೆಣ್ಣು      ಓಹೋ ..ಹೋ . ಮನಸು ಹುಚ್ಚಾಗಿದೆ ಗಂಡು. ನಾ ತಾಳೆಲಾರೆ ಈ ಬೇಗೆಯ ಮೈ ಮನಸು ಆಸೆಯ ಕಡಲಾಗಿದೆ ಹೆಣ್ಣು..ಆಹಾಹಾ ಆಹಾಹಾ ನನ್ನ ಮನಸು ನಿನ್ನಲ್ಲೇ ನೆಟ್ಟಿದೆ ಒಲವಾಗಿದೆ ನಿನ್ನ ಮೇಲೆ ಒಲವಾಗಿದೆ ಗಂಡು..ನಿನ್ನಂಡಕೆ ನಾ. ಸೋತೆನು. ನಿನ್ನ ಕುಡಿನೋಟಕೆ ಮನಸೋತೆನು ಹೆಣ್ಣು..ಓಹೋಹೋ ಯಾವೂರ ಗಂಡು ನೀನು ಕಣ್ಣೋಟದೆ ಕಾಡುವೆಯೇನು ಮನಸು ಹುಚ್ಚಾಗಿದೆ  ನನ್ನ ಮನಸು ಹುಚ್ಚಾಗಿದೆ ಗಂಡು ..ನನ್ನ ಮೈಯೆಲ್ಲ ಬಿಸಿಯಾಗಿದೆ ಕನಸು ಕಾಡಿ ನಿನ್ನ ಮೇಲೆ ಒಲವಾಗಿದೆ ಗಂಡು .ಹೆಣ್ಣು..ನಾವಿಬ್ಬರೊಂದಾಗುವ ಈ ಭೂಮಿ ಈ ಬಾನು ನಮದಾಗಿದೆ ಚಂದಿರನು ಮರೆಯಾಗಿ ಈ ರಾತ್ರಿ ನಮದಾಗಿದೆ  ಒಲವೆಲ್ಲಾ  ನಮದಾಗಿದೆ ಪಂಕಜಾರಾಮಭಟ್ ಕಬ್ಬಿನಹಿತ್ಲು

ಸಿನೇಮಕ್ಕಾಗಿ ಪ್ರೇಮ ಕವನ one way love

ಸಿನೇಮಕ್ಕಾಗಿ ಹಾಡುಗಳು 1    ಒಲವಾಗಿದೆ ನನಗೆ / ನಿನ್ನ ಮೇಲೆ ಮನಸಾಗಿದೆ ಹೇಳಲಿ ಹೇಗೆ ನಾ  ತಿಳಿಯೇ ಓ ಚೆಲುವೆ ನೂರೊಂದು ಆಸೆ  ಮನವ  ಕಾಡಿದೆ ಈ ಉರಿಯ ನಾ ತಾಳೆನು/ ಒಲವಾಗಿದೆ / ನಿನ್ನ ಕಂಡ ಕ್ಷಣವೇ  ಮನ ಸೋತಿದೆ ನಿನ್ನ ಆ ಕುಡಿ ನೋಟ  ನನ್ನೆದೆಯ ಸೀಳಿದೆ ದುಂಬಿ ಹೂವ ಜೇನ  ಸವಿಯುವಂತೆ ನಿನ್ನ ಒಲವ ಸವಿಯಬೇಕೆನಿಸಿದೆ/ಒಲವಾಗಿದೆ/ ನಿನ್ನ  ನೆನಪಿನ ದೋಣಿಯಲಿ ತೇಲಿ ತೇಲಿ ನಾ ಮೈ ಮರೆತೆ ನಿನ್ನ ಆ ತುಂಟಾಟಕೆ ನಿನ್ನ ಒಂದೊಂದು ಭಂಗಿಯೂ ಮನಸೆಳೆದಿದೆ ಕಣ ಕಣ ದಲೂ ನೀನೇ ತುಂಬಿರುವೆ /ಒಲವಾಗಿದೆ/ ಪಂಕಜಾ.ರಾಮಭಟ್ ಕಬ್ಬಿನಹಿತ್ಲು

ಸಂಸಾರದಲ್ಲಿ ಹಾಸ್ಯ ಕವನ

ಹಾಸ್ಯ ಚಿತ್ರಕವನ ಸ್ಪರ್ಧೆಗಾಗಿ   ಸಂಸಾರದಲ್ಲಿ ಹಾಸ್ಯ    ಶೀರ್ಷಿಕೆ.  .ತ್ರಿಶಂಕು ಮೂರುಗಂಟು ಹಾಕಿ ನಿನ್ನ ಕಟ್ಟಿಕೊಂಡೆನಲ್ಲೇ ತಾಟಗಿತ್ತಿಯಂತೆ ನೀನು ಯಾಕೆ ಇರುವೆ ನಲ್ಲೆ ಸೆರಗು ಕಟ್ಟಿ ಸೌಟು ಹಿಡಿದು ನೀನು ಹೀಗೆ ನಿಂತರೆ ನನ್ನ ಎದೆ ಏಕೋ ಏನೋ ನಿಲ್ಲಬಹುದು ಈಗಲೇ ಕೋಪ ಬಿಟ್ಟು ಪ್ರೀತಿ ಮಾಡು ನನ್ನ ಒಲವೇ ನೀನೇ ಬೇರೆಯಾರು ನನಗೆ ಇಲ್ಲ ನಿನ್ನ ಮೇಲಾಣೆ ಗಡಿಗೆಯಂತ ನಿನ್ನ ಮುಖವು ಆ ಮೆಳ್ಳೆಗಣ್ಣು ಭಯವೂ ನನ್ನ ಮುತ್ತಿಕೊಂಡು ಬಿದ್ದುಬಿಡುವೆ ನಿಲ್ಲೆ ಕೈಯಲ್ಲೊಂದು ಸೌಟು ಹಿಡಿದು ನೀನು ಬಂದು ಬಿಟ್ಟರೆ ನನ್ನ ಜೀವ ಹಾರಿ ಹೋಗಿ   ತ್ರಿಶಂಕು ಸ್ಥಿತಿಯಾಗಿದೆ ಕೋಪ ಬಿಟ್ಟು ಒಮ್ಮೆ ನೀನು ನಕ್ಕು ಬಿಟ್ಟೆಯಾದರೆ ನಿನ್ನ ಆಜ್ಞೆಯನ್ನು ನಾನು  ತಲೆಯಲ್ಲಿ ಹೊತ್ತು ಮಾಡುವೆ ಪಂಕಜಾ.ಕೆ.ಮುಡಿಪು

ಜಡೇಕವನ ಅನುಮಾನದ ಸುಳಿ

ಜಡೆ ಕವನ ಅನುಮಾನದ ಸುಳಿವು ಬಾರದಿರಲಿ ಒಲವಿನಲಿ ಒಲವಿನಲಿ  ನಗುತ  ಸಾಗುತಿರಲಿ  ನಮ್ಮ ಜೀವನ ಜೀವನವು   ಸಂತಸ ತುಂಬಿದ ಸ್ನೇಹದ ಒರತೆ ಒರತೆಯಲಿ ಬತ್ತದೆ ಹರಿಯಲಿ ಪ್ರೀತಿಯ ಝರಿ ಝರಿಯ ನೀರಲಿ ಆಡುತ ಕುಣಿಯುವ ಆಸೆ ಆಸೆಗಳು ನೂರಾರು ಮನವ ಕಾಡುತಿದೆ ಕಾಡುವ ನಿನ್ನ ನೆನಪಿನಲಿ ನೋಯುತಿದೆ ಮನ ಮನಸಿನಲಿ ಅನುದಿನವೂ ನಿನ್ನದೇ ಧ್ಯಾನ ಧ್ಯಾನದಿಂದ ಮನವು ನೆಮ್ಮದಿಯ ಕಾಣುವುದು ಕಾಣುವ  ಕಣ್ಣಲ್ಲಿ  ಕಾತರವು  ತುಂಬಿದೆ ತುಂಬಿದ  ಒಡಲಲ್ಲಿ ಅನುರಾಗದ  ಓಲೆ ಓಲೆಯ ಬರೆಯುತ  ಕುಳಿತಿರುವೆ ನಲ್ಲೆ ನಲ್ಲೆ ನಮ್ಮಿಬ್ಬರ ಪ್ರೀತಿಗೆ ಇರದಿರಲಿ ಎಲ್ಲೆ ಎಲ್ಲೇ ಇರು ನೀನು ಎಂದೆಂದೂ ಸುಖವಾಗಿರು ಸುಖವಾಗಿ ನಗುನಗುತ ನನ್ನ ಮನೆ ತುಂಬಿರು ತುಂಬಿರುವ ಎದೆಯಲ್ಲಿ ಏಕೆ ಅನುಮಾನದ ಸುಳಿ ಪಂಕಜಾ.ಕೆ.ಮುಡಿಪು

ಹನಿ ಹನಿ ಇಬ್ಬನಿ ಸಮಾಧಾನಕರ ಬಹುಮಾನ ಚಿತ್ರಕವನ ಹಸಿವು

ಹನಿ ಹನಿ ಇಬ್ಬನಿ ಚಿತ್ರ ಕವನ ಸ್ಪರ್ಧೆಗಾಗಿ ಹಸಿವು ಒಂಟಿ ಕೋತಿಯು ಕುಳಿತುಕೊಂಡಿದೆ ಮರದ ಕೊಂಬೆಯ ಕೆಳಗಡೆ ಅರಳು ಕಂಗಳು ಹುಡುಕುತಿರುವುದು ತಿನ್ನಲೇನಿದೆ ಎನ್ನುತ ಮನುಜನ ಸ್ವಾರ್ಥಕೆ ಕಾಡಮರಗಳು ಅಳಿದಿದೆ ಹೇಗೆ ಬದುಕಲಿ  ತಿಳಿಯದಾಗಿದೆ ಕೋತಿಗೆ ಹಸಿವೆ ತಣಿಸಲು ದಾರಿ ಹುಡುಕುತ ಎಲೆಯ ತಿನ್ನುತ ಕುಳಿತಿದೆ ಕಣ್ಣು ಪಿಳಿ ಪಿಳಿ ಕಸುವು ಕಳೆದಿದೆ ಜತೆಗಾರರಿಲ್ಲದ ನೋವಲಿ ಒಂಟಿ ಪಯಣವು ಸಾಗುತ್ತಿರುವುದು ಚಿಂತೆ ಬೇಸರ ಮನದಲಿ ತುಂಬಿದೆ ಪಂಕಜಾ.ಕೆ. ಮುಡಿಪು

ಕಾವ್ಯಾಕುಟ ದಲ್ಲಿ ಉತ್ತಮ ನ್ಯಾನೊಕಥೆ ಭ್ರಮನಿರಸನ

ಕಾವ್ಯಕೂಟ ಸ್ಪರ್ಧೆಲಿ ಉತ್ತಮ ಹೇಳಿ ಆಯ್ಕೆ ಆದ ಎನ್ನ  ನ್ಯಾನೊ ಕಥೆ ದತ್ತ ಪದ... ಅಳಲು ಭ್ರಮನಿರಸನ ಪ್ರಾಣ  ಸ್ನೇಹಿತೆಯೆಂದು ನಂಬಿ ರಮ್ಯಳಲ್ಲಿ ತನ್ನ ಮನದ ಅಳಲನ್ನು ತೋಡಿಕೊಂಡು ಸ್ವಲ್ಪ ಸಮಾಧಾನಗೊಂಡಿದ್ದ ನೀರಜಾಳಿಗೆ ರಮ್ಯಾ ತನ್ನ ಹಿಂದಿನಿಂದ  ತಾನು ಹೇಳಿದ್ದಕ್ಕೆ ಒಂದಕ್ಕೆರಡು ಸೇರಿಸಿ ತನ್ನನ್ನು ಗೇಲಿ ಮಾಡಿ ನಗುತ್ತಿರುವುದು ತಿಳಿದಾಗ ಭ್ರಮನಿರಸನವಾಯಿತು ಪಂಕಜಾ.ಕೆ. ಮುಡಿಪು

ನ್ಯಾನೊ ಕಥೆ ಪ್ರಾಮಾಣಿಕತೆಯ ಫಲ

ಪ್ರಾಮಾಣಿಕತೆಯ ಫಲ (ನ್ಯಾನೊ ಕಥೆ) ಒಂದು ಊರಿನಲ್ಲಿ ಗೋವಿಂದನೆಂಬ  ಬಾಲಕನಿದ್ದನು.ಅವನು ತುಂಬಾ ಬಡವನಾಗಿದ್ದ, ತನ್ನ ಬಡತನದಿಂದ ಬೇಸತ್ತು ಹೇಗಾದರೂ ಮಾಡಿ ತಾನು ಹಣಗಳಸಿ ಶ್ರೀಮಂತನಾಗಬೇಕು ಎಂದು ಯೋಚಿಸಿದ ಬೇರೆ ಊರಿನಲ್ಲಿ ಏನಾದರೂ ಕೆಲಸ ಮಾಡಿ ಜೀವಿಸೋಣವೆಂದು   ಅಲೋಚಿಸಿ ಹೊರಟ ಅವನ ಕಿಸೆಯಲ್ಲಿ ಕೇವಲ 10 ರೂಪಾಯಿ ಮಾತ್ರವಿತ್ತು.ಆ ಊರು ಸೇರಿದ  ಮೊದಲ ದಿನ ಆತ ಆ ಹಣದಲ್ಲಿ ಹೊಟ್ಟೆ ತುಂಬಿಸಿದ.ಮರುದಿನದಿಂದ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ,ತನ್ನ ಜತೆ ಕೆಲಸಮಾಡುವವರ ಜತೆ ಸ್ನೇಹದಿಂದಿದ್ದು ಪ್ರಾಮಾಣಿಕತೆಯಿಂದ ನಿಷ್ಠೆ ಯಿಂದ  ದುಡಿಯುತ್ತಾ ಮಾಲೀಕರ ಮೆಚ್ಚುಗೆಯನ್ನು ಸಂಪಾದಿಸಿದ.ಆತನ ಪ್ರಾಮಾಣಿಕತೆಯನ್ನು ನೆಚ್ಚಿ ಮಾಲೀಕ ಆತನಿಗೆ ಕೈ ತುಂಬಾ ಹಣ ಕೊಡುತ್ತಿದ್ದ ಆತ ಮಿತವ್ಯಯದಿಂದ ಜೀವನ ಸಾಗಿಸುತ್ತ ಹಣ ಉಳಿತಾಯ ಮಾಡುತ್ತಾ ಬಂದ .ಒಂದು ದಿನ ಗೋವಿಂದನಿಗೆ ಎಷ್ಟು  ದಿನ  ಬೇರೆಯವರ ಕೈ ಕೆಳಗೆ ದುಡಿಯುವುದು  ತಾನೇ ಒಂದು ಸ್ವಂತ ಕೆಲಸ ಮಾಡಿದರೆ ಹೇಗೆ ಎನ್ನುವ ಯೋಚನೆ ಬಂತು.  ಆತ ತನ್ನ ಉಳಿತಾಯದ ಹಣದಿಂದ ಚಿಕ್ಕದಾಗಿ ಅಂಗಡಿಯಿಟ್ಟು , ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾ ಪ್ರಾಮಾಣಿಕತೆಯಿಂದ ಯಾರಿಗೂ ಮೊಸಮಾಡದೆ ಅತಿಯಾಸೆ ಪಡದೆ ತನ್ನಲ್ಲಿದ್ದ ಸಾಮಾನುಗಳನ್ನು ಹೆಚ್ಚು ಬೆಲೆಗೆ ಮಾರದೆ  ಜೀವಿಸುತ್ತಿದ್ದ.ಈ ರೀತಿ ದಿ ಆ ಕಳೆಯುತ್ತಿರಲು ಆತನ ವ್ಯಾಪಾರವು ದಿನದಿಂದ ದಿನಕ್ಕೆ ಅಭಿವೃದ್ಧಿಯಾಯಿತು ಆತ ತಾನು ಬಾಡಿಗೆಗೆ ಇದ್ದ ಕಟ್ಟಡವನ್ನು ಕೊಂಡುಕೊಂಡು

ಒಲವ ಪಯಣ ಭಾವಗೀತೆ ಕಾವ್ಯ ಕೂಟ ದಲ್ಲಿ ಮೆಚ್ಚುಗೆ

ಕಾವ್ಯಕೂಟ  ಸ್ಪರ್ಧೆಗಾಗಿ ಒಲವ ಪಯಣ (ಭಾವಗೀತೆ) ಬಾಳ ಪಯಣದ ದಾರಿಯಲಿ ಹೂವ ತೇರನು ಏರಿ ಬಂದೆ ನಾ ನಡೆವ ದಾರಿಯಲೆಲ್ಲಾ ಹೂವ ಹಾಸಿಗೆ ಹಾಸಿದೆಯಲ್ಲಾ ಎನಿತು ಸುಖವಿದೆ ಯಲ್ಲ ನಿನ್ನ ಜತೆಯಲಿರಲು ನಲ್ಲ ಹರಸಿ ಹಾರೈಸಿದರಂದು ಬಂಧು ಬಾಂಧವರು ನಿಂದು ಬಾರದಿರಲಿ  ಅಪಸ್ವರ ಇರಲಿ  ನಮ್ಮಲಿ ಎಚ್ಚರ ಕಷ್ಟ ಸುಖಗಳಿಗೆ ಜತೆಯಾಗೋಣ ಒಲವ  ದೋಣಿಯಲಿ ಸಾಗೋಣ ತುಂಬಿ ಹರಿವ ತೊರೆಯಂತೆ ಜೀವನ ಬಾಳು ಸಾಗಿದರೆ ಜೀವ ಪಾವನ ಒಲವರಸ ಚಿಮ್ಮುತ್ತಿರಲಿ ಅನುದಿನ ಹೊಸತನವು ತುಂಬಲಿ ಕ್ಷಣ ಕ್ಷಣ ಪಂಕಜಾ .ಕೆ. ಮುಡಿಪು

ಕವಿ ಸಾಹಿತಿಗಳ ಜೀವಾಳ ಭಕ್ತಿಗೀತೆ

ಸ್ಪರ್ಧೆಗಾಗಿ ವಿದ್ಯಾಧಿದೇವತೆ ವರದ ಶಾರದೆ  ಕರುಣಿಸೆಮ್ಮನು ನಿರುತ ನಿನ್ನನು ಭಜಿಸುವೆ ಚರಣ ಕಮಲಕೆ ಎರಗಿ ಸ್ತುತಿಸುವೆ ಹರಸು ಎನ್ನನು ದೇವಿಯೇ ಮನದ ಕಲ್ಮಷ ಕಳೆದು ಬೇಡುವೆ ಪುಪ್ಪಾಂಜಲಿಯನರ್ಪಿಸಿ ವರದ ಹಸ್ತವ ಶಿರದ ಲಿರಿಸಿ ಕರುಣಿಸೆನಗೆ ಸನ್ಮತಿಯನು ದೀಪಾರಾಧನೆ ಮಾಡಿ ಕರವಮುಗಿದು ಬೇಡುವೆ ಕಾವ್ಯದೀಪವ ಬೆಳಗು ಮನದಲಿ ತಾಯಿಯೇ ಪಂಕಜಾ.ಕೆ ಮುಡಿಪು

ಕಾವ್ಯಾಕುಟದಲ್ಲಿ ಉತ್ತಮ ಗಜಲ್ ನಮನ

ಕಾವ್ಯಾ ಕೂಟ ಸ್ಪರ್ಧೆಗಾಗಿ ಕೊಟ್ಟ ಪದ   ..ರದೀಪ್ ನಮನ ಗಜಲ್  ಹೊತ್ತು ಹೆತ್ತು ಸಾಕಿ ಸಲಹಿದ  ಮಾತೆಗೆ  ನಮನ ವಿದ್ಯೆ ಬುದ್ದಿಗಳ ಕಲಿಸಿ ಪೊರೆದ ಪಿತನಿಗೆ ನಮನ ಅರಿವಿನ ಜ್ಯೋತಿಯನು ಬೆಳಗಿಸಿದವರನು ಮರೆಯುವುದುಂಟೆ ಬದುಕಿನ ದಾರಿಯ ತೋರಿಸಿದ ಗುರುವಿಗೆ ನಮನ ಊಟ ತಿಂಡಿಯ ಪರಿವೆಯಿಲ್ಲದೆ ದೇಶಕಾಯುವ ಧೀರರಲ್ಲವೇ  ಇವರು ನಿಸ್ವಾರ್ಥ ಸೇವೆಯ ಮಾಡುವ ವೀರ ಯೋಧರಿಗೆ ನಮನ ಶುದ್ಧ ಗಾಳಿ ನೀರನ್ನು ಕೊಟ್ಟಿರುವ  ಭೂಮಾತೆಗೆ ಕೃತಜ್ಞರಾಗಿರಬೇಡವೆ ವಸುಂಧರೆಯ  ಈ  ಒಲವಿನ  ಕೊಡುಗೆಗೆ ನಮನ ಕಾಲಕಾಲಕ್ಕೆ ಮಳೆ ಇಲ್ಲದಿದ್ದರೆ ಆದೀತೇ ಮೋಡಗಳ ಕಟ್ಟಿ  ನೀರಧಾರೆ ಸುರಿಸಿದ ವರುಣನಿಗೆ ನಮನ ಸೂರ್ಯ ಚಂದ್ರರಿಲ್ಲದೆ ಇದ್ದರೆ ಏನಿದೆ ಸೊಗಸು ಜಗದಲಿ ನಿತ್ಯವೂ ತನ್ನ ಕೆಲಸ ಮಾಡುವ ಜಗದೊಡೆಯನಿಗೆ ನಮನ ಅನ್ನ ಆಹಾರವಿಲ್ಲದೆ ಬದುಕಲು ಸಾಧ್ಯವೇ ಹೇಳು ಪಂಕಜಾ ಹೊಲದಲ್ಲಿ ಉತ್ತು ಬಿತ್ತಿ  ಬೆಳೆಯುವ ಅನ್ನದಾತನಿಗೆ ನಮನ ಪಂಕಜಾ .ಕೆ. ಮುಡಿಪು

ಪ್ರಕೃತಿ ಹರಣ ಸ್ನೇಹ ಸಂಗಮ

ಸ್ನೇಹ ಸಂಗಮ ಸ್ಪರ್ಧೆಗಾಗಿ ಪ್ರಕೃತಿ ಹರಣ ಗಿಡ ಮರಗಳ ಕಡಿದೊಗೆದು ಪ್ರಕೃತಿ ಹರಣವ ಮಾಡಿ ನಲಿದು ಅಟ್ಟಹಾಸದಿ ಮೆರೆದಾಡಿದ  ಫಲವೇ ಕಂಡ ಕಂಡಲ್ಲಿ ಎಸೆದ ಕಸದ ತ್ಯಾಜ್ಯ ಎಲ್ಲೆಂದರಲ್ಲಿ ಉಗುಳುವ ದುರಾಭ್ಯಾಸ ಆಪತ್ತನ್ನು  ಮೈ ಮೇಲೆ ಏರಿಸಿಕೊಂಡನೆ ಮನುಜ ಗಿರಿಕಂದರಗಳೆಲ್ಲವನು ಮುಟ್ಟಿ ತಟ್ಟಿ ಕಾಂಕ್ರೀಟ್ ಕಾಡುಗಳ ಕಟ್ಟಿ ಮೆರೆದು ದುರಾಸೆಗೆ ಬಲಿಯಾದ ಮಾನವನೀಗ ಬಂಧಿ ಕೊರೊನಾ ಮಹಾಮಾರಿಯ ಧಾಳಿಗೆ ಬೆಚ್ಚಿ ಬೆರಗಾಗುತ ದಾರಿಕಾಣದ ಪರಿಸ್ಥಿತಿ ಮನೆಯಲ್ಲೇ ನಾಲ್ಕು ಗೋಡೆಯ ಮದ್ಯೆ ಬಂದಿಯಾಗುವ ಸ್ಥಿತಿ ಮಾನವನ ದುರಾಸೆಗೆ  ಮುನಿದಳೆ ಪ್ರಕೃತಿ ಆಗುತ್ತಿದೆ ಮನುಜರ ಮಾರಣಹೋಮ ದಾರಿಕಾಣದೆ  ದೇವ ದೇವನಿಗೆ ಶರಣಾಗುವುದೇ ನೆಮ್ಮದಿ ಪಂಕಜಾ .ಕೆ.ಮುಡಿಪು

ನವಪರ್ವದಲ್ಲಿ ಮೆಚ್ಚುಗೆ ಪರಿಸರವಾದಿ ಸಾಲು ಮರದ ತಿಮ್ಮಕ್ಕ

ನವಪರ್ವ ಬಳಗದ ಸ್ಪರ್ಧೆಗಾಗಿ ವಿಷಯ..ಸಾಲುಮರದ ತಿಮ್ಮಕ್ಕ   ಪರಿಸರವಾದಿ ಮಕ್ಕಳಿಲ್ಲದ ನೋವ ಕಳೆಯಲು ನೆಟ್ಟು ಬೆಳೆಸಿದರಂದು ಗಿಡಗಳ ಪರಿಸರ ರಕ್ಷಣೆಗೆ ಕಂಕಣವ ತೊಟ್ಟು ಸಾಲು ಸಾಲು ಮರಗಳನು ನೆಟ್ಟು ಕಷ್ಟಗಳ ಕಡೆಗಣಿಸಿ ನಡೆದಾಕೆ ಹಲವು ಹತ್ತು ಪ್ರಶಸ್ತಿಗಳ ಪಡೆದಾಕೆ ಫಲಾಪೇಕ್ಷೆಯಿಲ್ಲದೆ  ನಿತ್ಯ ದುಡಿದಾಕೆ ಪ್ರಕೃತಿ ಮಾತೆಯ ಬೆಳೆಸಿ ಪೋಷಿಸಿದಾಕೆ ಅನಕ್ಷರಸ್ಥಳಾದರೂ ಪರಿಸರವಾದಿಯಾಗಿ ಪರಿಸರ ಕಾಳಜಿಯನೇ  ಮಂತ್ರವಾಗಿಸಿದಾಕೆ ಬಡತನದ ಬದುಕಿನಲೂ ವೃಕ್ಷ ಪ್ರೀತಿಯ ಬೆಳೆಸಿ ಕೊಂಡಾಕೆ ಸಾಲು ಮರದ ತಿಮ್ಮಕ್ಕನೆಂದೆ ಹೆಸರುವಾಸಿ ಯಾದಾಕೆ ಸಾಲು ಮರದ ತಿಮ್ಮಕ್ಕನ ಸಾಧನೆಯ ತಿಳಿಸುತ ರಸ್ತೆ ಇಕ್ಕೆಡೆಗಳಲೂ ತಲೆಯೆತ್ತಿ ನಿಂತಿದೆ ಮರಗಳು ಪರಿಸರ ಉಳಿಸುವ ಕಾರ್ಯಕ್ಕೆಸ್ಪೂರ್ತಿ ಈಕೆ ನಿಸ್ವಾರ್ಥ ಸೇವೆಯ ಜಗಕೆ ಸಾರಿದ ಮಾತೇ ಈಕೆಯ ಹಾದಿಯಲಿ ನಾವೆಲ್ಲ  ನಡೆಯೋಣ  ಮರಗಿಡ ಗಳ ಮನೆ ಸುತ್ತಲೂ ನೆಟ್ಟು ಬೆಳೆಸೋಣ ಮಳೆನೀರ ಇಂಗಿಸುತ ಪ್ರಕೃತಿಯನು ರಕ್ಷಿಸೋಣ ಪರಿಸರ ಸಂರಕ್ಷಣೆಯ ಮಾಡುತ ಮನುಕುಲ ಉಳಿಸೋಣ ಪಂಕಜಾ.ಕೆ ಮುಡಿಪು ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್

ನನ್ನಿಷ್ಟದ ಪೌರಣಿಕ ಸ್ತ್ರೀ ಪಾತ್ರ

 ಸ್ನೇಹ ಸಂಗಮ ಸ್ಪರ್ಧೆಗಾಗಿ   ನನಗಿಷ್ಟವಾದ ಪುರಾಣದ  ಸ್ತ್ರೀಪಾತ್ರ ಸಾವಿತ್ರಿ ರಾಜಕುಮಾರಿಯಾಗಿದ್ದು,ಸಕಲ ರಾಜ ವೈಭವವನ್ನು ಅನುಭವಿಸುವ ಅವಕಾಶವಿದ್ದಾಗಲೂ,ತನ್ನ ರಾಜ್ಯವನ್ನು ಕಳೆದುಕೊಂಡು ಅರಣ್ಯವಾಸಿಯಾಗಿದ್ದ ಸತ್ಯವಾನನನ್ನು ಮೆಚ್ಚಿದ ಸಾವಿತ್ರಿಯ ಪಾತ್ರ ನನಗೆ ತುಂಬಾ ಮೆಚ್ಚುಗೆಯಾಗಿದೆ              ಮುದ್ರದೇಶದ ಅಶ್ವಪತಿ ಯ ಮಗಳಾದ ಸಾವಿತ್ರಿಯೂ ತಂದೆಯ ಅಣತಿಯಂತೆ  ತನ್ನ ಪತಿಯಾಗುವವನನ್ನು ಹುಡುಕಲು ಹೊರತು ಕಾಡಿನಲ್ಲಿದ್ದ ಸತ್ಯವಾನನನ್ನು  ಮೆಚ್ಚಿಕೊಂಡು ಆತ ಅಲ್ಪಾಯುಷಿ ಎಂದು ತಿಳಿದರೂ ಒಮ್ಮೆ ಮನಸ್ಸಿನಲ್ಲಿ ವರಿಸಿಬಿಟ್ಟ ಆತನನ್ನೇ  ಮದುವೆಯಾಗುವುದಾಗಿ ಹಠ ಹಿಡಿದು, ಮದುವೆಯಾದ ಮೇಲೆ ತನ್ನ ಪತಿಗಿಲ್ಲದ ರಾಜೋಚಿತ ಉಡುಪು ತನಗೂ ಬೇಡವೆಂದು ಎಲ್ಲವನ್ನೂ ತ್ಯಜಿಸಿ,ಅರಣ್ಯವಾಸಕ್ಕೆ ಹೊರಟು ಕಾಡಿನಲ್ಲಿ ವೃದ್ಧ ಅತ್ತೆ ಮಾವಂದಿರ ಗಂಡನ ಸೇವೆಯನ್ನು ಶ್ರದ್ಧೆ ಭಕ್ತಿಗಳಿಂದ ಮಾಡುತ್ತಿದ್ದು ಪತಿವ್ರತಾ ಶಿರೋಮಣಿ ಎಂದು ಹೆಸರು ಪಡೆದು ಪ್ರಾಥ ಸ್ಮರಣೀಯಾಳಾಗಿದ್ದಾಳೆ.                 ತನ್ನ ಗಂಡನ ಆಯುಷ್ಯವೃದ್ಧಿಗಾಗಿ ತ್ರಿರಾತ್ರ ಎಂಬ ಮಹಾವ್ರತವನ್ನು ಕೈಕೊಂಡು ಆತನ ಸಾವು ಸಮೀಪಿಸಿರುವುದನ್ನು ಕಂಡು ಆತನ ಜತೆ ತಾನೂ ಕಾಡಿಗೆ ಹೋಗಿ ಅಲ್ಲಿ ಆತನು ತಲೆತಿರುಗಿ ಬಿದ್ದಾಗ ದೃತಿಗೆಡದೆ ಅವನ ಪ್ರಾಣ ಒಯ್ಯಲು ಬಂದ ಯಮಧರ್ಮ ರಾಯ ನನ್ನು ಯಮಲೋಕದವರೆಗೂ ಹಿಂಬಾಲಿಸಿ,  ತನ್ನ ಚತುರೋಕ್ತಿಗಳಿಂದ ಮೆಚ್ಚಿಸಿ ತನ್ನ ಗಂಡನ ಆಯುಷ್ಯವನ್ನು ಮಾತ್ರವಲ್ಲದೆ  ತನ್ನ ಅ

ವಚನ ಕಾವ್ಯ ಕೂಟದಲ್ಲಿ ತೃತೀಯ

ಕಾವ್ಯಕೂಟ ಸ್ಪರ್ಧೆಗಾಗಿ ವಚನ ಆಡಿದಾ ಮಾತುಗಳು ಬಿಟ್ಟ ಬಾಣಗಳು  ಮರಳಿ ಬಾರದಯ್ಯ ಮಾತಗಳನು ಅವಲೋಕಿಸುತ  ನುಡಿದರೆ  ಲೋಕವನು  ಗೆಲ್ಲಬಹುದೆಂದ ಪಂಕಜಾರಾಮ    ಪಂಕಜಾ.ಕೆ.ಮುಡಿಪು

ಹಾಸ್ಯ ಹನಿಕವನ ಕಾವ್ಯ ಮೈತ್ರಿ

ಮೈತ್ರಿ ಸ್ಪರ್ಧೆಗಾಗಿ    ಸುಂದರಿ  (ಹಾಸ್ಯ ಹನಿಕವನ)   ಮಾಲಿನಲ್ಲಿ ಭೇಟಿಯಾದ ಸುಂದರಿ ಸಿದ್ದನ ಮೈಯಲ್ಲಿ ತುಂಬಿತು ಆಸೆಯ ಬಳ್ಳಿ ಆಕೆಯ ಮೋಹದಲಿ ಬಿದ್ದು ತೆತ್ತುಬಿಟ್ಟ ಬಿಲ್ಲು ಕಳಚಿ ಹೋಯಿತು ಆತನ ಎರಡು ಹಲ್ಲು ಹಿಂದಿನಿಂದ ಬಂದ ಆಕೆಯ ಗಂಡನನ್ನು ಕಂಡು ಪಂಕಜಾ.ಕೆ.ಮುಡಿಪು

ದುರಾಸೆ ಚಿತ್ರಕವನ ಹನಿ ಹನಿ ಇಬ್ವನಿ ಉತ್ತಮ

ದುರಾಸೆ (ಚಿತ್ರ ಕವನ) ಮಾನವನ  ದುರಾಸೆಗೆ ಪ್ರಕೃತಿಯ ಹರಣ ಕಾಂಕ್ರೀಟ್ ಕಾಡಲಿ ಹೆಚ್ಚಿತು ಮರಣ  ಕಾಣದ ವೈರಿಯು ವೈರಸ್ ರೂಪದಿ ಜಗವನು ಕಾಡುತ ನಗುತಿಹುದು ವಿಶ್ವವೇ ಭಯದಲಿ ತಲ್ಲಣಗೊಂಡಿದೆ ಕಾಣದ ವೈರಿಯ ಈ ಆರ್ಭಟಕೆ ಲಾಕ್ಡೌನ್  ಮಾಡುತ ಮನೆಯಲೇ ಬಂಧಿ ಮಾಡಿದ ಪಾಪಕೆ ಉಸಿರೇ ನಂದಿ ಸ್ವಚ್ಛತೆ ಇಲ್ಲದೆ ಕಸವನು ಹರಡಿ ರೋಗದ ಭೀತಿಯ ದೇಶದಲಿ ಹರಡಿ ಹಸಿರನು ಕಡಿದು ಬೆಳೆಸಿದ ಬರಡು ದುರಾಶೆ ತಂದಿತು ಜೀವಕೆ ಉರುಳು ಪಂಕಜಾ.ಕೆ ಮುಡಿಪು

ಹನಿಕವನ ಹಸಿರಿದ್ದರೆ ಉಸಿರು ಸ್ನೇಹ ಸಂಫಾಮ

ಹಸಿರಿದ್ದರೆ ಉಸಿರು  (ಹನಿ ಕವನ) ರೈತನ ಬೆವರ ಹನಿ ಬಿದ್ದರೆ ಹೊಟ್ಟೆತುಂಬ ಊಟ  ನಾಡು ಹಸಿರಾಗಿದ್ದರೆ  ಸರಾಗ ಉಸಿರಾಟ ಬೆಳೆಸಬೇಕು ಹಸಿರು ಉಳಿಸಬೇಕು ಹನಿ ನೀರು ಪಂಕಜಾ.ಕೆ.ಮುಡಿಪು

ಚಿತ್ರಕವನ ಮುತ್ತಿನ ಮಾಲೆ ಕಾವ್ಯಕೂಟ

ಕಾವ್ಯಕೂಟ ಸ್ಪರ್ಧೆಗಾಗಿ ಮುತ್ತಿನ ಹಾರ  (ಚಿತ್ರಕ್ಕೊಂದು ಕವನ) ಇಬ್ಬನಿಯು ತಬ್ಬಿರುವ  ವನರಾಜಿಯ  ಹಸಿರ ಸಿರಿ ಭೂತಾಯಿ ಮಂಜಿನಲಿ  ಮಿಂದೆದ್ದ  ಸುಂದರಿ ಭೂರಮೆಯ ಸಿಂಗಾರಕೆ ವರುಣ ಕಳಿಸಿದ  ಮುತ್ತಿನಹಾರ ಇನಿಯನೊಲವಿನ ಒಡವೆ ಧರಣಿ ದೇವಿಯ ಕೊರಳ ಹಾರ ಅದ್ಭುತ ಕಲಾಕಾರನ ಜೋಡಣೆ ಪ್ರಕೃತಿ ನಿರ್ಮಿತ  ಸುಂದರ ಹಾರ ದವಳಾದ್ರಿಯ ಸೊಬಗು ಕಣ್ಣು ತುಂಬಿದೆ ಪ್ರಕೃತಿ ವಿಸ್ಮಯಕೆ ಮನ ಬೆರಗಾಗಿದೆ ಒಲವಿನೊಸಗೆಯು ತಂದಿದೆ ಅಮಲು ಇಮ್ಮಡಿಸಿದೆ ಇಳೆಯ ಸೌಂದರ್ಯ  ಬಾಂದಳದ ತುಂಬೆಲ್ಲ ಕಟ್ಟಿದ ತೋರಣ ಮನಸು ತುಂಬಾ ಕನಸುಗಳ ಹೂರಣ ಪಂಕಜಾ.ಕೆ.ಮುಡಿಪು

ಗಜಲ್ ಖಿದ್ಮಾ ಪೌಂಡೇಶನ್ ಬಳಗ

ಗಜಲ್  (ಸ್ಪರ್ಧೆಗಾಗಿ) ನಿನ್ನನಂದು ಕಂಡಾಗ ಮನಸು ನವಿಲಂತೆ ಕುಣಿಯಿತು ನಲ್ಲ ಹೊಸಭಾವದಲೆಗಳಲಿ ತೇಲಿ ಮನ ನಲಿದಾಡಿತು ನಲ್ಲ ಕಣ್ಣೋಟದ ತುಂಟಾಟದ ಕಾಟಕೆ ನಾ ಸೋತೆ  ಅಂದು ಬಾಳ ತೇರನೆಳೆಯಲು  ನಿನ್ನೊಡನೆ ಸೇರುವಾಸೆ ಕಾಡಿತು ನಲ್ಲ ಬಾಳಿನ ಪುಟಗಳಲಿ ಒಲವ   ಓಲೆಯ ಬರೆದೆ ನೀನು ಉಕ್ಕಿ ಹರಿಯುವ  ಕಡಲಂತೆ  ಪ್ರಕ್ಷುಬ್ಧ ಗೊಂಡಿತು ನಲ್ಲ ಬೆಳದಿಂಗಳ ಬೆಳಕಿನಲಿ  ಮಿಂದೆದ್ದ ಭಾವ ತುಂಬಿದೆ ಮನದಲಿ ಹಾರಾಡುವ ಹಕ್ಕಿಯಂತೆ  ನನ್ನೆದೆಯಲಿ ಉಲ್ಲಾಸ ತುಂಬಿತು ನಲ್ಲ ಪಂಕಜಾಕ್ಷಿಗೆ ನಿನ್ನೊಡನೆ ಕಲೆತು  ಅನುದಿನವೂ  ಮೈಮರೆವಾಸೆ ನಿನ್ನ ಒಡನಾಟದಲ್ಲಿ ಬಾಳು ಸುಗಂಧಸೂಸುವ ಹೂವಾಗಿತ್ತು ನಲ್ಲ ಪಂಕಜಾ.ಕೆ.ಮುಡಿಪು

ಹನಿಕವನ ಹಸಿರಿದ್ದರೆ ಉಸಿರು

ಹಸಿರಿದ್ದರೆ ಉಸಿರು  (ಹನಿ ಕವನ) ರೈತನ ಬೆವರ ಹನಿ ಬಿದ್ದರೆ ಹೊಟ್ಟೆತುಂಬ ಊಟ  ನಾಡು ಹಸಿರಾಗಿದ್ದರೆ  ಸರಾಗ ಉಸಿರಾಟ ಬೆಳೆಸಬೇಕು ಹಸಿರು ಉಳಿಸಬೇಕು ಹನಿ ನೀರು ಪಂಕಜಾ.ಕೆ.ಮುಡಿಪು

ವಚನ ಕಾವ್ಯ ಕೂಟದಲ್ಲಿ ತೃತೀಯ

ಕಾವ್ಯಕೂಟ ಸ್ಪರ್ಧೆಗಾಗಿ ವಚನ ಆಡಿದಾ ಮಾತುಗಳು ಬಿಟ್ಟ ಬಾಣಗಳು  ಮರಳಿ ಬಾರದಯ್ಯ ಮಾತಗಳನು ಅವಲೋಕಿಸುತ  ನುಡಿದರೆ  ಲೋಕವನು  ಗೆಲ್ಲಬಹುದೆಂದ ಪಂಕಜಾರಾಮ    ಪಂಕಜಾ.ಕೆ.ಮುಡಿಪು

ಹಾಯ್ಕುಗಳು

ವಿಷಯ...ಹಾಯ್ಕುಗಳು ಶೀರ್ಷಿಕೆ.   ನಲ್ಲನ ಅಗಲಿಕೆ 1  ಮನದ ನೋವು ನಲ್ಲನ ಅಗಲಿಕೆ ಸಹಿಸಲಾರೆ 2.ಮನ ಕಾಡಿತು ನಲ್ಲನ ಅಗಲಿಕೆ ಕ್ಷಣ ಕ್ಷಣಕೆ 3.ಮರೆಯಲಾರೆ ನಲ್ಲನ ಅಗಲಿಕೆ ದುಃಖದಾವೇಗ 4 ಬಾಳಪಯಣ ನಲ್ಲನ ಅಗಲಿಕೆ ಕಡು ಕತ್ತಲು 5.ಮನಸು ಭಾರ  ನಲ್ಲನ ಅಗಲಿಕೆ ಕನಸು ದೂರ ಪಂಕಜಾ .ಕೆ. ಮುಡಿಪು

ನ್ಯಾನೊ ಕಥೆ ಕಾವ್ಯ ಕೂಟ ದಲ್ಲಿ ಮೆಚ್ಚುಗೆ

[08/07, 3:43 PM] pankajarambhat: ಕಾವ್ಯ ಕೂಟ ಸ್ಪರ್ಧೆಗಾಗಿ ನ್ಯಾನೊ ಕಥೆ ದತ್ತಪದ....ಮುಖವಾಡ  ಸೋಗು ಆ ಸುಂದರ ಸಂಸಾರಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ  ,ದುಡಿದು ತರುತ್ತಿದ್ದ ಯಜಮಾನ ಕೈ ಕಾಲು ಮುರಿದು ಹಾಸಿಗೆ ಸೇರುವಂತಾಯಿತು.  ನಂದೀಶನಲ್ಲಿ  ಹಣವಿದ್ದಾಗ ಇರುವೆಯಂತೆ ಮುತ್ತಿ ಕೊಂಡಿದ್ದ ನೆಂಟರಿಷ್ಟರು ಕಷ್ಟದ ಸಮಯದಲ್ಲಿ ಈ ಕಡೆ ತಿರುಗಿಯೂ ನೋಡಲಿಲ್ಲ   .ಮನೆಯ ಹಿರಿಯ ಮಗಳಾದ ಸುಗಂಧಿ  ಇದೆಲ್ಲದರಿಂದ ದೃತಿ ಕೆಟ್ಟರೂ ಮುಖವಾಡವನ್ನು ಧರಿಸಿ ಸೋಗಿನ ಪ್ರೀತಿ ತೋರುವವರ  ಮುಖವಾಡ ಬಯಲಾದುದು ಕಂಡು ನಿಡುಸುಯ್ದಳು ಪಂಕಜಾ ರಾಮಭಟ್ ಕಬ್ಬಿನಹಿತ್ಲು [08/07, 10:00 PM] +91 87220 12503: *ಕಾವ್ಯ ಕೂಟ ಸ್ಪರ್ಧೆ ಫಲಿತಾಂಶ* 🦚🦚🦚🦚🦚🦚🦚🦚🦚 *ದಿನಾಂಕ....08/07/2020* *ವಾರ......ಬುಧವಾರ* *ಪ್ರಕಾರ....ನ್ಯಾನೋಕಥೆ* *ವಿಷಯ...ಮುಖವಾಡ* *ನಿರ್ವಹಣೆ.. ನಂದಿನಿ ಶಿ  ರ* 🌺🌺🌺🌺🌺🌺🌺🌺🌺 *ಗದ್ಯಸಾಹಿತ್ಯದ ಅನೇಕ ಪ್ರಕಾರಗಳಲ್ಲಿ* *ನ್ಯಾನೋ ಪ್ರಕಾರವೂ ಒಂದು.ಹೆಸರೇ* *ಹೇಳುವಂತೆ ಚಿಕ್ಕದು ಅಂತ ಅರ್ಥ, ಈಗ ಉದ್ದುದ್ದ ಕಥೆ ಹೇಳಲು,ಓದಲು* *ಪುರುಸೊತ್ತಿಲ್ಲ,* *ಆದರೆ ಎಷ್ಟೋ ಉದ್ದ ಕಥೆಯಲ್ಲಿ* *ಹೇಳುವ ವಿಷಯವನ್ನು ಚಿಕ್ಕ* *ನ್ಯಾನೋದಲ್ಲಿ ಹೇಳಬೇಕು,ಮತ್ತು* *ಅದು ಸಮಾಜಕ್ಕೆ ಒಂದು ಸಂದೇಶ* *ಕೊಡುವಂತಿರಬೇಕು,ಪಾತ್ರಗಳು* *ಮಾತನಾಡಬೇಕು,ಕಥೆಯ ಕೊನೆಯನ್ನು ಓದುಗರೇ* *ವಿವೇಚನೆಗಳಿಗೊಳಪಡಿಸಿಕೊಂಡು* *ಅಂತ್ಯ ಕೊಟ್ಟುಕೊಳ್ಳಬೇಕು,ಇ

ಮೈತ್ರಿ ಬಳಗಕ್ಕೆ ಹಾಯ್ಕುಗಳು. ಕುಡಿನೋಟ

ಮೈತ್ರಿ ಸ್ಪರ್ಧೆಗಾಗಿ 07.07.2020 ಶೀರ್ಷಿಕೆ..ಕುಡಿನೋಟ 1..ಮದನ ಬಾಣ ಹೆಣ್ಣಿನ ಕುಡಿನೋಟ ರಸಿಕರಿಗೆ 2..ಯಾರಿರುವರು ಮನಸೋಲದವರು ಕುಡಿನೋಟಕೆ 3..ಚೆಲುವೆಯರ ಕುಡಿನೋಟದ ಬಾಣ ಎದೆ ಸೀಳಿದೆ ಪಂಕಜಾ.ಕೆ.ಮುಡಿಪು

ಕಾಯುವಿಕೆಯ ತಪ

ಕವಿಶೈಲ ವಾರದ ಸ್ಪರ್ಧೆಗಾಗಿ     ದತ್ತ ಪದ...ನಿರೀಕ್ಷೆ    ಶೀರ್ಷಿಕೆ . ..ಕಾಯುವಿಕೆಯ ತಪ ಕಾಡಿನ ದಾರಿಯ ಮದ್ಯದಲಿ ತನ್ನಯ ಮುರುಕಲು ಗುಡಿಸಿಲಲಿ ಕಾಯುತಲಿರುವಳು ಶಬರಿಯು ಶ್ರೀ ರಾಮನ ದಾರಿಯ ಕಾತರದಿ ನಿತ್ಯವೂ ಕಾಡನು ಸುತ್ತುವಳು ಬಗೆ ಬಗೆ ಹೂಗಳ ಕೊಯ್ಯುವಳು ತರ ತರ ಹಣ್ಣನು ಆರಿಸಿ ಹೆಕ್ಕುತ ಶ್ರೀ ರಾಮನ ದಾರಿಯ ಕಾಯುವಳು ಬಂದೇ ಬರುವನು ಎನ್ನುತಲಿ ಕಣ್ಣನು ಹಿಗ್ಗಿಸಿ  ಇಣುಕುವಳು ಸಹನೆಯಲಿ ನಿತ್ಯವೂ ಕಾಯುವಳು ನಿರೀಕ್ಷೆಯ ತಪದಲಿ ಬಳಲಿದಳು   ಹೆಕ್ಕಿದ ಹಣ್ಣಿನ ರುಚಿಯನು ನೋಡುತ ಸಿಹಿ ಸಿಹಿ ಹಣ್ಣನು ತೆಗೆದಿಟ್ಟು ತನ್ನನ್ನು ತಾನೇ ಮರೆಯುವಳು  ಭಕ್ತಿಯ ಮನದಲಿ ತುಂಬುವಳು ಪಂಕಜಾ.ಕೆ.ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಭೂತಾಯಿ ಸೊಬಗು ಜಾನಪದ ಗೀತೆ ಕಾವ್ಯಕೂಟ ದಲ್ಲಿ ತೃತೀಯ

ಕಾವ್ಯಕೂಟ ಸ್ಪರ್ಧೆಗಾಗಿ ಜಾನಪದಗೀತೆ  ಭೂತಾಯಿ ಸೊಬಗು ಮೂಡಾಲ ಮನ್ಯಾಗ ಹೊನ್ನ ರಥವೇರಿ ಬರುತಾನ  ಜಗಕೆಲ್ಲಾ ಬೆಳಕಾ ತರುತಾನವ್ವ   ಬೆಳಗಾಗಿ ಬೇಗೆದ್ದು ಸಿರಿದೇವಿಯ ನೆನೆಯುತ್ತ ಭೂತಾಯಿ ಒಡಲಿಗೆ ನಮಿಸಬೇಕವ್ವ ಅನ್ನವ ಕೊಡುವಾಕೆ ಬನ್ನವಾ ಕಳೆದಾಕೆ ಹೊತ್ತಾರೆ ಮಾದೇವಿಯ ನೆನೆಯಬೇಕವ್ವ  ಮಳೆ ಬಂದು ಕೆರೆಕಟ್ಟೆ ತುಂಬೈತೆ   ಭೂತಾಯಿ ಒಡಲು ನೆನೆದೈತೆ  ಉತ್ತು ಬಿತ್ತಿ  ಬೆಳೆ ಬೆಳೆಯಬೇಕವ್ವ ಎಲ್ಲೆಲ್ಲೂ ಹಸಿರು ತುಂಬೈತೆ ಭೂತಾಯಿ   ಹಸಿರುಟ್ಟು ನಲಿದಾಳವ್ವ ಹೂ ಚಿಗುರು ತುಂಬಿ ಚೆಲುವು ಕಣ್ಣು ತುಂಬೈತವ್ವ  ಭೂತಾಯಿ ಒಲಿದಾರೆ ಬಾಳೆಲ್ಲಾ ಬಂಗಾರವಾಗುತೈತೆ ಹಟ್ಟಿ ತುಂಬಾ ಕಾಳು ತುಂಬುತೈತೆ ಪಂಕಜಾ.ಕೆ.ಮುಡಿಪು

ಇಳೆಯ ಕನಸು

ಇಳೆಯ ಕನಸು ಹೊಂಗನಸ ಕಾಣುತ್ತ ನಿಂತಿದ್ದೆ ಅಂದು ನೀ ಬಂದು ತಬ್ಬಿ ಮುದ ತಂದೆ ಇಂದು ಹೊಸ ಸೀರೆ ಉಟ್ಟಂತೆ ಮನವೆಲ್ಲಾ ತಂಪು ಮನಸಿನಾಳದಲೆಲ್ಲಾ ಹೊಂಗನಸಿನ ಕಂಪು ಹಸಿರು ಹೂವುಗಳ ಸೆರಗ ಹೊದ್ದಿರುವೆ ನಿನ್ನ ಒಡನಾಟ ದಿ ಬದುಕು ಚಿಗುರಿದೆ ಭೂರಮೆಯ ಸೌಂದರ್ಯ ಎದ್ದು ಕಂಡು ನಿನ್ನಾಗಮನದಿಂದ ಬಲವು ಬಂದು ಒಡಲೆಲ್ಲಾ   ತುಂಬಿತು ಚಿಗುರು ಹೂವು ಇರಬೇಕು ಮಾನವರಲಿ ಪ್ರಕೃತಿ ಒಲವು ತುಂಬುತಿದೆ ಕವಿಮನಕೆ ಹುರುಪು ಹಸಿರು ಕಾನನದಿ ನಲಿದಾಡುವ ಮನಸು  ಬೀಸುಗಾಳಿಯ ತಂಪು ಮನದಲ್ಲಿ ತುಂಬಿ ಹಾರುತಿದೆ ಹಕ್ಕಿಯಂತೆ ಮನವು ತುಂಬಿ ಪಂಕಜಾ ಕೆ ಮುಡಿಪು

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಕಾವ್ಯಾಕುಟದಲ್ಲಿ ಉತ್ತಮ ಭಾವಗೀತೆ ಒಲವೇ ಜೀವನ

[04/07, 11:03 PM] pankajarambhat: ಕಾವ್ಯಾಕೂಟ ಚಿತ್ರಕವನ ಸ್ಪರ್ಧೆಗಾಗಿ.  ಒಲವೇ ಜೀವನ ಮುಂಗಾರು ಮಳೆ ಸುರಿದು ಮೈಮನಕೆ ಮುದ ತಂದಿದೆ ನಿನ್ನೊಲವ ಧಾರೆಯಲಿ ತನುಮನಕೆ  ಉಲ್ಲಾಸ ತುಂಬಿದೆ ಈ ಕೆಂಗುಲಾಬಿಯು ನಮ್ಮಿಬ್ಬರ ಒಲವಿಗೆ ಸಾಕ್ಷಿಯಾಗಿದೆ  ನಾವಿಬ್ಬರೊಂದಾಗಿ ಒಲವ ಸವಿ ಸವಿಯೋಣ ಬಾ ನಲ್ಲೆ  ಬಿಸಿಲು ಮಳೆಯ ಎಡೆಯಲಿ ಮೂಡುತಿದೆ ಕಾಮನಬಿಲ್ಲು ಹೊಸರಾಗವ ಹಾಡುತ ಕುಣಿಯುತ್ತಿದೆ  ಜೋಡಿ ನವಿಲು ತುಂತುರು ಮಳೆಯಲಿ ನಮ್ಮಿಬ್ಬರ ಈ ಪ್ರೇಮಬಂಧ ಒಲವಿನ ಓಲೆಯಲಿ ನಿನಗಾಗಿ ಬರೆದೆ ಈ ಪ್ರೇಮಸಂದೇಶ ನಮ್ಮಿಬ್ಬರ ಮಿಲನದಾ ಈ ಶುಭಗಳಿಗೆಯಲಿ ಮೂಡಿದೆ ಕಾಮನಬಿಲ್ಲು ನಿನಗಾಗಿ ತಂದಿರುವೆ  ಈ ಚಂದದ ಕೆಂಗುಲಾಬಿಯ ನಲ್ಲೆ ಕೈಯಲ್ಲಿರುವ ಕೊಡೆ ಯ ಹಂಗು ನಮಗೇಕೆ  ಹೇಳು ನಲ್ಲೆ ನಲಿಯೋಣ ತುಂತುರು ಮಳೆಯಲಿ ಒಂದಾಗಿ ನಲ್ಲೆ ಬಾಳೊಂದು ಭಾವಗೀತೆ ಹಾಡೋಣ ಜತೆಯಾಗಿ ನಲ್ಲೆ ಒಲವೇ ಜೀವನ  ಅನುದಿನವೂ  ಬಾಳೋಣ ಬಿಗಿಯಪ್ಪುಗೆಯಲಿ ನಲ್ಲೆ ನಿನ್ನ ಪ್ರೇಮದುಸಿರಲ್ಲಿ ಒಂದಾಗುವಾಸೆ  ನನಗೆ ನಲ್ಲ ಪ್ರೇಮ ಮುದ್ರೆಯ ಒತ್ತಿ ಬಂಧನವ ಬಿಗಿ ಗೊಳಿಸು ನಲ್ಲ ಪಂಕಜಾ.ಕೆ.ಮುಡಿಪು [04/07, 11:03 PM] pankajarambhat: *ಕಾವ್ಯಕೂಟದ ಎಲ್ಲಾ ಕವಿಮನಗಳಿಗೆ ನಮಸ್ಕಾರಗಳು*  🙏🙏🙏🙏🙏🙏🙏🙏 *ಭಾವಯಾನದ ಇಂದಿನ ಫಲಿತಾಂಶ ಪಟ್ಟಿ*  *ಕೂಟದಲ್ಲಿ ಇಂದು ಭಾವಗೀತೆ ಬರೆದು  ಅಂದವನ್ನು ಹೆಚ್ಚಿಸಿರುವಿರಿ...* *ಬರೆದ ಭಾವಗೀತೆಗಳೆಲ್ಲ* *ಮನಸೂರೆಗೊಳ್ಳುವಂತಿವೆ.. ಬರೆದು ಭಾಗವಹಿಸಿದ*  *ಎಲ್ಲರಿಗೂ

ಕ ದಿಂದ ಳ ವರೆಗೆ ಯಜನಾಕ್ಷರ ಬಳಸಿ.ಪ್ರೇಮಕಾವ್ಯ

ಕ ದಿಂದ ಳ ವರೆಗೆ ವ್ಯಂಜನಾಕ್ಷರ ಬಳಸಿ ಪ್ರೇಮ ಸಂಭಾಷಣೆ   ಪ್ರೇಮಕಾವ್ಯ  ಕ      ಕಂಡ ಕ್ಷಣವೇ ಸೋತೆ ನಾ ನಿನ್ನ ಮುದ್ದು     ಮುಖಕೆ ನಲ್ಲೆ  ಖ    ಖೈದಿ ಯಾದೆನು ನಿನ್ನ ಆ ತುಂಟ  ಕಣ್ಣೋಟಕೆ ನಲ್ಲ ಗ   ಗಮನವೆಲ್ಲಾ ನಿನ್ನೆಡೆಯೇ ಸೆಳೆದುಬಿಟ್ಟೆ   ಓ ಚೆಲುವೆ ಘ.  ಘಂಟೆಗಳು ಕ್ಷಣಗಳಾಗುತ್ತಿದೆ  ನೀ ನನ್ನೊಡನಿದ್ದರೆ ಚೆಲುವ ಙ  ವಿಜ್ಞಾಪನೆ ಸಲ್ಲಿಸೋಣ ನಮ್ಮ ಮನೆದೇವರಿಗೆ ನಾವಿಂದುಕೂಡಿ ಚ.  ಚಂದ್ರನಂತಿರುವ ನಿನ್ನ ಮುಖಾರವಿಂದಕೆ ಸೋತೆ ನಲ್ಲೆ ಛ   ಛಲ ತುಂಬಿದ ಆ ಕಣ್ಣ ನೋಟದ ಸೊಬಗು ಸೆಳೆಯಿತು ನಲ್ಲ ಜ.  ಜಯಿಸಿದೆ ನೀ ನನ್ನ ಕಠೋರ ಹೃದಯವ ನಲ್ಲೆ ಝ  ಝರಿಯಂತೆ ಹರಿಯಿತು ನಿನ್ನ ಒಲವು ನನ್ನೆಡೆಗೆ ನಲ್ಲ ಞ  ಯಜ್ಞ ಕುಂಡದೆದುರಲಿ ಹೋಮಾಗ್ನಿಯಲಿ ನಾವಿಬ್ಬರು ಒಂದಾಗೋಣ  ಟ. ಟಕ ಟಕನೆಂದು ನಡೆದಾಡುತ್ತ ಬರುವ ನಿನಗಾಗಿ ಕಾಯುವೆ ಠ. ಠಕ್ಕನಂತೆ ಏಕೆ ಕದ್ದು ನೋಡುವೆ ನೀ ಇಂದು ನನ್ನ ನಲ್ಲ ಡ. ಡವ ಡವ ಎನ್ನುತ್ತಿದೆ ನಿನ್ನ ಹೃದಯ ನಾ ಬಲ್ಲೆ ಅದನು ನಲ್ಲೆ  ಢ  ಢಕ್ಕೆಯಂತೆ ಬಾರಿಸುತ್ತಿದೆ ನನ್ನೆದೆಯ ಮಿಡಿತ ನಿನಗಾಗಿ ನಲ್ಲ ಣ. ಜಾಣತನದಲಿ  ನಾವಿಬ್ಬರು ಸಂಸಾರ ಸಾಗಿಸೋಣ ತ  ತನುಮನವೆಲ್ಲಾ ನೀನೇ ತುಂಬಿರುವೆಯಲ್ಲಾ ನಲ್ಲ ಥ   ಥಕ  ಥಕ ನೆಂದು ಕುಣಿಯುತ್ತಿದೆ ನನ್ನೀ ಹೃದಯ ನಲ್ಲೆ ದ  ದಯಮಾಡಿ ಹೀಗೆ  ಕಣ್ಣಲ್ಲಿ ನನ್ನ ಕಾಡಬೇಡ ಓ ಚೆಲುವ ಧ ಧನ ಕನಕ  ಯಾವಾದರಲ್ಲೂ ನನಗೆ ಬಯಕೆಯಿಲ್ಲ ಚೆಲುವೆ ನ ನಂಬು ನನ್ನನು ಓ ನನ್ನ ಮನವ ಕದ್ದ ಚೆಲು ಚಕೋರಿ ಪ ಪರಿ ಪರಿಯಲ

ಕನಸು ನನಸು.ಕಥೆ ಕವಿ ಸಾಹಿತಿ ಜೀವಾಳ ಉತ್ತಮ

ಚಿತ್ರಕ್ಕೊಂದು ಕಥೆ   (ಸ್ಪರ್ಧೆಗಾಗಿ) ಕನಸು ---ನನಸು ಸುಮ ವಿದ್ಯಾವಂತೆ , ಬುದ್ಧಿವಂತೆ   ,ಬಿಡುವಿನ ಸಮಯದಲ್ಲಿ ಏನಾದರೂ ಸಮಾಜಕ್ಕೆ ಒಳಿತು ಆಗುವುದನ್ನು ಮಾಡಬೇಕು  ಎನ್ನುವ ಆಶೆ ಅವಳಿಗೆ. ದಿನಾ ವಾಕಿಂಗ್ ಹೋಗುವ ಅಭ್ಯಾಸ ಇದ್ದ ಆಕೆ ಆದಿನ ಯಾವುದೋ ಯೋಚನೆಯಲ್ಲಿ ನಡೆಯುತ್ತಾ ಇದ್ದಾಗ ,ಬಾಲ್ ಒಂದು ಬಂದು ಆಕೆಯ ಹಣೆಗೆ ಬಡಿಯಿತು. ಆಕೆ ಹಾ ಎಂದು ಕೈ ಯಿಂದ ಹಣೆ ಒತ್ತಿಕೊಂಡು ಸುತ್ತುಮುತ್ತ ನೋಡುವಾಗ  ಕೆಲವು ಮಕ್ಕಳು ಗಾಬರಿಯ ಮುಖ ಮಾಡಿ ದೂರದಲ್ಲಿ ನಿಂತಿರುವುದು ಕಂಡಿತು .ಎಣ್ಣೆ ಕಾಣದ ಕೂದಲು ಶುಚಿತ್ವವಿಲ್ಲದ ಅವರನ್ನು ಕಂಡು ಅಸಹ್ಯವಾದರೂ ಅವರನ್ನು ತಾನು ಬದಲಿಸಬೇಕು  ಎಂದು ನಿಶ್ಹೈಯಿಸಿ ಅವರಲ್ಲಿ ಒಬ್ಬನನ್ನು   ಸನ್ನೆ ಮಾಡಿ ಕರೆದಾಗ,ಆತ ಹೆದರುತ್ತ ಹತ್ತಿರ ಬಂದು ನಿಂತ .ಅವನಲ್ಲಿ ಸುಮಾ ನಿನ್ನ ಹೆಸರೇನು ಯಾವ ಕ್ಲಾಸ್ ಎಂದು ಕೇಳಿದಾಗ ಹುಡುಗ ತನ್ನ ಹೆಸರು ಹೇಳಿದರೂ,ಶಾಲೆಯ ಬಗ್ಗೆ ಏನೊಂದನ್ನು ಹೇಳದೆ ಇದ್ದಾಗ ಒತ್ತಾಯಿಸಿ ಕೇಳುವಾಗ ಅವರು ಶಾಲೆಯ ಮುಖವನ್ನೇ ಕಾಣಲಿಲ್ಲ ವೆಂದು ತಿಳಿದು ಅವರ. ಜತೆ ಅವರ ಮನೆಗೆ ಹೋಗುತ್ತಾಳೆ.ಅಲ್ಲಿ ಅವರ ಮನೆ ಮತ್ತು ಪರಿಸರ ನೋಡಿದಾಗ ಕಡು  ಬಡತನದ ಅವರನ್ನು ಕಂಡು ಅನುಕಂಪದಿಂದ ಅವರಿಗೆ ವಿದ್ಯೆಯ ಮಹತ್ವವನ್ನು ತಿಳಿಸಿ ತಾನು ನಿತ್ಯವೂ ಬಂದು ಮಕ್ಕಳಿಗೆ ವಿದ್ಯೆ ಕಲಿಸುತ್ತೇನೆ ಎಂದು ಹೇಳುತ್ತಾಳೆ. ಅವರಿಗೂ ಮಕ್ಕಳನ್ನು  ಶಾಲೆಗೆ ಕಳಿಸುವ ಮನಸು ಇದ್ದರೂ ತಮ್ಮ ಬಡತನದ ಕಾರಣದಿಂದ ಅದು ಆಷಾಧ್ಯವಾಗಿತ್ತು.ಸುಮಾಳ ಮಾ

ಗೇಯ ಗೀತೆ ಕೋಗಿಲೆ ಹಾಡಿದೆ

ಗೇಯ ಗೀತೆ ಕೋಗಿಲೆ ಹಾಡಿದೆ ಕೇಳಿದೆಯಾ ರಾಗದಲ್ಲಿ ನವಿಲದು ಕುಣಿದಿದೆ ನೋಡಿದೆಯಾ ಮನದಲಿ ರಂಗನು ತುಂಬುತಲಿ//ನ ಹೊಸ ಹೊಸ ಕನಸನು ಕಟ್ಟುತ ಮನವು ಕಣ್ಣಲಿ ಕಾಂತಿಯ ತುಂಬಿ//ನ ಬಾನಲಿ ಕಾಮನಬಿಲ್ಲು ಮೂಡಿದ ಹಾಗೆ ಅರಳಿದ ಹೂವಿನ ಗಂಧದ ಹಾಗೆ ಮಕರಂದವ ಹೀರುವ ಚಿಟ್ಟೆಯ ಹಾಗೆ ಹೊಸತನ ಎದೆಯಲಿ ತುಂಬಿ//ನ ರಾಧೆಯು ಕೃಷ್ಣನ ಅರಸುವ ಹಾಗೆ ಕೊಳಲಿನ ಗಾನಕೆ ಒಲಿಯುವ ಹಾಗೆ ನಿನ್ನಯ ಮೋಹಕೆ ಸೋತೆ ನನ್ನನು ನಾನೇ ಮರೆತೆ//ನ ಆಹಾಹಾ. ...ಆಹಾಹಾ....ಆಹಾಹಾ.   ಕಂಡಿರುವ ಕನಸು ನನಸಾದ ಹಾಗೆ ಬಾಳಲಿ ಹೂವು ಅರಳಿದ ಹಾಗೆ ಸಂತಸ ಮನದಲಿ ತುಂಬುವ ಹಾಗೆ ನಿನ್ನೊಡನಾಡುತ ನಲಿಯುವ   ಹಾಗೆ//ನ ಪಂಕಜಾ.ಕೆ.ಮುಡಿಪು ..

ಓ ಭಾರತೀಯ ದೇಶಭಕ್ತಿ ಗೀತೆ

ಓ ಭಾರತೀಯ  (ದೇಶಭಕ್ತಿ ಗೀತೆ) ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ  ಹಬ್ಬಿ ನಿಂತಿದೆ ನಮ್ಮ ದೇಶ  ಭಾರತ ಧಾಳಿಕೋರರ ತಂತ್ರ ಮುರಿಯುತ  ತಲೆ ಎತ್ತಿ ನಿಂತಿದೆ ನಮ್ಮ ದೇಶ ಭಾರತ   ಕ್ಷಾತ್ರ ತೇಜವು ತುಂಬಿ ತುಳುಕುವ ವೀರ ರಿಂದ ತುಂಬಿದ ಭಾರತ ತಾಯಿ ಭಾರತಿಗಾಗಿ ಜೀವನ ತೆತ್ತು ಬಿಡುವರು ಕ್ಷಣದಲಿ ವೈರಿ ರುಂಡವ ಚೆಂಡನಾಡುತ ಗಡಿಯ ಕಾಯುವರು ಯೋಧರು ಭಾರತಿಯ ಸೆರಗ ಸೆಳೆಯಲು ಬಿಡದ ವೀರ ಧೀರರು ಕನಸು ಮನಸಲಿ ತುಂಬಿ ನಿಲ್ಲಲಿ ದೇಶಾಭಿಮಾನವು ನಮ್ಮಲಿ ತನು ಮನವು ಮುಡಿಪಾಗಿರಲಿ ಭಾರತದ ಉನ್ನತಿಯಲಿ ಜನನಿಯ ಜಯ ಮಂತ್ರವೇ  ನಮ್ಮ ಉಸಿರಾಗಲಿ ಆತ್ಮನಿರ್ಭರ ಭಾರತವೇ  ನಮ್ಮ ಗುರಿಯಾಗಲಿ ವಿಶ್ವದೆಲ್ಲೆಡೆ ಹರಡಿ ಹಬ್ಬಲಿ  ಭಾರತಾಂಬೆಯ ಕೀರ್ತಿಯು ಸ್ವಾತಂತ್ರ್ಯದ  ಕಹಳೆ  ಜಗತ್ತಿನೆಲ್ಲೆಡೆ  ಮೊಳಗಲಿ ನಾಡು ನುಡಿ ನಮ್ಮದೆನ್ನುವ  ಭಾವತುಂಬಿ ತುಳುಕಲಿ ಐಕ್ಯಮಂತ್ರವು  ನಮ್ಮ ಉಸಿರಲಿ ಬೆರೆತು ಹೋಗಲಿ ನಿತ್ಯವೂ   ಸ್ನೇಹ ದುಂದುಭಿ  ನಿತ್ಯ ಮೊಳಗಲಿ ಜಾತಿ ಭೇದವು ತೊಲಗಲಿ ಭಾರತೀಯರು ನಾವು ಒಂದು ಎಂಬ ಭಾವವು ತುಂಬಲಿ ಪಂಕಜಾ.ಕೆ ಮುಡಿಪು

ಚಿತ್ರ ದುರ್ಗದ ಕೋಟೆ

ಚಿತ್ರ ಕವನ ಸ್ಪರ್ಧೆಗಾಗಿ ಚಿತ್ರದುರ್ಗದ ಕೋಟೆ ಚಿತ್ರ ದುರ್ಗದ ಕಲ್ಲಿನ ಕೋಟೆ ಗಂಡುಗಲಿ ಗಳು ಆಳಿದ ಕೋಟೆ ವೀರವನಿತೆಯರು ಬಾಳಿದ ನಾಡು ಸಂಸ್ಕೃತಿ ಕಲೆಗಳ ಚಿನ್ನದ ಬೀಡು ಒನಕೆ ಓಬವ್ವ ರಕ್ಷಿಸಿದ ಕೋಟೆ ಏಳು ಸುತ್ತಿನ ಕಲ್ಲಿನ ಕೋಟೆ ಮದಕರಿ ನಾಯಕ ಆಳಿದ ಕೋಟೆ ಸಿಡಿಲುಗು ಜಗ್ಗದ ಉಕ್ಕಿನ ಕೋಟೆ ಪ್ರವಾಸಿಗಳ ಮನಸೆಳೆಯುವ ತಾಣ ಚಾರಣ ಪ್ರೀಯರ ಮೆಚ್ಚಿನ ತಾಣ  ಬಯಲು ಸೀಮೆಯ ಈ ನಾಡು ಚಿತ್ರದುರ್ಗದ ಸಿರಿನಾಡು   ಕೆಚ್ಚೆದೆಯ ವೀರರು ಬಾಳಿದ ನಾಡು ಭವ್ಯ ಭಾರತದ ಹೆಮ್ಮೆಯ ನಾಡು ಪ್ರಕೃತಿ ಸಿರಿಯು ತುಂಬಿದ ಬೀಡು ಚಿತ್ರದುರ್ಗದ ಈ ನಾಡು ಪಂಕಜಾ.ಕೆ .ಮುಡಿಪು

ಮರಳಿ ಗೂಡಿಗೆ ಕಥೆ ಮತ್ತು ಸ್ಪರ್ಧೆ ಪಾಲಿತಂದ

[14/06, 9:31 PM] pankajarambhat: *ಇಂದು ಬಹುಷಃ ಯಾವುದೇ ಪೀಟಿಕೆ/ ಪದಭಂಡಾರ ಮತ್ತೇನೋ ಬೇಡವೆನಿಸುತಿದೆ. ನಿಮ್ಮೆಲ್ಲರ ಭಾಗವಹಿಸುವಿಕೆಯೇ ಸಂತಸದ ಸಾಕ್ಷಿ.....* *ತಲೆಕೆರೆಸಿಕೊಂಡು ಮತ್ತೆ ಮತ್ತೆ ಓದಿಕೊಂಡು... ನನ್ನೊಳಗೆ ನಿಮ್ಮನ್ನು ಅರ್ಥಮಾಡಿಕೊಂಡಂತೆ, ಇಂದಿನ ಫಲಿತಾಂಶ ಈ ಕೆಳಗಿನಂತಿದೆ...* ಅತ್ಯುತ್ತಮ- *ಶಿವಪ್ರಕಾಶ್ ಗಂಧರ್ವ* ಉತ್ತಮ- *ಭೂಮಿಕ ಮಹೇಶ್* ಪ್ರಥಮ- *ಸುರೇಶ್ ನೆಗಳಗುಳಿ*               *ಶಿರ* ದ್ವಿತೀಯ- *ಗಣೇಶ್ ಪೈ*                 *ಶಶಿವಸಂತ*                 *ಶ್ರೀಮತಿ ಜೋಶಿ* ತೃತೀಯ- *ಶ್ಯಾಮ್ ಸುಂದರ್*                *ಪಂಕಜ*                *ರತ್ನಮ್ಮ*                *ಅಭಿ* [14/06, 9:32 PM] pankajarambhat: ಮರಳಿ ಗೂಡಿಗೆ  ಅಂದು ಮನೆಯಲ್ಲಿ  ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು .ಅವರ ದೊಡ್ಡ ಸೊಸೆ ಮೀರಾ ಭಕ್ತಿಯಿಂದ ಪೂಜಾ ಕಾರ್ಯಕ್ರಮಗಳನ್ನು ಪುರೋಹಿತರ ಉಪಸ್ಥಿತಿಯಲ್ಲಿ ಮಾಡುತ್ತಿದ್ದಳು . ಮನೆಯ ಹಿರಿಯ ಮಗ ವಿಶ್ವಾಸ್ ಮನೆ ಬಿಟ್ಟು ಹೋಗಿ .5 ವರ್ಷವಾಯಿತು,.ಅತ್ತೆ ಮಾವ ಎಲ್ಲರೂ ತುಂಬಾ ಚಿಂತೆಯಲ್ಲಿದ್ದರು. .ಎಲ್ಲಿದ್ದಾನೆ ಎಂದು ಹುಡುಕುವ ಅವರ ಪ್ರಯತ್ನವೆಲ್ಲಾ ವ್ಯರ್ಥವಾಗಿತ್ತು .,ಕೊನೆಯ ಪ್ರಯತ್ನವೆಂದು ದೇವರ  ಮೊರೆಹೊಕ್ಕಿದ್ದಳು  ಮೀರಾ. ಕಟ್ಟುನಿಟ್ಟಾದ ವ್ರತ ಉಪವಾಸ ಮಾಡಿ ಇಂದು ಉದ್ಯಾಪನೆ ದಿನ,  ತನ್ನ ಗಂಡ ಮರಳಿ ಮನೆಗೆ  ಬಂದೆ ಬರುತ್ತಾನೆ ಎನ್ನುವ ವಿಶ್ವಾಸ ಅವ

ಧೈರ್ಯ ನೀತಿಕಥೆ ನವಪರ್ವ

ಸ್ಪರ್ಧೆಗಾಗಿ    ಧೈರ್ಯ   ಕಿರು ನೀತಿ ಕಥೆ  ಶ್ರೇಯಸ್   ಆ ಊರಿಗೆ ಅದೀಗ ತಾನೇ  ಪೊಲೀಸ್ ಆಗಿ ಕೆಲಸಕ್ಕೆ ಸೇರಲು ಬಂದಿದ್ದ . ಇನ್ನೂ ಸಣ್ಣ ಪ್ರಾಯ ,ದೈರ್ಯಶಾಲಿಯೂ  ,ವಿವೇಕಿಯೂ,ಆದ ಆತನನ್ನು ಕಂಡರೆ ಕಳ್ಳ ಕಾಕರು ತುಂಬಾ ಭಯ ಪಡುತ್ತಿದ್ದರು.ಆ ಊರಿನಲ್ಲಿ ಕಳ್ಳರ ಕಾಟ ಜೋರಿತ್ತು.ಶ್ರೇಯಸ್ ಕಳ್ಳರನ್ನು ಹಿಡಿಯಲು  ತುಂಬಾ  ಉತ್ಸುಕನಾಗಿದ್ದ.ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಕಳ್ಳರ ಜಾಡು ಹಿಡಿಯುವುದು  ಅವನಿಂದ ಆಸಾಧ್ಯವಾಗಿತ್ತು ಆದರೂ ಆತ ತನ್ನ ಪ್ರಯತ್ನ ಬಿಡಲಿಲ್ಲ .ಆ ಊರಿನ ಪಶ್ಚಿಮ ದಿಕ್ಕಿನಲ್ಲಿ ಒಂದು ದೊಡ್ಡ ಕಾಡು ಇತ್ತು.ಕಾಡಿನ ಆ ಭಾಗ ಭಯನಕವಾಗಿತ್ತು.ಅಲ್ಲಿಗೆ ಹೋಗಲು ಎಲ್ಲರೂ ಹೆದರುತ್ತಿದ್ದರು. ಅಲ್ಲಿಗೆ ಹೋದವರು ಯಾರು ಹಿಂತಿರುಗಿ ಬಂದಿಲ್ಲ . ಕಳ್ಳರು ಅದೇ ಕಾಡಿನಲ್ಲಿ ಅಡಗಿರಬಹುದು ಎನ್ನುವ ಯೋಚನೆ ಬಂದು  ಶ್ರೇಯಸ್ ತಾನು ಅಲ್ಲಿಗೆ ಹೋಗಿ ನೋಡಬೇಕು ಎಂದು ನಿಶ್ಹೈಸುತ್ತಾನೆ.ಅದನ್ನು ತನ್ನ ಆತ್ಮೀಯ ಗೆಳೆಯ ಸ್ವಾಗತ್ ನಲ್ಲಿ ಮಾತ್ರ ತಿಳಿಸಿ ಬೇಕಾದ ಎಲ್ಲಾ  ಸಿದ್ಧತೆಗಳನ್ನು ಮಾಡಿ ಒಂದು ದಿನ  ಅಲ್ಲಿಗೆ ಹೊರಡುತ್ತಾನೆ.ಶ್ರೇಯಸ್ ಹೋಗಿ ವಾರವಾದರೂ ಅವನ ಸುದ್ದಿಯೇ ಇಲ್ಲದೆ ಇರುವುದು ನೋಡಿ ಸ್ವಾಗತ್ ಗೆ ಭಯವಾಗುತ್ತದೆ. ಮೊಬೈಲ್ ಬಹುಶ ಚಾರ್ಜ್ ಮುಗಿಯಿತೇನೋ ಎಂದು ಯೋಚಿಸಿದ ಸ್ವಾಗತ್ ಇನ್ನೆರಡು ದಿನ ನೋಡಿ ಬಾರದಿದ್ದರೆ ಆತನ ಆಫೀಸಿಗೆ ಹೇಳಬೇಕು ಎಂದು ಯೋಚಿಸಿದ.  ಯಾಕೆಂದರೆ ಶ್ರೇಯಸ್ ಆಫೀಸಿಗೆ ರಜೆ ಮಾಡಿದ್ದ ಮತ್ತು ಅಲ್ಲಿಯೂ ಯಾರಲ್ಲೂ ಈ ವಿ

ಕುರುಡು ಪ್ರೀತಿ

ಕುರುಡು ಪ್ರೀತಿ ಆದಿನ ಸಾರಿಕ  ಮನೆ ಬಿಟ್ಟಾಗಳೇ ತುಂಬಾ ತಡವಾಗಿತ್ತು .ಬಸ್ ಸ್ಟ್ಯಾಂಡ್ ಗೆ ಬಂದಾಗ ಬಸ್ ಗಳೆಲ್ಲಾ ಹೋಗಿ ಆಗಿತ್ತು .ಇಂದು ಪರೀಕ್ಷೆ ಬೇರೆ ಇದೆ  ಏನು ಮಾಡಲಿ ಎಂದು ಯೋಚಿಸುತ್ತಿದ್ದಾಗ ಬೈಕೊಂದು  ಹತ್ತಿರ ಬಂದು ನಿಂತಿತು ಅದರಲ್ಲಿದ್ದ ತರುಣ  ಏನು ಮೇಡಂ ಕಾಲೇಜಿಗೆ ಹೊರಟಿರ. ಇನ್ನು ಅರ್ಧ ಗಂಟೆ ಬಸ್ ಇಲ್ಲ ನಿಮ್ಮ ಅಭ್ಯಂತರ ಇಲ್ಲದಿದ್ದರೆ ನನ್ನ ಜತೆ ಬನ್ನಿ ಎಂದು ಕರೆದಾಗ ಹೋಗದೆ ಇರಲು ಸಾರಿಕಾಳಿಗೆ ಆಗಲಿಲ್ಲ .ಆತ ತನ್ನ ಕಾಲೇಜಿನವನೆ ಎಷ್ಟೋ ಬಾರಿ ಲೈಬ್ರರಿ ಯಲ್ಲಿ ಭೇಟಿಯಾಗಿದ್ದರೂ ಒಬ್ಬರಿನ್ನೊಬ್ಬರ ಪರಿಚಯ ಆಗಿರಲಿಲ್ಲ  .ಸಾರಿಕಾ ಕಾಲೇಜಿಗೆ ಹೋತ್ತಾಯಿತೆಂದು ಅವನ ಬೈಕ್ ನಲ್ಲಿ  ಕುಳಿತಳು. ಶರವೇಗದಿಂದ ಬೈಕ್ ನ್ನು ಓಡಿಸಿದ ವಿಶ್ವಾಸ್ ಕಾಲೇಜಿಗೆ 5 ನಿಮಿಷದಲ್ಲಿಯೇ ತಲಪಿದ್ದ. ಭಯದಿಂದ ಉಸಿರು ಬಿಗಿಹಿಡಿದು ಅವನನ್ನು ತಬ್ಬಿ ಹಿಡಿದ ಸಾರಿಕಳನ್ನು ಆತನೇ ಎಚ್ಚರಿಸಬೇಕಾಯಿತು .ಆಕೆ ನಾಚಿಕೆಯಿಂದ ಥಾಂಕ್ಸ್  ಎಂದು ಮಾತ್ರ ಹೇಳಿ ತನ್ನ ಕ್ಲಾಸ್ ರೂಮ್ ಗೆ ಹೊರಟು ಹೋದಳು..ಈ ಪರಿಚಯ ನಿಧಾನವಾಗಿ ಸ್ನೇಹ ನಂತರ  ಪ್ರೇಮಕ್ಕೆ ತಿರುಗಿತು .ಇಷ್ಟು ದಿನ ಆದರೂ ಸಾರಿಕಾ ಅವನ ಬಗ್ಗೆ ಏನೊಂದನ್ನು ವಿಚಾರಿಸಲೇ ಇಲ್ಲ   .ಆಕೆ ಆತನನ್ನು ಸಂಪೂರ್ಣ ನಂಬಿದ್ದಳು .ಪ್ರೀತಿ ಎನ್ನುವುದು ಒಂದು ಮಾಯೆ  ಸಾರಿಕಾ ಮಾಯೆಯ ಬಂಧನದಲ್ಲಿ ಬಿದ್ದು ಕುರುಡಾಗಿ ತನ್ನ ಹೆತ್ತ ತಂದೆ ತಾಯಿಯನ್ನು ಬಿಟ್ಟು ಒಂದು ದಿನ ಮನೆಯವರಿಗೆ  ತಿಳಿಸದೆ ಅವನ ಜತೆ ಮನೆಬಿಟ್ಟು ಬಂದು ಬ

ವೈದ್ಯ ದೇವ ನವಪರ್ವ ಮೆಚ್ಚುಗೆ

ನವಪರ್ವ ಬಳಗದ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ನನ್ನ ಕವನ ವೈದ್ಯ ದೇವ ನಂಬಿದ ರೋಗಿಯ ಸೇವೆಯ ಮಾಡುತ ತನ್ನಯ ಸುಖವನು ಮರೆಯುವನು ನಗುಮುಖದಿಂದಲಿ ರೋಗಿಯ ನೋಡುತ ಮನದಲಿ ಸ್ಟೈರ್ಯವ ತುಂಬುವನು ನಾಡಿಯ ಮಿಡಿತದಿ ರೋಗವ ತಿಳಿಯುತ ಪ್ರೀತಿಯ ಮಾತಲಿ ಸಾಂತ್ವನ ಹೇಳುವನು ಜೀವವ ಉಳಿಸಲು ಶ್ರಮವನು ಪಡುತ ಹಸಿವೆ ನಿದ್ದೆಯನು ಮರೆಯುವನು ರೋಗಿಯ ಸೇವೆಯಲಿ ತೃಪ್ತಿಯ ಕಾಣುತ ತನ್ನ ಆಸೆ ಆಕಾಂಕ್ಷೆಗಳ ತೊರೆಯುವನು ನಂಬಿದ ರೋಗಿಗೆ ಭರವಸೆ ಕೊಡುತ ಆತ್ಮವಿಶ್ವಾಸವ ಅವನಲಿ ತುಂಬುವನು ತನ್ನಯ ನೋವನು ತೋರಗೊಡದೆಯೇ ರೋಗಿಯ ಆರೈಕೆ ಮಾಡುವನು ರೋಗಮುಕ್ತ  ಸಮಾಜ ಕಟ್ಟಲು ಹಗಲಿರುಳೆನ್ನದೆ ದುಡಿಯುವನು ವೈದ್ಯ ನಾರಾಯಣ ಎನ್ನುವ ಮಾತನು ಸಾಕಾರಗೊಳಿಸಲು ಶ್ರಮಿಸುವನು  ವೈದ್ಯರ ದಿನದಲಿ ಇವರನು ನೆನೆಯುತ  ಭಕ್ತಿಯಲಿ   ಕೈಯನು ಮುಗಿಯೋಣ    ಪಂಕಜಾ.ಕೆ.ಮುಡಿಪು  ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್

ಮಾಡಿದ್ದುಣ್ಣೋ ಮಹರಾಯ

.ವಿಶ್ವ ಪರಿಸರ ದಿನಕ್ಕಾಗಿ ಕವನ ಮಾಡಿದ್ದುಣ್ಣೋ ಮಹರಾಯ ಪರಿಸರ ಕಾಳಜಿ  ಮಂತ್ರವ ಜಪಿಸುತ ಮರಗಿಡಗಳ ಕಡಿಯುವರು ಗಿಡಗಳ ನೆಡುತಲಿ ಫೋಟೋವ ಕ್ಲಿಕ್ಕಿಸಿ ಪರಿಸರ ಪ್ರೇಮಿ ಎನಿಸುವರು ರಸ್ತೆಯ ಬದಿಯಲಿ ಬೆಳೆದಿಹ ಮರಗಳು ದಾರಿಗರಿಗೆ ನೆರಳನು ಕೊಡುತಿಹುದು ರಸ್ತೆಯ ಅಗಲೀಕರಣ ಎನ್ನುವ ನೆಪದಲಿ ಧರೆಗದು ಉರುಳಿತು ಬುಡದಿಂದ ತಾನೇ ಶ್ರೇಷ್ಠ ಎನ್ನುವ ಹಮ್ಮಿನಲಿರುತ ಪರಿಸರ ಹಾಳು ಗೆಡವಿದನು ಪ್ಲಾಸ್ಟಿಕ್ ತ್ಯಾಜ್ಯವ ಮಣ್ಣಿಗೆ ಉಣಿಸಿ ಮಣ್ಣಿನ ಹಾಳುಗೆಡವಿದನು ತಿಳಿನೀರು  ತುಂಬಿದ ಕೆರೆಗಳ ಮುಚ್ಚುತ  ನದಿಗಳ ತಿರುಗಿಸಲು ಮುಂದಾದ ನೀರಿನ ಕೊರತೆಯು ಕಾಣಲು ಬೇಗನೆ ಭೂತಾಯಿಯಒಡಲಿಗೆ ಕನ್ನವ ಹಾಕಿದನು ಗಿಡಮರಗಳು  ಮಳೆಯ ನೀರನು  ಹಿಡಿದಿಡುತ ಕೆರೆಕಟ್ಟೆಗಳು ತುಂಬುತಿತ್ತು ನೀರಿನ ಕೊರತೆಯು  ಆಗದ ತೆರದಲಿ ನಮ್ಮನು ಅವುಗಳು ಕಾಯುತ್ತಿತ್ತು ಹಸಿರಿನ ಕಾಡದು ಉಸಿರನು ಕೊಡುತ ಶುದ್ಧ ಗಾಳಿಯ ಕೊಡುತಿತ್ತು ಅಭಿವೃದ್ಧಿಯ ಹೆಸರಿನಲಿ ಮಾಡಿದ ಪಾಪಕೆ  ಮನೆಯಲ್ಲೇ ಬಂಧಿಯಾಗಿಹನೀಗ ಉಳಿದರೆ ಪ್ರಕೃತಿ ತನ್ನಯ ಉಳಿವು ಎನ್ನುವುದ ಇನ್ನಾದರೂ ತಿಳಿ ನೀ ಮನುಜ ಪಂಕಜಾ.ಕೆ.ಮುಡಿಪು

ಶರ ಷಟ್ಪದಿ ಕೃಷಿ ಖುಷಿ ಸ್ನೇಹ ಸಂಗಮ ಮೆಚ್ಚುಗೆ 4..7. 2020

 ಸ್ನೇಹ ಸಂಗಮ ದಲ್ಲಿ 4.7.2020 ರಂದು ಮೆಚ್ಚುಗೆ ಕೃಷಿ ಖುಷಿ ( ಶರ ಷಟ್ಪದಿ) ಕೃಷಿಯಲಿ ತೊಡಗುತ .ಹಸುರಲಿ ನಲಿಯುತ ಕೃಷಿಕನು ಕಾಯಕ ಮಾಡುವನು ಕಸಿಯನು ಕಟ್ಟುತ ಹಸಿವನು ಮರೆಯುತ ಹೊಸತನ ಹುಡುಕುತ ಕಲಿಯುವನು ಮಳೆಯದು ಸುರಿದೂ ಇಳೆಯದು  ತಣಿದೂ ಬೆಳೆಯನು ಬೆಳೆಯಲು ಸಂಭ್ರಮವು ಮೊಳಕೆಯ ನೋಡುತ ಕಳೆಯನು ತೆಗೆಯುತ ಇಳೆಯಲಿ  ದುಡಿಯಲು ಸಂತಸವು ಅನುದಿನ ದುಡಿಯುತ ತನುವನು ಬಾಗಿಸಿ ಕನಸಲು ಹಸಿರನೆ ಕಾಣುವನು ಮನದಲಿ ತುಂಬಿದ ಕನಸನು ಬಿತ್ತುತ ನನಸನು ಮಾಡಲ್ ಶ್ರಮಿಸುವನು ಪಂಕಜಾ.ಕೆ. ಮುಡಿಪು