Skip to main content

Posts

Showing posts from September, 2018

ಹಲಸಿನ ಮೇಳ ಹವ್ಯಕ

ಹಲಸಿನ ಮೇಳ ಹಲಸಿನ ಹಪ್ಪಳ ಮಾಡೆಕ್ಕು ಗೋ ಸೇವೆಗೆ ಒಂದು ಅವಕಾಶ ಸಿಕ್ಕಿದ ಅವಕಾಶ ಬಿಡಲಾಗ ಎಲ್ಲೋರು ಸೇರಿ ಹಪ್ಪಳ ಮಾಡಿ ಹಲಸಿನ  ಮೇಳಕ್ಕೆ ಕೊಂಡೊಯಕ್ಕೂ ಗೋ ಸೇವೆಗೆ ಅದರ ಸಮರ್ಪಿಸುವೋ ಬಗೆ ಬಗೆ ಹಲಸಿನ ತಿಂಡಿಯ ಮಾಡೆಕ್ಕು ಬದಿಯಡ್ಕದ ಮೇಳಕ್ಕೆ ಕೊಂಡೊಯಕ್ಕೂ ಗೋ ಸೇವೆಲಿ ನಾವೆಲ್ಲಾ ಬಾಗವಹಿಸೆಕ್ಕು ಮೇಳದ ಗೌಜಿಲಿ ಎಲ್ಲೋರು  ಮುಳುಗೆಕ್ಕು ಬಗೆ ಬಗೆ ತಿಂಡಿಯ  ಮೆಲ್ಲಕ್ಕೂ ಹಲಸು ಗೋವು ಎರಡನ್ನೂ ಒಳಿಸೆಕ್ಕು ಪಂಕಜಾ.ಕೆ

ಗಣಪಗೆ ನಮನ

ಗಣಪಗೆ ನಮನ ನಮಿಸುವೆನು ಗಣಪ ನಿನ್ನ ಚರಣ ಕಮಲಗಳಿಗೆ ಗಜಮುಖವದನ ಗಜಾನನ ವಿಘ್ನನಿವಾರಕ ವಿಘ್ನೇಶ್ವರ ಈಶ್ವರ ನಂದನ ಗಣೇಶ್ವರ ಪಾರ್ವತಿ ತನಯ ಗಜಮುಖನೆ ಮೊದಲ ವಂದನೆಯ ಸಲ್ಲಿಸುವೆ ನಿನಗೆ ಭಾದ್ರಪದ ಚೌತಿಯಶುಭದಿನದಿ ಹರಸು ಬಾ ನಮ್ಮನು ಚಕ್ಕುಲಿ ಉಂಡೆ ಕಡುಬುಗಳ ನೈವೇದ್ಯವನಿಟ್ಟು ಭಕ್ತಿಲಿ ನಿನಗೆ ಕರ ಮುಗಿವೆ ಕರುಣೆಯ ತೋರಿ ಕಾಯು ನಮ್ಮನೆಲ್ಲರನು ಪಂಕಜಾ.ಕೆ. ಮುಡಿಪು ಕುರ್ನಾಡು

ಮಳೆಯ ಹನಿ

ಮಳೆಯಹನಿ ಅಗಸದಿ ತುಂಬಿರುವ ಮೋಡಗಳ ದಂಡು ಮಳೆಯ ಹನಿಗಳ ಸುರಿಸಿ ತಂದಿತು ಇಳೆಗೆ ತಂಪು ಎಲ್ಲೆಲ್ಲೂ ಹರಿಯುತಿದೆ ನೀರಧಾರೆ ಕೊಚ್ಚಿಹೋಗುತಿದೆ ಇಳೆಯ ಕೊಳೆ ಬಾನು ಸುರಿಸಿದ ಒಲವ ಮುತ್ತುಗಳು ಇಳೆಯ ಮನದಲಿ ಹರ್ಷದ ಕಾರಂಜಿಗಳು ಮಳೆಯ ಒಂದೊಂದು ಹನಿಗಳು ಮುತ್ತಾಯಿತು ಬುವಿಯ ಒಡಲಲಿ ಹಸಿರು ತೆನೆ ತುಂಬಿತು ಒಲವ ಮುತ್ತುಗಳ ಪಡೆದು ಇಳೆಯು ನಕ್ಕಳು ಸಂತಸದಿ ಮೈದುಂಬಿಹೊಸ ರಾಗ ಹಾಡುತ ಎಲ್ಲೆಲ್ಲೂ ಹಬ್ಬಿತು  ಹಸಿರು ಹೂ ಬಳ್ಳಿ ವರುಣನೊಲವಿಗೆ ಇಳೆಗೆ ನವಿರು ಕಂಪನ ಪಂಕಜಾ.ಕೆ.

ಒಲುಮೆಯಲಿ

ಒಲುಮೆಯಲಿ ನಿನ್ನ ಒಲುಮೆಯಲಿ ಮಿಂದು ಅರಳಿ ನಗುತ್ತಿರುವ ಹೂವು ನಾನು ನಿನ್ನ  ಸಾಂಗತ್ಯದಲಿ ನಲಿದು ಹಾರುತಿರುವ ಹಕ್ಕಿ ನಾನು ನೀ ಬಂದ ಕ್ಷಣದಿಂದ ಕನಸು ಮನಸಲಿ ನೀನೇ ನಲ್ಲ ಮಳೆಯ   ಸವಿ ಮುದ್ದಿಗೆ ಬಿರಿದರಳಿದ ಹೂವಿನಂತೆ ನಿನ್ನ ಒಡನಾಟದಲಿ ಬಾಳಾಯಿತು ಹಾಲುಜೇನು ಹೂವಾಗಿ  ಕಾಯಾಗಿಹಣ್ಣಾಗುತ ನಗುತಲಿರುವೆ ನಿತ್ಯ ನಿನಗಾಗಿ ನೀ ನನ್ನ ಬಾಳ ತೇರು ನೋವಿರಲಿ ನಲಿವಿರಲಿ ಜತೆಯಾಗಿ ನೀನಿರಲು ಬಾಳಲ್ಲಿ ಅರಳುತಿದೆ ಹೂವು ಬಣ್ಣಬಣ್ಣದ ಹೂವು ಅರಳಿರುವ ಗಿಡದಂತೆ ನಿತ್ಯ ನಗುತ್ತಿರುವ ನಾವು ಕಷ್ಟ ಸುಖಗಳಲಿ ಜತೆಯಾಗಿ ಪಂಕಜಾ.ಕೆ

ನಿನಗಾಗಿ

ನಿನಗಾಗಿ ಇಬ್ಬನಿಯ ಹನಿಯಂತೆ ತಬ್ಬಿರಲು ಮನಸನ್ನು ಕೋಪತಾಪದ ಬಿಸಿಗೆ ನಲುಗಿ ಹೋಯಿತು ಮನಸು ಪ್ರಿಯೆ ನೀ ನೇಕೆ ಮುಖತಿರುವಿ ನಿಂತಿರುವೆ ತಾಳಲಾರೆನುನಾನು ನಿನ್ನ ಈ ಉರಿ ಕೋಪವ ಬಿಡು  ನಿನ್ನ ಈ ಹುಸಿಕೊಪವ ನಗುಮುಖವ ತೋರು ಬಾನಲ್ಲೇ ಕೊಡುವೆ ನಿನಗೆ ನನ್ನೊಲವಿನ ಓಲೆ ಮುಸಿ ಮುಸಿಯೆಂದು ನಗಬೇಡ ನನ್ನ ಹೃದಯಕೆ ಲಗ್ಗೆಯಿಟ್ಟು ಮುನಿದು ದೂರಸರಿಯಬೇಡ ಒಮ್ಮೆ ನೀನು ಬಂದುಬಿಡು ನನ್ನ ಮನ ಮನೆಯೊಳಗೆ ನಿನಗಾಗಿ ಕದ ತೆರೆದು ಕಾದಿರುವೆ ನಗುತ ಬಾ ಚೆಲುವೆ ಪಂಕಜಾ .ಕೆ.

ನಲ್ಲನಿಗೆ

ನಲ್ಲನಿಗೆ ಜಗವ ಮರೆಯುವ ಬಿಸಿಯಪ್ಪುಗೆಯಲಿ ನಲಿಯ ಬಯಸಿದೆ ತನುವು ಪ್ರೀತಿ ಸೋನೆಯ ಮಳೆಯಲಿ ನಿತ್ಯ ನೆನೆಯಬಯಸಿದೆ ಮನವು ಅಮೃತದ ದಾರೆಯನು ಹರಿಸುವ ಅಧರ  ರಸವ ಸವಿಯ ಬಯಸಿದೆ ತುಟಿಯು ಕಪ್ಪು ಕಂಗಳಲಿ ಮಿನುಗುವ ನಕ್ಷತ್ರಗಳಎಡೆಯಲಿ ನನ್ನ ಬಿಂಬವ ಕಾಣಬಯಸಿದೆ ಕಣ್ಣು ನೀಳ ಬಾಹುಗಳಲಿ ಹುದುಗಿ ನಿನ್ನ ಪ್ರೀತಿಯ ಸವಿಯ ಉಣಲು  ಬಯಸಿದೆ ಮನವು ವಿಶಾಲ ಎದೆಯ ಆಸರೆಯಲಿ ತಂಪು ಇಂಪಿನ ನೆರಳಲಿ ಇರಲು ಬಯಸಿದೆ ತನುವು ಕೊಡುವೆಯ ನಿತ್ಯ ನಿನ್ನ ಪ್ರೀತಿಯ ಜಲವ ಉಸಿರಿಗೆ ಉಸಿರಾಗಿ ಇರುವ ಪಂಕಜಾ.ಕೆ.

ಬಳೆಯ ನಾದ

ಬಳೆಯ ನಾದ ಬಳೆಗಾರ ಬಂದಿಹನು ಬಳೆಗಳನು ಮಾರುತ್ರ ಮನೆಯ ಬಾಗಿಲಿಗೆ ಬಣ್ಣ ಬಣ್ಣದ ಬಳೆಯು ಹೊಳೆ ಹೊಳೆಯುವ ಬಳೆಯು ಕಣ್ಣ ಸೆಳೆಯುವುದು ಕೈತುಂಬಾ ತೊಟ್ಟದನು ಸಂಭ್ರಮದಿ ಕುಣಿಯುತ್ತ ಓಡುತ್ತಿರುವ ಜಿಂಕೆಯಂತಿರುವ ನಿನ್ನ ನೋಡುವುದೇ ಚೆನ್ನ ಬಳೆಯ ಘಲ್ ಘಲ್ ನಾದಕ್ಕೆ ನಿನ್ನ ನಗುವಿನ ನಾದ ಸೇರಿ ಅಲ್ಲಾಯಿತು ಒಂದು ಹೊಸರಾಗ ಮನವು ಕುಣಿಯಿತು ಹೊಸರಾಗದಿಂದ ನಾ ಸೋತೆ ನಿನ್ನ ಕುಡಿಗಣ್ಣ ನೋಟಕ್ಕೆ ನೀ ಬಂದೆ ಕೈತುಂಬಾ ಬಳೆಗಳ ತೊಟ್ಟು ಪಡಿಯಕ್ಕಿ ಎಡವಿ ತುಂಬಿಸಿದೆ ನನ್ನ ಬರಿದಾದ ಮನೆ ಮನವ ಬಳೆಯ ನಾದದಿ ಮನಸು ತುಂಬಿ ನಿನ್ನ ಪ್ರೀತಿಯ ಹನಿಯಲಿ ನಾ ದುಂಬಿ ಚೆಲುವೆ ನೀನಿರಲು ನನ್ನ ಮನೆ ಮನ ತುಂಬಿ ಪಂಕಜಾ.ಕೆ.. ಮುಡಿಪು ಕುರ್ನಾಡು

ಒಲವ ಕರೆ

ಒಲವ ಕರೆ ಅಬ್ಬರದ ಉಬ್ಬರದಿ ಎದ್ದೆದ್ದು ಬಂದು ಹಗಲಲ್ಲೂ ಇರುಳ ಕಲ್ಪನೆಯ ತೋರುತ್ತ ಗುಡುಗು ಮಿಂಚುಗಳ ಅಬ್ಬರದಿಂದ ಸುರಿದು ಮನೆ ಮಠ ಗಳ ಕೊಚ್ಚಿ ತರಿದು ಸುರಿದು ಸಿಡಿಲಬ್ಬರಕೆ ಚಂಡಮಾರುತ ದುಬ್ಬರಕೆ  ಜನಜೀವನವ ತಲ್ಲಣಿಸಿ ಸುರಿದು  ದಣಿದು ಇಂದೀಗ ವರುಣ ನೀನೆಲ್ಲಿ ಮಳೆಯ ಸಿಂಚನದಿಂದ ಮೇಲೆದ್ದ ಗಿಡಗಳು ರವಿಯ ಕಡು ಕಿರಣಕ್ಕೆ ನೊಂದು ಬೆಂಡಾದವು ಸುರಿಸು ಮಳೆಯ ಇಳೆಗೆ ಒಲವ ಹನಿಸು ಧರೆಗೆ ಮುನಿಸು ತರವೇ ವರುಣಾ ಬೆಗಿದಪ್ಪು ನೀ ಬಂದುಇಳೆಯ ಕಾಯುತಿರುವುದು ಇಳೆ ಮಳೆ ಮೋಡಗಳ ನಿಟ್ಟಿಸುತ ಒಲವ ಕರೆಯನು ಆಲಿಸಿ ಸುರಿಸು ನೀ ವರ್ಷಧಾರೆಯ ಪಂಕಜಾ. ಕೆ. ಮುಡಿಪು ಕುರ್ನಾಡು

ಚಿತ್ತ ಚೋರ

ಚಿತ್ತ ಚೋರ ನಿನ್ನ  ಮುರಳಿಯ ಕರೆ ನನ್ನ ಮನವನು ಸೆಳೆದು ನಿನ್ನೊಲವ ಭಾವವನು ತಿಳಿಸಿತಂದು ಒಲಿದು ಬಂದೆನು ನಿನ್ನ ಪ್ರೇಮಗಾನ ದ ಕರೆಗೆ ಮನವ ಕದ್ದು ಒಲವಪಡೆದೆ ನಾನಿಂದು ಮನವ ಕದ್ದಿಹ ಚೋರ ನೀ ಜತೆಯಲಿರಲು ಒಂದೊಂದು ಕ್ಷಣವೂ ಮದುರಾತಿ ಮಧುರ ನೀನಿಲ್ಲದಾ ಕ್ಷಣವು ನಿಮಿಷಗಳು ಯುಗಗಳಾಗಿ ತುಂಬುತ್ತಿದೆ ಶೂನ್ಯಭಾವ ಎಂದು ಬರುವೆಯೋ ನಲ್ಲ ನಿನ್ನ ಒಲುಮೆಯ ಪಡೆದ ನಾ ಧನ್ಯಳೆಂದು ಬೀಗಿದ್ದೆನಾಗ ನೀ ನಡೆದೆ ನನ್ನೊಲವ  ಕರೆಗೆ ಕಿವುಡನಂದದೀಗ ರಾಧೆಯೊಲುಮೆಗೆ ನೀ ಮೌನವಾಗಿರುವಿಯೇಕೆ ಮರೆತು ಹೋಯಿತೇ ಆ ಮಧುರ ಕ್ಷಣವೂ ಬೃಂದಾವನದ ಯಮುನಾ ತೀರದಲ್ಲಿ ನಮ್ಮಿಬ್ಬರೊಡನಾಟಕ್ಕೆಯಾರ ಕೆಟ್ಟ ಕಣ್ಣಿನ ದೃಷ್ಟಿ ತಗಲಿತೋ ಅಗಲಿಕೆಯ ಈ ಕ್ಷಣವ ಸಹಿಸಲಾರೆ ಕಾಯುತ್ತಿದೆ  ತನು ಮನವು ನಿನ್ನ  ಒಲವಿನೊಡನಾಟಕ್ಕೆ ಎಂದು ಬರುವೆಯೋ ಚಿತ್ತ ಚೋರ  ಶ್ರೀ ಕೃಷ್ಣ ಬೇಗ ಬಂದೆನ್ನ  ತಣಿಸು ಪಂಕಜಾ .ಕೆ. ಮುಡಿಪು ಕುರ್ನಾಡು

ಶುಭಸಂಜೆ

ಶುಭ ಸಂಜೆ ಪಡುಗಡಲಲ್ಲಿರವಿಮುಖವನುಮರೆಸಿ ಬಾನಲಿ ಬಣ್ಣದಹೊದಿಕೆಯ ಹಾಸಿದನು ನಿಶೆ ಯೊಡನಾಡಲು ತೆರಳುತ ಬುವಿಯಲಿ ಕತ್ತಲೆ ತುಂಬಿದನು ನಿಶಾದೇವಿಯ ಸೆರಗಲಿ ಮರೆಯಾಗುತ ವಿಶ್ರಾಂತಿ ಯ ಬಯಸುತ ತೆರಳಿದನು ಸಂಜೆಯ ಸೊಬಗಲಿಮೈ ಮರೆತಿರಲು ಕತ್ತಲೆ ಮುಸುಕಿತು ಬುವಿಯಲ್ಲಿ ತಾರೆಗಳೆಲ್ಲ ಬಾನಿನ ತುಂಬಾ ಕಣ್ಣನು  ಮಿಟುಕಿಸಿದವು ಹಾಲಿನ ಬೆಳಕನು ಚೆಲ್ಲುತ ಶಶಿಯುದಿಸಿದನು  ಭರದಿಂದ ತಂಪಿನ  ಗಾಳಿಯು ಮೈಯನು ಸವರಿ ತಂದಿತು ತನುವಿಗೆ ನಡುಕವನು ಮಾಗಿಯ ಚಳಿಯು ಮೈಯನು ಸವರಲು ಮೂಡಿತು ಮನದಲಿಕಾಮನ ಬಿಲ್ಲು ತುಂಬಿ ಹರಿಯುವ ತೊರೆಯಂತೆ ಮನದಲಿ ಉಕ್ಕಿತು ಸಂತಸದಲೆ ಶುಭ ಸಂಜೆಯ ಸೊಬಗನು ಸವಿಯುತ ಕಣ್ಣುಗಳೆರಡು ಸಾರ್ಥಕ್ಯದ ಭಾವವ ತಾಳಿದವು ಪಂಕಜಾ.ಕೆ. ಮುಡಿಪು ಕುರ್ನಾಡು

ಕಾಮಧೇನು

ಕಾಮದೇನು ಕಾಮಧೇನುವು ನೀನು ಹಾಲಹೊಳೆಯನು ಹರಿಸಿ ಬುವಿಯಲ್ಲಿ ನಮ್ಮನ್ನು ಪೊರೆದಾಕೆ ಅಂದು ಇಂದು ನಿನ್ನ ಅಮೃತದ ಪಾನದಿಂದ ಬದುಕಿ ಇಂದು ನಾವು ನಿಂತಿರುವೆವು ಆರೋಗ್ಯ ತುಂಬಿ ತುಳುಕಿ ಮತಿಹೀನ ಜನರಿಂದು ನಿನ್ನ ಕರುಣೆಯ ಮರೆತು ಕಾಡುವರು ಅನವರತ ತಟ್ಟದೇ ಅವರಿಗೆ ನಿನ್ನ ಶಾಪ ಕಡಿದು ತಿನ್ನುವರು ನಿನ್ನ ಸಂತತಿಯ ಉಳಿಸದೆಯೇ ಉಳಿದೀತೆ ಅವರ ಸಂತತಿ ಕೊಚ್ಚಿಹೋಗದೆ ಅದು ನಿನ್ನ ಕಣ್ಣೀರಿನಲಿ ಅಂದು ಮಾಧವನು ನಿನ್ನ ಕಾಯ್ದಂತೆ ಇಂದು ನಮ್ಮ ಗುರುವರರು ತೊಟ್ಟಿಹರು ದೀಕ್ಷೆ ಗುರುಕರುಣೆಯಿರಲು ನೀನಲ್ಲ ಅಬಲೆ ಅಮೃತ ಸಮಾನವಾದ ಹಾಲು ಮಲಮೂತ್ರಗಳಲೂ ಔಷದಿಯ ಪಾಲು ಸಕಲ ಲೋಕಗಳುಇರುವ ತಾಣ ಭಗವಂತನ ನೆಲೆ ನೀನಿರುವ ತಾಣ ಅದು ತಿಳಿದು ಕಾಯಬೇಕು ನಿನ್ನ ಪ್ರಾಣ ಪಂಕಜಾ.ಕೆ .ಮುಡಿಪು.ಕುರ್ನಾಡು

ಗಣೇಶನಾಗಮನ

ಗಣೇಶನಾಗಮನ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗೆಜ್ಜೆ ಕಾಲ ಕುಣಿಸುತಲಿ ಬಂದನಲ್ಲ ನಮ್ಮ ಗಣಪ ಬಂದನಲ್ಲ ಸೊಂಡಿಲನನ್ನು ಆಡಿಸುತ್ತ ದೊಡ್ಡ ಕಿವಿಯಲಿ ಗಾಳಿ ಹಾಕುತ ವಕ್ರದಂತವ ತೋರಿಸುತ್ತಾ ಬಂದನಲ್ಲ ಬಗೆ ಬಗೆಯ ತಿಂಡಿಗಳ ಬೇಗದಲ್ಲಿ ತಿನ್ನುತ್ತ ದೊಡ್ಡ ಹೊಟ್ಟೆಯ ಕುಣಿಸುತ್ತ ಬಂದನಲ್ಲ ಭಕ್ತರನ್ನು ಹರಸುತ್ತ ಭಕ್ತಿಗವನು ಒಲಿಯುತ್ತ ತಿಂಡಿ ತೀರ್ಥ ಎಲ್ಲಕ್ಕಿಂತ ಭಕ್ತಿಯಿಂದ. ಭಜಿಸುದೇ ಇಷ್ಟ ಎಂದನಲ್ಲ ನಿತ್ಯವೂ ಭಜಿಸುವವರ ಇಷ್ಟಾರ್ಥಗಳ ಈಡೇರಿಸುವೆ ಎಂದನಲ್ಲತಾಯಿ ಪಾರ್ವತಿಯ ಕುವರ ಭಕ್ತವತ್ಸಲ  ಮುದ್ದು ಗಣಪ ಪಂಕಜಾ .ಕೆ ಮುಡಿಪು ಕುರ್ನಾಡು

ಹೂ ಮನಸು

ಹೂ ಮನಸು ಮಂಜಿನಾ ಸ್ಪರ್ಶದಲಿ ಮೈಮರೆತು ನಿಂತಾಗ ಮೆಲ್ಲ ಮೆಲ್ಲನೆ ಬಂದು ಮನಕೆ ಲಗ್ಗೆಯಿಟ್ಟೆಯೇಕೆ ಮಂಜು ಹನಿಗಳು ಕರಗಿ ಮುತ್ತಾಗಿ ಸಾಗುತಿರಲು ಮನದಿ ತುಂಬಿದ  ಭಾವನೆಗೆ ಮುನಿದು  ಕರಗಿದೆಯೇಕೆ ನಿನ್ನ ಕೋಪದ ಬಿಸಿಲಝಳ ಸೋಕಿ  ನಾ  ನಿಂದು ಬೆಂದೆ ಆಸರೆಯು ನೀ ನನಗೆ ಎಂದೆ ಹೂ ಮನಸಲಿ ನೀನಂದು ಕನಸ  ಬಿತ್ತಿದೆಯೇಕೆ ವರುಣ ಬಂದನು ಇಂದು ಬಿಸಿಲ ತಾಪವ ತಣಿಸಿ ಮುದಕೊಟ್ಟ ಮೈ ಮನಕೆ ಅರಳಿ ನಲಿಯಿತು ಜೀವ ಮನಸು ತಂಪಾಯಿತೇಕೆ ತುಂಬಿ ನಿಂತಿತು ಚಿಗುರುಹೂವು ಕಣ್ಣು ತುಂಬುವ ಚೆಲುವು ದುಂಬಿಗಳಾಕರ್ಷಣೆಗೆ ತುತ್ತಾಗಿ ಇಂದು ನಿನ್ನ ಸೇವೆಯಲಿ ನಾ ಧನ್ಯಳಾದೆ ನೀ ನಗುವ ಬೀರುವೆಯೇಕೆ ಪಂಕಜಾ.ಕೆ.

ನೆನಪಿನಲೆಗಳಲಿ

ನೆನಪಿನಲೆಗಳಲಿ ಸಂತಸದ ಹಕ್ಕಿಗಳು ಸವಿಜೇನ ಹೊನಲಾಗಿ ಸಾವಿರ ಸಾವಿರ ಕನಸುಗಳಾಗಿ ಸಾಗುತಿದೆ ಮನದಲಿ ಇಂದು ನಲ್ಲ ನಿನ್ನ  ಸವಿ ನೆನಪು ನಾ ಮುಂದು ತಾ ಮುಂದು ನವಿರಾಗಿ ಮನತುಂಬಿ ನುಗ್ಗುತಿದೆ ಮನದಲಿ ಇಂದು ಹಾರುತಿರುವ ಹಕ್ಕಿಗಳಂದದಿ ಹೊಸಬಾಳ ಪಯಣದಲಿ ಹಾಡುತ್ತಿದೆ  ಹೊಸರಾಗ ಹೂ ಮನದಲಿ  ಇಂದು ನಿನ್ನ ಸಾಂಗತ್ಯವು ಕೊಟ್ಟ ಕುಶಿ ನಿನ್ನೆ ಇಂದಿನದಲ್ಲ ನೋವು ನಲಿವುಗಳೆರಡರ ನೆನಪಾಗಿಕಾಡುತಿದೆಮನದಲಿಇಂದು ನಾವಿಬ್ಬರೊಂದಾಗಿ ಬಾಳಿ ನಗುತ ಸಾಗಿದ ದಿನಗಳು ನೆನಪಾಗಿ  ನಿಂತಿದೆ ನನ್ನ  ಮನದಲಿ  ಇಂದು ಬಾಳ  ಪಯಣದಲಿ ಬಂದು ನೀ ನನ್ನ ಜತೆಯಾಗಿ ಬಿಗಿದಪ್ಪಿ  ಸಂತೈಸಿದಾಕ್ಷಣವು ಬಾಳು ಸಾರ್ಥಕ್ಯ ಪಡೆದನೆನಪು ಬಂದು ನಿಂತಿದೆ ಮನದಲಿ ಇಂದು ಪಂಕಜಾ.ಕೆ.

ಮಳೆ ಹಾಡು

ಮಳೆ ಹಾಡು (ಮಂಗಳೂರು ಹವ್ಯಕ ವಾರ್ತೆ ಜೂಲೈ 2018 ರಲ್ಲಿ ಪ್ರಕಟಿತ) ಆಗಸದಿ ತುಂಬಿರುವ ಮೋಡಗಳ ದಂಡು ಭುವಿಗೆ ತಂದಿತು ಹರ್ಷದ ದಿಂಡು ಬಾನು ಭುವಿ ಒಂದಾಗುವ ಮಳೆ ಇಳೆಗೆ ತಂದಿತು ಹರ್ಷದ ಹೊಳೆ ಕೆರೆಕಟ್ಟೆ ಕೊಳಗಳಲಿ ತುಂಬಿದ ನೀರು ಪ್ರಕೃತಿಯಲಿ ತುಂಬಿದೆ ಹೂವ ತೇರು ವರುಣನಾಗಮನದಿಂದನಲಿಯುತ್ತಿದೆ ಪ್ರಕೃತಿ ತೊಳೆದು ಹೋಯಿತು ಎಲ್ಲಾ ವಿಕೃತಿ ತುಂಬಿ ತುಳುಕಲಿ ಕೆರೆ ಕಟ್ಟೆ ಹೊಳೆ ರೈತಾಪಿ ಮಕ್ಕಳು ಬೆಳೆಯಲಿ ಬೆಳೆ ಪ್ರಕೃತಿ ಕೊಟ್ಟಿದೆ ಹಸಿರು ಉಸಿರು ಕಾಯಬೇಕು ನಾವು ಅದರ ಬಸಿರು ಎಲ್ಲೆಲ್ಲೂ ತುಂಬಿರುವ ಹಸಿರು ಕಣ್ಣು ಮನ ತುಂಬುವ ಚಿಗುರು ಬಿರುಬಿಸಿಲಿಗೆ ಬಾಡಿಬೆಂಡಾದ ಇಳೆ ತೊನೆದು ಕುಣಿಯಿತು ಸುರಿವ ಮಳೆಗೆ ಪಂಕಜಾ. ಕೆ. ಮುಡಿಪು ಕುರ್ನಾಡು

ವಸಂತನಾಗಮನ

ವಸಂತನಾಗಮನ ಮಾವಿನ ಮರದಲಿ ಹೂವುಗಳರಲಿ ಮನದಲಿ ಸಂತಸ ಭಾವವ ತುಂಬಿ ಮಧುವನು  ಹೀರಲು ಬರುತಿಹ ಹಕ್ಕಿಗಳ ಕಲರವ  ಸಂತಸ  ಸಂಭ್ರಮ ಮನದಲಿ ತುಂಬಿ ಪ್ರಕೃತಿಯ ಚೆಲುವು ಇಮ್ಮಡಿಯಾಗಿ ಕಣ್ಮನವೆಲ್ಲಾ ತುಂಬಿ ಮೈಯನು ಮರೆಸುತಿದೆ ಹಿಗ್ಗಿನ ಸುಗ್ಗಿಯು ಉಕ್ಕಿ ಮನದಲಿ ಸಂತಸದ ಬುಗ್ಗೆಯು  ಅರಳಿ ಜೀವನ ಪ್ರೀತಿಯ ತುಂಬುತಿದೆ ಮಾವಿನ ಮರದಲಿ ಹಾಡುವ ಕೋಗಿಲೆ ಹಾರುವ ದುಂಬಿಗಳಾಟ ಮೈಮನ ಮರೆಸುವ ನೋಟ ವಸಂತನಾಗಮನದಿಂದ ಎಲ್ಲೆಡೆ ತುಂಬಿತು ಹಸಿರಿನ ಉಸಿರು ಮನದಲಿ ಸಂತಸದುಸಿರು ಪಂಕಜಾ.ಕೆ. ಮುಡಿಪು ಕುರ್ನಾಡು

ಮುನಿದ ನಲ್ಲೆಗೆ

ಮುನಿದ ನಲ್ಲೆಗೆ ಕಿಟಕಿ ಬಾಗಿಲೆಡೆಯಲಿ ಇಣುಕುತಿರುವನು ಚಂದಿರ ಖುಷಿಯ ಪಡುವ ಕ್ಷಣಗಳಲಿ ಕೋಪವೇಕೆ ನನ್ನ ಇಂದಿರ ನಮ್ಮ ಕಲಹವ ನೋಡಿ ನಗುತಲಿರುವನು ಚಂದಿರ ಏನು ಮಾಡಿದೆ ನೀನು ಮೋಡಿ   ನನ್ನ ಬಾಳಿನ ಇಂದಿರ ಕೋಪ ಬಿಟ್ಟು ನಗುವ ತೋರೆ ಬರಲಿ ನಮ್ಮ ಬಾಳಲಿ ಚಂದಿರ ಒಲವ ಸವಿಯನು ಸವಿವ ಬಾರೆ ನೀನೇ ನನ್ನ ಬಾಳಿನ ಚಂದಿರ ಕೋಪತಾಪದಿ ನಲುಗದಿರಲಿ ನಮ್ಮ ಬಾಳಿನ ತೋಟವು ಅರಳಿ ನಗಲಿ ನಿತ್ಯ ಇರಲಿ ಬಣ್ಣ ಬಣ್ಣದ ಹೂವ ಚೆಲುವು ತಾರೆಗಳನುತಂದುಕೊಡವೆನೆಂದು ಆಶೆ ಹುಟ್ಟಿಸಲಾರೆನು ನನ್ನಒಲವನಿತ್ಯಕೊಡುವೆನೆಂದು ಭರವಸೆ ಕೊಡುವೆನು ಮೋಡ ತುಂಬಿದಬಾನಿ ನೆಡೆಯಲಿ ಇಣುಕುತಿರುವ ಚಂದಿರ ತಾರೆಗಳನೊಡನಾಟವಿಲ್ಲದೆ ಸೊರಗುತ್ತಿರುವುದು ಕಂಡಿರ ನಲ್ಲೇ  ನಿನ್ನೊಡನಾಟವಿಲ್ಲದೆ ನಿತ್ಯ ಸೊರಗುತ್ತಿರುವೆನು ಕೋಪ ಬಿಟ್ಟು ಒಲವ ತೋರಿ ತುಂಬು ನನ್ನ ಬಾಳಲಿ ಬಣ್ಣವ ಪಂಕಜಾ. ಕೆ ಮುಡಿಪು ಕುರ್ನಾಡು

ಮಲ್ಲಿಗೆಯೊಳಗೆ

ಮಲ್ಲಿಗೆಯೊಳಗೆ ಮಲ್ಲಿಗೆಯ ಮಾಲೆಯನು ಮುಡಿಗೇರಿಸಿ ಮನವ ಕೆಣಕುವ ಮುಸಿನಗೆಯಲಿ ಮನವರಳಿತು ಮಾನಿನಿಯೇ ಮನದಲೇನಿದೆ ಮೌನದಲಿ ಕೆಣಕಿ ಮನಸೂರೆಗೊಂಡೆ ಮುನಿಸೀಕೆ ಮಲ್ಲಿಗೆಯಿರಲು ಮುನಿಸು ತೊರೆ ಮಲ್ಲಿಗೆಯ ಮಾಲೆಯನು ಮುಡಿಸುವೆನು ಮುಡಿಯಲ್ಲಿ ಮನೆ ಮನವ ತುಂಬಿ ಮನಸು ತಣಿಸಿ ಮುದ ಗೊಳಿಸು ಮರೆಯಲಾರೆ ನನ್ನ ಮನಸೆಳೆದ ನಲ್ಲೇ ಪಂಕಜಾ. ಕೆ. ಮುಡಿಪು ಕುರ್ನಾಡು

ಬೀಡಾಡಿ ನಾಯಿ

ಬೀಡಾಡಿ ನಾಯಿ ಬೀಡಾಡಿ ನಾಯಿಗಳು ಅಲೆಯುತ್ತಿವೆ ಎಲ್ಲೆಡೆ ಹುಚ್ಚು ನಾಯಿಯ ತೆರದಲಿ ಅಡ್ಡ ಗಟ್ಟುತ ದಾರಿಯ ಕಾರಣವಾಗುತ್ತಿದೆ ಅಪಘಾತಕೆ ಪ್ರಾಣಿದಯ ಸಂಘದವರು ಕೊಲ್ಲಲು ಬಿಡದೆ ಅವುಗಳ ಸಂತತಿಗಳು ವೃದ್ಧಿಸುತಿದೆ ವರ್ಷದಿಂದ ವರ್ಷಕೆ ನಾಯಿಗಳ ಮೇಲಿರುವ ಕರುಣೆ ಹಾಲು ಕೊಟ್ಟು ನಮ್ಮ ಪೊರೆವ ಕಾಮಧೇನು ವಿನ ಮೇಲಿಲ್ಲವು ನಿತ್ಯ ಗೋವುಗಳ ಕಡಿದು ತಿಂದು ಹರಣವಾಯಿತು ಅವುಗಳ ಸಂತತಿ ಗೋವು ನಮ್ಮ ಎರಡನೇ ತಾಯಿ ಎನ್ನುವುದು ತಿಳಿಯಲಾರದೆ ಇವರಿಗೆ ಬೀಡಾಡಿ ನಾಯಿಗಳ ಹಿಡಿದು ಮಾಡಬೇಕುಅವಕೆ ಸಂತಾನಹರಣವ ತಪ್ಪಿದರೆ ತುಂಬಿಹೋದೀತು ಎಲ್ಲ ಕಡೆಯೂ  ಅವುಗಳೇ ಪಂಕಜಾ. ಕೆ ಮುಡಿಪು ಕುರ್ನಾಡು

ಪ್ರಕೃತಿ ಮುನಿಸು

ಪ್ರಕೃತಿ ಮುನಿಸು ಬಾನು ತುಂಬಿದೆ ಕರಿಯ ಮುಗಿಲು ಕಪ್ಪು ಬಂಡೆಯ ತೆರದಲಿ ಸುರಿದ ಮಳೆಯು ತುಂಬುತ್ತಿರುವುದು ಜಲಪ್ರಳಯದ ತೆರದಲಿ ಕೆರೆ ಕೊಳ ಕಟ್ಟೆಗಳು ಉಕ್ಕಿ ಹರಿಯಿತು ಭರದಲಿ ರಸ್ತೆಯೆಲ್ಲನೀರು ತುಂಬಿ ಗುಡ್ಡ ಬೆಟ್ಟಗಳುಜರಿಯಿತು ಗುಬ್ಬಿಗೂಡಿನ ತೆರದಲಿ ಮುಳುಗಿ ಹೋಯಿತು ಮನೆ ಮಠ ಕೊಚ್ಚಿ ಹೋಯಿತು ಜೀವನ ಅರಿವೇ ಇಲ್ಲದ ತೆರದಲಿ ಆಸ್ತಿ ಪಾಸ್ತಿ ಜಾತಿ  ವಿಜಾತಿ ಎನುತ ಕಾದ ಜಗಳವು ಮುಳುಗಿ ಹೋಗುವ   ದಿನಗಳಲ್ಲಿ ಯಾವ ಜಾತಿಯು ಹೇಳು ನೀ ಪ್ರಕೃತಿ ಮುನಿದರೆ ಇರುವುದೆಲ್ಲಿ ತುಂಬಿ ನಿಂತಿತು ಶೂನ್ಯವು ಉಸಿರು ಒಂದೇ ಇರುವುದೀಗ ಬಾಳ ಬಟ್ಟೆಯು ಹರಿದಿದೆ ದೇವ ನಿನಗೆ ಕರುಣೆ ಬಾರದೆ ಮೊರೆಯು ಕೇಳದೆ ಆರ್ತರ ಒಮ್ಮೆ ನೀನು ಬಂದು ನಿಲ್ಲಿಸು ಈ ಪ್ರಳಯ ನರ್ತನ ಪಂಕಜಾ. ಕೆ. ಮುಡಿಪು ಕುರ್ನಾಡು

ಪ್ರಕೃತಿ ಮುನಿದಾಗ

ಪ್ರಕೃತಿ ಮುನಿದಾಗ ಗುಡ್ಡ ಬೆಟ್ಟಗಳ ಕಡಿದು ಭೂತಾಯಿ ಗರ್ಭವ ಕೊರೆದು ಬಗೆದು ಹರಣ ಮಾಡಿ ಅಟ್ಟಹಾಸದಿ ಮೆರೆದೇ ನೀ ಮಾನವನ ಕ್ರೂರತೆಗೆ ಬಲಿಯಾಗಿ ನರಳಿದಳು ಕಣ್ಣೀರಿಟ್ಟು  ದಿನ ದಿನವೂ ನವೆದಳು  ಸವೆದಳು ಕೆಣಕಿದೆ ಆಕೆಯ ಸಹನೆಯನೀ ಇಂದೀಗ ಮುನಿದಳು ಆತಾಯಿ ವರುಣನ ರುದ್ರ ನರ್ತನ ಗುಡ್ಡ ಬೆಟ್ಟಗಳ ಕುಸಿತ ಎಲ್ಲೆಲ್ಲೂ ಜಲಪ್ರಳಯ ಮನೆ ಮಠಗಳು ಕೊಚ್ಚಿಹೋಗಿ ಭೀಕರ ಪ್ರವಾಹ  ಬಂದು ಪ್ರಕೃತಿ ಮುನಿದರೆ ಮನುಜ ಏನಿದೆ ನಿನಗೆ ಈಗ ಮೇಲು ಕೀಳು ನಾನು ನನ್ನದು ಎಂದು ನಿತ್ಯ ಜಗಳವ ಮಾಡಿ ಅಹಂಕಾರ ದಿ ಮೆರೆದಾಡಿದೆ ಪ್ರಕೃತಿ ಲೂಟಿಯ ನಿತ್ಯ ಗೈದೆ ಪ್ರಕೃತಿ ಮುನಿದಾಗ ಜೀವ ಉಳಿಸಲು  ಇಂದೀಗ ನೀ ಪರದಾಡುತಿರುವೆ ಪ್ರಕೃತಿ ಮುನಿದಾಗ ಮನುಜಗೆಲ್ಲಿದೆ ಜಾಗ ಎಲ್ಲವೂ ಜಲಪ್ರಳಯದಲಿ ಕೊಚ್ಚಿ ಹೋಗಿ ಇರುವುದೊಂದೆ ಜೀವ ಬೇಕಿತ್ತೆ ನಿನಗೆ ಈ ಅಹಂಕಾರ ಮೋಹ ಮದ ಮಮಕಾರ ಪ್ರಕೃತಿ ಯ ಹರಣ ಮಾಡುವ ಈ ನೀಚಬುದ್ಧಿ ಪಂಕಜಾ. ಕೆ. ಮುಡಿಪು.ಕುರ್ನಾಡು

.ಮಾತೆಗೊಂದು ನುಡಿ ನಮನ

ಮಾತೆಗೊಂದು ನುಡಿ ನಮನ(ನನ್ನ ಅಳಿಯನ ಅಜ್ಜಿ ಯವರಿಗೆ ನಮನ) ಮಾತೇ ನಿಮ್ಮ  ನನ್ನ ಪರಿಚಯ ಆದ ಆ ಸುದಿನದ ನೆನಪು ಇಂದಿಗೂ ಮನದಲಿಹಸಿರಾಗಿದೆ ಮರೆಯಲೆಂತುನಿಮ್ಮಮಮತೆಯನು ನಮ್ಮ  ಮುದ್ದಿನ ಮಗಳನು ನಿಮ್ಮ ಉಡಿಯಲ್ಲಿಟ್ಟಸುದಿನವು ನೀವು ಕೊಟ್ಟ ಆ ಭರವಸೆ ಉಳಿಸಿದಿರದನು ಕೊನೆವರೆಗೆ ಹೆತ್ತಮ್ಮನ ಮಮತೆಯನು ಕೊಟ್ಟು ಮನಕೆ   ಮುದ ತಂದಿರಿ ಜಗದ ಜಂಜಾಟವತೊರೆದು ಮುಕ್ತಿ ಪಥದಲ್ಲಿ ನಡೆದು ಅನಾಥರಾಗಿಸಿದಿರಿ ಇಂದು ನಮ್ಮನು ಮನೆ ಮಂದಿಯರ ಬಗ್ಗೆ ನಿತ್ಯ ಕಾಳಜಿ ತೋರಿ ನಮ್ಮೆಲ್ಲರ ಮನೆ ಮನದಲಿ ನಿತ್ಯವೂ ಹಸಿರಾಗಿ ನಿಂತಿರಿ ಕಾಯ ಅಳಿದರೂ ನಿಮ್ಮ  ಆ ಸುಂದರ ನಗುಮುಖ ಅತಿಥಿ ಸತ್ಕಾರದ ಆ ಮನವ ಮರೆಯಲಾರೆವಮ್ಮ ನೀವಿಲ್ಲವೆಂಬ ಭಾವ ಇನಿತೂ ಬರದಂತೆ ತುಂಬಿ ನಿಂತಿರಿ ನಮ್ಮ ಮನದಲಿ ನಿಮ್ಮ ನೆನಪಿನ  ಬುತ್ತಿಯಿಟ್ಟು ನೀವಿಂದು ಅಮರರಾದಿರಿ ಇರಲಿ ನಿಮ್ಮ ಅಶೀರ್ವಾದ ಅನವರತವೂ ನಮ್ಮ ಮೇಲೆ ಆಗಸದ ತಾರೆಯಂದದಿಬಾಳಿ ಬದುಕಿ ಜೀವ ಸಾರ್ಥಕ್ಯವಪಡೆದ ನಿಮಗಿದೋನಮ್ಮಭಾವಪೂರ್ಣಶ್ರದ್ಧಾಂಜಲಿ ಪಂಕಜಾ ಕೆ. ಮುಡಿಪು ಕುರ್ನಾಡು

ರಾಖಿ ಹಬ್ಬ

ರಾಖಿ ಹಬ್ಬ ರಾಖಿಯ ಕಟ್ಟಲು ಕಾಯುವ ಕೈಗಳು ಮಮತೆಯ ಮಳೆಯನು ಸುರಿಸುತಿದೆ ರಾಖಿಯ. ಬಂಧನ ಸ್ನೇಹದ ಬಂಧದಿ ಬಿಗಿಯುತ ಮುದವನು ತುಂಬುತಿದೆ ಅಣ್ಣನ ಹಾರೈಕೆ ತಂಗಿಗೆ ರಕ್ಷೆ ತಂಗಿಯ ರಕ್ಷೆ ಅಣ್ಣನ ಉಸಿರು ಸಹೋದರ ಪ್ರೇಮದಿ ನಲಿಯುವ ದಿನವು ರಾಖಿಯ ಕಟ್ಟುತ ಸಂಭ್ರಮಿಸುತಿದೆ ರಾಖಿ ಹಬ್ಬದ ಸಂಭ್ರಮವು ಸೋದರಪ್ರೀತಿಯದ್ಯೋತಕವು ಮಮತೆಯ ಬಂಧನ ಬೆಸೆಯುವುದು ಸಹೋದರ ಬಾಂಧವ್ಯವನು ಅಣ್ಣನ ಬಾಳಲಿ ಸುಖ ಸಂತೋಷವು ತುಂಬಿರಲೆಂದು ಹಾರೈಸುತ್ತಿದೆ ತಂಗಿಯ ಮನವು ತಂಗಿಯ ಜೀವನ ಸುಖ ಸಂತೋಷದಿ ಕಳೆಯಲಿ ಎಂದು ಅಣ್ಣನು ಹರಸುವನು ಅಣ್ಣನ ಹರಕೆ ತಂಗಿಯ ಬಯಕೆ ಈಡೇರುತ ಖುಷಿಯಲಿ ನಲಿಯುವ ದಿನವಿಂದು ಸಹೋದರ ಪ್ರೇಮವರಳಿ ಜಗದಿ ನೆಲೆಸಲಿ ಸುಖ ಶಾಂತಿ ಪಂಕಜಾ. ಕೆ. ಮುಡಿಪು ಕುರ್ನಾಡು

ಕಾದಿಹಳು ರಾಧೆ

ಕಾದಿಹಳು ರಾಧೆ ಕಾದಿಹಳು. ರಾಧೆ ಮಾಧವನ ಬರುವಿಕೆಯ ನಿರೀಕ್ಷೆಯ ತಪದಲಿ ಯಮುನಾತೀರದ ದಂಡೆಯಲಿ ನವಿಲಗರಿಯೊಡನಾಡುತ್ತ ಮುರಳಿಗಾನದ ಸವಿ ಯ ಕೇಳುವಾತುರದಲಿ ಎದೆತೆರೆದು ನಿಂತಿಹಳು ಬರುವೆನೆಂದವ ಮರೆತನೆ ರಾಧೆಯೊಲವಿನ ನೆನಪ ನವಿಲುಗರಿಯೊಡೆಯ ಮನಕೆ ಮುದಕೊಟ್ಟು ನಲಿದವ ಕೊಳಲನೂದುತ ಮನಸೆಳೆದವ ಕಾಯುತಿಹಳು ರಾಧೆ ಒಲವಗಾನದಕರೆಗೆ ಮನತೆರೆದು ಎಂದು ಬಂದಾನೋ ಮಾಧವ ತಾಳಲಾರದೆ ವಿರಹ ಸುಡುತಿರುವ ತನುವ ಬಳಸುತಿಹ  ಬಾಹುಗಳ ನಿರೀಕ್ಷೆಯಲಿ ಕಾದಿಹಳು ಎಂದು ಬಂದಾನೋ ಮೋಹನಾಂಗ ಬಳಸುತ ಬಳ್ಳಿ ನಡುವ ಕೊಳಲನೂದುತ ಮನವ ತಣಿಸುವ  ನಲ್ಲ ಕಾಯುತಿರು ವ ಳು ರಾಧೆ ಪಂಕಜಾ. ಕೆ. ಮುಡಿಪು ಕುರ್ನಾಡು

ಮುಕ್ತಿ ಹನಿಕವನ

[15/08, 12:21 PM] pankajarambhat: ( ಹನಿಕವನ )ಮುಕ್ತಿ ಬ್ರಿಟಿಷರ ದಾಸ್ಯದಿಂದ ಸಿಕ್ಕಿತಂದು ಮುಕ್ತಿ ಭ್ರಷ್ಟ ರಾಜಕಾರಣಿಗಳಿಂದ ಎಂದಿಗೆ ಮುಕ್ತಿ? ಮಕ್ಕಳನ್ನು ಬಿಡದ ಕಾಮುಕರ ಅಟ್ಟಹಾಸ ಮಕ್ಕಳು ಮಹಿಳೆಯರ ಮೊಗದಲಿ ಕಾಣಬಹುದೇ ಮಂದಹಾಸ? ನಡೆಯುತ್ತಿದೆ ಸ್ವಾತಂತ್ರ್ಯದ ಹೆಸರಲಿ ಸ್ವೇಚ್ಛಾಚಾರ ಆಗಿದೆ ಸ್ವಾತಂತ್ರೋತ್ಸವ ಕೇವಲ ಡಂಬಾಚಾರ ಜಾತಿ ಮತ ಪಂಥಗಳಲಿ ಹೊಡೆದಾಟ ಜಾತಿ ಬೀಜವ ಬಿತ್ತಿ ಮಾಡುವರು ಡೊಂಬರಾಟ ಪಂಕಜಾ.ಕೆ ವಿಮರ್ಶೆ [15/08, 3:19 PM] pankajarambhat: ಪಂಕಜ ರವರ ಹನಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಇಲ್ಲವೆಂದು ಸಮಸ್ಯೆ ಆದರೆ ಈಗ ಸ್ವತಂತ್ರರಾಗಿದ್ದರೂ ಭ್ರಷ್ಟಾಚಾರದ ಅನೀತಿ ಅನ್ಯಾಯದ ದಾಸ್ಯ ಕಾಡುತಿದೆ [15/08, 3:19 PM] pankajarambhat: ಪಂಕಜ ಮೇಡಂ ರವರ ಹನಿಗವನ  ಮುಕ್ತಿ ಬ್ರಿಟಿಷರಿಂದ ಪಡೆದ ಈ ಸ್ವಾತಂತ್ರ್ಯ ಇಂದು ಸ್ವೇಚ್ಠಾಚಾರ ಆಗಿದೆ ಎನ್ನುವ ವಿಷಾದದ ಛಾಯೆ ನಿಮ್ಮ ಹನಿಗವನ ದಲ್ಲಿ ಪ್ರಕಟವಾಗಿದೆ. ರಾಜಕೀಯ ಅರಾಜುಕತೆ ನಿಲ್ಲದ ಅಮಾಯಕರ ಗೋಳು ಇಂದಿನ ದೊಂಬರಾಟಕ್ಕೆ ಈ ಜಾತಿ ಪದ್ಧತಿ ಎಂಬ ಅನಿಷ್ಟ ವೇ ಕಾರಣ. ಇದು ತೊಲಗದೇ ಈ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲ. ಈ ಎಲ್ಲಾ ಆಟೋಪಗಳಿಗೆ ಮುಕ್ತಿ ದೊರತಾಗಲೇ ದೇಶಕ್ಕೂ ನಿಜವಾದ ಸ್ವಾತಂತ್ರ್ಯ ಬಂದಂತೆ ಎನ್ನುವ ಆಶಯ ಪ್ರಸ್ತುತ ದೇಶದ ವಾಸ್ತವಿಕತೆಯನ್ನು ತುಂಬಾ ಸೊಗಸಾದ ರೀತಿಯಲ್ಲಿ ಚಿತ್ರಸಿದ್ದೀರಿ ಮೇಡಂ. 👌🏼👌🏼👌🏼🙏🏾

ಹೂವಿನ ಬಾಳು

ಹೂವಿನ ಬಾಳು ಹಸಿರೆಲೆಗಳ ನಡುವೆ ಅರಳಿ ನಗುತಿಹ ಚೆಲುವೆ ಬಿರಿದರಳಿದೊಂದೇ ದಿನ ಮನಸೆಳೆಯುವೆ ಎನ್ನ ಮದುಹೀರ ಬರುತಿಹ ದುಂಬಿಗಳಿಗಾಸರೆಯಾಗಿ ನಗುತ ಹಂಚುತ ಒಲುಮೆ ನಿಂತಿರುವೆ ಸೌಂದರ್ಯ ರಾಣಿಯಾಗಿ ಮನದಿ ತುಂಬಿದ ರಂಗು ಭಾವನೆಗಳ ಗುಂಗು ಉಲ್ಲಾಸ ಉತ್ಸಾಹ ತುಂಬಿ ಮನಕೆ ಮುದ ತುಂಬಿ ಒಂದು ದಿನದ ಬಾಳುವೆಯಲಿ ನಗುನಗುತ್ತಾ ಮನವ ಸೆಳೆದೆ ದೇವಪೂಜೆಯಲಿ ಪಾವನಳಾದೆ ಹೆಣ್ಣಿನ ಮುಡಿಯಲಂಕಾರಕಾದೆ ಮೊಗ್ಗರಳಿ ಹೂವಾಗಿ ನಗು ನಗುತ ಬಾಳಿ ಎಲ್ಲರ ಮನಕೆ ಮುದತಂದೆ ಸಾರ್ಥಕವಾಯಿತು ಬಾಳು ಪಂಕಜಾ.ಕೆ. ಮುಡಿಪು ಕುರ್ನಾಡು

ನೆನಪಿನೋಲೆ

ನೆನಪಿನೋಲೆ ನವಿಲು ಗರಿಯಲಿ ನೆನಪಿನ ನಗಾರಿ ನವಿರು ಪುಳಕ ನೋವ ಮರೆಸುವ ಭಾವ ಭಾವದಲಿ ಬೆಸುಗೆ ಬಾಹು ಬಂಧನದಲ್ಲಿ ಒಲವು ಭರಪೂರ ಖುಷಿ ನೆನಪುಗಳ  ಮಾಲೆ ನನಸಾಗುತ ಸಾಗಿ ನವಿರು ಭಾವದಲಿ ನಲಿಯುತಿರಲು ಮನಕೆ ಮುದತರುವ  ಓಲೆ ಮನದಲಿ ಮಾಧವನ ಬಲೆ ಮೋಹನಾಂಗನ ಲೀಲೆ ಮನದಿ ರಿಂಗಣಿಸುವ ಒಲವು ಯಮುನೆಯ ತೀರದಲಿ ಯೋಚನೆಯ ಭಾರದಲಿ ಯಾವತ್ತೂ ಇಲ್ಲದ ಭಾವ ಯವ ಜನ್ಮದ ಮೈತ್ರಿ ಕೊಳಲಿನ ನಾದ ಕಿವಿಗಳಲಿ ತುಂಬಿ ಕಂಬನಿಯ ಭಾರಕ್ಕೆ ಕಣ್ಣು ಮಂಜಾಗುತ ಕಾಯುವಿಕೆಯ ತಪದಲಿ ಕರಗುತ ನಿಂದಳು ರಾಧೆ ಪಂಕಜಾ. ಕೆ. ಮುಡಿಪು.ಕುರ್ನಾಡು

ಮೌನರಾಗ

ಮೌನ ರಾಗ ಹೆಪ್ಪುಗಟ್ಟಿದ ಮೌನ ಪರದೆಯೊಳಿರಲು ಹೃದಯ ಹಾಡಿದೆ ಮೂಕರಾಗ ಮನವು ನರಳಿದೆ ಮೌನರಾಗದಲಿ ಬೆನ್ನು ತಿರುಗಿಸಿ ನಿಂತೆಯೇಕೆ ನನ್ನ ಒಲವ ತಿಳಿಯದೆ ಪ್ರೀತಿ ಮಾಲೆಯ ಹಿಡಿದು ಕಾಯುತಿರುವುದು ಕಾಣದೇ ಮುಖವ ತಿರುಗಿಸಿ ಒಮ್ಮೆ ನೋಡು ನೋವು ತುಂಬಿದೆ ಎದೆಯಲಿ ಜೀವ ಬಯಸಿದೆ ಸಾಂತ್ವನ ನಿನ್ನ ಒಲವಿನ ಆಮಂತ್ರಣ ಆಕಾಶವೇ ಧರೆಗಿಳಿದರೂ ನಿನ್ನ ಕೈಯನು ಬಿಡೆನು ಎಂದು ಮಾತು ಕೊಟ್ಟಿರುವಿಯಲ್ಲವೇ ಹೀಗೆ ಮುನಿದುಕೆಣಕುವಿಯೇಕೆ ಮೌನರಾಗದಿ ಕೊಲುವೆಯೇಕೆ ಸಹಿಸಲಾರೆನು ಮೌನವ ಕೋಪ ಬಿಟ್ಟು ಬಾರೆ ನಲ್ಲೇ ಸವಿವ ನಾವು ಪ್ರೀತಿ ಹನಿಯ ಇಲ್ಲೇ ಪಂಕಜಾ.ಕೆ. ಮುಡಿಪು ಕುರ್ನಾಡು