Skip to main content

Posts

Showing posts from November, 2018

ಒಲವ ಹಾಡು

ಒಲವ ಹಾಡು ನೀ ಸುರಿಸುವ ಒಲವ ಧಾರೆಗೆ ಮನಸು ನವಿಲಿನ ತೆರದಿ ನರ್ತಿಸುತ್ತಿದೆ ಆಗಾಗ ನೀ ತೋರುವ ಒಲವ ಹನಿ ನಾಬಲ್ಲೆ ಅದರ ಸವಿ ನಿನ್ನ ಒಲವಿನ ಸೋನೆ ಮಳೆಯಲಿ ಮರೆತೆ ನನ್ನ ನೋವನೆಲ್ಲ ಪ್ರಿಯ  ನೀ ಬಂದು ನನ್ನ ಜತೆಯಾಗಿರಲು ಬಾಳು ಆಗುತ್ತಿದೆ ಹೂ ಬನ ಹೊನ್ನಿನಾಭರಣ ಬೇಡ ನಿನ್ನೊ ಲ ವಿರಲು ಸಾಕು ನೀ ಕೊಡುವ ಮುತ್ತಿನ ಹರಳು ನಿನ್ನಒಲವಿನ ಸೋನೆ ಮಳೆಯಲಿ ನೆನೆಯುತ್ತಿದ್ದರೆ ಸ್ವರ್ಗ ಬೇರಿನ್ನು ಬೇಕಿಲ್ಲ ನಲ್ಲ ಪಂಕಜಾ.ಕೆ.

ಬೆಳ್ಳಿ ಚುಕ್ಕಿ

ಬೆಳ್ಳಿ ಚುಕ್ಕಿ ಮೂಡುತ್ತಿದೆ ಬಾನಿನಲಿ ಬೆಳ್ಳಿ ಚುಕ್ಕಿ ಮುತ್ತಿನ ಮಣಿಗಳನು ಪೋಣಿಸಿದಂತೆ ಕತ್ತಲೆಯ ರಾತ್ರಿಯನುಸರಿಸುತ್ತ ಚುಕ್ಕಿಗಳನೊಡನಾಡುತ್ತ ಚಂದಿರ ಬಂದ ಕಾರಿರುಳ ರಾತ್ರಿಯಲ್ಲಿ ಹಾಲು ಚೆಲ್ಲಿದಂತೆ ಧರೆಯಲ್ಲಿ ತುಂಬಿತು ಶಶಿ ಕಿರಣ ಚುಕ್ಕಿ ಚಂದ್ರಮರೊಡನಾಟಕೆ ದಳಗಳ ಅರಳಿಸುತ ನೈದಿಲೆ ನಕ್ಕಿತು ದುಂಬಿಗಳಝೇಂಕಾರವುಕಿವಿಗಳತುಂಬಿ ಮನಕೆ ಮುದವನು ತಂದಿತು ತಂಪು ಗಾಳಿಯು ಬೀಸಿ  ತನುವಿಗೆ ಉಲ್ಲಾಸ ಹುರುಪನು ತುಂಬಿತು ಬೆಳ್ಳಿ ಚುಕ್ಕಿಯು ಕಣ್ಣ ಮಿಟುಕಿಸಿ ನಭದ  ತುಂಬಾ  ಹರಡಿತು ಪ್ರಕೃತಿ  ಸೌಂದರ್ಯ ವ ಸವಿಯುತ ಮನದಿ ತುಂಬಿತು ತನಿರಸ ಪ್ರಕೃತಿಯೊಡನಾಟವು ಕಣ್ಣು ಮನ ತುಂಬುವ ನೋಟವು ದೇವ ಸೃಷ್ಟಿಯ ಅದ್ಬುತ ಸಿಗುವುದಿಲ್ಲಿ ನೆಮ್ಮದಿ  ಶಾಶ್ವತ ಪಂಕಜಾ.ಕೆ. ಮುಡಿಪು

ಕಾತುರ

       ಕಾತುರ ಆಗಸದ ಮೋಡಗಳ ನಿಟ್ಟಿಸುತ ಮಳೆಯ ನಿರೀಕ್ಷೆಯಲಿರುವ ರೈತನಂತೆ ನಿನ್ನ  ನಿರೀಕ್ಷೆಯಲಿ ಕಾದಿರುವೆ ನಲ್ಲೆ ಕಾದು ಕಾದು ನಾ ಸೋತೆ ನಲ್ಲೆ ನಿರೀಕ್ಷೆಯ ತಪದಿ ಬೆಂಡಾಗಿದೆ ದೇಹ ನಿನ್ನೊಲವ ಸವಿಯುವ ಕಾತುರದ ದಾಹ ದುಂಬಿಗಳ ನಿರೀಕ್ಷೆಯಲಿರುವ ಹೂವಿನಂತೆ ಕಾತುರದಿ ಕಾಯುತಿರುವೆ ನಿನಗಾಗಿ ಬಾಂದಳದಿ ಮಿನುಗುವ ತಾರೆಗಳಂತೆ ಇರುವೆನಿನ್ನೊಡನಾಟದ ನಿರೀಕ್ಷೆಯಲಿ ಪ್ರೀತಿಸುರಿಸುವ ಆ ನಿನ್ನ ಕಣ್ಣ ಕಾಂತಿ ನೊಂದ ಮನಕೆ ತುಂಬುತಿದೆ ಶಾಂತಿ ಅಂಗಳದ ತುಂಬಾ ಅರಳಿರುವ ಹೂಗಳಂತೆ ಕಟ್ಟಿರುವೆ ಕನಸುಗಳಹೂಮಾಲೆ ನಿನ್ನೊಲವ ಸವಿಗಾನ ಮನಕೆ ಮುದ ತುಂಬಿ ಬಾಳಲ್ಲಿ ತುಂಬಿತು ಸಂತಸದ ದುಂಬಿ ಕಾಯುವಿಕೆಯ ತಪವ ನೀನೇನು ಬಲ್ಲೆ ಕೆಂಡದ ಮಳೆಯಂತೆ ಸುಡುತಿರುವುದು ನಲ್ಲೆ ಬಂದೆನ್ನ ಬಾಳಿಗೆ ತುಂಬು ಒಲವು ನಿನ್ನ ಒಡನಾಟದಲ್ಲಿ ನನ್ನ ಗೆಲುವು ಪಂಕಜಾ. ಕೆ.

ನಗು

ನಗು ಮನದಲಿ ತುಂಬಿದ ಮಾಧುರ್ಯ ಮುಖದಲ್ಲಿ ಅರಳಿದೆ ನಗೆಯಾಗಿ ನಗುಮುಖ ತರುವುದು ಆಹ್ಲಾದ ಜೀವನದಲ್ಲಿ ತುಂಬುವುದು ಉಲ್ಲಾಸ ಸೂರ್ಯನ ಪ್ರಕಾಶದ ತೆರದಿ ಬೆಳಗುವುದು ಮನೆ ಮನ ಮನಸಲ್ಲಿ ತುಂಬಿದ ಉಲ್ಲಾಸ ತರುವುದು ಸುಖ ಸಂತೋಷ ನಗುವುದು ನಗಿಸುವುದು ಧರ್ಮ ನಗುವೇ ಬಾಳಿನ ಮರ್ಮ ನಗುತಿರಿ ನಗಿಸಿರಿ ಎಂದೆಂದೂ ಪಡೆಯಿರಿ  ಲವಲವಿಕೆಯ ನೆಂದೂ ಪಂಕಜಾ. ಕೆ.

ಕನ್ನಡಶಾಲೆ

ಕನ್ನಡ ಶಾಲೆ ಪ್ರಕೃತಿಯೊಡನಾಡುತ ಕಲಿ ಸಹಪಾತಿಗಳೊಡನೆ ಕೂಡಿ ನಲಿ ಬಾಲ್ಯದ ಅನಂದವ ಸವಿ ಕನ್ನಡ ಶಾಲೆಯ ಕಂದ ಹಕ್ಕಿಗಳನೊಡನಾಟದಿ ಕಲಿತು ಬಂದ ಜೀವನಕೆ ಸುಖ ಶಾಂತಿ ತಂದ ಕನ್ನಡ ಭಾಷೆಯ ಸವಿ ಸವಿದು ಅಡುತ ಕುಣಿಯುತ ಕಲಿತು ಜೀವನ ಪಾಠವ ಅರಿತು ಬದುಕಿನಾ ನಂದದಲಿ ಬೆರೆತು ಕಲಿಯುವೆ ಬದುಕಿನ ಪಾಠ ಪಡೆಯುವೆ ಸುಖೀ ಜೀವನದಾಟ ಕನ್ನಡ ಶಾಲೆಲಿ ಕಲಿವರು ನೀತಿ ಇರದು ಎಂದಿಗೂ ಭೀತಿ ಹೊಂವರ್ಕನ  ಹೊರೆಯಿಲ್ಲ ಹೆಗಲಿಗೆ ಭಾರದ ಚೀಲವಿಲ್ಲ ಕನ್ನಡ  ಭಾಷೆಯ ಸವಿಯುವ ಅಂದ ತೊದಲು ನುಡಿಯಲೂ ನುಡಿವನು ಕಂದ ಆಡುತ ಕುಣಿಯುತ ಕಲಿಯುವ ಚಂದ ಇಂಗ್ಲಿಷ್ ಶಾಲೆಲಿ ಇರುವುದೇ ಕಂದ ಪಂಕಜಾ. ಕೆ.

ಗಜಲ್ 2 ಪ್ರೀತಿ

.ಗಜಲ್  (ಪ್ರೀತಿ) ತಾರೆ ಮಿನುಗಿದಂತೆ  ಮಿನುಗುತಿರಲಿ ಪ್ರೀತಿ ನಾರಿಯು ನಕ್ಕಂತೆ ಮುದತರಲಿ ಪ್ರೀತಿ ಬೋರ್ಗರೆಯುತಿರುವ ಕಡಲಿನಂತಿದೆ ಜೀವನ ನಮ್ಮ ಬಾಳಲಿ ನಿರಂತರ ಹರಿಯುತಿರಲಿ ಪ್ರೀತಿ ಮಕರಂಧವನು ಹೀರಲು ಹಾರಿ ಬರುತ್ತಿವೆ ದುಂಬಿಗಳು ಮಧು ತುಂಬಿದ ಪಾತ್ರೆಯಂತೆ ತುಂಬಿರಲಿ ಪ್ರೀತಿ ಮುಂಜಾನೆ ಯಲಿ ಇಳೆಯ ಇಬ್ಬನಿ ತಬ್ಬಿದೆ ಮುನಿಸುಗಳಿದ್ದರೂ ಒಳಗಿರಲಿ ಪ್ರೀತಿ ಕೆಸರಿನಲಿ ಅಂಟದೆ ಪಂಕಜ ಇರುವುದು ಕಷ್ಟಗಳ ನಡುವೆಯೂ ನಮ್ಮಲ್ಲಿ ಇರಲಿ ಪ್ರೀತಿ ಪಂಕಜಾ. ಕೆ.

ಹಸಿರ ಸಿರಿ

ಹಸಿರ ಸಿರಿ ಸುತ್ತೆಲ್ಲಾ ಹಸಿರಿನ ಬೆಟ್ಟ ಮೇಲೆ ಬಾನಲ್ಲಿ ಮಂಜಿನಾ ಬೆಟ್ಟ ಹರಡಿರುವ  ಇಬ್ಬನಿಯ ಲಾಸ್ಯ ಕಣ್ಣು ತುಂಬುವ ಹಸಿರಿನ ನಾಟ್ಯ ಹರಿಯುತ್ತಿರುವ ನೀರ ತೊರೆ ಕೂಗುತಿರುವ ಕೋಗಿಲೆಯ ಕರೆ ನವಿಲಿನ ನಾಟ್ಯದ ರಂಗು ಕೋಗಿಲೆಯ ಕೂಗಿನ ಗುಂಗು ಬಾನಲ್ಲಿ ಹರಡಿರುವ ಬಣ್ಣಗಳ ರಂಗು ಮನಕೆ ತುಂಬುವುದು ಉಲ್ಲಾಸದ ಗುಂಗು ಸೃಷ್ಟಿಯಲಿ ತುಂಬಿರುವ ವಿಸ್ಮಯ ಸವಿಯುತ್ತಾ ಮೈ ಮನ ತನ್ಮಯ ಪ್ರಕೃತಿ ಸೌಂದರ್ಯದ ತವರು ಪುಣ್ಯಭೂಮಿ ಭಾರತವೆಂಬ ಊರು ಹುಟ್ಟಿದರೆ ನಾವಿಲ್ಲೇಹುಟ್ಟಬೇಕು ಪ್ರಕೃತಿ ಸೌಂದರ್ಯದ ಆರಾಧನೆಯೇ ಸಾಕು ಪ್ರಕೃತಿ ಕೊಡುವುದು ಆರೋಗ್ಯ ಭಾಗ್ಯ ಉಳಿಸಿ ಕೊಂಡರೆ ಸಿಕ್ಕೀತು ಸೌಭಾಗ್ಯ ಪಂಕಜಾ.ಕೆ.

ರಕ್ತದಾನ

ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ.

ಯಾಂತ್ರಿಕ ಬದುಕು

ಯಾಂತ್ರಿಕ ಬದುಕು ಯಾಂತ್ರಿಕ ಬದುಕಿನಲಿ ಜೀವರಹಿತ ಸಂಬಂಧಗಳು ಮನಸುಗಳು ಬಿಕಾರಿ ಆಗಿ ನರಳುತಿದೆ ಜೀವನವು ಹಣಕೆ ಸಿಗುತ್ತಿದೆ ಮಾನ್ಯತೆ ಗುಣಕೆ ಸಿಗದ ಯೋಗ್ಯತೆ ಹಣವಿದ್ದರೆ ಜೀವನ ಬದುಕು ಆಗುತ್ತಿದೆ ಹೂಬನ ಕೊಡುವರು ಹಣಕೆ ಬೆಲೆ ಕಾಣಲಾರದು ಸಂಬಂಧಗಳ ಬೆಲೆ ಜೀವನವಾಗಿದೆ ಯಾಂತ್ರಿಕ ಬರಬೇಕಿದೆ   ಶಕ್ತಿ ಮಾಂತ್ರಿಕ ಜೀವರಹಿತ ಸಂಬಂಧಗಳಿಗೆ ಬಣ್ಣ ಬಾಳಲ್ಲಿಅರಳುವುದು ಹೂವು ಹಣ್ಣು ಮನಸು ಮನಸುಗಳು ಒಂದಾಗಿ ಬಾಳಬೇಕು ಬುವಿಯಲ್ಲಿ ಜತೆಯಾಗಿ ಯಾಂತ್ರೀಕೃತ ಬದುಕು ನರಕ ಜೀವಸೆಳೆ ತುಂಬಿರುವ ಬದುಕು ಸ್ವರ್ಗ ಸಂಬಂಧಗಳೆಂಬ ಬಲ್ಲೆ ಉಳಿಸಿಕೊಂಡರೆ ಕಬ್ಬಿನ ಜಲ್ಲೆ ಪಂಕಜಾ. ಕೆ.

ಹರಸು ಬಾ ತಾಯೇ

ಹರಸು ಬಾ ತಾಯೇ ಶಕ್ತಿ ಸ್ವರೂಪಿಣಿ ದೇವಿ ನವರಾತ್ರಿಯ ನವದಿನಗಳಲಿ ಮನೆ ಮನಗಳನ್ನು ಬೆಳಗಿ ಹರಸು ಬಾ  ತಾಯೇ ಧನ ಧಾನ್ಯ ಸಿರಿ ಸಂಪತ್ತುಗಳು ತುಂಬಿ ಪಾವನವಾಗಲಿ ಮನೆ ಶಿಷ್ಟರನು ರಕ್ಷಿಸುತ ದುಷ್ಟರನು ಶಿಕ್ಷಿಸಿ ಹರಸು  ಬಾ ತಾಯೇ ಪರ್ವತರಾಜನ ಕುವರಿ ಶೈಲಪುತ್ರಿಯೇ ಪರಮೇಶ್ವರನಸತಿಪಾರ್ವತಿಯೇ ನವರಾತ್ರಿಯ ಮೊದಲ ದಿನ ಪೂಜಿಸುವೆ ಭಕ್ತಿಯಿಂದ ಹರಸು ಬಾ ತಾಯೇ ಹಿಮವಂತನ ಕುವರಿ ಬ್ರಹ್ಮಚಾರಿಣಿ ದೇವಿ ಚಿತ್ತಚಾಂಚಲ್ಯವ ನಿವಾರಿಸಿ ಸದಾಚಾರಗಳ ತುಂಬಿ ಹರಸು ಬಾ ತಾಯೇ ಸಿಂಹ ವಾಹಿನಿ ಚಂದ್ರಗಂಟಿ ಪಾಪನಾಸಿನಿಪರಮಪಾವನಿದೇವಿ ಕೊಡುನಮಗೆ ಸುಖಶಾಂತಿ ಸಮೃದ್ಧಿಯ ನವರಾತ್ರಿಯ ಶುಭದಿನದಂದು ಹರಸು ಬಾ ತಾಯೇ ಅಷ್ಟಭುಜಗಳ ದೇವಿ ಕೂಷ್ಮಾಂಡೆ ಮಂದಸ್ಮಿತ ವದನೆ ದುರ್ಗಾಂಭೆ ಮನದ ಕ್ಲೇಶ ಕಳೆದು ಜ್ಞಾನದ ಬೆಳಕು ನೀಡಿ ಹರಸು ಬಾ ತಾಯೇ ಸಿಂಹ ವಾಹಿನಿ ಕಮಲಾಸನಿ ದೇವಿ ಸ್ಕಂದದರನ ಮಾತೆ ಮಯೂರವಾಹಿನಿ ನವರಾತ್ರಿಯ ಶುಭದಿನದಿ ಬಂದು ಹರಸು ಬಾ ತಾಯೇ ಮಹಿಷಾಸುರ ಮರ್ದಿನಿ ಕಾತ್ಯಾಯಿನಿ ಧರ್ಮ ಅರ್ಥ ಕಾಮಮೋಕ್ಷಗಳ ಕೊಟ್ಟು ಹರಸು ಬಾ ತಾಯೇ ಶುಭಕರಿ ಕಾಲರಾತ್ರಿ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ದುರಿತಗಳ ನಿವಾರಿಸಿ ಹರಸು ಬಾ ತಾಯೇ ವೃಷಭವಾಹಿನಿ ದೇವಿ ಶುಭ್ರವಸನಧಾರಿ ಗೌರಿ ಮನದ ಕಲ್ಮಶ ತೊಳೆದು ಕಳೆದು ಹರಸು ಬಾ ತಾಯೇ ವೀಣಾಪಾಣಿಯಾಗಿ ಮೆರೆದೆ ದೇವಿ ಶಾರದಾಂಬೆಯೆ ವಿದ್ಯೆಗಳ ರಾಣಿ ಸರಸ್ವತಿಯೇ ವಿದ್ಯೆ ಬುದ್ದಿಗಳ ಕರುಣಿಸಿ ಹರಸ

ಮದುವೆ ಸಂಭ್ರಮ

ಮದುವೆ ಸಂಭ್ರಮ ಮದುವೆಯಸಂಭ್ರಮನೋಡವ್ವ ಮನೆತುಂಬಾ ನೆಂಟರು ತುಂಬಿಯರಪ್ಪ ಅಡುಗೆಗೆ ಜನ ಬಂದರಪ್ಪ ಬೇಗ ಬೇಗ ಚಪ್ಪರ ಕಟ್ಟ ಬೇಕಪ್ಪ ಎಲ್ಲೆಲ್ಲೂ ಸಂಭ್ರಮ  ನೋಡವ್ವ ದಿಬ್ಬಣ ಬಂತು ನೋಡವ್ವ ದಿಬ್ಬಣ ಎದುರುಗೊಳ್ಳಲು ಬಾರವ್ವ ಬ್ಯಾಂಡು ವಾಲಗ ಇರಲವ್ವ ಅರಸಿನ ಕುಂಕುಮನೀರು ತಾರವ್ವ ಆರತಿ ಎತ್ತಿ  ಕರೆತರಬೇಕವ್ವ ರೂಪದಲ್ಲಿ  ಆತ ಮನ್ಮಥನವ್ವ ಕೇರಿಗೆಲ್ಲಾ ಒಬ್ಬನೇ ಗಂಡವ್ವ ನಮ್ಮ ಮಗಳು  ಭೂಲೋಕದ ರಂಬೆವ್ವ ಅಚ್ಚಕೆಂಪು ಸೀರೆ ಉಟ್ಟಳವ್ವ ಕೈತುಂಬಾ ಬಳೆ ತೊಟ್ಟಳವ್ವ ಸಿರಿಗೌರಿ  ಅಂತವಳವ್ವ ಏಳು ಮಲ್ಲಿಗೆ  ತೂಕದ ರಾಜಕುಮಾರಿಯವ್ವ ಬೇಗನೆ ಹಸೆಗೆ ಕರೆತರಬೇಕವ್ವ ಮುಹೂರ್ತ ಹತ್ತಿರ ಬಂತವ್ವ ಸರಬರ ಸೀರೆ ಶಬ್ದವ ಕೇಳವ್ವ ಪುರೋಹಿತರ ಮಂತ್ರದ ಅ ಬ್ಬರ ನೋಡವ್ವ ಕುತ್ತಿಗೆಗೆ ತಾಳಿ ಕಟ್ಟಿಯಾನವ್ವ ನಾಚಿಗೆ ಮುಖಕೆ ಬಂತು ನೋಡವ್ವ ಚಂದಕೆ  ಮದುಮಕ್ಕಳಹರಸಬೇಕವ್ವ ಲಾಡು ಚಿರೋಟಿ ಊಟ ಅಯ್ತೆನವ್ವ ಎಲೆ ಅಡಿಕೆ ವೀಳ್ಯ ಹಾಕೊಳ್ಳವ್ವ ನೆಂಟರಿಗೆ ಕಾಫಿ ಕೊಡಬೇಕವ್ವ ಚಂದಕೆ ಮಗಳನ್ನು ಕಳಿಸೇನವ್ವ ಮುದ್ದಾಗಿ ಸಾಕಿದ ಮಗಳವ್ವ ತಪ್ಪನು ಹೊಟ್ಟೆಲಿ ಹಾಕಿರವ್ವ ಪ್ರೀತಿ ಲಿ ನೋಡಿ ಕೊಳ್ಳಿರವ್ವ ನಿಮ್ಮ ಮನೆ ಬೆಳಗುವ ಲಕ್ಷ್ಮಿಯವ್ವ ಪಂಕಜಾ .ಕೆ ಮುಡಿಪು

ಯಾಕೆ ಹೀಗೆ

ಯಾಕೆ ಹೀಗೆ ನೀನಂದು ನಕ್ಕಾಗ ಮೈಯಲ್ಲಿ ಪುಳಕ ನಾನಂದು ಅತ್ತಾಗ ನಿನಗೇನೋ ಆತಂಕ ಮೈಯಲ್ಲಿ ತುಂಬುತಿದೆ ಹೊಸರಾಗ ಹಾಡುತಿದೆ ಕೋಗಿಲೆಯ ಸವಿಗಾನ ಕಣ್ಣುಕಣ್ಣುಸೇರಿದಾಗಮುಖವೆಲ್ಲ ಕೆಂಪು ನಿನ್ನ ಕುಡಿನೋಟ ಮನಕಂದು ತಂಪು ಕೈ ಹಿಡಿದು ಎಳೆದಾಗ ಮೈಯಲ್ಲಿ ನಡುಕ ಬೇಡ ಬೇಡವೆಂದರೂ ಬೇಕೆನ್ನುವ ತವಕ ಹೂಮನಸು ನವಿಲಂತೆ ಗರಿಗೆದರಿ ಕುಣಿದು ಮನದಲ್ಲಿ ಕನಸುಗಳ ಸರಮಾಲೆ ಹೆಣೆದು ಮುದುಡಿದ್ದ ಮೊಗ್ಗುಒಂದು ಚೆಲುವಾಗಿಅರಳಿ ಸಂತಸದ ಕಾರಂಜಿ ಉಕ್ಕೇರಿ ನರಳಿ ಯಾಕಿಂತ ಭಾವವು ಮನಕಂದು ಬಂತು ನಾನರಿಯೆ ಈ ಪರಿಯಾಕೆಂದು ನನಗೇನು ಗೊತ್ತು ಪಂಕಜಾ.ಕೆ.

ಶಾರದಾ ಸ್ತುತಿ

ಶಾರದಾ ಸ್ತುತಿ ಏನು ರೂಪವೋ ತಾಯೇ ಶಾರದಾಂಬೆ ವರ್ಣಿಸಲು ಹೇಗೆ ನಿನ್ನ ಜಗದಂಬೆ ನಿನ್ನ ನೋಡಲು ಎರಡು ಕಣ್ಣು ಸಾಲದಾಗಿದೆ ಅಂಬೆ ಕಮಲವಾಸಿನಿ ದೇವಿ ಶಾರದಾಂಬೆ ವೀಣಾಪಾಣಿ ಯಾಗಿ ಮೆರೆದೆ ಬ್ರಹ್ಮನರಸಿ ದೇವಿ ಶಾರದಾಂಬೆ ನನ್ನ ನಾಲಿಗೆಯಲಿ ನಿಲಬಾರದೆ ವಿದ್ಯಾಧಿದೇವತೆ ಶಾರದಾಂಬೆ ವಿದ್ಯೆಬುದ್ದಿಗಳ ಕೊಡು ಅಂಬೆ ವಿನಯ ವಿದೇಯತೆಗಳ ಬೇಡುವೆ ವಿಳಂಬಿಸದೆ ಬಂದು ಕಾಪಾಡು ತಾಯೇ ಅಖಂಡ ಜ್ಞಾನವ ಕೊಡು ತಾಯೇ ಅಗಣಿತ ಮಹಿಮಳೆ ಶಾರದಾಂಬೆಯೆ ಅಹಂಕಾರವೆಂಬ ಕೋಡುಗಳ ಕಳೆದು ಅಜ್ಞಾನ ಅಂಧಾಕಾರಗಳ ನಿವಾರಿಸು ದೇವಿ ಭಕುತಿಯಲಿ ನಿನ್ನ ಬೇಡುವೆ ಭಕುತರ ಕಾಯುವ. ಕಾಮಧೇನುವೆ ನಮ್ಮಮ್ಮ ಶ್ರೀ ಶಾರದೇ ಕರುಣಿಸೆಮಗೆ ವಿದ್ಯೆ ಬುದ್ಧಿಯ ಆದಿಮಾತೆಯೆ ಬ್ರಹ್ಮನರಸಿ ವಿದ್ಯಾಧಿದೇವತೆವಿದ್ಯೆಗಧಿಪತಿ ತಾಯೇ ಬಗೆ ಬಗೆ ಅಲಂಕಾರವ ಮಾಡಿ ಭಜಿಸುವೆನು ಭಕುತಿಯಲಿ ನಿನ್ನ ಭಕುತಿಯಲಿ ಶಿರಬಾಗಿ ಬೇಡುವೆ ಕಮಲದಂತ ಮೊಗದವಳೇ ಕಮಲನೇತ್ರೆ ಕಮಲ ಪುಷ್ಪದೊಡತಿ ಅಕ್ಷರಾಧಿದೇವತೆಯೇ ಇರಲಮ್ಮ ನಿನ್ನ ದಯೆ ಎಂದೆಂದೂ ನಮ್ಮ ಮೇಲೆ ಪಂಕಜಾ.ಕೆ. ಮುಡಿಪು

ಹಳ್ಳಿಯ ಜೀವನ

ಹಳ್ಳಿಯ ಜೀವನ (ಜಾನಪದ ಕವನ) ಹಳ್ಳಿಲಿ  ಏನುಂಟು ಡೆಲ್ಲಿಲಿ ಎಲ್ಲಉಂಟು ಹೊರಟವಿನಿ ಡೆಲ್ಲಿಗೆ  ನೋಡವ್ವ ಹೊರಟಿವಿನಿ ಡೆಲ್ಲಿಗೆ ನೋಡವ್ವ ಡೆಲ್ಲಿಗೆ ಹೋದಮೇಲೆ ಗೊತ್ತಾಯ್ತು  ನೋಡವ್ವ ಹಳ್ಳಿಯ ಜೀವನದ ಆನಂದ ಹಳ್ಳಿಯ ಜೀವನದ ಆನಂದ ನೋಡವ್ವ ಹಳ್ಳಿಲಿ ಇರುವಂತ ತಿಳಿನೀರಕೊಳವೆಲ್ಲಿ ಡೆಲ್ಲಿಯ ಕೊಳಕು ನೀರೆಲ್ಲಿ ನಮ್ಮವ್ವ ಕೊಳಕು ನೀರೆಲ್ಲಿ ಹಕ್ಕಿಗಳ ಹಾಡು ಕಿವಿಗಿಂಪು ನನ್ನವ್ವ ಡೆಲ್ಲಿಲಿ ಮೈಕಾಸುರನ ಅಬ್ಬರ ನೋಡವ್ವ ಹಳ್ಳಿಯ ಸಂತೋಷ ಇಲ್ಲೆಲ್ಲವ್ವ ಹಳ್ಳಿಯ ಸಂತೋಷ ಇಲ್ಲೆಲ್ಲವ್ವ ಹುಡುಕಿದರೂ ಸಿಗದವ್ವ ಪ್ರೀತಿ ವಿಶ್ವಾಸ ನೋಡವ್ವ ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ ಹಳ್ಳಿಲಿ ಇರುವೆವು ಎಲ್ಲರೂ ಒಂದಾಗಿ ಪ್ರೀತಿ ವಿಶ್ವಾಸದ ತವರೂರು ಪ್ರೀತಿವಿಶ್ವಾಸದ ತವರೂರು ನಮ್ಮವ್ವ ಹಳ್ಳಿಯ ಜೀವನ ಸೊಗಸವ್ವ ಕಷ್ಟ ಸುಖದಲ್ಲೂಜತೆಯುಂಟು ನೋಡವ್ವ ಡೆಲ್ಲಿ ಲಿ ಇವೆಲ್ಲಾ ಎಲ್ಲವ್ವ ಇರುವುದು ದುಡ್ಡು ಒಂದೇ ನೋಡವ್ವ ದುಡ್ಡು ಒಂದೇ ನೋಡವ್ವ ಬೆಳಗಾತ ಮೂಡಣದಿಮೂಡೈತೆ ಬಂಗಾರ ಬಟ್ಟಲು  ನೋಡವ್ವ ಓಬೇಲೆ ಹಾಡುತ್ತ ಹೊಂಟ್ಯಾನು ರೈತ ಓಬೇಲೆ ಹಾಡುತ್ತ ಹೊಂಟ್ಯ ನು ಎತ್ತುಗಳ ಕೊರಳ ಗಂಟ್ಯಾ ಕೇಳ್ಳ್ಯಾವ ಸುತ್ತೆಲ್ಲ ಹಸಿರೇ ತುಂಬ್ಯಾವ ಸುತ್ತೆಲ್ಲ ಹಸಿರೇ ತುಂಬ್ಯಾವ ನಮ್ಮವ್ವ ಹಳ್ಳಿಯ ಸೊಗಡ ನೋಡವ್ವ ಜೀವನ ಸಂತೋಷ ಹಳ್ಳಿಲಿ ತುಂಬೈತೆ ಡೆಲ್ಲಿ ಲಿ ಎನೈತೆ ಹೇಳವ್ವ ಡೆಲ್ಲಿ ಲಿ ಎನೈ

ಮುಂಜಾವಿನ ರವಿತೇಜ

ಮುಂಜಾವಿನ ರವಿತೇಜ ಬಾನಲಿ ಹಾಸಿದ ಬಣ್ಣದ ಸೆರಗನು ಸರಿಸುತ ಬಂದನು ರವಿತೇಜ ರವಿತೇಜನ ಬಿಸಿ ಸ್ಪರ್ಶಕೆ ನಾಚಿ ತಾವರೆ ಅರಳಿತು ಕೊಳದಲ್ಲಿ ಬಾನಲಿ ಬರುವ ರವಿತೇಜನ ಕಂಡು ಹಕ್ಕಿಗಳುಲಿದವು ಮುದದಿಂದ ಗಿಡದಲಿ ಅರಳಿದ ಬಗೆ ಬಗೆ ಹೂಗಳು ನರುಗಂಪನು ಎಲ್ಲೆಡೆ  ಹರಡಿದವು ಮರದಲಿ ಗೂಡನು ಕಟ್ಟಿದ ಹಕ್ಕಿಗಳಿಂಚರ ಮನಕೆ ಮುದವನು ತುಂಬುತಿದೆ ಮನದಲಿ ತುಂಬಿದ ಉಲ್ಲಾಸ ಮುಖದಲಿ ಮೂಡಿಸಿತು ಮಂದಹಾಸ ಹೂಗಳ  ನರುಗಂಪನು ಸವಿಯುತ ನಾಸಿಕದ  ಹೊಳ್ಳೆಗಳರಿದವು ಹುಲ್ಲಿನ ಹಾಸಲಿ ಹರಡಿದ ಇಬ್ಬನಿ ಮುತ್ತಿನ ಮಣಿಗಳ ತೆರದಿ ತೋರುತಿದೆ ಬಾನಲಿ ಕಲಸಿದ ಚೆಲುವಿನ ಬಣ್ಣ ತುಂಬಿತು ಮನಸಿನ ಕಣ್ಣ ಮುಂಜಾವಿನ ಈ ಸುಂದರ ದೃಶ್ಯ ಸವಿಯುತ  ಕಣ್ಣುಗಳೆರಡು ಸಾರ್ಥಕ್ಯದ ಭಾವವ ತಾಳಿದವು ಎಲ್ಲೆಡೆ ತುಂಬಿದ ಪ್ರಕೃತಿಯಸಿರಿ ಕವಿಮನದಲಿ ಕವಿತೆಯ ಒರತೆಯ  ಸ್ಪುರಿಸುತಿದೆ ಪಂಕಜಾ.ಕೆ. ಮುಡಿಪು

ಪ್ರಕೃತಿ ಚೆಲುವು

ಪ್ರಕೃತಿ ಚೆಲುವು ಗುಡ್ಡ ಬೆಟ್ಟಗಳಲ್ಲಿ ಹಸಿರ ಬೆಳಕು ನದಿ ತೊರೆಗಳಲಿ ನೀರ ಸೆಳಕು ಗಿಡಮರಗಳಲಿ ಹೂವ ಚೆಲುವು ಹಕ್ಕಿಗಳ ಗಾನದಲಿ ತುಂಬಿದ ಒಲವು ಬಾಂದಳದಿ ಉದಯಿಸಿದ ಶಶಿಯ ಸೊಬಗು ಕಾಣುವ ಕಣ್ಣಲ್ಲಿ ಮೂಡುತಿದೆ ಬೆರಗು ಆಗಸದಿ  ಹರಡಿರುವ ತಾರೆಗಳ ಚೆಲುವು ಮನಕೆ ತುಂಬುತಿದೆ ಸಂತಸದ ಬಲವು ಅರಳಿರುವ ಮಲ್ಲಿಗೆಯ ಘಮಲು ಮನಕೆ ತರುತಿದೆ ಅಮಲು ಮೂಡಣದಿ ಮೂಡುತಿರುವ ರವಿ ಕಿರಣ ಬಾನಿನಲಿ ಕಲಸಿರುವ ಬಣ್ಣಗಳ ಹೂರಣ ಮಂಜು ಮುಸುಕಿದ ಹಾದಿ ಎಲ್ಲೆಲ್ಲೂಇಬ್ಬನಿಯ ಮೋಡಿ ಬೀಸುತ್ತಿರುವ ಕುಳಿರ್ಗಾಳಿ ಎದೆನಡುಗಿಸುವ ಚಳಿಗಾಳಿ ಎಲ್ಲೆಲ್ಲೂ ಹರಡಿರುವ ಮಂಜಿನಾ ಬೆಟ್ಟ ರವಿಕಿರಣದತಾಪಕ್ಕೆನಲುಗಿತಲ್ಲೋಪುಟ್ಟ ಕೊಳದಲ್ಲಿ ಅರಳಿರುವ ತಾವರೆಯ ಅಂದ ಬೆಳ್ಳಕ್ಕಿಗಳ ಸಾಲು ಬಲು ಚಂದ ಪ್ರಕೃತಿಯ ಚೆಲುವಿನ ಘಮಲು ಕವಿಮನಕೆಆನಂದದ  ಅಮಲು ಪಂಕಜಾ.ಕೆ.ಮುಡಿಪು

ಮೂಡುತಿದೆ ಕವಿತೆ

ಮೂಡುತಿದೆ ಕವಿತೆ ಮೂಡಣದಿ ರವಿ ಮೂಡುತಿರುವಾಗ ಮನದಲ್ಲಿ ಉಕ್ಕುತಿದೆ ಹೊಸತೊಂದು ರಾಗ ಬಾಂದಳದಿ ಬೆಳ್ಳಿ ಚುಕ್ಕೆಗಳು ನಕ್ಕವೆಂದು ಮೂಡಿತೊಂದು ಸುಂದರ ಕವಿತೆ ಬಾನಲಿ ಹಾರಡುತಿರುವ ಹಕ್ಕಿಗಳ ಕಂಡು ಹೊಮ್ಮಿತು ಮನದಲ್ಲಿ ಕವಿತೆಗಳ ದಂಡು ಹಸಿರು ತುಂಬಿದ ಭೂರಮೆಯ ಕಂಡು ಗುಣುಗುಣಿಸುತಿದೆ ಮನವು ಕವಿತೆಯ ತುಂಡು ನೀಲ ಬಾನಲಿ ಹೊಳೆಯುವ ಮುಗಿಲ ಕಂಡು ಹೊಸತೊಂದು ಕವಿತೆ ಮೂಡಿ ಬಂತು ನನ್ನೊಳಗೆ ಅವಿತಿರುವ ಕವಿಮನಸು ಇಂದು ಹಾಡುತಿದೆಕವಿತೆಗಳಮಾಲೆಯನು ನೇಯ್ದು ಪಂಕಜಾ.ಕೆ.

ಚುಟುಕು

ಬೆಳ್ಳಿ ಚುಕ್ಕಿ ಬಾನಿನಂಗಳದಲ್ಲಿ ಮಿನುಗುತಿದೆ ಬೆಳ್ಳಿ ಚುಕ್ಕಿ ಬಾಳಿನಂಗಳದಲ್ಲಿ ನೀ ಬಿಡಿಸಿದೆ ಚಂದ ಚುಕ್ಕಿ ಚುಕ್ಕಿ ಚಂದ್ರಮರಂತೆ ಇರಲು ಬಾಳು ಸಮರಸವು ತುಂಬಿರುವ ಹೋಳು ಪಂಕಜಾ .ಕೆ.