Skip to main content

Posts

Showing posts from October, 2018

ತಾಳ್ಮೆ

ತಾಳ್ಮೆ ತಾಳ್ಮೆಯೆನ್ನುವ ಬುತ್ತಿ ನಾ ಅದನು ಮನದಲ್ಲಿ ಬಿತ್ತಿ ಪಡೆದೆನಂದು ನಿನ್ನ ಒಲವು ಅದೆನ್ನ ಜೀವನದ ಗೆಲುವು ಜೀವನಕೆ ತಾಳ್ಮೆಯ ಬುನಾದಿ ಅದುವೇ ನನ್ನ  ಬಾಳಿನ ಹಾದಿ ಗೆದ್ದಿತು ನಿನ್ನ ಮನಸು ನನಸಾಯಿತು ಕಂಡ ಕನಸು ತಾಳ್ಮೆಯಿಂದ ಪಡೆದೆ ಗೆಲುವು ಸಿಕ್ಕಿತು ಸಂಬಂಧದಲ್ಲಿ ಬಲವು ತಾಳ್ಮೆ ನನ್ನ    ಮನಸಿನ ಬಲ ತಿಳಿಯಬೇಡಿ ನಾನು ದುರ್ಬಲ ತಾಳ್ಮೆಯೊಂದು   ತಪಸ್ಸು ಸಿಕ್ಕೀತು  ಇದರಿಂದ  ಯಶಸ್ಸು ತಾಳ್ಮೆಯಿಂದ ಮಾಡುವ ಕೆಲಸ ಇರಬಹುದದರಲ್ಲಿ  ಪ್ರಯಾಸ ಒತ್ತಡದ ಬದುಕಿಗೆ ವರ ಈಗೀಗ ಅದಕೆ ಬರ ತಾಳ್ಮೆಯುತ ನಿರ್ಧಾರ ಮಾಡಿ ನೀನಾಗುವೆ  ಸರದಾರ ತಾಳ್ಮೆಯಲಿ ಇರುವ ಬುದ್ದಿ ಕೆಲಸದಲ್ಲಿ ಸಿಗಬಹುದು ಸಿದ್ದಿ ಜೀವನಕ್ಕೆ ಇದು ಬಹಳ ಮುಖ್ಯ ಇದರಿಂದ ಸಿಕ್ಕೀತು ಬಾಳಲ್ಲಿ  ಸೌಖ್ಯ ತಾಳ್ಮೆಯಿದ್ದರೆ  ಎಲ್ಲವೂ ಸಾಧ್ಯ ಇರಲಾರದು ಯಾವದೂ ಅಸಾಧ್ಯ ಬೇಗ ಬೇಗ ಆಗಬೇಕೆನ್ನುವ ಆಶೆ ಬಿಡು ತಾಳ್ಮೆಯಲಿ ಕಾದರೆ  ಗೆಲುವು ನೋಡು ತಾಳಿದವನು ಬಾಳಿಯಾನು ಗಾದೆ ಆಚರಿಸಿದರೆ ಇಲ್ಲ ಬಾದೆ ತಾಳ್ಮೆಯ ನಂಟನು ಮಾಡೋಣ ನಾವೆಲ್ಲ ಪಡೆಯೋಣ ಪ್ರೀತಿ ವಿಶ್ವಾಸದ ಬೆಲ್ಲ ಪಂಕಜಾ.ಕೆ.

ಜೀವನ ಸಂತೋಷ

ಜೀವನ ಸಂತೋಷ ಹಳ್ಳಿಲಿ  ಏನುಂಟು ಡೆಲ್ಲಿಲಿ ಎಲ್ಲಉಂಟು ಹೊರಟವಿನಿ ಡೆಲ್ಲಿಗೆ  ನೋಡವ್ವ ಹೊರಟಿವಿನಿ ಡೆಲ್ಲಿಗೆ ನೋಡವ್ವ ಡೆಲ್ಲಿಗೆ ಹೋದಮೇಲೆ ಗೊತ್ತಾಯ್ತು  ನೋಡವ್ವ ಹಳ್ಳಿಯ ಜೀವನದ ಆನಂದ ಹಳ್ಳಿಯ ಜೀವನದ ಆನಂದ ನೋಡವ್ವ ಹಳ್ಳಿಲಿ ಇರುವಂತ ತಿಳಿನೀರಕೊಳವೆಲ್ಲಿ ಡೆಲ್ಲಿಯ ಕೊಳಕು ನೀರೆಲ್ಲಿ ನಮ್ಮವ್ವ ಕೊಳಕು ನೀರೆಲ್ಲಿ ಹಕ್ಕಿಗಳ ಹಾಡು ಕಿವಿಗಿಂಪು ನನ್ನವ್ವ ಡೆಲ್ಲಿಲಿ ಮೈಕಾಸುರನ ಅಬ್ಬರ ನೋಡವ್ವ ಹಳ್ಳಿಯ ಸಂತೋಷ ಇಲ್ಲೆಲ್ಲವ್ವ ಹಳ್ಳಿಯ ಸಂತೋಷ ಇಲ್ಲೆಲ್ಲವ್ವ ಹುಡುಕಿದರೂ ಸಿಗದವ್ವ ಪ್ರೀತಿ ವಿಶ್ವಾಸ ನೋಡವ್ವ ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ ಹಳ್ಳಿಲಿ ಇರುವೆವು ಎಲ್ಲರೂ ಒಂದಾಗಿ ಪ್ರೀತಿ ವಿಶ್ವಾಸದ ತವರೂರು ಪ್ರೀತಿವಿಶ್ವಾಸದ ತವರೂರು ನಮ್ಮವ್ವ ಹಳ್ಳಿಯ ಜೀವನ ಸೊಗಸವ್ವ ಕಷ್ಟ ಸುಖದಲ್ಲೂಜತೆಯುಂಟು ನೋಡವ್ವ ಡೆಲ್ಲಿ ಲಿ ಇವೆಲ್ಲಾ ಎಲ್ಲವ್ವ ಇರುವುದು ದುಡ್ಡು ಒಂದೇ ನೋಡವ್ವ ದುಡ್ಡು ಒಂದೇ ನೋಡವ್ವ ಬೆಳಗಾತ ಮೂಡಣದಿಮೂಡೈತೆ ಬಂಗಾರ ಬಟ್ಟಲು  ನೋಡವ್ವ ಓಬೇಲೆ ಹಾಡುತ್ತ ಹೊಂಟ್ಯಾನು ರೈತ ಓಬೇಲೆ ಹಾಡುತ್ತ ಹೊಂಟ್ಯಾನು ಎತ್ತುಗಳ ಕೊರಳ ಗಂಟ್ಯಾ ಕೇಳ್ಳ್ಯಾವ ಸುತ್ತೆಲ್ಲ ಹಸಿರೆ ತುಂ ಬ್ಯಾವ ಸುತ್ತೆಲ್ಲ ಹಸಿರೆ ತುಂಬ್ಯಾವ ನಮ್ಮವ್ವ ಹಳ್ಳಿಯ ಸೊಗಡ ನೋಡವ್ವ ಜೀವನ ಸಂತೋಷ ಹಳ್ಳಿಲಿ ತುಂಬೈತೆ ಡೆಲ್ಲಿ ಲಿ ಎನೈತೆ ಹೇಳವ್ವ ಡೆಲ್ಲಿ ಲಿ ಎನೈತೆ ನಮ್ಮವ್ವ ಬ

ನೇಗಿಲ ಯೋಗಿ

ನೇಗಿಲಯೋಗಿ ಮಳೆಬಿಸಿಲೆನ್ನದೆ ಗದ್ದೆಯ ಕೆಸರಲಿ ಹಾಡುತ ಕುಣಿಯುತ ದುಡಿಯುವನು ಗದ್ದೆಯ ಉತ್ತುನೇಜಿಯ ನೆಟ್ಟು ಬೆಳೆಯನು ಬೆಳೆಯುತ ಉಣಿಸುವನದನು ನಮಗೆಲ್ಲ ಕಷ್ಟ ನಷ್ಟ ಗಳ  ಅನುದಿನ ಬರಿಸಿ ಬಿಸಿಲು ಮಳೆ ಗಾಳಿಯ ಸಹಿಸಿ ಸುಗ್ಗಿಯ ಬೇಸಾಯವನು ಮಾಡುತ ಭೂತಾಯಿಯ ಮಡಿಲಿಗೆ ಹಸಿರಿನಹೊದಿಕೆಯಹೊದಿಸುವನು ಕಾಯಕವೇ  ಕೈಲಾಸವೆನುತ ದುಡಿಯುತತೃಪ್ತಿಯಕಾಣುವನು ನೇಗಿಲಯೋಗಿ ಅನ್ನದಾತನಿವ ದೇಶದ ಹಸಿವನು ಕಳೆಯುವನು ನಮಿಸಿರಿ ಇವನಿಗೆ ದಿನವೆಲ್ಲ ಬರಗಾಲದ ಹೊಳೆಅತಿವೃಷ್ಟಿಯ ನೆರೆ ಕಂಗೆಡಿಸದಿರಲವನತನುಮನವ ಎತ್ತರಕ್ಕೇರಲಿ  ಅನ್ನದಾತನ ಹಿರಿಮೆ ಹಸಿರು ಉಸಿರಾಗಲಿ ನಮ್ಮಯ ನಾಡು ಪಂಕಜಾ.ಕೆ.

ಬೆಡಗಿ

ಬೆಡಗಿ ಬಣ್ಣದ ಲಂಗವ ಚಂದಕೆ ಬಿಗಿದು ಬಂದಳು ಮೆಲ್ಲಗೆ ಚೆಲುವಿನ ಬೆಡಗಿ ನವಿಲಿನ ನಡಿಗೆಯ ಕೋಗಿಲೆ ದ್ವನಿಯ ಮೈಮನ ಮರೆಸುವ ಚೆಲುವಿನ ಬೆಡಗಿ ಎದೆಯನು ಬಗೆದು ಬಿಗಿಯಲಿ ನಿಂದು ತನುವಿಗೆ ತಂದಳು ಬಿಸಿ ಬುಗ್ಗೆಯನು ಮೈಮನ ಮರೆಸಿ ನವೋಲ್ಲಾಸವ ಹರಿಸಿ ನಗುತಲಿ ನಿಂದಳು ಚೆಲುವಿನ ಬೆಡಗಿ ಕಾಲ್ಗಳ ಗೆಜ್ಜೆಯ ಕುಣಿಸುತಲಿ ಕೈಗಳ ಬಳೆಗಳ ಘಳಿರೆನಿಸುತಲಿ ಮನಸಿನ ಕದವನು ತೆರೆಸುತಲಿ ನಲಿಯುತ ಬಂದಳುಮನದರಸಿ ಪಂಕಜಾ .ಕೆ. ಮುಡಿಪು

ಹಸಿರು..ಉಸಿರು

ಹಸಿರು. ... ಉಸಿರು ಹಸಿರು ಉಸಿರೆಂದು ಉದ್ದುದ್ದ ಭಾಷಣವ ನಾ ಬಿಗಿಯಲಿಲ್ಲ ಸಭೆ ಸಮಾರಂಭಗಳ ನಡೆಸಿ ಪರಿಸರ  ದಿನಾಚರಣೆಯ ನಾ. ಆಚರಿಸಲಿಲ್ಲ ನೆಟ್ಟಿರುವೆ ಗಿಡಗಳನು ಮನೆ ಸುತ್ತ ಮುತ್ತ ಹಸಿರು ಉಸಿರಾಗಲೆಂದು ಪರಿಸರ ಕಾಳಜಿಯ ತೋರಿ ಹಸಿರು ಕಾಡನು ಬೆಳೆಸಿ ನೆಲ ಜಲ ಉಳಿಸಿ ಹಸಿರೇ ಉಸಿರೆಂದು ತಿಳಿದು  ಗುಡ್ಡ ಬೆಟ್ಟಗಳ ಉಳಿಸಿ ಕಾಡು ಬೆಳೆಸಿ ಕಾಂಕ್ರೀಟ್ ಕಾಡುಗಳು ಆಗುತ್ತಿದೆ ಎಲ್ಲೆಲ್ಲೂ ಗುಡ್ಡ ಬೆಟ್ಟಗಳ ಕಡಿದು ಹರಿದು ಓಡುತ್ತಿದೆ ನೀರು ತುಂಬಿತು ಮನೆ  ಒಳಗೆ ಹೊರಗೆ  ಎಲ್ಲೆಲ್ಲೂ ನೀರು ನೀರಿಂಗಿಸಲು ಜಾಗವಿಲ್ಲ ಹಸಿರು ಕಾಡುಗಳಿಲ್ಲ ಪ್ರಕೃತಿ ಮುನಿಯದಿರಲೇ ಭಾಷಣವ ಬಿಗಿಯುತ್ತ ಬೀಗುವ.  ಬದಲು ಕಾರ್ಯರೂಪಕ್ಕೆ ತರುತ ಹಸಿರು ಬೆಳೆಸಿ ಉಸಿರ ಉಳಿಸಿ ಪಂಕಜಾ. ಕೆ ಮುಡಿಪು ಕುರ್ನಾಡು

ಮಳೆ.....ಇಳೆ

ಮಳೆ. ....ಇಳೆ ಮಳೆಯು ಸುರಿದು ಇಳೆಯು ಬಿರಿದು ಹರ್ಷದಿಂದ ನಕ್ಕಿತು ಹಸಿರ ಒಡಲಲಿ ಹೂವ ತುಂಬಿ ದುಂಬಿಗಳನು ಕರೆಯಿತು ಹೂವ ಜೇನನು ಹೀರಿ ದಣಿದ ದುಂಬಿ ನಲಿಯಿತು ಹರ್ಷದಿ ಬಣ್ಣ ಬಣ್ಣದ ಹೂವು ತುಂಬಿ ಪ್ರಕೃತಿ ನಲಿದಳು ಮುದದಲಿ ಕಂಪು ತುಂಬಿದ ಬೀಸು ಗಾಳಿಯು  ಮನಕೆ ತಂದಿತು  ಕಚಗುಳಿ ಚಿಗುರು ಹೂವು ಹೊತ್ತು ಪ್ರಕೃತಿ ನಗುತ ನಿಂದಳು ಮುದದಲಿ ಎಲ್ಲಿ ನೋಡಲಿ ಹಸಿರು ಮನದಿ ತುಂಬಿತು ಉಸಿರು ಕಣ್ಣು ತುಂಬಿದ ಬಸಿರು ಪ್ರಕೃತಿ ಸಿರಿತುಂಬಿ ತುಳುಕಿ ಖಳೆಯು ತಂದಿತು ಇಳೆಯಲಿ ಮುದವ ತುಂಬಿತು ಮನದಲಿ ಪಂಕಜಾ. ಕೆ. ಮುಡಿಪು ಕುರ್ನಾಡು

ಯೋಗಯೋಗ

ಯೋಗಾಯೋಗ ಯೋಗವೆಂದರೆ ಹಾಗೆ ಭೋಗದಂತಲ್ಲ ಯೋಗ ಮಾಡಲು ಕೂಡಾ ಬೇಕೊಂದು ಯೋಗ ಎಲ್ಲರಿಗೆ ಅದು ಸಲ್ಲ ಅದಕೊಂದು   ಕ್ರಮವುಂಟು ಸುಮ್ಮ ಸುಮ್ಮನೆ ಕೈಕಾಲು ಆಡಿಸುವುದಲ್ಲ ಟಿ. ವಿ ಯನು ನೋಡುತ್ತಾ ಯೋಗ ಮಾಡುವುದು ಸಲ್ಲ ಬಲ್ಲಿದರಿಂದ ಕಲಿತು ಮಾಡಬೇಕು ಯೋಗ ಸಿಗಬಹುದುದೀರ್ಘಾಯುರಾರೋಗ್ಯವಾಗ ಅಲಸ್ಯವನು   ಓಡಿಸುವ ದೀರ್ಘಾಯುರಾರೋಗ್ಯದ ಗುಟ್ಟು ಇರುವುದದರಲ್ಲಿ ಕ್ರಮವರಿತು ಮಾಡಿದರೆ ಮಾತ್ರ ಫಲವಿಹುದು ಇದನರಿತರೆ ಮಾತ್ರ ಸಿಗಬಹುದು ದೀರ್ಘಾಯುರಾರೋಗ್ಯ ಯೋಗ ಜೀವನ ಶೈಲಿ ಆರೋಗ್ಯದಾ ಥೈಲಿ ಶಾಂತಿ ನೆಮ್ಮದಿಯ ತಾಣ ಯಶಸ್ಸು ಸಂತೋಷದ ಗುಟ್ಟು ತುಂಬಿರುವುದು ಯೋಗದಲ್ಲಿ ಯೋಗವೆನ್ನುವುದುಶರೀರಆತ್ಮದ ಕನ್ನಡಿ  ಭಗವಂತನ ಜತೆಯ ಕಳಚಿದ ಕೊಂಡಿ ಜೋಡಿಸುತ ಮಾನಸಿಕ ದೈಹಿಕ ನೋವ ನಿವಾರಿಸುವುದಿದು ಮಾಡಿರಿ ಯೋಗವನು ನಿತ್ಯ ಪಡೆಯಿರಿ ಆಯುರಾರೋಗ್ಯ ಭಾಗ್ಯ ಪಂಕಜಾ.ಕೆ. ಮುಡಿಪು ಕುರ್ನಾಡು

ಮುಖಪುಟ

ಮುಖಪುಟ( ಫೇಸ್ ಬುಕ್) ////-------///////-----//////----/// ಮುಖಪುಟವೆಂಬಹೊತ್ತಿಗೆ ಈಗಎಲ್ಲೆಡೆಜನಪ್ರಿಯ ದೂರದಪ್ರಪಂಚವಹತ್ತಿರತಂದು ಒಬ್ಬರಿನ್ನೊಬ್ಬರಚಂದಕೆ ಬಿಗಿದು ಎಲ್ಲರ ಎಲ್ಲವತೋರುವಪುಟವು ನಿಜಕುಇದುಬಹುಉಪಯೋಗಿ ಪ್ರಪಂಚದಎಲ್ಲವಿಷಯಗಳನ್ನು ತಿಳಿಯಲು ಬಹುದು ಕ್ಷಣದಲ್ಲಿ ಎಲ್ಲವೂಒಂದೇ ಪುಟದಲ್ಲಿ ದೂರದ ಮಿತ್ರರು ಹತ್ತಿರವಾಗಿ ಸುತ್ತಲಪ್ರಪಂಚನೆರೆಮನೆಯಾಗಿ ಸಂಸ್ಕೃತಿಭಾಷೆಯಸೇತುವೆಯಾಗಿ ವಿದ್ಯೆಯಬುದ್ಧಿಯ ಬೆಳವಣಿಗೆ ಗೆ ಮುಖಪುಟವೆಂಬ ಹೊತ್ತಿಗೆ ಸಹಕಾರಿ ಪ್ರತಿಯೊಂದರಲು ಒಳಿತಿನ ಜತೆಗೆಕೆಡುಕು ಇರುವಂತೆ ಮುಖಪುಟವೆಂಬಹೊತ್ತಿಗೆಯಲ್ಲೂ ಇರುವುದು  ಈ ಎರಡೂ ಅದನರಿತು ಬಳಸಬೇಕು ಎಚ್ಚರದಿ ನೆರೆಮನೆಯವರ ಜತೆತನ್ನನು ಹೋಲಿಸಿ ಕರುಬುವ ಮನ ಪ್ರಪಂಚದ ಜನರ ಜತೆ ಹೋಲಿಸಿ ಕರುಬುತ್ತಿದೆ ಇತರರಜತೆ ಹೋಲಿಸುತ ಅವರಂತಾಗುವ ಧಾವಂತದಲ್ಲಿ ಜೀವನವೆಲ್ಲ ನಾಟಕವಾಗಿ ತನ್ನ ತನವನು ಮರೆಯುತ್ತಿದೆ ಭಾಂಧವ್ಯ ವೃದ್ಧಿಗೆ ಸಹಕಾರಿ ಯಾಗಬೇಕಿದ್ದಮುಖಪುಟವೀಗ ಇಬ್ಬರ ನಡುವಿನಪೈಪೋಟಿಗೆ ಕಾರಣವಾಗುತ್ತಿದೆ ಒಳ್ಳೆಯರೀತಿಯಲಿ ಉಪಯೋಗಿಸಿದರೆ ಪಡೆಯಲು ಬಹುದು ಒಳ್ಳೆಯ ಜ್ಞಾನವನು ಒಬ್ಬರು ಇನ್ನೊಬ್ಬರ ಮೀರಿಸುವ ಭರದಲಿ ತನ್ನತನವನು ಕಳೆಯದಿರಿ ಉಳಿಸಿರಿಬೆಳೆಸಿರಿ ಪ್ರೀತಿ ವಿಶ್ವಾಸದ ಭದ್ರಕೋಟೆಯನು ಉತ್ತಮ ಹವ್ಯಾಸಗಳನ್ನು ಕಲಿಯುತ ಕಲಿಸುತ ಮುಖಪುಟದಲ್ಲಿಮೆರೆಯೋಣ ಮುಖಪುಟವೊಂದು ಗೀಳಾಗದ ತೆರದಿ ವ್ಯವಹರಿಸೋಣ ಪಂಕ

ಯೋಗ ಜೀವನ

ಯೋಗ.  ಜೀವನ ಆರೋಗ್ಯ ವಾಗಿರಲು ಯೋಗಜೀವನ ಬೇಕು ಯೋಗದಿಂದ ಸಂತೃಪ್ತಿ ಆರೋಗ್ಯ  ಭಾಗ್ಯ ಹಾಕಬೇಕು ಮನಸಿಗೆ ಕಡಿವಾಣ ಜೀವನದ ಸವಿ ಸವಿಯೋಣ ನಿತ್ಯವೂ ಯೋಗ ಮಾಡುತಲಿ ಭೋಗಿಯಾದರೆ ರೋಗಿ ಯೋಗಿಯಾದರೆ ನಿರೋಗಿ ನಿತ್ಯಮಾಡಿದರೆ ಯೋಗ ಆರೋಗ್ಯಭಾಗ್ಯ ಸಿಗಬಹುದಾಗ ಅರಿತು ಮಾಡಿದರೆ ಯೋಗ ಸಿಗಬಹುದು  ಭೋಗ ಚಿತ್ತಚಾಂಚಲ್ಯವ ಬಿಡು ಯೋಗ ಸಾಧನೆ ಮಾಡು ಯೋಗದಿಂದ ಆರೋಗ್ಯಭಾಗ್ಯ ಔಷಧಿ ರಹಿತ ಜೀವನ  ಭಾಗ್ಯ ನೆಮ್ಮದಿ ಸಂತೋಷದ ಜೀವನ ಪಂಕಜಾ. ಕೆ. ಮುಡಿಪು  ಕುರ್ನಾಡು

ಒಲವ ಹನಿ. 1

ಒಲವಹನಿ ಇನಿಯ ಸುರಿಸಿದ ಒಲವ ಹನಿಗಳು ಬಾಳ ಬಳ್ಳಿಯಲಿ ಸುರಿದವು ಮುತ್ತುಗಳು ಮುದುಡಿದ ಮನಗಳು ಅರಳುತಿದೆ ಒಲವ ಧಾರೆಯ  ಸವಿದ ಇನಿಯಳಂತೆ ಮನದ ಕರಿ ಮೋಡಗಳು ಬಿರಿದು ಒಲವ ಸಿಂಚನಕೆ ಅರಳಿತು  ಕನಸು ಇನಿಯನೊಲುಮೆಯ ಧಾರೆ ತುಂಬುತಿದೆ ಮನದಲ್ಲಿ ಹರ್ಷಧಾರೆ ಬಾಳಲಿ ಉಕ್ಕುತಿದೆ ಹರ್ಷದ ಹೊನಲು ಮಳೆ ಬಂದು ತಂಪಾದ ಇಳೆಯ ತೆರದಿ ಪಂಕಜಾ.ಕೆ.

ಹೃದಯ ರಾಗ

ಹೃದಯ ರಾಗ ಬಾಳ ಪಯಣದ ದಾರಿಯಲ್ಲಿ ನಿನ್ನ ಜತೆಯಲ್ಲಿ ಸಾಗಲು ಮನದಿ ತುಂಬಾ ತುಂಬುತ್ತಿ ರುವುದು ಒಲವ ಜೇನಿನ ಹನಿಗಳು ಕೈಗಳೆರಡನು  ಸೇರಿಸಿ ಸಾಗುತಿರೋಣ ನಿತ್ಯವೂ ಹೃದಯಹೃದಯವಒಂದುಗೂಡಿಸಿ ನಲಿಯುತಿರೋಣ ನಿತ್ಯವೂ ಕನಸು ಮನಸಲು ಪ್ರೀತಿ ತುಂಬಿ  ಒಲವ ಜ್ಯೋತಿಯ ಉರಿಸುವ ಒಲವ  ಸುಧೆಯನು ಹರಿಸಿ ಬದುಕಲಿ  ಜೇನ  ಸವಿಯನು ಸವಿಯುವ ಹೃದಯ ರಾಗಹಾಡುತಿರುವುದು ಉಲಿವ ಕೋಗಿಲೆಯಂದದಿ ಕನಸು ಮನಸಲು ತುಂಬುತ್ತಿರುವುದು ಬಣ್ಣ ಬಣ್ಣದ  ತೇರನು ಪಂಕಜಾ.ಕೆ

ಹೃದಯ ವೀಣೆ

ಹೃದಯವೀಣೆ ಹೃದಯವೆಂಬ  ಮಾಂಸ ಮುದ್ದೆಯು ಮಿಡಿಯುತಿರುವುದು ನಿತ್ಯವೂ ಎಂದು ನೀನು ಬಂದು  ಕುಳಿತೆ ನನ್ನ ಹೃದಯ ದ ಗುಡಿಯಲಿ ಕನಸು ಮನಸಲು ತುಂಬುತ್ತಿರುವುದು ನಿನ್ನ ಹೃದಯದ ಮಿಡಿತವು ಹೃದಯ ಹೃದಯಕೆ  ಬೇಧವೆಲ್ಲಿ ಇರುವುದೊಂದೇ ರಕ್ತ ವು ಚೆಲುವ ನಿನ್ನಯ ಹೃದಯ ಮಂದಿರದಲ್ಲಿನೆಲೆಸಿ ನಕ್ಕು  ನಲಿಯುವ ಬಯಕೆಯು ಕದವ ತೆರೆದು ಕಾಯಲೇನು ನಿನ್ನ ಹೃದಯವ ಅರಿಯಲು ಮಿಡಿಯುತಿರುವ ಹೃದಯವು ಇರುವ ತನಕ ಜೀವವು ನಗುತ ಬಾಳಿನ ಸವಿಯ ಸವಿಯುವ ಹೃದಯ ಮಿಡಿಯುವ ತನಕವೂ ಹೃದಯ ವೀಣೆಯ ನುಡಿಸುತ ಭಾವ ದಲೆಗಳಲಿ ತೇಲುವ ಪಂಕಜಾ .ಕೆ.

ಹವ್ಯಾಸ

ಹವ್ಯಾಸ ಹಸಿರಿನ ಹುಲ್ಲಿನ ಮೇಲೆ ಮುತ್ತಿನ ಮಣಿಗಳ ಸಾಲೆ ಬರಿಗಾಲಿನಲಿನಡೆಯುತಲಿರಲು ತುಂಬುವುದುಮೈಯಲಿಉಲ್ಲಾಸ ಗಡಗುಟ್ಟುವ ಚಳಿಯಲಿ ಬೆಳಗಿನಜಾವದಿನಡೆಯುತಲಿರಲು ರವಿ ಕಿರಣದ  ಬೆಚ್ಚನೆ ಸ್ಪರ್ಶ ಮೈಕೈ ನೋವಿನ  ಪರಿಹಾರ ನಿತ್ಯವೂ ನಡಿಗೆಯ ಹವ್ಯಾಸ ಮನದಲಿ ತುಂಬುವುದು ಉಲ್ಲಾಸ ಪ್ರಕೃತಿಯಜತೆಯಲಿನಲಿಯುತಲಿದ್ದರೆ ತುಂಬುವುದು  ಜೀವನೋತ್ಸಾಹ ಮನಸಿನ ಬೇಸರ ಕಳೆಯಲು ಇರಬೇಕು ಉತ್ತಮ ಹವ್ಯಾಸ ಹವ್ಯಾಸಗಳ ಬೆಳೆಸುತಲಿದ್ದರೆ ಉಲ್ಲಾಸ ಹುರುಪು ತುಂಬುವುದು ಪಂಕಜಾ.ಕೆ

ಸೋಷಿಯಲ್ ಮೀಡಿಯಾ

ಸೋಷಿಯಲ್ ಮೀಡಿಯಾ.   (ವಿಜಯವಾಣಿ ದೀಪಾವಳಿ ವಿಶೇಷಾಂಕ2018) ರವಿಯು ಉದಯಿಸುವ ಮದಲೇ ಮೊಬೈಲ್ ನೋಡುವ ಕಾಲವಿದು ಮೊಬೈಲ್ ಇಲ್ಲದೆ ಒಂದು ಕ್ಷಣವೂ ಕಳೆಯಲಾರದ  ದಿನಗಳಿದು ಫೇಸ್ ಬುಕ್ ಟ್ವಿಟ್ಟರ್ ವಾಟ್ಸಪ್ ಇನ್ಸ್ಟಾಗ್ರಾಮ್  ಎಲ್ಲೆಡೆ ಈಗ ಜನಪ್ರಿಯ ಬೆಸೆದಿದೆ   ಇವುಗಳು ಇಂದು ಪ್ರಪಂಚದೆಲ್ಲೆಡೆಯ ಜನರನು ನೀರು ಕುಡಿದಂತೆ ಸಂಪರ್ಕವು ಸರಾಗವೀಗ ದೂರದ ಪ್ರಪಂಚವ ಹತ್ತಿರ ತಂದು ಒಬ್ಬರಿನ್ನೊಬ್ಬರ ಚಂದಕೆ  ಬಿಗಿದು ಎಲ್ಲರ ಎಲ್ಲವ ತೋರುವ ಪುಟವು ಮುಖಪುಟವೆಂಬ ಹೊತ್ತಿಗೆಯು ಸೋಷಿಯಲ್ ಮೀಡಿಯಾ ಇದ್ದರೆ ಜಗತ್ತೇ ಇರುವುದು ಕೈ ಬೆರಳ ತುದಿಯಲ್ಲಿ ಗೂಗಲ್ ಮ್ಯಾಪ್ ಇದ್ದರೆ  ಸಾಕು ಎಲ್ಲಿಗೆ ಬೇಕಾದರೂ ಹೋಗಲು  ಭಯವಿಲ್ಲ ಗೂಗಲ್ಎಂಬಾ ಅಜ್ಜನು ತಿಳಿಸುವ ಹೊಸ ಹೊಸ ವಿಷಯಗಳ ಕಂತೆಯನು ಜ್ಞಾನದ ವೃದ್ಧಿಗೆ ಸಾಧನವೀತ ಉಪಯೋಗಿಸಿದರೆ ಸರಿಯಾಗಿ ಸೋಷಿಯಲ್  ಮೀಡಿಯಾ ಜನಜೀವನದ ಅವಿಭಾಜ್ಯ ಅಂಗವೇ ಆಗಿದೆ  ಈಗ ಕ್ಷಣಮಾತ್ರದಲ್ಲಿ ಪ್ರಪಂಚದೆಲ್ಲರ ಸಂಪರ್ಕ ದೂರದ ಮಿತ್ರರು ಹತ್ತಿರವಾಗಿ ಸುತ್ತಲಪ್ರಪಂಚನೆರೆಮನೆಯಾಗಿ ಸಂಸ್ಕೃತಿಭಾಷೆಯಸೇತುವೆಯಾಗಿ ಕೊಡುತಿದೆ ಮನಕೆ ಉಲ್ಲಾಸ ಕೈ ಬೆರಳ ತುದಿಯಲೆ ಎಲ್ಲವೂ ಆಗಿ ಜಗತ್ತಿನ ಸುದ್ದಿಯ ಕ್ಷಣದಲಿ ತಿಳಿವ ವಾಟ್ಸಪ್ ಅಣ್ಣನ ಮೋಹವ ಬಿಟ್ಟವರುಂಟೆ ವಾಟ್ಸಪ್ ಇದ್ದರೆ ಸಮಯವು ಕಳೆಯುವುದು ತಿಳಿಯುವುದೇ ಇಲ್ಲ ಪ್ರತಿಯೊಂದರಲ್ಲೂ ಒಳಿತಿನ ಜತೆಗೆ ಕೆಡುಕು ಇರುವ ತೆರದಲಿ ಸೋಷಿಯಲ್ ಮೀಡಿಯಾ ದ ಅತಿ ಬಳಕೆ

ಗಾಂಧಿ ಮಹಾತ್ಮ

ಗಾಂಧಿ ಮಹಾತ್ಮ ಶಾಂತಿಯ ಮಂತ್ರವ  ಜಪಿಸುತ ಸತ್ಯಾಗ್ರಹವನ್ನು ಮಾಡಿ ಸ್ವಾತಂತ್ರ್ಯ ವನು ತಂದು ಕೊಟ್ಟೆ ಸ್ವತಂತ್ರ ಭಾರತದ ಕನಸನು ಕಂಡು ಸತ್ಯ ಶಾಂತಿಯ ಜಗಕೆ ಸಾರಿ ಸರಳ ಸಜ್ಜನ ಮೂರ್ತಿಯೇ ಆಗಿ ಭವ್ಯ ಭಾರತದ ಕನಸನು ಕಂಡು ಬ್ರಿಟಿಷರ ಗುಂಡಿಗೆ ಎದೆಯನು ಒಡ್ಡಿ ಭಾರತ ಕೀರ್ತಿ ಪತಾಕೆಯ ಜಗದಗಲ ಹರಡಿದ ಸುಪುತ್ರ ಗಾಂಧಿ ವಾದವು ನಗೆಪಾಟಲು ಆಗಿದೆ ಇಂದೀಗ ಎಲ್ಲೆಡೆ ತುಂಬಿದೆ  ಕೊಲೆ ಸುಲಿಗೆ ಸತ್ಯದ ದಾರಿಲಿನಡೆಯುವವರು ಅಪಹಾಸ್ಯಕ್ಕೀಡಾಗುವರು ಅಶಾಂತಿಯು  ತುಂಬಿದೆ ಎಲ್ಲೆಡೆಯೂ ಮಾನವತೆಯ ಮರೆತಿರುವರು ಎಲ್ಲಾ ಇಂದೀಗ ನೀನು ಇರುತ್ತಿದ್ದರೆ ಎದೆ ಒಡೆದೇ ಹೋಗುತ್ತಿತ್ತೇನೋ ಗಾಂಧಿಯ ತತ್ವದ ದಾರಿಲಿ ನಡೆದು ಕಟ್ಟಬೇಕು ನಾವು ಭವ್ಯ ಭಾರತವ ಮರೆಯಬಾರದು ಎಂದಿಗೂ ಗಾಂಧಿ ಮಹಾತ್ಮನ ತ್ಯಾಗ ಬಲಿದಾನವನು ಪಂಕಜಾ.ಕೆ.