Skip to main content

Posts

Showing posts from June, 2020

ಒಡೆದ ಬಾಳು ಹನಿ ಹನಿ ಇಬ್ಬನಿ

ಒಡೆದ ಬಾಳು ಮುರಿದು ಹೋಗಿದೆ ಸ್ನೇಹ ಸೇತುವೆ ರೋಗ ಭಾದೆಯ ನೆಪದಲಿ ಸೂಕ್ಷ್ಮ ಹೃದಯವು ಒಡೆದು ಹೋಗಿದೆ ಕಠಿಣ ಮಾತಿನ ಮಳೆಯಲಿ ಎರಡು ಹೃದಯವ ಒಡೆದು ಹಾಕುತ ಖುಷಿಯ ಪಡುವರು ಹಲವರು ಪ್ರೀತಿ  ಕರುಣೆ ಮಮತೆ ಭಾವವು ಸರಿದು ಹೋಯಿತು ಮೂಲೆಗೆ ಯಾರ ದೂರಲಿ ಹೇಗೆ ಬಾಳಲಿ ತಿಳಿಯದಾಗಿದೆ ದೇವನೆ ಪಂಕಜಾ.ಕೆ.ಮುಡಿಪು

ಗಜಲ್ ಮುಂಗಾರು ಮಳೆ

ಗಜಲ್ ಮುಂಗಾರು ಮಳೆಸುರಿದು ಮೈ ಮನಕೆ ಮುದ ತಂದಿದೆ ಗೆಳೆಯ ಭೂತಾಯಿಯ ಹಸಿರಿನ ಸೆರಗು ತಣ್ಣುಗಳನ್ನು ತಂಪಾಗಿಸಿದೆ ಗೆಳೆಯ ಚಿಗುರು ಹೂಗಳಿಂದ ತುಂಬಿ ಗಿಡಮರಗಳು ನಳನಳಿಸುತಿದೆಯಲ್ಲವೇ? ವಸುಂಧರೆಯ ಚೆಲುವು ನೋಡುವುದು ಹಬ್ಬವಾಗಿದೆ ಗೆಳೆಯ ಜುಳು ಜುಳು ಹರಿಯುವ ನೀರಧಾರೆಯಲಿ ಕಾಲಾಡಿಸುವ ಆಸೆ ಜಿಟಿ ಜಿಟಿ ಮಳೆಯಲ್ಲಿ  ಮನಸ್ಪೂರ್ತಿಯಾಗಿ ನಲಿಯಬೇಕೆನಿಸಿದೆ ಗೆಳೆಯ ಬಾಂದಳದಲ್ಲಿ ಕಟ್ಟಿರುವ ಕರಿಮೋಡಗಳ ದಂಡು ಮನ ಸೆಳೆದಿದೆ ಪ್ರಕೃತಿಯ ಮಡಿಲಲ್ಲಿ ನವೋಲ್ಲಾಸದಿಂದ ನಲಿಯಬೇಕೆನಿಸಿದೆ ಗೆಳೆಯ ಬೇಸಿಗೆಯಲ್ಲಿ ನೀರ ಕೊರತೆ ಬಾರದಂತೆ  ನೋಡಿಕೊಳ್ಳಬೇಕಲ್ಲವೇ ಪಂಕಜಾ ಹರಿಯುವ ನೀರನ್ನು ಇಂಗು ಗುಂಡಿಗಳ ತೋಡಿ ಇಂಗಿಸಬೇಕಿದೆ ಗೆಳೆಯ ಪಂಕಜಾ.ಕೆ.ಮುಡಿಪು

ಮಕ್ಕಳ ಕವನ ವನಡೆದೆಗೆ ನಮ್ಮ ಪಯಣ ನವಪರ್ವ ದಲ್ಲಿ ಉತ್ತಮ

 ನವಪರ್ವ ಬಳಗ ಸ್ಪರ್ಧೆಗಾಗಿ ವಿಷಯ . ವನದೆಡೆಗೆ ನಮ್ಮ ಪಯಣ ವನದ ಸೊಬಗು (ಮಕ್ಕಳ ಕವನ) ಗೆಳೆಯರು ನಾವು ಜತೆಯಲಿ ಸೇರಿ ಹೊರಟೆವು ಅಂದು ವನಡೆಡೆಗೆ ಹಸಿರಿನ ಕಾನನ ತಂಪಿನ ಗಾಳಿಯು ಮನಕೆ ಮುದವನು ಕೊಡುತಿತ್ತು ಕಾಡಿನ ಮರದಲಿ ಗೂಡನು ಕಟ್ಟಿದ ಹಕ್ಕಿಗಳಿಂಚರ  ಕಿವಿಗಳಿಗಿಂಪನು ತಂದಿತ್ತು ಅರಳಿದ ಹೂಗಳ ಗಂಧವು ತುಂಬಿ  ಮೂಗಿನ ಹೊಳ್ಳೆಯು ಅರಳಿತ್ತು ಝುಳು ಝುಳು ಹರಿಯುವ ನದಿಯನು ಕಾಣುತ ಮನದಲಿ ಸಂತಸ ತುಂಬಿತ್ತು ಗರಿಗಳ ಬಿಚ್ಚಿ ಕುಣಿಯುವ ನವಿಲು ಸೊಬಗನು ಕಣ್ಣಿಗೆ  ತಂದಿತ್ತು  ಚಂಗನೆ ನೆಗೆಯುವ  ಜಿಂಕೆಯ ದಂಡು  ಖಗಮಿಗಗಳ ನೋಡುತ ಸಮಯವು ಸರಿದಿತ್ತು ಹಸಿರಿನ ವನವು ಉಸಿರನು ಕೊಡುವುದು ಉಳಿಸುತ ಬೆಳೆಸಬೇಕು  ಅದನು ನಾವೆಲ್ಲ ಪಂಕಜಾ.ಕೆ.ಮುಡಿಪು ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್

ಪ್ರೇಮಕಾವ್ಯ ಕ ದಿಂದ ಳ ವರೆ ಗೆ ವ್ಯಂಜ ನಾಕ್ಶೆಆ ಬಳಸಿ

ಕ ದಿಂದ ಳ ವರೆಗೆ ವ್ಯಂಜನಾಕ್ಷರ ಬಳಸಿ ಪ್ರೇಮ ಸಂಭಾಷಣೆ   ಪ್ರೇಮಕಾವ್ಯ  ಕ      ಕಂಡ ಕ್ಷಣವೇ ಸೋತೆ ನಾ ನಿನ್ನ ಮುದ್ದು     ಮುಖಕೆ ನಲ್ಲೆ  ಖ    ಖೈದಿ ಯಾದೆನು ನಿನ್ನ ಆ ತುಂಟ  ಕಣ್ಣೋಟಕೆ ನಲ್ಲ ಗ   ಗಮನವೆಲ್ಲಾ ನಿನ್ನೆಡೆಯೇ ಸೆಳೆದುಬಿಟ್ಟೆ   ಓ ಚೆಲುವೆ ಘ.  ಘಂಟೆಗಳು ಕ್ಷಣಗಳಾಗುತ್ತಿದೆ  ನೀ ನನ್ನೊಡನಿದ್ದರೆ ಚೆಲುವ ಙ  ವಿಜ್ಞಾಪನೆ ಸಲ್ಲಿಸೋಣ ನಮ್ಮ ಮನೆದೇವರಿಗೆ ನಾವಿಂದುಕೂಡಿ ಚ.  ಚಂದ್ರನಂತಿರುವ ನಿನ್ನ ಮುಖಾರವಿಂದಕೆ ಸೋತೆ ನಲ್ಲೆ ಛ   ಛಲ ತುಂಬಿದ ಆ ಕಣ್ಣ ನೋಟದ ಸೊಬಗು ಸೆಳೆಯಿತು ನಲ್ಲ ಜ.  ಜಯಿಸಿದೆ ನೀ ನನ್ನ ಕಠೋರ ಹೃದಯವ ನಲ್ಲೆ ಝ  ಝರಿಯಂತೆ ಹರಿಯಿತು ನಿನ್ನ ಒಲವು ನನ್ನೆಡೆಗೆ ನಲ್ಲ ಞ  ಯಜ್ಞ ಕುಂಡದೆದುರಲಿ ಹೋಮಾಗ್ನಿಯಲಿ ನಾವಿಬ್ಬರು ಒಂದಾಗೋಣ  ಟ. ಟಕ ಟಕನೆಂದು ನಡೆದಾಡುತ್ತ ಬರುವ ನಿನಗಾಗಿ ಕಾಯುವೆ ಠ. ಠಕ್ಕನಂತೆ ಏಕೆ ಕದ್ದು ನೋಡುವೆ ನೀ ಇಂದು ನನ್ನ ನಲ್ಲ ಡ. ಡವ ಡವ ಎನ್ನುತ್ತಿದೆ ನಿನ್ನ ಹೃದಯ ನಾ ಬಲ್ಲೆ ಅದನು ನಲ್ಲೆ  ಢ  ಢಕ್ಕೆಯಂತೆ ಬಾರಿಸುತ್ತಿದೆ ನನ್ನೆದೆಯ ಮಿಡಿತ ನಿನಗಾಗಿ ನಲ್ಲ ಣ. ಜಾಣತನದಲಿ  ನಾವಿಬ್ಬರು ಸಂಸಾರ ಸಾಗಿಸೋಣ ತ  ತನುಮನವೆಲ್ಲಾ ನೀನೇ ತುಂಬಿರುವೆಯಲ್ಲಾ ನಲ್ಲ ಥ   ಥಕ  ಥಕ ನೆಂದು ಕುಣಿಯುತ್ತಿದೆ ನನ್ನೀ ಹೃದಯ ನಲ್ಲೆ ದ  ದಯಮಾಡಿ ಹೀಗೆ  ಕಣ್ಣಲ್ಲಿ ನನ್ನ ಕಾಡಬೇಡ ಓ ಚೆಲುವ ಧ ಧನ ಕನಕ  ಯಾವಾದರಲ್ಲೂ ನನಗೆ ಬಯಕೆಯಿಲ್ಲ ಚೆಲುವೆ ನ ನಂಬು ನನ್ನನು ಓ ನನ್ನ ಮನವ ಕದ್ದ ಚೆಲು ಚಕೋರಿ ಪ ಪರಿ ಪರಿಯಲ

ಚಿತ್ರ ಕವನ ಕವಿ ಶೈಲ ಮೂರನೇ ಸ್ಥಾನ

[21/06, 4:45 PM] pankajarambhat: ಕವಿಶೈಲ ಚಿತ್ರಕವನ ಸ್ಪರ್ಧೆಗಾಗಿ  ಭಾವನೆಗಳ ತೋಟ ಅಂಗೈಯಲ್ಲಿ ಹಿಡಿದಿಟ್ಟ ಭಾವನೆಗಳು ಹಕ್ಕಿಯಾಗಿ ಹಾರಾಡಿ  ಮಸ್ತಿಸ್ಕವನು ಕಾಡುತಿದೆ ಮಸ್ತಕದಿ  ಮೂಡಿರುವ ಭಾವನೆಗಳು ಅಕ್ಷರಗಳಾಗಿ ಮೂಡುತ್ತಿದೆ ಪುಸ್ತಕದ ಪುಟಗಳಲಿ ತರತರದ ಭಾವನೆಗಳು ಮನದಲ್ಲಿ ಉದಿಸಿರಲು ಲೇಖನಿಯ ಹಿಡಿದೊಮ್ಮೆ ಬರೆಯುತಿರುವೆನು ನೂರಾರು ನೆನಪುಗಳು ಹಕ್ಕಿಯಂತೆ ಹಾರಾಡಿ ಚಂದದ ಕವಿತೆಯಾಗಿ ಹೊರಹೊಮ್ಮಿತು ರೆಕ್ಕೆಯನು ಹರಡುತ್ತ  ಹಿಡಿದಿಟ್ಟ ಭಾವನೆಗಳು ಸರಸರನೆ ಮೂಡಿಸಿತು ಪುಸ್ತಕದ ಪುಟಗಳಲಿ ಎದೆತುಂಬಿ ಬಂದಾಗ ಹರಿಯುತ್ತಿದೆ  ಕಾವ್ಯದಾರೆ ಲೇಖನಿಯು ಸರಸರನೆ ಹರಿದಾಡುತ ಪಂಕಜಾ.ಕೆ.ಮುಡಿಪು [24/06, 9:22 PM] +91 81478 57316: *ಎಲ್ಲರಿಗೂ ನಮಸ್ಕಾರ* 🙏🙏🙏🙏🙏🙏🙏🙏🙏 *ಕವಿಶೈಲ ಬಳಗದ ಹನ್ನೊಂದನೇ ವಾರದ ಸ್ಪರ್ಧೆಯ ಫಲಿತಾಂಶ ಪಟ್ಟಿ*  *ದಿನಾಂಕ.: ೨೦ - ೨೧/೦೬/೨೦೨೦   🥰❣🥰❣🥰❣🥰❣🥰 *ವಿಷಯ : ಚಿತ್ರಕವನ* *ದತ್ತ ಚಿತ್ರಕ್ಕೆ ಕವನ ರಚಿಸಿದ ಎಲ್ಲರಿಗೂ ಧನ್ಯವಾದಗಳು*  💙🌹💙🌹💙🌹💙🌹💙  *ಈ ವಾರದ  ತೀರ್ಪು* 🏆 🥇 *ಮಹಾದೇವ ರಾಯಚೂರು*(ಮೊದಲ) ‌        (ಮನುಜನಾಗಿ ಬಾಳುವಾಸೆ) 🥈 *ಮಮತಾ ಹೆಗಡೆ, ಶಿರಸಿ* (ಎರಡನೆ)         (ಕವಿತೆಯ ಜೀವಾಳ) 🥉 *ಪಂಕಜಾ ಕೆ ಮುಡಿಪು* (ಮೂರನೆ) ‌        (ಭಾವನೆಗಳ ತೋಟ) 🎖️ *ಸಿದ್ದು ಸ್ವಾಮಿ* (ಪ್ರೋತ್ಸಾಹಕ) ‌        (ವಿಕಸನ) 🎖️ *ಶಾಮಿದ್ ಗಂಗನಾಳ್* (ಪ್ರೋತ್ಸಾಹಕ) ‌ 

ನಿನ್ನೊಲುಮೆ ಸ್ನೇಹ ಸಂಗಮ

ನಿನ್ನೊಲುಮೆ ಭೂತಾಯಿ ಹಸಿರು ಸೀರೆ ಮನಸೆಳೆದಿದೆ ಭೂರಮೆಯ ಈ ಚೆಲುವು ಕಣ್ಣು ತುಂಬಿದೆ ವರುಣನ ಒಲುಮೆಯಲಿ ಇಳೆ ನಲಿದಾಡಿದೆ ಚಿಗುರು ಹೂ ತುಂಬಿ  ಪ್ರಕೃತಿ ತೊನೆದಾಡಿದೆ ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳ ಅಂದ ತಂಪಾದ ಗಾಳಿಯಲಿ ವಿಹರಿಸಲು ಆನಂದ ಮೂಡಣದಲಿ ಮೂಡುವ ರವಿಕಿರಣದ ಸೊಬಗು ಬಾಂದಳದ ತುಂಬೆಲ್ಲ  ಹರಡಿರುವ ಬಣ್ಣದ ಮೆರುಗು ಮೈಮನಕೆ ಮುದವನ್ನು ತುಂಬುತಿದೆ ಈ ಚೆಲುವು ಓ ಇನಿಯಾ ನಿನ್ನೊಲುಮೆ ನನಗೆ ನೆನಪಾಗಿದೆ ಬಾನಲ್ಲಿ ತುಂಬಿರುವ  ಬಿಳಿ ಮುಗಿಲಎಡೆಯಲ್ಲಿ ನಿನ್ನೊಲವ ಸವಿಯುತ್ತಾ ಮೈ ಮರೆಯುವಾಸೆ ಪಂಕಜಾ.ಕೆ.ಮುಡಿಪು

ಮುನಿದ ನಲ್ಲೆಗೆ ಹಳೆ ಕವನ

ಮುನಿದ ನಲ್ಲೆಗೆ ಕಿಟಕಿ ಬಾಗಿಲೆಡೆಯಲಿ ಇಣುಕುತಿರುವನು ಚಂದಿರ ಖುಷಿಯ ಪಡುವ ಕ್ಷಣಗಳಲಿ ಕೋಪವೇಕೆ ನನ್ನ ಇಂದಿರ ನಮ್ಮ ಕಲಹವ ನೋಡಿ ನಗುತಲಿರುವನು ಚಂದಿರ ಏನು ಮಾಡಿದೆ ನೀನು ಮೋಡಿ   ನನ್ನ ಬಾಳಿನ ಇಂದಿರ ಕೋಪ ಬಿಟ್ಟು ನಗುವ ತೋರೆ ಬರಲಿ ನಮ್ಮ ಬಾಳಲಿ ಚಂದಿರ ಒಲವ ಸವಿಯನು ಸವಿವ ಬಾರೆ ನೀನೇ ನನ್ನ ಬಾಳಿನ ಚಂದಿರ ಕೋಪತಾಪದಿ ನಲುಗದಿರಲಿ ನಮ್ಮ ಬಾಳಿನ ತೋಟವು ಅರಳಿ ನಗಲಿ ನಿತ್ಯ ಇರಲಿ ಬಣ್ಣ ಬಣ್ಣದ ಹೂವ ಚೆಲುವು ತಾರೆಗಳನುತಂದುಕೊಡವೆನೆಂದು ಆಶೆ ಹುಟ್ಟಿಸಲಾರೆನು ನನ್ನಒಲವನಿತ್ಯಕೊಡುವೆನೆಂದು ಭರವಸೆ ಕೊಡುವೆನು ಮೋಡ ತುಂಬಿದಬಾನಿ ನೆಡೆಯಲಿ ಇಣುಕುತಿರುವ ಚಂದಿರ ತಾರೆಗಳನೊಡನಾಟವಿಲ್ಲದೆ ಸೊರಗುತ್ತಿರುವುದು ಕಂಡಿರ  ನಲ್ಲೇ  ನಿನ್ನೊಡನಾಟವಿಲ್ಲದೆ  ನಿತ್ಯ ಸೊರಗುತ್ತಿರುವೆನು  ಕೋಪ ಬಿಟ್ಟು ಒಲವ ತೋರಿ ತುಂಬು ನನ್ನ ಬಾಳಲಿ ಬಣ್ಣವ ಪಂಕಜಾ. ಕೆ ಮುಡಿಪು ಕುರ್ನಾಡು

ಗೇಯ ಗೀತೆ ಕೋಗಿಲೆ ಹಾಡಿದೆ ಕೇಳಿದೆಯಾ ರಾಗದಲ್ಲಿ ಸಮಯದ ಗೊಂಬೆ ಫಿಲ್ಮ್

ಗೇಯ ಗೀತೆ ಕೋಗಿಲೆ ಹಾಡಿದೆ ಕೇಳಿದೆಯಾ ರಾಗದಲ್ಲಿ ನವಿಲದು ಕುಣಿದಿದೆ ನೋಡಿದೆಯಾ ಮನದಲಿ ರಂಗನು ತುಂಬುತಲಿ//ನ ಹೊಸ ಹೊಸ ಕನಸನು ಕಟ್ಟುತ ಮನವು ಕಣ್ಣಲಿ ಕಾಂತಿಯ ತುಂಬಿ//ನ ಬಾನಲಿ ಕಾಮನಬಿಲ್ಲು ಮೂಡಿದ ಹಾಗೆ ಅರಳಿದ ಹೂವಿನ ಗಂಧದ ಹಾಗೆ ಮಕರಂದವ ಹೀರುವ ಚಿಟ್ಟೆಯ ಹಾಗೆ ಹೊಸತನ ಎದೆಯಲಿ ತುಂಬಿ//ನ ರಾಧೆಯು ಕೃಷ್ಣನ ಅರಸುವ ಹಾಗೆ ಕೊಳಲಿನ ಗಾನಕೆ ಒಲಿಯುವ ಹಾಗೆ ನಿನ್ನಯ ಮೋಹಕೆ ಸೋತೆ ನನ್ನನು ನಾನೇ ಮರೆತೆ//ನ ಆಹಾಹಾ. ...ಆಹಾಹಾ....ಆಹಾಹಾ.   ಕಂಡಿರುವ ಕನಸು ನನಸಾದ ಹಾಗೆ ಬಾಳಲಿ ಹೂವು ಅರಳಿದ ಹಾಗೆ ಸಂತಸ ಮನದಲಿ ತುಂಬುವ ಹಾಗೆ ನಿನ್ನೊಡನಾಡುತ ನಲಿಯುವ   ಹಾಗೆ//ನ ಪಂಕಜಾ.ಕೆ.ಮುಡಿಪು ..

ಗೇಯ ಗೀತೆ ಅದೇ ಕಣ್ಣು ರಾಗದಲ್ಲಿ

ಗೇಯ ಗೀತೆ 2 ಅದೇ ಕಣ್ಣು ಅದೇ ಕಣ್ಣು ರಾಗದಲ್ಲಿ ಅದೇ ನಗು ಅದೇ ನಗು  ಮೋಡಿಯ ಮಾಡಿದೆ  ಪ್ರೀತಿಯ  ತಂದಿದೆ ಪ್ರೀತಿಯ   ತಂದಿದೆ ಪ್ರೀತಿಯ ತಂದಿದೆ/ಅದೇ     ಬಾನಲಿ ತುಂಬಿದ ಬಣ್ಣದ ಹಾಗೆ  ಮನಕೆ ತಂಪನು ತರುತಿದೆ  ನನ್ನಾ ಎದೆಯನು ಬಗೆದು  ಜ್ಯೋತಿಯಾ ಬೆಳಗಿಸಿದೆ/ಅದೇ   ಬೆಳದಿಂಗಳ ರಾತ್ರಿಯಲಿ ಬಿಡದೇ ಕಾಡುತಿದೆ ನನ್ನೆದೆಯಲಿ ಕಚಗುಳಿ ಇಡುತ ಮೈಯನು ಸವರುತಿದೆ//ಅದೇ ನೆಮ್ಮದಿಯಿಂದ ಇರಲಾಗದೆ ಮನ ಚಡಪಡಿಸುತಿದೆ ನಿನ್ನ ಒಲವು ನನ್ನೆಡೆಗಿರಲು  ಮನಸು ಹಕ್ಕಿಯಾಗಿದೆ//ಅದೇ ಪಂಕಜಾ.ಕೆ.ಮುಡಿಪು  

ಗೆಯ ಗೀತೆ ಚಲನಚಿತ್ರದ ಹಾಡಿನ ಅನುಕರಣೆ ಹಾಲು ಜೇನು

 ಗೇಯ ಗೀತೆ ಹಾಲು ಜೇನು ಒಂದಾದ ಹಾಗೆ ರಾಗದಲ್ಲಿ ಹೂವು ಗಂಧ ಬೆರೆತಂತೆ ನಾನು ನೀನು ಒಂದಾಗಿ ನಗು ನಗುತ ಇರುತಲಿ ಜೀವನ ಜೋಕಾಲಿಯಾಗಿದೆ ಬಾಳಲ್ಲಿ ತನಿರಸವು ತುಂಬಿದೆ //ಹೂವು ಹಗಲಿರಲಿ ಇರುಳಿರಲಿ ನಾನಿನ್ನ ಜತೆ ಇರುವೆನು ಎಂದೆಂದೂ ಕೈಬಿಡೆನು ನಿನ್ನಾ ಓ ಚೆಲುವೆ ನೀ ಎಂದೆಂದೂ ನಗುತಿರು / ಹೂವು ಈ ಸುಕೋಮಲ ಮೊಗವು ಬಾಡದಂತೆ ಕಾಯುವೆ ಈ ಮೌನವ ಬಿಟ್ಟು ಮಾತಾಡು ಓ ಚೆಲುವೆ ನಾನಿರುವೆ ನಿನ್ನೊಡನೆ ಎಂದೆಂದಿಗೂ/ಹೂವು ಪಂಕಜಾ.ಕೆ.ಮುಡಿಪು 22 06 2020

ನವಪರ್ವದಲ್ಲಿ ಜಾನಪದಗೀತೆ ಮೆಚ್ಚುಗೆ

[21/06, 4:15 PM] pankajarambhat: ಚಿತ್ರಕ್ಕೊಂದು ಜಾನಪದ ಗೀತೆ ಚೆಲ್ವಿ ಮಾರುದ್ದ ಜಡೆಯವಳೇ ನಡುವಲ್ಲಿ ಕೊಡ ಇಟ್ಟವಳೇ ನೀರನು ತರಲು ಹೊಂಟೆನವ್ವ ಬೆಳ್ಳಾನೆ ಮುಖದಾಗೆ ನಸು ನಗುವ ಬೀರೋಳೆ ಕಣ್ಣಲ್ಲಿ ಕಾಡುತ್ತ ನಿಂತೊಳೆ ಕುಪ್ಪಸ ತೊಡದೇನೆ ಸೆರಗನ್ನು ಹೋದ್ದೋಳೆ ನನ್ನ ಮನಸು ನಿನ್ನೆಡೆಗೆ ವಾಲೈತವ್ವ ಕಿವಿಯಲ್ಲಿ ತೂಗಾಡೋಜುಮ್ಕಿನ  ಕಂಡರೆ ನನ ಮನಸು ತೂಗುತೈತೆ  ನಿನ್ನ ಮೇಲೆ ನನಗೆ ಮನಸಾಗೈತೆ ಯಾವೂರ ಚೆಲುವೆ ನೀನವ್ವ ನನ ಮನವ ಕದ್ದೊಳೆ ನೀನವ್ವ ನಿನ್ನಂದ ಕಂಡು ನಾ ಸೋತೆನವ್ವ ಕಂಬವ ಹಿಡಕೊಂಡು ನಾಚುತ್ತ ನಿಂತ್ಕೊಂಡು ಗೆಣೆಕಾರನ ನೆನಪು ಮಾಡ್ತಿಯೇನವ್ವ ಪಾರಿವಾಳ ಕಳಿಸಿವ್ನಿ ನೋಡವ್ವ ಒಲವ ಓಲೆ ಬರೆದಿವ್ನಿ ಓದವ್ವ ನಗು ನಗುತ ನನ ಕೂಡೆ ಇರ್ಬೇಕವ್ವ   ಹೊತ್ತಾರೆ ಹೊಳೆದಂಡಕ್ಕೆ ಬರ್ತೀನಿ ಬೇಗನೀ ಬಂದು ನನ್ನ ಮನ ತಣಿಸಬೇಕವ್ವ ನನ್ನ ಜೀವ ನಿನ್ ಮೇಲೆ ಇರ್ತಯಿತೆವ್ವ ಪಂಕಜಾ.ಕೆ.ಮುಡಿಪು  ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್ [21/06, 4:15 PM] pankajarambhat: *ಆತ್ಮೀಯ* *ಸ್ನೇಹಿತರೇ* *ಎಲ್ಲರಿಗೂ* *ನಮಸ್ಕಾರ*   *೧೮-೦೬-೨೦೨೦ ಗುರುವಾರದ* *"ಚಿತ್ರಕ್ಕೊಂದು ಜನಪದ ಗೀತೆ ರಚನೆ" ಸ್ಪರ್ಧೆಯ ಫಲಿತಾಂಶ .*🙏 ✍️📚✍️📚✍️📚  *ಅತ್ಯುತ್ತಮ ಜನಪದ ಗೀತೆ*  ೧.ಜ್ಯೋತಿ ಕುಂಬ್ರ🏆 *ಉತ್ತಮ ಜನಪದ ಗೀತೆಗಳು*  ೧.ಸಂಭ್ರಮ ಕಾರ್ತಿಕ್ ಭಟ್🥇 ೨.ಲಕ್ಷ್ಮೀ ವಿ ಭಟ್🥇   *ಮೆಚ್ಚುಗೆ ಪಡೆದ ಜನಪದ ಗೀತೆಗಳು*  ೧.ಪ್ರಿಯಾಶ್ರೀ ಕೆ.ಎಸ್

ಅಪ್ಪನ ದಿನಕ್ಕೊಂದು ಕವನ 20 .6 2020

ನನ್ನಪ್ಪ ಬೆಳಗಿನ ಜಾವವೇ ಬೇಗನೆ ಎದ್ದು ಯೋಗಾಸನವನು ಮಾಡುವನು ಹಟ್ಟಿಯ ದನಗಳ ಮೈಯನು ತಿಕ್ಕುತ ಹಾಲನು ತಾನು ಕರೆಯುವನು ದೇವರ ಪೂಜೆಯ  ಮಾಡುತ ದಿನವೂ  ಭಕ್ತಿಯಲಿ ದೇವರ ಬೇಡುವನು ಓದಲು ಬರೆಯಲು ಕಲಿಸಿದ ಅಪ್ಪ ಶಿಕ್ಷಕನಾಗಿಯೂ ಹೆಸರನು ಪಡೆದಿಹನು ಹದಿಮೂರು ಮಕ್ಕಳ ಪಿತ ತಾನಾದರು ನಗುತಲಿ  ಸಂಸಾರ ರಥವನು ಎಳೆಯುವನು ಮಕ್ಕಳ ಮನದಲಿ ಅಕ್ಷರ ಬೀಜವ ಬಿತ್ತುತ ತಾನೂ ನಲಿಯುವನು ಮಕ್ಕಳ ಎಲ್ಲರ ದಡವನು ಸೇರಿಸಿ. ತೃಪ್ತಿಯ ತಾನು ಕಂಡಿಹನು ಬಾಳಲಿ ಬರುವ ಕಷ್ಟಗಳನ್ನು ಎದುರಿಸುವ ಛಲವನು ತುಂಬಿಹನು ಅಮ್ಮನ ಜತೆಯಲಿ ಪ್ರೀತಿಯಲಿರುತ ಚಂದದಿ ಸಂಸಾರ ಮಾಡಿಹನು ಹೋಮಿಯೋಪತಿಯಲಿ ಯೂ ಸಿದ್ಧಹಸ್ತರು  ಎನ್ನುವ ಕೀರ್ತಿಯ ಪಡೆದಿಹನು   ಬಡವರಿಗೆಲ್ಲ ಉಚಿತವಾಗಿ ಮದ್ದನು ಕೊಡುತ ಬಡವರ ಬಂಧು ಎನಿಸಿಹನು ಅಜ್ಜನು ಕಟ್ಟಿದ ಶಾಲೆಯ  ನಡೆಸುತ ಶಾಲೆಯ ಏಳಿಗೆಗೆ ದುಡಿದಿಹನು  ನೋವುಗಳೆಲ್ಲವ ಮನದಲಿ ನುಂಗಿ  ಛಲದಲಿ ಜೀವನ ನಡೆಸಿಹನು ಕಷ್ಟವ ಗಣಿಸದೆ ನಿಷ್ಠೆಯ ತೋರುತ ಬೆಳೆಸಿದ ನಮ್ಮನು ನನ್ನಪ್ಪ ಅಪ್ಪನ ದಿನದಲಿ ಮಾತ್ರವೇ ನೆನೆಯದೆ ನಿತ್ಯವೂ ನೆನೆಯುವೆ ಬದುಕಲು ಕಲಿಸಿದ ಅಪ್ಪನನು    ಪಂಕಜಾ.ಕೆ.ಮುಡಿಪು  ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ದೇಶಭಕ್ತಿ ಗೀತೆ ಓ ಭಾರತೀಯ ಸ್ನೇಹ ಸಂಗಮ ದಲ್ಲಿ ಉತ್ತಮ

ಓ ಭಾರತೀಯ  (ದೇಶಭಕ್ತಿ ಗೀತೆ) ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ  ಹಬ್ಬಿ ನಿಂತಿದೆ ನಮ್ಮ ದೇಶ  ಭಾರತ ಧಾಳಿಕೋರರ ತಂತ್ರ ಮುರಿಯುತ ತಲೆ ಎತ್ತಿ ನಿಂತಿದೆ ನಮ್ಮ ದೇಶ ಭಾರತ   ಕ್ಷಾತ್ರ ತೇಜವು ತುಂಬಿ ತುಳುಕುವ ವೀರ ರಿಂದ ತುಂಬಿದ ಭಾರತ ತಾಯಿ ಭಾರತಿಗಾಗಿ ಜೀವನ ತೆತ್ತು ಬಿಡುವರು ಕ್ಷಣದಲಿ ವೈರಿ ರುಂಡವ ಚೆಂಡನಾಡುತ ಗಡಿಯ ಕಾಯುವರು ಯೋಧರು ಭಾರತಿಯ ಸೆರಗ ಸೆಳೆಯಲು ಬಿಡದ ವೀರ ಧೀರರು ಕನಸು ಮನಸಲಿ ತುಂಬಿ ನಿಲ್ಲಲಿ ದೇಶಾಭಿಮಾನವು ನಮ್ಮಲಿ ತನು ಮನವು ಮುಡಿಪಾಗಿರಲಿ ಭಾರತದ ಉನ್ನತಿಯಲಿ ಜನನಿಯ ಜಯ ಮಂತ್ರವೇ  ನಮ್ಮ ಉಸಿರಾಗಲಿ ಆತ್ಮನಿರ್ಭರ ಭಾರತವೇ  ನಮ್ಮ ಗುರಿಯಾಗಲಿ ವಿಶ್ವದೆಲ್ಲೆಡೆ ಹರಡಿ ಹಬ್ಬಲಿ  ಭಾರತಾಂಬೆಯ ಕೀರ್ತಿಯು ಸ್ವಾತಂತ್ರ್ಯದ  ಕಹಳೆ  ಜಗತ್ತಿನೆಲ್ಲೆಡೆ  ಮೊಳಗಲಿ ನಾಡು ನುಡಿ ನಮ್ಮದೆನ್ನುವ  ಭಾವತುಂಬಿ ತುಳುಕಲಿ ಐಕ್ಯಮಂತ್ರವು  ನಮ್ಮ ಉಸಿರಲಿ ಬೆರೆತು ಹೋಗಲಿ ನಿತ್ಯವೂ   ಸ್ನೇಹ ದುಂದುಭಿ  ನಿತ್ಯ ಮೊಳಗಲಿ ಜಾತಿ ಭೇದವು ತೊಲಗಲಿ ಭಾರತೀಯರು ನಾವು ಒಂದು ಎಂಬ ಭಾವವು ತುಂಬಲಿ ಪಂಕಜಾ.ಕೆ ಮುಡಿಪು

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ಗಜಲ್ ಹನಿ ಹನಿ ಇಬ್ವಣಿ

ಗಜಲ್ 18..6 2020  ನವಿಲುಗರಿಯನು ಧರಿಸಿ ಬಂದೆಯಾ ಮಾಧವ ಮುರಳಿಗಾನದಿ ಒಲಿಸಿ ಕೊಂಡೆಯಾ ಮಾಧವ ಸಪ್ತವರ್ಣದ  ಬಣ್ಣದಿಂದ  ತುಂಬಿದ ಗರಿಯದು ನಿನ್ನ ಕಿರೀಟದಲಿ ಅದನು ಇರಿಸಿದೆಯಾ ಮಾಧವ ರಾಧೆಯೊಲವನ್ನು ಪಡೆಯಲೆಂದು ಈ ಅಲಂಕಾರವೇ ನಿನ್ನ ಮೋಹದ ಬಲೆಯಲ್ಲಿ ಕೆಡವಿದೆಯಾ ಮಾಧವ ಯಮುನಾ ತೀರದಲ್ಲಿ ದಾರಿಯನ್ನು ಕಾಯುತಿರುವೆ ಬೇಗ ಬಂದು ಒಲವ ಸುಧೆಯ ಹರಿಸೆಯಾ ಮಾಧವ ಪಂಕಜಾಕ್ಷಿಯ ಮನವು  ಸಂಭ್ರಮ ಗೊಂಡಿದೆ ಬರಿದಾದ ಮಡಿಲನ್ನು ತುಂಬಿದೆಯಾ ಮಾಧವ ಪಂಕಜಾ.ಕೆ.ಮುಡಿಪು

ಬಣ್ಣದ ಚಿಟ್ಟೆ ಚಿತ್ರಕ್ಕೊಂದು ಶಿಶುಗೀತೆ ನವಪರ್ವದಲ್ಲಿ ಮೆಚ್ಚುಗೆ

ಚಿತ್ರಕ್ಕೊಂದು ಶಿಶುಗೀತೆ  ನವಪರ್ವದಲ್ಲಿ ಮೆಚ್ಚುಗೆ ಬಣ್ಣದ ಚಿಟ್ಟೆ ಬಾ ಬಾ ಚಿಟ್ಟೆ ಚಂದದ ಚಿಟ್ಟೆ ಹೋಗುವೆ  ಎಲ್ಲಿಗೆ ನೀನು? ರೆಕ್ಕೆಯ ಬಡಿಯುತ ಹೂವಿಂದ ಹೂವಿಗೆ ಹಾರುತ  ತಿರುಗುವೆಯೇನು? ನನ್ನಯ ಜತೆಯಲಿ ಆಡಲು ಬಂದು ನನಗೂ ಹಾರಲು ಕಲಿಸುವೆಯಾ? ಕಪ್ಪಿನ ಎಡೆಯಲಿ ಬೆಳ್ಳನೆ ಚುಕ್ಕೆಯು ಚಂದದ ಅಂಗಿಯ ತೊಟ್ಟಿರುವೆ ನಿನ್ನನು ನೋಡುತ ನನ್ನಯ ಮನದಲಿ ನಿನ್ನೊಡನಾಡುವ ಅಸೆ ಬಾ ಬಾ ಚಿಟ್ಟೆ  ಬಣ್ಣದ ಚಿಟ್ಟೆ ನನ್ನೊಡನಾಡಲು ಬಾ ಬಾ ಪಂಕಜಾ.ಕೆ.ಮುಡಿಪು

ಹುಚ್ಚ ಸ್ನೇಹಸಂಗಮ ದತ್ತ ಪದ ಜಾಲತಾಣ

ಹುಚ್ಚ  (ನ್ಯಾನೊ ಕಥೆ) ಜಾಲತಾಣದ ಮೋಹದಲ್ಲಿ ಸಿಕ್ಕಿ ಬಿದ್ದ ಚರಣ್ ಅದರಿಂದ ಬಿಡಿಸಿಕೊಳ್ಳಲಾಗದೆ ಇದ್ದಾಗ ಮೊಬೈಲ್ ಕಳ್ಳತನವಾಗಿ ಇಂದೀಗ ಆತ ಹುಚ್ಚಾಸ್ಪತ್ರೆಯ ಬೆಡ್ ನಲ್ಲಿ ವಿಚಿತ್ರ ವರ್ತನೆ ತೋರುತ್ತ ಮನೆಯವರಿಗೆ ತಲೆನೋವಾಗಿದ್ದಾನೆ ಪಂಕಜಾ.ಕೆ.ಮುಡಿಪು

ಚಿತ್ರದುರ್ಗದ ಕೋಟೆ

ಚಿತ್ರ ಕವನ ಸ್ಪರ್ಧೆಗಾಗಿ ಚಿತ್ರದುರ್ಗದ ಕೋಟೆ ಚಿತ್ರ ದುರ್ಗದ ಕಲ್ಲಿನ ಕೋಟೆ ಗಂಡುಗಲಿ ಗಳು ಆಳಿದ ಕೋಟೆ ವೀರವನಿತೆಯರು ಬಾಳಿದ ನಾಡು ಸಂಸ್ಕೃತಿ ಕಲೆಗಳ ಚಿನ್ನದ ಬೀಡು ಒನಕೆ ಓಬವ್ವ ರಕ್ಷಿಸಿದ ಕೋಟೆ ಏಳು ಸುತ್ತಿನ ಕಲ್ಲಿನ ಕೋಟೆ ಮದಕರಿ ನಾಯಕ ಆಳಿದ ಕೋಟೆ ಸಿಡಿಲುಗು ಜಗ್ಗದ ಉಕ್ಕಿನ ಕೋಟೆ ಪ್ರವಾಸಿಗಳ ಮನಸೆಳೆಯುವ ತಾಣ ಚಾರಣ ಪ್ರೀಯರ ಮೆಚ್ಚಿನ ತಾಣ  ಬಯಲು ಸೀಮೆಯ ಈ ನಾಡು ಚಿತ್ರದುರ್ಗದ ಸಿರಿನಾಡು   ಕೆಚ್ಚೆದೆಯ ವೀರರು ಬಾಳಿದ ನಾಡು ಭವ್ಯ ಭಾರತದ ಹೆಮ್ಮೆಯ ನಾಡು ಪ್ರಕೃತಿ ಸಿರಿಯು ತುಂಬಿದ ಬೀಡು ಚಿತ್ರದುರ್ಗದ ಈ ನಾಡು ಪಂಕಜಾ.ಕೆ .ಮುಡಿಪು ಹೆಸರು .ಪಂಕಜಾ.ಕೆ. ವಿಳಾಸ ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ .ಶ್ರೀ ಗಣೇಶ ಕೃಪಾ.ಮುಡಿಪು. ಅಂಚೆ..ಕುರ್ನಾಡು  574153 ದ.ಕ. ಮೊಬೈಲ್ ನಂಬರ್ 9964659620

ಭಾವಗೀತೆ ದತ್ತಪದ ಕೆಮ್ಮುಗಿಲು. ಆಸೆಯ ಅಲೆ ಸ್ನೇಹ ಸಂಗಮ

ಆಸೆಯ ಅಲೆ (ಭಾವಗೀತ) ಅಂಬರದಿ ಹರಡಿರುವ ಕೆಮ್ಮುಗಿಲಲೊಮ್ಮೆ ವಿಹರಿಸುವ ಬಯಕೆ ನಿನ್ನೊಡನೆ ಚೆಲುವೆ ಬಾನಲ್ಲಿ ತುಂಬಿರುವ ಅಂದವನು ನೋಡು ನಿನ್ನ  ಕೆನ್ನೆಯ ಬಣ್ಣಕ್ಕೆ ಸ್ಪರ್ಧಿಯದು ನೋಡು ಆಸೆಯಾ ಅಲೆಯಲ್ಲಿ ತೇಲುತಿದೆ  ಮನ ಬಯಕೆಯ ಬಲೆಯಲ್ಲಿ ನರಳುತಿದೆ ತನು ಓ ಚೆಲುವೆ ಎಲ್ಲಿರುವೆ ಬಾ ಬೇಗ ಒಮ್ಮೆ ನನ್ನೆದೆಯ ಉರಿಯನ್ನು ತಣಿಸೊಮ್ಮೆ ನೀನು ಹೂವಿನಲಿ ಗಂಧವು ಬೆರೆತಿರುವಂತೆ ಒಂದಾಗಿ ನಾವಿಬ್ಬರು ಬಾಳೋಣವಂತೆ ಬಾ ಬೇಗ ಓ ಚೆಲುವೆ ಕಾಯುತಿರುವೆ ನಿನಗೆ ಕೆಮ್ಮುಗಿಲ ಎಡೆಯಲ್ಲಿ ಕುಣಿಯೋಣ. ನಲ್ಲೆ ಪಂಕಜಾ  ಕೆ.ಮುಡಿಪು

ಬಡತನದ ಬವಣೆ ಕಾವ್ಯಕೂಟ ದಲ್ಲಿ ಪ್ರಥಮ ಸ್ಥಾನ ಕೊಟ್ಟ ಪದ ಕೆಂಡ ಹಾಸಿದ ದಾರಿ 17.6.2020

ಬಡತನದ ಬವಣೆ.  ಬಡತನದ ಬವಣೆಯಲಿ ಬಾಡುತಿವೆ ಜೀವಗಳು ಉಂಡುಡಲು ಇಲ್ಲದೆಯೇ ನವೆಯುತಿವೆ ದಿನ ದಿನವೂ ಚಿಂದಿಯನು ಆಯುತ್ತಾ ಅರೆಹೊಟ್ಟೆ ಊಟ ಮನದಲ್ಲಿ ನೂರಾರು ಕನಸುಗಳ ಓಟ ಕೆಂಡ ಹಾಸಿದ ದಾರಿ ತುಳಿಯಬೇಕದರ ಹಾರಿ ಬರಬಹುದು ಒಳ್ಳೆದಿನ ಕಾಯುತಿವೆ ಕಾತರದಿ ಕಾಯುವ ಕೈಯೊಂದು ಮೇಲಿಹುದು ಎನುತ ಭರವಸೆಯ ತುಂಬುತಾ ಬದುಕುತಿರುವರು ನಿತ್ಯ ಪಂಕಜಾ.ಕೆ.ಮುಡಿಪು

ಗಜಲ್

ಗಜಲ್ ಬಾನ ಬಯಲಲಿ ಮುಗಿಲು ಹರಡಿದೆ ಮಳೆಯ ಸುರಿಸದೆ ಬಯಲು ಬಿರಿದಿದೆ ಬಿಸಿಲ ತಾಪಕೆಸುಟ್ಟು ಹೋದ ಬುವಿಗೆ ಮಳೆಯ ಸಿಂಚನ ಅಮಲು ತಂದಿದೆ ಒಣಗಿದ ಗಿಡಮರಗಳು ಚಿಗುರಿ ನಿಂತು ಭೂದೇವಿಯ ಒಡಲು ತಣಿದಿದೆ ಬೇಸಿಗೆಯಲ್ಲಿ ತಿಳಿಯಿತಲ್ಲಾ ನೀರ ಮಹತ್ವ ಮಳೆಯ ನೀರನು ಇಂಗಿಸಲು  ಪ್ರಯತ್ನಿಸಬೇಕಿದೆ ಮಳೆಕೊಯ್ಲು ನಿರಂತರವಾಗಿರಬೇಕು ಪಂಕಜಾ ಮಳೆ ಸುರಿದು   ಇಳೆಯೊಡಲು ತಂಪಾಗಿದೆ ಪಂಕಜಾ.ಕೆ.

ಗಜಲ್ ಜೇಳದೆ ಕೊಟ್ಟಿರುವೆ ಕಾವ್ಯಾಕುಟ ಉತ್ತಮ

[12/06, 10:34 PM] pankajarambhat: ಗಜಲ್ ದತ್ತಪದ  .. ಕೇಳದೆ ಕೊಟ್ಟಿರುವೆ ಹೃದಯವನ್ನು ನಿನಗೆ ಒಲವ ಸೂಸುತ ನೀನು ನನ್ನೆದೆಯ ಕದ್ದಿರುವೆ ನಲ್ಲ ಪ್ರೀತಿ ಪ್ರೇಮದ ಪಾಶದಲಿ ನನ್ನನು ಬಂಧಿಸಿರುವೆ ನಲ್ಲ ಕೇಳದೆ  ಕೊಟ್ಟಿರುವೆ ಹೃದಯವನ್ನು  ನಿನಗೆ ನನ್ನೊಡಲ ಪ್ರೇಮಧಾರೆಯ ಹರಿಸಿರುವೆ ನಲ್ಲ ಕನಸಿನಲ್ಲೂ ನೀನೇ ನನ್ನ ಮನದರಸನಾಗಿರುವೆ ಬಾಂದಳದ ಚಂದ್ರನಂತೆ  ನಗು ಬೀರುತಿರುವೆ ನಲ್ಲ ಬಂಗಾರದ ಒಡವೆ  ಬೇಕೆಂದು ನಾ ಕೇಳಲಿಲ್ಲ ನನ್ನದೆಲ್ಲವನೂ ನಿನಗೆ ಅರ್ಪಿಸಿರುವೆ ನಲ್ಲ ಪಂಕಜಾಕ್ಷಿಯ ಮನವು ನಿನ್ನ ಒಳಿತನ್ನೇ ಹಾರೈಸುತ್ತಿದೆ ಒಡನಾಡಿಯಾಗಿ ನಿನ್ನೊಡನೆ ಬಾಳತೇರನ್ನು ಎಳೆದಿರುವೆ ನಲ್ಲ ಪಂಕಜಾ.ಕೆ. ಮುಡಿಪು [12/06, 10:34 PM] pankajarambhat: *ದಿನಾಂಕಃ ೧೨/೦೬/೨೦೨೦ * *ದಿನಃ ಶುಕ್ರವಾರ* ಕಾವ್ಯ ಸಿಂಧುವಿನ ಅಮೂಲ್ಯ ಬಿಂದುಗಳೇ...ಎಲ್ಲರಿಗೂ ನಮಸ್ಕಾರ* 📔📔📔📔📔📔 *ಬರೆವವರ ಮುಕ್ತ ಮನ ರಚನೆಯಲಿ ಹೊಳೆದಿದೆ... ಬರೆದದ್ದೆಲ್ಲವೂ ಸುಂದರವಾಗಿದೆ ಯೋಜನಾತೀತದ ಯೋಚನೆಗಳಿಗೆ ನಮ್ಮ ನಮನ... ನರ್ವಹಣೆಯ ಕಾರ್ತವ ಸರಿ ಮಾಡದಿದ್ದುದಕೆ ನಾನೇ ಕ್ಷಮೆಯಾಚಿಸಬೇಕಿದೆ.... ನನಗೊಂದು ಸಮಾಧಾನವೆಂದರೆ, ಸಮಯದಭಾವದಲೂ ನಿಮ್ಮೆಲ್ಲರ ಗಜ಼ಲ್ ನ ಭಾವ ಹಿಡಿದಿಡಲು ಸಾಧ್ಯವಾದುದ್ದಕ್ಕೆ...* 📖📖📖📖📖📖 *ಫಲಿತಾಂಶ ಹೀಗಿದ್ದರೆ ಸ್ವೀಕರಿಸುವಿರಲ್ಲವೇ?😊* 📒📒📒📒📒📒 *ಅತ್ಯುತ್ತಮ* ============== *ಸುರೇಶ್ ನೆಗಳಗುಳಿ* *

ರಾಧಾಮಾಧವ

ರಾಧಾ ಮಾಧವ ಮುರಳಿಗಾನದಿ ಮೈ ಮರೆತಳಾ ರಾಧೆ ಒಲವ ಗಾನದಲಿ ಒಲಿಸುವನೆಂದು ಕಾದಳಾ ಮುಗುದೆ ಮಾಧವನ ಸುಳಿವಿಲ್ಲದೆ ಬಸವಳಿದಿದೆ ತನು ಚಂದ್ರಕಾಂತಿಯ ಇರುಳ ಕತ್ತಲಿನಲೂ ಕಂಪಿಸುತ್ತಿದೆ ತನು ಪ್ರೇಮದಾರತಿಯನು ಹೊತ್ತಿಸಿ ಕಾದೆ ಬಂದೇ ಬರುವೆಯೆಂದು ಮನ ತೆರೆದು ಕಾದೆ ಮುರಳಿ ಲೋಲನಾಗಮನದಲಿ  ಖುಷಿ ರಾಧೆಯ ಮೊಗವರಳಿ ಹೊಮ್ಮುತ್ತಿದೆ ಕಾಂತಿ ಬೃಂದಾವನದಲಿ ಹಕ್ಕಿಗಳ ಮಧುರ ಗಾನ ವಸಂತನಾಗಮನಕೆ ಅರಳುವ ಹೂಬನ ಮಾಧವನ ಒಲವಿನಾಸರೆಯ ಪಾನ ರಾಧೆಯ ಮನದಲಿ ಮಾಧವನದೇ ಧ್ಯಾನ  ಬುವಿಯಲಿ  ನವಿಲ ನರ್ತನದ ಚಂದ ಒಲವಿನ ರಸದಲಿ ಬದುಕಿನಾಸರೆಯ ಬಂಧ ರಾಧಾಮಾಧವರ  ಪ್ರೀತಿಯ   ಅನುಬಂಧ ಮುರಳೀ ಲೋಲನ ಒಲವಿನಾಸರೆಯು ಚಂದ ಪಂಕಜಾ.ಕೆ.

ವಚನ ಕಾವ್ಯಾಕುಟ

ವಚನ.  (ಕಾವ್ಯಕೂಟ ಸ್ಪರ್ಧೆಗಾಗಿ ) ದತ್ತಪದ ..ಹಿತನುಡಿ ಜೀವನ ಸಾರ್ಥಕ್ಯ ಕೊಪ್ಪರಿಗೆ ತುಂಬಾ ಹಣವಿದ್ದರೇನು? ಉಪ್ಪರಿಗೆಯ ಮನೆಯಿದ್ದರೇನು? ಆರೋಗ್ಯಭಾಗ್ಯವಿಲ್ಲದಿರೆ ಎನಿದ್ದರೇನು? ಹಿತಮಿತವಾಗಿ ಉಣ್ಣುತ್ತಾ ,ಹಿತನುಡಿಯನಾಡುತ್ತ ಜೀವನ ಸಾರ್ಥಕ್ಯವ ಪಡೆಯೆಂದ ಪಂಕಜಾರಾಮ ಪಂಕಜಾ.ಕೆ.ಮುಡಿಪು. 16.6.2020

ಪ್ರೀತಿ ಮಳೆ

ಪ್ರೀತಿ ಮಳೆ ಬೇಸಿಗೆಯ ಬಿಸಿಲಲ್ಲಿ ಬೆಂದು ಬಸವಳಿದಾಗ ಸೋನೆ ಮಳೆಯಂತೆ ಬಂದು ನೀ ಬಡಿದೆಬ್ಬಿಸಿದೆ ನಸುನಗುತ ಬಳಿ ಬಂದು ನಿನ್ನೊಲವ ಉಣಬಡಿಸಿ ಮುಂಗಾರು ಮಳೆಯಂತೆ ಮೈಮನಕೆ ಮುದ ತುಂಬಿದೆ ನಿನ್ನ ಪ್ರೀತಿಯಾಲಿಂಗನದಲಿ ಮೈ ಮರೆತು ನಿಂತಾಗ ತುಂತುರು ಮಳೆಯಲ್ಲಿ ನೆನೆದಂತ  ಉಲ್ಲಾಸಹಾಸ ಬರಡಾದ  ಮನವಿಂದು ನಿನ್ನೊಲವ ಸವಿ ಸವಿದು ಸ್ವಾತಿ ಮಳೆಹನಿಯಂತೆ ಬಾಳೆಲ್ಲಾ  ಮುತ್ತಾಗಿದೆ ನನ್ನೆದೆಯ ಭಾವಗಳು ಎದೆ ಬಿರಿದು ಹೊರಬಂದು ಕುಂಭದ್ರೋಣ ಮಳೆಯಲ್ಲಿ ನೆನೆದಂತೆ ಹುಚ್ಚೆದ್ದಿದೆ ಪಂಕಜಾ.ಕೆ.ಮುಡಿಪು 13.06.2020

ಮರಳಿ ಗೂಡಿಗೆ ಸ್ನೇಹ ಸಂಗಮತೃತೀಯ

 ಮರಳಿ ಗೂಡಿಗೆ  ಅಂದು ಮನೆಯಲ್ಲಿ  ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು .ಅವರ ದೊಡ್ಡ ಸೊಸೆ ಮೀರಾ ಭಕ್ತಿಯಿಂದ ಪೂಜಾ ಕಾರ್ಯಕ್ರಮಗಳನ್ನು ಪುರೋಹಿತರ ಉಪಸ್ಥಿತಿಯಲ್ಲಿ ಮಾಡುತ್ತಿದ್ದಳು . ಮನೆಯ ಹಿರಿಯ ಮಗ ವಿಶ್ವಾಸ್ ಮನೆ ಬಿಟ್ಟು ಹೋಗಿ .5 ವರ್ಷವಾಯಿತು,.ಅತ್ತೆ ಮಾವ ಎಲ್ಲರೂ ತುಂಬಾ ಚಿಂತೆಯಲ್ಲಿದ್ದರು. .ಎಲ್ಲಿದ್ದಾನೆ ಎಂದು ಹುಡುಕುವ ಅವರ ಪ್ರಯತ್ನವೆಲ್ಲಾ ವ್ಯರ್ಥವಾಗಿತ್ತು .,ಕೊನೆಯ ಪ್ರಯತ್ನವೆಂದು ದೇವರ  ಮೊರೆಹೊಕ್ಕಿದ್ದಳು  ಮೀರಾ. ಕಟ್ಟುನಿಟ್ಟಾದ ವ್ರತ ಉಪವಾಸ ಮಾಡಿ ಇಂದು ಉದ್ಯಾಪನೆ ದಿನ,  ತನ್ನ ಗಂಡ ಮರಳಿ ಮನೆಗೆ  ಬಂದೆ ಬರುತ್ತಾನೆ ಎನ್ನುವ ವಿಶ್ವಾಸ ಅವಳದು ...ಮಂಗಳಾರತಿ ಇನ್ನೇನು ಆಗುತ್ತದೆ ಎನ್ನುವಾಗ ಹೊರಗೆ ಗಲಾಟೆ ಕೇಳಿ ಅತ್ತೆಯವರು ಹೋಗಿ ನೋಡಿದಾಗ ಮನೆ ಬಿಟ್ಟು ಹೋದ ಮಗ ಮಿಲಿಟರಿ ಕಾರಿನಲ್ಲಿ   ಬಂದು ತಂದೆ ತಾಯಿಯರ ಕಾಲು ಹಿಡಿಯುತ್ತಾನೆ. .ದೇವರ ಕಾರ್ಯಕ್ರಮ ಎಲ್ಲರನ್ನು ಸೇರುವಂತೆ ಮಾಡಿತು.ಅತ್ತೆಯವರ ಮುಖದಲ್ಲೂ ಸಂತೋಷದ  ನಗೆ ಹರಿದಾಡಿತ್ತು..ಸೊಸೆಯ ನಿಷ್ಠೆ ದೇವರ ಮೇಲಿನ ಭಕ್ತಿ ಯನ್ನು ಅವರು ಮನಸಾರೆ ಕೊಂಡಾಡಿದರು  ಪಂಕಜಾ.ಕೆ.ಮುಡಿಪು

ಗೋಪುರ ಕವನ ಕಲಾದೇಗುಲ ದಲ್ಲಿ ಉತ್ತಮ

ಗೋಪುರ ಕವನ  (ಸ್ಪರ್ಧೆಗಾಗಿ) ಶೀರ್ಷಿಕೆ..ಕಣ್ಣಂಚಿನ ಸೆಳೆತ                                ಓ                              ನನ್ನ                             ಮನವ                            ಕದ್ದಿರುವ                          ಚೆಲುವಚೆನ್ನಿಗ                        ಮದನ ಮೋಹನ                   ನನ್ನಹೃದಯ ಗೀತೆ ಹಾಡಿದೆ                  ಮನಸು ನವಿಲಂತೆ ಕುಣಿದಿದೆ                   ಕಣ್ಣಲ್ಲಿ                   ಸೆಳೆದು                   ನಗುತ                    ನಿಲ್ಲಲು                   ನನ್ನೆದೆ                    ಮಿಡುಕಿ                   ನಿನಗೆ                     ಸೋತಿದೆ                  ಇನಿಯ.                  ಬಾಬೇಗ              ನಿನ್ನ  ಕಣ್ಣಂಚಿನ ಸಂದೇಶ ಸಾರುತಿದೆ                ಪ್ರೇಮರಾಗವ ಹಾಡುತ್ತಿದೆಮುದದಲಿ                ಜತೆಯಾಗು.                 ನನ್ನೊಲವೆ              ಮನ ತಣಿಸು.               ಮನದರಸ                  ಪಂಕಜಾ.ಕೆ.ಮುಡಿಪು                                                                                  

ಕೊಡಗು ಗ್ರೂಪಿನಲ್ಲಿ ಅತ್ಯುತ್ತಮ ಹಾಸ್ಯ ಕವನ. ತಂಟೆಕೋರ ಪುಟ್ಟ

ಹಾಸ್ಯಕವನ ಸ್ಪರ್ಧೆಗಾಗಿ ತಂಟೆಕೊರ ಪುಟ್ಟ ಮುಖಕ್ಕೆಲ್ಲಾ ಕ್ರೀಮ್ ಹಚ್ಚಿ ಗಡ್ಡ ಮೀಸೆ ತೆಗೆಯುತ್ತಿಯೇನೋ ಪುಟ್ಟ ಅಪ್ಪನ ನೋಡಿ ನೀನೂ ಕೂಡಾ  ಮುಖ ಬೋಳಿಸಲು ಕಲ್ತೆಯೇನೋ ಪುಟ್ಟ ಅಮ್ಮನ ನೋಡಿ ನಾಲಿಗೆ ಚಾಚಿ ಅಣಕಿಸುತ್ತಿಯೇನೋ ಪುಟ್ಟ ಗಡ್ಡ ಮೀಸೆ ಇಲ್ಲದೆ ಇದ್ರು ಯಾಕಿಂಗೆ ಕೆರೆಯೋಕೆ ಹತ್ಯಾ ನಿನ್ನನ್ನು ನೋಡಿ ಎಲ್ಲಾರೂ ನಗ್ತಾರಲ್ಲ ಪುಟ್ಟ  ಅಪ್ಪ ನೋಡಿದರೆ ಬೈತರಲ್ಲೊ ಸಾಕು ಬಾರೋ ಪುಟ್ಟ ಲೂಟಿ ಪಾಟಿ ಮಾಡಿ ನನಗೆ ಕಾಟ ಕೊಡ್ತೀಯಲ್ಲೋ ಪುಟ್ಟ ತುಂಟ ನೀನು ಹೇಗೆ ಹಿಡಿಯಲೊ  ಒಂದು ನಿಮಿಷವೂ ಕುಳಿತಲ್ಲಿ  ಕೂರಲ್ವಲ್ಲ ಪಂಕಜಾ.ಕೆ. ಮುಡಿಪು

ಗಜಲ್ ಕಾವ್ಯಕೂಟ 12 6 2020 ಉತ್ತಮ

[12/06, 10:34 PM] pankajarambhat: ಗಜಲ್ ದತ್ತಪದ  .. ಕೇಳದೆ ಕೊಟ್ಟಿರುವೆ ಹೃದಯವನ್ನು ನಿನಗೆ ಒಲವ ಸೂಸುತ ನೀನು ನನ್ನೆದೆಯ ಕದ್ದಿರುವೆ ನಲ್ಲ ಪ್ರೀತಿ ಪ್ರೇಮದ ಪಾಶದಲಿ ನನ್ನನು ಬಂಧಿಸಿರುವೆ ನಲ್ಲ ಕೇಳದೆ  ಕೊಟ್ಟಿರುವೆ ಹೃದಯವನ್ನು  ನಿನಗೆ ನನ್ನೊಡಲ ಪ್ರೇಮಧಾರೆಯ ಹರಿಸಿರುವೆ ನಲ್ಲ ಕನಸಿನಲ್ಲೂ ನೀನೇ ನನ್ನ ಮನದರಸನಾಗಿರುವೆ ಬಾಂದಳದ ಚಂದ್ರನಂತೆ  ನಗು ಬೀರುತಿರುವೆ ನಲ್ಲ ಬಂಗಾರದ ಒಡವೆ  ಬೇಕೆಂದು ನಾ ಕೇಳಲಿಲ್ಲ ನನ್ನದೆಲ್ಲವನೂ ನಿನಗೆ ಅರ್ಪಿಸಿರುವೆ ನಲ್ಲ ಪಂಕಜಾಕ್ಷಿಯ ಮನವು ನಿನ್ನ ಒಳಿತನ್ನೇ ಹಾರೈಸುತ್ತಿದೆ ಒಡನಾಡಿಯಾಗಿ ನಿನ್ನೊಡನೆ ಬಾಳತೇರನ್ನು ಎಳೆದಿರುವೆ ನಲ್ಲ ಪಂಕಜಾ.ಕೆ. ಮುಡಿಪು [12/06, 10:34 PM] pankajarambhat: *ದಿನಾಂಕಃ೧೨/೦೬/೨೦೨೦* *ದಿನಃ ಶುಕ್ರವಾರ* ಕಾವ್ಯ ಸಿಂಧುವಿನ ಅಮೂಲ್ಯ ಬಿಂದುಗಳೇ...ಎಲ್ಲರಿಗೂ ನಮಸ್ಕಾರ* 📔📔📔📔📔📔 *ಬರೆವವರ ಮುಕ್ತ ಮನ ರಚನೆಯಲಿ ಹೊಳೆದಿದೆ... ಬರೆದದ್ದೆಲ್ಲವೂ ಸುಂದರವಾಗಿದೆ ಯೋಜನಾತೀತದ ಯೋಚನೆಗಳಿಗೆ ನಮ್ಮ ನಮನ... ನರ್ವಹಣೆಯ ಕಾರ್ತವ ಸರಿ ಮಾಡದಿದ್ದುದಕೆ ನಾನೇ ಕ್ಷಮೆಯಾಚಿಸಬೇಕಿದೆ.... ನನಗೊಂದು ಸಮಾಧಾನವೆಂದರೆ, ಸಮಯದಭಾವದಲೂ ನಿಮ್ಮೆಲ್ಲರ ಗಜ಼ಲ್ ನ ಭಾವ ಹಿಡಿದಿಡಲು ಸಾಧ್ಯವಾದುದ್ದಕ್ಕೆ...* 📖📖📖📖📖📖  *ಫಲಿತಾಂಶ ಹೀಗಿದ್ದರೆ ಸ್ವೀಕರಿಸುವಿರಲ್ಲವೇ?😊* 📒📒📒📒📒📒 *ಅತ್ಯುತ್ತಮ* ============== *ಸುರೇಶ್ ನೆಗಳಗುಳಿ* *ಇಕ್ಬಾಲ್ ಕೈರಂಗಳ* *ಶ್ಯಾಮ್ ಪ್

ಹಸಿರು ಬೆಳೆಸಿ

ಚಿತ್ರಕ್ಕೊಂದು ಕವನ ಸ್ಪರ್ಧೆಗಾಗಿ ಹಸಿರು ಬೆಳೆಸಿ ಹಸಿರಿನ ಕಾಡದು ಉಸಿರನು ಕೊಡುವುದು ಬೆಳೆಸಿರಿ ಗಿಡಗಳ ಮನೆ ಎದುರು ಪ್ಲಾಸ್ಟಿಕ್ ತ್ಯಾಜ್ಯವ  ಮಣ್ಣಿಗೆ ಉಣಿಸದೆ ಪರಿಸರ ಕಾಳಜಿ ತೋರಿಸಿರಿ ಕಾಡನು ಕಡಿದರೆ ನೀರಿನ ಕೊರತೆಯು ಎಲ್ಲೆಡೆ ತುಂಬುವುದು ನೀ ತಿಳಿಯೋ ನಾಳಿನ ದಿನದಲಿ ಬಾಳನು ಬೆಳಗಲು ಹಸಿರಿನ ಉಳಿಸುತ ಬೆಳೆಸೋಣ ಅಭಿವೃದ್ದಿಯ ಹೆಸರಲಿ ಪ್ರಕೃತಿಯ ನಾಶವು ಮನುಕುಲ  ಅಳಿವಿಗೆ ಕಾರಣವೂ ಬೆಳೆಸುತ ಹಸಿರು ಉಳಿಸುತ ನೀರು ಆರೋಗ್ಯ ಭಾಗ್ಯವ ಪಡೆಯೋಣ ಪಂಕಜಾ.ಕೆ.ಮುಡಿಪು

ಪ್ರೇಮಗೀತೆ ಹನಿಕವನ ಹನಿ ಹನಿ ಇಬ್ಬನಿ ಅತ್ಯುತ್ತಮ

ಪ್ರೇಮಗೀತೆ (ಹನಿಕವನ) ನಿನ್ನ ಕಣ್ಣೋಟದ  ನೂರೆಂಟು ಭಾವಕೆ ಎದೆಯ ಕದದಲೇನೋ ಸಂಚಲನೆ ಮನದ ಬಾಂದಳದಲ್ಲಿ ಅರಳಿ ನಗುವ ಲತೆ ಬರೆದೆ ನೀ ನನ್ನೆದೆಯಲೊಂದು ಪ್ರೇಮಗೀತೆ ಪಂಕಜಾ.ಕೆ. ಮುಡಿಪು

ಸ್ನೇಹ ಹನಿಕವನ ನವಪರ್ವದಲ್ಲಿ ಉತ್ತಮ

[09/06, 8:05 PM] pankajarambhat: ಗೆಳೆತನ ಹನಿಕವನ ಎರಡು ಮನಗಳ ನಡುವೆ ಉರಿಯುವ  ಹಣತೆಯಾಗಿ ನೋವು ನಲಿವುಗಳಲ್ಲಿ ಹೆಗಲಾಗಿ ಜತೆಗೆ ಸಾಗಿ ಕನಸನೂರಿಗೆ ಕರೆದೊಯ್ಯುವ ಜ್ಯೋತಿಯಾಗಿ ಬರಿದಾದ ಮನದಲಿ ಚೆಲುವಾದ  ಬಣ್ಣ ತುಂಬಿ ಎಂದಿಗೂ ಬಾಡಲಾರದ ಹೂವು ಅದು ಸ್ನೇಹ ಸೋತಾಗ ಹುರಿದುಂಬಿಸಿ ಹೆಗಲು ಕೊಟ್ಟು ಗೆದ್ದಾಗ ಖುಷಿಯಿಂದ ಬೆನ್ನುತಟ್ಟಿ  ದುಃಖದಲಿ  ಸಾಂತ್ವನಿಸಿ ಧೈರ್ಯ ತುಂಬುವ  ಮಾತೆ ಪಂಕಜಾ.ಕೆ. ಮುಡಿಪು. ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್  ಮಾಸ್ಟರ್ [11/06, 9:43 PM] +91 81976 80483: *ಆತ್ಮೀಯ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ* 🙏✍📚✍📚✍📚✍📚✍   ೦೯-೦೬-೨೦೨೦ <> ಮಂಗಳವಾರದ  * ಹನಿಗವನ ಸ್ಪರ್ಧೆ* *ವಿಷಯ : *ಸ್ನೇಹ* *ಸ್ಪರ್ಧೆಯ  ಫಲಿತಾಂಶ* *ಅತ್ಯುತ್ತಮ* 1. ಪ್ರಿಯಾಶ್ರೀ ಕೆ.ಎಸ್ 2.ಕು ಎಂ ಹರಿಣಿ ಮೊಗಣ್ಣಾಚಾರ್ 3. ಜ್ಯೋತಿ ಕುಂಬ್ರ 4.ಎಚ್ ಭೀಮರಾವ್ ವಾಷ್ಠರ್ *ಉತ್ತಮ*  1.ವತ್ಸಲಾ ಶ್ರೀಶ 2. ಚೇತನ್ ಸಾಗರ್ 3. ಪ್ರಶಾಂತ ಆರ ದೈವಜ್ಞ 4.ಪಂಕಜಾ ಮುಡಿಪು *ಮೆಚ್ಚುಗೆ* 1.ರವೀಂದ್ರ ಜಾಗವಾನಕರ 2.ಲಕ್ಷ್ಮೀ ವಿ ಭಟ್ 3.ಹರೀಶ್ ಕಜೆ 4.ನಾಗಲಕ್ಷ್ಮಿ.ಈ..ಪಾವಗಡ   *ಎಲ್ಲರೂ ತುಂಬಾ ಸುಂದರವಾದ ಹನಿಗವನ ರಚಿಸಿರುವಿರಿ ಶುಭ ಹಾರೈಕೆಗಳು*💐💐💐💐💐💐💐💐💐💐💐💐 *ನವಪರ್ವ ಅಡ್ಮಿನ್ ಬಳಗ*📚✍📚✍📚✍📚✍📚✍📚✍📚✍📚✍📚✍📚✍

ನೀತಿಕಥೆ ಧೈರ್ಯ

   ಧೈರ್ಯ  ನೀತಿಕಥೆ  ಶ್ರೇಯಸ್   ಆ ಊರಿಗೆ ಅದೀಗ ತಾನೇ ಕೆಲಸಕ್ಕೆ ಸೇರಿದ್ದ . ಇನ್ನೂ ಸಣ್ಣ ಪ್ರಾಯ ದೈರ್ಯಶಾಲಿಯೂ  ವಿವೇಕಿಯು ಆದ ಆತನನ್ನು ಕಂಡರೆ ಕಳ್ಳ ಕಾಕರು ತುಂಬಾ ಭಯ ಪಡುತ್ತಿದ್ದರು.ಆ ಊರಿನಲ್ಲಿ ಕಳ್ಳರ ಕಾಟ ಜೋರಿತ್ತು.ಶ್ರೇಯಸ್ ಕಳ್ಳರನ್ನು ಹಿಡಿಯಲು  ತುಂಬಾ  ಉತ್ಸುಕನಾಗಿದ್ದ.ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಕಳ್ಳರ ಜಾಡು ಹಿಡಿಯುವುದು  ಅವನಿಂದ ಆಸಾಧ್ಯವಾಗಿತ್ತು ಆದರೂ ಆತ ತನ್ನ ಪ್ರಯತ್ನ ಬಿಡಲಿಲ್ಲ .ಆ ಊರಿನ ಪಶ್ಚಿಮ ದಿಕ್ಕಿನಲ್ಲಿ ಒಂದು ದೊಡ್ಡ ಕಾಡು ಇತ್ತು.ಕಾಡಿನ ಆ ಭಾಗ ಭಯನಕವಾಗಿತ್ತು.ಅಲ್ಲಿಗೆ ಹೋಗಲು ಎಲ್ಲರೂ ಹೆದರುತ್ತಿದ್ದರು. ಅಲ್ಲಿಗೆ ಹೋದವರು ಯಾರು ಹಿಂತಿರುಗಿ ಬಂದಿಲ್ಲ . ಕಳ್ಳರು ಅದೇ ಕಾಡಿನಲ್ಲಿ ಅಡಗಿರಬಹುದು ಎನ್ನುವ ಯೋಚನೆ ಬಂದು  ಶ್ರೇಯಸ್ ತಾನು ಅಲ್ಲಿಗೆ ಹೋಗಿ ನೋಡಬೇಕು ಎಂದು ನಿಶ್ಹೈಸುತ್ತಾನೆ.ಅದನ್ನು ತನ್ನ ಆತ್ಮೀಯ ಗೆಳೆಯ ಸ್ವಾಗತ್ ನಲ್ಲಿ ಮಾತ್ರ ತಿಳಿಸಿ ಬೇಕಾದ ಎಲ್ಲಾ  ಸಿದ್ಧತೆಗಳನ್ನು ಮಾಡಿ ಒಂದು ದಿನ  ಅಲ್ಲಿಗೆ ಹೊರಡುತ್ತಾನೆ.ಶ್ರೇಯಸ್ ಹೋಗಿ ವಾರವಾದರೂ ಅವನ ಸುದ್ದಿಯೇ ಇಲ್ಲಾ ಮೊಬೈಲ್ ಬಹುಶ ಚಾರ್ಜ್ ಮುಗಿಯಿತೇನೋ ಎಂದು ಯೋಚಿಸಿದ ಸ್ವಾಗತ್ ಇನ್ನೆರಡು ದಿನ ನೋಡಿ ಬಾರದಿದ್ದರೆ ಆತನ ಆಫೀಸಿಗೆ ಹೇಳಬೇಕು ಎಂದು ಯೋಚಿಸಿದ. ಆದರೆ ಮರುದಿನ ವಿಶ್ವಾಸ್ ಕಳ್ಳರನ್ನು ಹೆಡೆಮುರಿ ಕಟ್ಟಿ ಎಳೆದು ಕೊಂಡು ಬರುವುದು ಕಂಡು ಊರಿನ ಎಲ್ಲರೂ ವಿಶ್ವಾಸನ ಧೈರ್ಯವನ್ನು ಕೊಂಡಾಡಿದರು. ಆ ವರ್ಷದ   ಶೌರ್ಯ ಪ್ರಶಸ್ತಿಗೆ

ಗಜಲ್ ಸಾಸಿವೆ ಬಗ್ಗೆ

ಸಾಸಿವೆ ಗಜಲ್ ನನ್ನೆದೆಯ ತುಂಬಾ ಚೆಲು ಕನಸಿತ್ತು ನಲ್ಲ ಮನದಲ್ಲಿ ಬಯಕೆಗಳು ತುಂಬಿತ್ತು ನಲ್ಲ ನಿನ್ನ ಮೋಹಕ ನಗೆಯು ಮಾಡಿತು ಮೋಡಿ ಒಲವ ಬಲೆಯಲಿ ನನ್ನ ಕೆಡವಿತ್ತು ನಲ್ಲ ಕಣ್ಣನೋಟದ ಬಾಣಕೆ  ಚಿಮ್ಮಿತು ಅನುರಾಗ ನಸುನಗುವ ತುಟಿಗಳು ಕೆಣಕಿತ್ತು ನಲ್ಲ   ಮಾತಿಲ್ಲದೆಯೇ ಉಸುರುತಿದೆ ಒಲವಗಾನ ಸವಿಕನಸುಗಳೆಲ್ಲಾ ನನಸಾಗಲು ಕಾದಿತ್ತು ನಲ್ಲ ಸಾಸಿವೆಯಷ್ಟು ಪ್ರೀತಿಯೇ ಸಾಕು ಪಂಕಜಾಕ್ಷಿಗೆ ಮೃದು ಹೃದಯ ನಿನ್ನೆಡೆಗೆ ವಾಲಿತ್ತು ನಲ್ಲ ಪಂಕಜಾ.ಕೆ.ಮುಡಿಪು

ಬಾ ವರುಣ ಭಾವಗೀತೆ

ಬಾ ವರುಣ ಓ ಮೇಘವೇ ಬಾಂದಳದಲ್ಲಿ ಓಡುವೆ  ನೀನು ಎಲ್ಲಿಗೆ? ಬಿರುಬಿಸಿಲಲಿ ಬೆಂದು ನಿನಗಾಗಿ ಕಾದಿರುವುದು ತಿಳಿಯದೆ? ಮಳೆ ಮೋಡವ ಕಂಡು ಆಸೆಯಲಿ  ತಲೆಬಾಗಿ ನಿಂತಿರುವೆ ಬಂದೊಮ್ಮೆ ತಬ್ಬಿ ಸಂತೈಸು ನನ್ನಾ ಓ ಮೇಘವೇ  ಒಣಎಲೆಗಳ ಉದುರಿಸಿ ಕಾದಿರುವೆ ನಿನಗಾಗಿ ಹಸಿರೆಲೆ ಚಿಗುರಿ ಹಬ್ಬಲುನೀ ಬರಬೇಕಾಗಿದೆ ವರುಣಾ ನಿನ್ನೊಲುಮೆಯಿಲ್ಲದೆ  ನಾ ಹೇಗೆ ಬಾಳಲಿ ಇನಿಯಾ ನನ್ನೊಡಲಲಿ ಗೂಡು ಕಟ್ಟಿರುವ ಹಕ್ಕಿಗಳಿಗೆ ಏನು ಹೇಳಲಿ ಸುರಿಸು ನೀ ಒಲವ ಧಾರೆಯ ಹರಿಸು ನಿನ್ನ ಪ್ರೇಮಾಮೃತವ ನೀ ಬಂದು ತಬ್ಬಿದರೆ ಮೈಯಲ್ಲಿ  ಎಂತದೋ  ಪುಳಕ ಚಿಗುರಿ ಹಬ್ಬಿ ಅರಳಿಸುವೆ  ಚೆಲು ಹೂಗಳ ನನ್ನೊಡಲಲಿ ಭೂರಮೆಯ ಚೆಲುವ ಕಂಡು ಕಣ್ಣು ತುಂಬಲಿ ಬೇಗ ಬಾ ಓ ಮೇಘವೇ ಸುರಿಸು ವರ್ಷಧಾರೆಯ ಬಂದೊಮ್ಮೆ ಸಂತೈಸು ನನ್ನ ಒಡಲ ಉರಿಯ  ಕಾದಿರುವೆ ನಿನಗಾಗಿ ನೀ ಬರುವ ದಾರಿಯಲಿ ನಸುನಗೆಯ ಚೆಲ್ಲಿ ಪಂಕಜಾ.ಕೆ. ಮುಡಿಪು

ಇನಿಯಾ ಸುರಿಸಿದ ಮುತ್ತು

ಇನಿಯ ಸುರಿಸಿದ ಮುತ್ತು    ಬಾನು ತುಂಬಿದ ಮುಗಿಲ ಕಂಡು ಆಶೆ ನಿರಾಶೆಯ ತೊಟ್ಟಿಲಲ್ಲಿ ತೂಗಿ ವಿರಹದುರಿಯಲಿ  ತನುವು ಕಾದು ನರಳುತ್ತಿದ್ದಾಕ್ಷಣ ಮನದಿ ತುಂಬಿದ ವಿರಹವ ಕಳೆದು ಒಲವ ತನಿರಸವನು ಉಣಿಸುತ ವರುಣ ಬಂದನು  ಭರದಲಿ ಇಳೆಯ ಕಾತರವ ತಣಿಸುತ ಒಲವ ತನಿರಸವ ಸವಿ ಸವಿದು ಇಳೆಯು ಕುಣಿ ಕುಣಿದು ನರ್ತಿಸುತ ಬೀಗಿ ಬಾಗಿದ ಕ್ಷಣದಲಿ ಬಳುಕಿ ನಿಂತಿತು ತರುಲತೆಗಳು  ಒಡಲಲ್ಲಿ ಅಡಗಿದ್ದ ಬೀಜಗಳು ತಲೆ ಎತ್ತಿ ಭೂತಾಯಿ ಒಡಲಿನಿಂದ ಮೇಲೆದ್ದು ಮೈಮನದಲಿ ಉಲ್ಲಾಸವ ತುಂಬುತ್ತಾ ತಣಿಸಿತು ಇಳೆಯ  ಬೇಗೆಯನು ಇನಿಯ ಸುರಿಸಿದ ಮುತ್ತು ಹನಿಗಳು ಭೂದೇವಿಯ ಮುಕುಟ ಮಣಿಯಾಗಿ ಬಾಡಿ ಬಸವಳಿದ ಒಡಲ ತಣಿಸಿ ಜೀವಕೋಟಿಗಳಿಗೆ ತಂದಿತು ಹರ್ಷದುಸಿರನು ಪಂಕಜಾ.ಕೆ.

ಬಾಲ್ಯದ ಆಟ ಹನಿ ಹನಿ

ಬಾಲ್ಯದ ಆಟ ಶಾಲೆಗೆ ರಜೆಯದು ಸಿಕ್ಕಲು ಕುಣಿದರು ಮಕ್ಕಳ ಸೈನ್ಯವು ಎಲ್ಲೆಡೆಯೂ ಗುಡ್ಡವ ತಿರುಗುತ ಮರದಲಿ ಜೀಕುತ ಕೇಕೆಯ ಹಾಕುತ ನಲಿಯುವರು ಮಾವಿನ ಮರದಲಿ ಕೋತಿಯ ಆಟ ಆಡುತ ನಲಿಯಿತು ಪುಟ್ಟನ ದಂಡು ಭಯವದು ಇಲ್ಲದೆ ಜೀಕುವ ಪರಿಯನು ಭಯದಲಿ ನೋಡುತಿದೆ ಮಕ್ಕಳ ದಂಡು ಗೆಲ್ಲಲಿ ಜೀಕುತ ಕಾಲನು ಬಡಿಯುತ ಹೆದರಿಕೆ ಇಲ್ಲದೆ ಕುಣಿಯುವರು ಬಿದ್ದರೆ ಕೆಳಗೆ ಹರಿಯುವ ತೊರೆಗೆ. ಗೆಳೆಯರ ಕೇಕೆಗೆ ಉತ್ಷ್ಟಾಹ ಗೆಳೆಯರ ದಂಡನು ಕೂಡುತ ಅಲೆಯುವ ಪರಿಯಲಿ ಸಿಗುತಿದೆ ಆನಂದ ಇಂದಿನ ಮಕ್ಕಳು ಆಟವ ಆಡದೆ ಮೊಬೈಲ್ ಆಟದಿ ಮುಳುಗುವರು ಗೆಳೆಯರು ಇಲ್ಲದೆ ನಲಿವನು ತಿಳಿಯದೆ ಒಂಟಿಯಾಗಿಯೇ ದಿನವನು ಕಳೆಯುವರು ಮಕ್ಕಳ ಮನವದು ಬೆಲ್ಲದ ಮುದ್ದೆಯು ಬಾಲ್ಯದ ಆಟದಲಿ ಕಲಿಯಬೇಕು ಹಳ್ಳಿಯ ಮನೇಸಲಿ ಹಸಿರಿನ ಎಡೆಯಲಿ ರಜೆಯದು ಕಳೆಯುವುದು ಕ್ಷಣದಲ್ಲಿ ಪಂಕಜಾ.ಕೆ.ಮುಡಿಪು

ಪ್ರತೀಕಾರ ಕಥೆ ವಾಹಿನಿ ಕಲಾಸಂಘ ಪುತ್ತೂರು ಬಳಗದಲ್ಲಿ ಬಹುಮಾನ ಪಡೆದ ಕಥೆ

 ಪ್ರತೀಕಾರ.  (ಕಥೆ) ಅದೊಂದು ಸುಂದರ ಪ್ರಕೃತಿ ರಮ್ಯ ಸ್ಥಳ ಸುತ್ತಲೂ ಹಸಿರು ಗುಡ್ಡಗಳಿಂದ ತುಂಬಿ ನೋಡುಗರ ಕಣ್ಮನವನ್ನು ಸೆಳೆಯುತ್ತಿತ್ತು. ಆ. ಕಾನನದ ಬದಿಯಲ್ಲಿ ಜುಳು ಜುಳು ಎಂದು ವರ್ಷಪೂರ್ತಿ ಹರಿಯುವ ಒಂದು ನದಿ ತನ್ನೊಡಲಲ್ಲಿ ಅನೇಕ ಜಲಚರಗಳಿಗೆ ಆಶ್ರಯ ಕೊಟ್ಟು ತೃಪ್ತಿಯಿಂದ ಹರಿದಾಡುತ್ತಿತ್ತು ಆ ನದಿಯ ದಂಡೆಯಲ್ಲಿ ಕುಳಿತರೆ ಎಂತಹ ಚಿಂತೆ ತಲೆನೋವು ಇದ್ದರೂ ತಕ್ಷಣ ಪರಿಹಾರವಾಗಿ ಮನಸಿಗೆ ಶಾಂತಿ ಸಿಗುತ್ತಿತ್ತು.              ಅದಕ್ಕೆ ಕಾರಣವೆಂದರೆ ಆ ಪ್ರದೇಶದಲ್ಲಿ ವಾಸಿಸುವ ನೂರಾರು ಹಕ್ಕಿಗಳ ಗಾನದ ಇಂಪು ,ನೀರಿನಲ್ಲಿ ಸ್ವಚ್ಛಂದವಾಗಿ ಈಜಾಡಿಕೊಂಡಿರುವ  ಸಣ್ಣ ಸಣ್ಣ ಮೀನುಗಳನ್ನು ಹಿಡಿಯಲು ಹಾರಿ ಬರುವ ಬೆಳ್ಳಕ್ಕಿಗಳ ಗುಂಪು, ನದಿಯಲ್ಲಿ ತೇಲಾಡುತ್ತಿರುವ ಬೆಳ್ಳನೆಯ ಹತ್ತಿಯಂತೆ ಕಾಣುವ ಹಂಸಗಳು, ಸುತ್ತಲ ಕಾಡು ಗಿಡಗಳಿಂದ ಬೀಸಿಬರುವ ತಂಗಾಳಿಯಲ್ಲಿ ಪಸರಿಸುವ ವಿವಿಧ ಬಗೆಯ ಹೂಗಳ ಗಂಧ ,ಹೂವಿಂದ ಹೂವಿಗೆ ಹಾರುವ ಚಿಟ್ಟೆಗಳು ಇವುಗಳೆಲ್ಲಾವನ್ನು ನೋಡುವುದೇ ಒಂದು ಹಬ್ಬ.             ವಸಂತ ಬೇಸಿಗೆಯ ರಜೆಯಲ್ಲಿ ತಪ್ಪದೆ ಅಲ್ಲಿಗೆ ಬಂದು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತು ನದಿಯ ನೀರಿನಲ್ಲಿ ಮನಸೋ ಇಚ್ಚೆ ಈಜಾಡಿ ತನ್ನ ಪೇಟೆಯ ಜಂಜಾಟಗಳನ್ನು ಕಳೆದು ಹಿಂತಿರುಗುತ್ತಿದ್ದ .ಆ ಸುಂದರ ಸ್ಥಳಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ ಒಂದು ದಿನ ಬೆಳಗ್ಗಿನ ಜಾವವೇ ಅಲ್ಲಿಯ ಕಾಡುಗುಡ್ಡಗಳನ್ನು ನೆಲಸಮ ಮಾಡುವ ಬುಲ್ಡೋಜರ್ ಗಳ ಕರ್ಕಶ    ಸ್ವರ ಆ ಕ

ತ್ರಿಪದಿ ಬಗ್ಗೆ

[13/04, 7:11 AM] ಶ್ಯಾಮಸುಂದರ ಅಪ್ಪಾಜಿ ಕವಿ: ವಚನ ಪಟ್ಟರಿಯದ ಜಟ್ಟಿ | ಗಿಟ್ಟು ಕಾಣದ ಶೆಟ್ಟಿ | ತೊಟ್ಟು ಜೇನಿಲ್ಲದಾ ಹುಟ್ಟಿ | ಜಗದಲಿ | ಅಟ್ಟೆಗೂ ಹೀನ ತಿಳಿ ಶಾಮ || ಶ್ಯಾಮ ✍ ಗಿಟ್ಟು= ಲಾಭ ಹುಟ್ಟಿ = ಜೇನು ಗೂಡು ಅಟ್ಟೆ = ಕಬ್ಬಿನ ಸಿಪ್ಪೆ [13/04, 8:17 AM] +91 72592 12415: ನಾನು ತಿಳಿದಂತೆ  ತ್ರಿಪದಿಗಳಲ್ಲಿ ಹೀಗೆ ಬರುತ್ತೆ ಅಂತ  ಒಂದನೇ ಸಾಲಿನಲ್ಲಿ ೨ ನೇ ಮತ್ತು ೪ ನೇ ಗಣದ ನಂತರ ಗೆರೆ  ಎರಡನೇ ಸಾಲಿನಲ್ಲಿ ೩ ನೇ ಗಣದ ನಂತರ ಗೆರೆ  ಮೂರನೇ ಸಾಲಿನಲ್ಲಿ ಕೊನೆಗೆ ಗೆರೆ  ನಾನು ತಿಳಿದಂತೆ ಅವು ಯತಿಯನ್ನು ಸೂಚಿಸುತ್ತವೆ  ೫ ೫ | ೫ ೫ ೫ ೩ ೫ | ೫ ೫ ೩ ೫ | ಅಂಶಗಣದಲ್ಲೂ ಇದೇ ರೀತಿ ಯತಿ ಬರಬೇಕು  ವಿ ವಿ | ವಿ ವಿ |  ವಿ ಬ್ರ ವಿ | ವಿ  ವಿ ಬ್ರ ವಿ | ಹೀಗೆ  ಇದು ನನ್ನ ಜ್ಞಾನದ ಹಂದರ ಅಷ್ಟೇ ಇದಕ್ಕೂ ಹೆಚ್ಚು ಯಾರಿಗಾದರೂ ತಿಳಿದಿದ್ದರೆ ಹಂಚಿಕೊಳ್ಳಿ [13/04, 8:35 AM] +91 94807 88714: ಈ ಗೆರೆಯನ್ನು ಯತಿ ಎನ್ನುತ್ತಾರೆ, ಅರ್ಥಾತ್ ಉಸಿರ್ ದಾಣ. ಪದ್ಯ ಗೇಯ ಗುಣ ಹೊಂದಿದ್ದಾಗ ಉಚ್ಚಾರಣೆ ಲೋಪವಾಗದಿರಲಿ ಎಂಬ ಕಾರಣಕ್ಕೆ ಈ ಗೆರೆ ಬಳಸುತ್ತಾರೆ ಅಷ್ಟೇ.

ಅದ್ವಿಜೋ ಕವನ ಬಗ್ಗೆ

[08/06, 4:21 PM] ಪೀರ್ ಸಾಹೇಬ್ ನವಪರ್ವ: [08/06, 4:19 PM] ಪಿ.ಎಸ್.ಬಿ.: *ಅದ್ವಿಜೋ ಕವನ*  *ಶೀಷಿ೯ಕೆ* :  *ಅಬ್ಬಬ್ಬಾ ಜೀವನ..!* ಸೋಲು ಗೀಲು ಕಾಟ ಗೀಟ ಕೊಟ್ರು, ಸರ ಸರ ಮೇಲೇರಿ, ಬಿದ್ದು ಗೆದ್ದು ಬಿಡಬೇಕು..! ದುಡ್ಡು ಗಿಡ್ಡು , ಕಾಸು ಗೀಸು ಇರ್ಲಿ ಬಿಡ್ಲಿ ಓಡೋಡಿ ಹೋಗಿ ಗೆದ್ದು ಗಿದ್ದು ಬಬೇ೯ಕು..! ವಟ ವಟ, ಗಿಟ ಗಿಟ ಅನ್ನೋಗೆ೯  ಈಸಿ ಗೀಸಿ, ಬೀಗಿ ಗೀಗಿ  ತೋಸ್೯ಬೇಕು..! ಅಂದ ಗಿಂದ, ದುಡ್ಡು ಗಿಡ್ಡು ಮುಖ ಮೂತಿ ನೋಡದೆ ಮಾನ ಗೀನಕ್ಕೆ ಅಂಜಿ ಬದುಕ್ಬೇಕು..!  *ರಚನೆ : ಪೀರ್ ಸಾಹೇಬ್ ಬೀರಬ್ಬಿ,* [08/06, 4:21 PM] ಪಿ.ಎಸ್.ಬಿ.: 👆 ನನ್ನ ಹೊಸ ಸಾಹಿತ್ಯ ಪ್ರಕಾರದ ಚೊಚ್ಚಲ ಕವನ ಪ್ರಕಾರ "ಅದ್ವಿಜೋ"... ಎಲ್ಲಾ ಕವಿ ಮಿತ್ರರು ಅಭಿಪ್ರಾಯ ತಿಳಿಸಿ🙏🙏🙏 [08/06, 4:27 PM] ಪೀರ್ ಸಾಹೇಬ್ ನವಪರ್ವ: *ಅದ್ವಿಜೋ ಪ್ರಕಾರ*  🌷🌷🌷🌷🌷🌷🌷 ಹೊಸ ಸಾಹಿತ್ಯದ ಪರಿಚಯದೊಂದಿಗೆ ನಿಮ್ಮ ಮುಂದೆ........ಒಂದು ಪ್ರಯತ್ನ ಅಷ್ಟೇ...        *ಖಂಡು ಬಂಜಾರ* ●●●●●●●●●●●●●●●● *ಅನುಕರಣಾವ್ಯಯ,ದ್ವಿರುಕ್ತಿ ಜೋಡುನುಡಿ  ಪದಗಳಿಂದ ಕವನಗಳ ರಚನೆ*     🌷  *ಅದ್ವಿಜೋ 🌷ಕವನಗಳ ರಚನಾ ಮಾಹಿತಿ* @@@@@@@@@@@ ಹಾಗಾದರೆ ಯಾವ ರೀತಿ? ಎಂಬ ಪ್ರಶ್ನೆ ನಮಗೆ ಬರುವುದು ಸಹಜ....ಅಲ್ಲವೇ. ನಾವುಗಳು ಸದಾ ಕವನಗಳನ್ನು ಬರೆಯುತ್ತ ಹೋದರೆ ಅವುಗಳಿಗೆ ಕೊನೆಯೆಂಬುದಿಲ್ಲ.......ಅದು ನಿರಂತರ ಅನಂತ..........!!! ಹಾಗಾಗಿ ಒಂದು ನಿಯಮ

ಹಸಿರು ಬೆಳೆಸಿ ನವಪರ್ವ

ಚಿತ್ರಕ್ಕೊಂದು ಕವನ ಸ್ಪರ್ಧೆಗಾಗಿ ಹಸಿರು ಬೆಳೆಸಿ ಹಸಿರಿನ ಕಾಡದು ಉಸಿರನು ಕೊಡುವುದು ಬೆಳೆಸಿರಿ ಗಿಡಗಳ ಮನೆ ಎದುರು ಪ್ಲಾಸ್ಟಿಕ್ ತ್ಯಾಜ್ಯವ  ಮಣ್ಣಿಗೆ ಉಣಿಸದೆ ಪರಿಸರ ಕಾಳಜಿ ತೋರಿಸಿರಿ ಕಾಡನು ಕಡಿದರೆ ನೀರಿನ ಕೊರತೆಯು ಎಲ್ಲೆಡೆ ತುಂಬುವುದು ನೀ ತಿಳಿಯೋ ನಾಳಿನ ದಿನದಲಿ ಬಾಳನು ಬೆಳಗಲು ಹಸಿರಿನ ಉಳಿಸುತ ಬೆಳೆಸೋಣ ಅಭಿವೃದ್ದಿಯ ಹೆಸರಲಿ ಪ್ರಕೃತಿಯ ನಾಶವು ಮನುಕುಲ  ಅಳಿವಿಗೆ ಕಾರಣವೂ ಬೆಳೆಸುತ ಹಸಿರು ಉಳಿಸುತ ನೀರು ಆರೋಗ್ಯ ಭಾಗ್ಯವ ಪಡೆಯೋಣ ಪಂಕಜಾ.ಕೆ.ಮುಡಿಪು

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂಪತಿಗಳ  ಪ್ರೇಮ ಜ್ಯೋತಿ ಶ್ರೀ ರಾಮನಂತಿರುವ ಪ್ರೀತಿಸುವ ಪತಿ ಕಬ್ಬಿನಹಿತ್ತಿಲ ರಾಮ ಗುರು ಹ

ಫಲಿತಾಂಶ ಕುರುಡು.ಪ್ರೀತಿ ಪ್ರೀತಿ ಮಾಯೆ

*ಆತ್ಮೀಯ* *ಸ್ನೇಹಿತರೇ* *ಎಲ್ಲರಿಗೂ* *ನಮಸ್ಕಾರ*   *೦೪-೦೬-೨೦೨೦ ಗುರುವಾರದ* *"ಪ್ರೀತಿ ಮಾಯೆ" ಕಿರು ಕಥೆ ರಚನೆ ಸ್ಪರ್ಧೆಯ ಫಲಿತಾಂಶ .*🙏 ✍️📚✍️📚✍️📚  *ಅತ್ಯುತ್ತಮ ಕಥೆ*  ೧.ಸಂಭ್ರಮ ಕಾರ್ತಿಕ್ ಭಟ್🏆 *ಉತ್ತಮ ಕಥೆ*  ೧.ಕು.ಎಂ.ಹರಿಣಿ ಮೊಗಣ್ಣಾಚಾರ್🥇  *ಮೆಚ್ಚುಗೆ ಪಡೆದ ಕಥೆ*  ೧.ಪಂಕಜಾ.ಕೆ ಮುಡಿಪು🎁 *ಎಲ್ಲರೂ ತುಂಬಾ ಸುಂದರವಾದ ಕಥೆಯನ್ನು ರಚಿಸಿರುವಿರಿ.ಶುಭಹಾರೈಕೆಗಳು* .💐💐💐💐💐  *ನವಪರ್ವ ಅಡ್ಮಿನ್ ಬಳಗ.*✍️📚✍️📚✍️📚✍️📚✍️📚✍️📚✍️📚✍️📚✍️📚✍️📚✍️📚✍️📚✍️

ಭೂರಮೆಯ ಚೆಲುವು ಕೊಡಗಿನ ಗೆಳತಿ

ಭೂರಮೆಯ ಚೆಲುವು  ನಳನಳಿಸಿ ನಲಿಯುತಿದೆ ಭೂತಾಯಿ ಒಡಲು  ಕಂಗು ತೆಂಗುಗಳಿಂದ  ತುಂಬಿದೆ ಬಯಲು   ಹಸಿರು ಹೊದಿಕೆಯ ಹಾಸಿ ನಲಿಯುತಿದೆ ಪ್ರಕೃತಿ ಮಾನವನ ದುರಾಶೆಗೆ ಆಗದಿರಲಿ ಅದು ವಿಕೃತಿ ಮಳೆ ಬಂದು ತಂಪಾಗಿ ರೈತನ ಮೊಗದಲಿ ನಲಿವು ಹೊಲದ ತುಂಬಾ ಪಚ್ಚೆತೆನೆ ಬರಲು ಗೆಲುವು ಉತ್ತು ಬಿತ್ತಿ  ಹಸಿರನ್ನು ತುಂಬಿಸಿದ ಇಳೆಯಲಿ ಶುಕ ಪಿಕಗಳು ಹಾಡಿ ನಲಿಯುತಿದೆ ಹಸಿರಲಿ ಹಸಿರ ಹೊದಿಕೆಯಲಿ ಭೂರಮೆಯ ಶೃಂಗಾರ ಅರಳಿರುವ ಹೂಗಳ  ಮಾಲೆಯದೆ ಅಲಂಕಾರ ಎಲ್ಲೆಲ್ಲೂ ಹಚ್ಚ ಹಸಿರಿನ ಸಿರಿ ಮೈತುಂಬಿ ನಿಂತಿದೆ ಭುವನ ಸುಂದರಿಯನ್ನೂ ಮೀರಿಸುವಂತಿದೆ ಬಣ್ಣಬಣ್ಣದ ಹೂಗಳ ಚೆಲುವು ಕಣ್ಣು ತುಂಬಿದೆ ಮೈ ಮನಸು  ಹಸಿರಲಿ ನಲಿದು ಮಗುವಾಗಿದೆ ಮಧುಹೀರಲು ಬರುತಿರುವ ದುಂಬಿಗಳ ದಂಡು ಕವಿ ಮನವು ಗುನುಗುತ್ತಿದೆ ಕವಿತೆಯ  ತುಂಡು ಭೂರಮೆಯ ತುಂಬೆಲ್ಲ ಹಾಸಿದೆ ಹಸಿರ ಸೆರಗು ವಸುಂಧರೆಯ ಒಡಲೆಲ್ಲಾ ಹೂಗಳ ಮೆರುಗು ಕಣ್ಣು ತುಂಬುತಿದೆ ಪ್ರಕೃತಿಯ  ಈ ಚೆಲುವು ವರುಣನ ಒಲವ ಮಳೆಯಲಿ ಪ್ರಕೃತಿಯ ಗೆಲುವು ಪಂಕಜಾ.ಕೆ.ಮುಡಿಪು

ರಾಧೆಯ ವಿರಹ ನಿಮ್ನ ನೆನಪಲ್ಲೆ ಕಳೆದಿರುವೆ ದಿನಗಳ ನವಪರ್ವ ಅತ್ಯುತ್ತಮ

[05/06, 11:38 PM] pankajarambhat: *ಆತ್ಮೀಯ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ* 🙏✍📚✍📚✍📚✍📚✍   ೦೨-೦೬-೨೦೨೦ <> ಮಂಗಳವಾರದ  * ಕವನ ಸ್ಪರ್ಧೆ* *ವಿಷಯ : *ನಿನ್ನ ನೆನಪಲ್ಲೇ ಕಳೆದಿರುವೆ ದಿನಗಳ* *ಸ್ಪರ್ಧೆಯ  ಫಲಿತಾಂಶ* *ಅತ್ಯುತ್ತಮ* 1.ಲಲಿತಾಲಕ್ಷ್ಮೀ ನಾರಾಯಣ ಭಟ್ಟ 2.ಪ್ರಮೀಳಾ ಚುಳ್ಳಿಕ್ಕಾನ  3. ಪಂಕಜಾ .ಕೆ. ಮುಡಿಪು 4.ಹರೀಶ್ ಕಜೆ  *ಉತ್ತಮ*  1.ನಾಗರಾಜ ಸರ್ವಿ 2.ಲಕ್ಷ್ಮೀ .ವಿ. ಭಟ್ 3.ಕಣಿ ಪುರೇಶ ಪ್ರಿಯ 4.ಕು.ಎಂ.ಹರಿಣಿ ಮೊಗಣ್ಣಾಚಾರ್ *ಮೆಚ್ಚುಗೆ* 1. ನಾಗಲಕ್ಷ್ಮಿ.ಈ..ಪಾವಗಡ 2.ವತ್ಸಲಾ ಶ್ರೀಶ 3.ರವೀಂದ್ರ ಜಾಗವಾನಕರ 4.ಪ್ರಶಾಂತ್ ಆರ ದೈವಜ್ಞ   *ಎಲ್ಲರೂ ತುಂಬಾ ಸುಂದರವಾದ ಕವನ ರಚಿಸಿರುವಿರಿ ಶುಭ ಹಾರೈಕೆಗಳು*💐💐💐💐💐💐💐💐💐💐💐💐 *ನವಪರ್ವ ಅಡ್ಮಿನ್ ಬಳಗ*📚✍📚✍📚✍📚✍📚✍📚✍📚✍📚✍📚✍📚✍ [05/06, 11:38 PM] pankajarambhat: ರಾಧೆಯ ವಿರಹ ಕೊಳಲನೂದುವ ಗೋಪಬಾಲನೆ ಮನವ ಕದ್ದಿಹ ಮೋಹನಾಂಗನೆ ಕಾಯುತಿರುವೆನು ನಿನ್ನ ದಾರಿಯ ಚೆಲುವ ಚೆನ್ನಿಗನೆ ವಿರಹದುರಿಯಲಿ ಬೇಯುತಿರುವೆನು ತಾಳಲಾರೆನು ಅದರ ನೋವನು  ಮೊರೆಯ ಆಲಿಸಿ ಬಾರೋ ಬೇಗನೆ ಹೇ ಮಾಧವನೇ ಎಲ್ಲಿ ನೋಡಲಿ ನೀನೇ ಕಾಣುವೆ ಕಳೆದ ದಿನಗಳ ನೆನಪು ಭಾಧಿಸಿ ನೋಯುತಿರುವೆನು  ನೋಡು ಕೇಶವನೇ ನಿನ್ನ ನೆನಪಲ್ಲೇ ಕಳೆದಿರುವೆ ದಿನಗಳನು ಕಾಯಲಾರೆನು ಇನ್ನು ನಾನು ಎಂದು ಬರುವೆಯೋ ಹೇಳು ಮುರಾರಿಯೇ ಪಂಕಜಾ.ಕೆ. ಮುಡಿಪು ನಿವೃತ್ತ ಅಸಿಸ್ಟಂಟ್ ಪೋಸ್ಟ್

ಕುರುಡು ಪ್ರೀತಿ ಕಥೆ ಪ್ರೀತಿ.ಮಾಯೆ ನವಪರ್ವದಲ್ಲಿ ಮೆಚ್ಚುಗೆ

ಕುರುಡು ಪ್ರೀತಿ ಆದಿನ ಸಾರಿಕ  ಮನೆ ಬಿಟ್ಟಾಗಳೇ ತುಂಬಾ ತಡವಾಗಿತ್ತು .ಬಸ್ ಸ್ಟ್ಯಾಂಡ್ ಗೆ ಬಂದಾಗ ಬಸ್ ಗಳೆಲ್ಲಾ ಹೋಗಿ ಆಗಿತ್ತು .ಇಂದು ಪರೀಕ್ಷೆ ಬೇರೆ ಇದೆ  ಏನು ಮಾಡಲಿ ಎಂದು ಯೋಚಿಸುತ್ತಿದ್ದಾಗ ಬೈಕೊಂದು  ಹತ್ತಿರ ಬಂದು ನಿಂತಿತು ಅದರಲ್ಲಿದ್ದ ತರುಣ  ಏನು ಮೇಡಂ ಕಾಲೇಜಿಗೆ ಹೊರಟಿರ. ಇನ್ನು ಅರ್ಧ ಗಂಟೆ ಬಸ್ ಇಲ್ಲ ನಿಮ್ಮ ಅಭ್ಯಂತರ ಇಲ್ಲದಿದ್ದರೆ ನನ್ನ ಜತೆ ಬನ್ನಿ ಎಂದು ಕರೆದಾಗ ಹೋಗದೆ ಇರಲು ಸಾರಿಕಾಳಿಗೆ ಆಗಲಿಲ್ಲ .ಆತ ತನ್ನ ಕಾಲೇಜಿನವನೆ ಎಷ್ಟೋ ಬಾರಿ ಲೈಬ್ರರಿ ಯಲ್ಲಿ ಭೇಟಿಯಾಗಿದ್ದರೂ ಒಬ್ಬರಿನ್ನೊಬ್ಬರ ಪರಿಚಯ ಆಗಿರಲಿಲ್ಲ  .ಸಾರಿಕಾ ಕಾಲೇಜಿಗೆ ಹೋತ್ತಾಯಿತೆಂದು ಅವನ ಬೈಕ್ ನಲ್ಲಿ  ಕುಳಿತಳು. ಶರವೇಗದಿಂದ ಬೈಕ್ ನ್ನು ಓಡಿಸಿದ ವಿಶ್ವಾಸ್ ಕಾಲೇಜಿಗೆ 5 ನಿಮಿಷದಲ್ಲಿಯೇ ತಲಪಿದ್ದ. ಭಯದಿಂದ ಉಸಿರು ಬಿಗಿಹಿಡಿದು ಅವನನ್ನು ತಬ್ಬಿ ಹಿಡಿದ ಸಾರಿಕಳನ್ನು ಆತನೇ ಎಚ್ಚರಿಸಬೇಕಾಯಿತು .ಆಕೆ ನಾಚಿಕೆಯಿಂದ ಥಾಂಕ್ಸ್  ಎಂದು ಮಾತ್ರ ಹೇಳಿ ತನ್ನ ಕ್ಲಾಸ್ ರೂಮ್ ಗೆ ಹೊರಟು ಹೋದಳು..ಈ ಪರಿಚಯ ನಿಧಾನವಾಗಿ ಸ್ನೇಹ ನಂತರ  ಪ್ರೇಮಕ್ಕೆ ತಿರುಗಿತು .ಇಷ್ಟು ದಿನ ಆದರೂ ಸಾರಿಕಾ ಅವನ ಬಗ್ಗೆ ಏನೊಂದನ್ನು ವಿಚಾರಿಸಲೇ ಇಲ್ಲ   .ಆಕೆ ಆತನನ್ನು ಸಂಪೂರ್ಣ ನಂಬಿದ್ದಳು .ಪ್ರೀತಿ ಎನ್ನುವುದು ಒಂದು ಮಾಯೆ  ಸಾರಿಕಾ ಮಾಯೆಯ ಬಂಧನದಲ್ಲಿ ಬಿದ್ದು ಕುರುಡಾಗಿ ತನ್ನ ಹೆತ್ತ ತಂದೆ ತಾಯಿಯನ್ನು ಬಿಟ್ಟು ಒಂದು ದಿನ ಮನೆಯವರಿಗೆ  ತಿಳಿಸದೆ ಅವನ ಜತೆ ಮನೆಬಿಟ್ಟು ಬಂದು ಬ

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪದಿಗೆ ಮಖ್ತ