Skip to main content

Posts

Showing posts from March, 2019

ಬರ

ಬರ ನೆಟ್ಟ ಗಿಡಮರಗಳ ಬೇರು ಅಶಿಸುತ್ತಿವೆ ಮೈತುಂಬ ನೀರು ಭಾವಿ ಕೆರೆ ತೊರೆಗಳ ನೀರು ಬತ್ತಿ ನೀರಿಗಾಗಿ ಭೂತಾಯಿ ಒಡಲ ಕೆತ್ತಿ ಅಂತರ್ಜಲಕೆ ಕನ್ನ ಕೊರೆದು ನೀರಸೆಳೆಯು  ಸಂಪೂರ್ಣ ಅಳಿದು ಎಲ್ಲೆಲ್ಲೂ ಕಾಣುತ್ತಿದೆ ನೀರಿಗೆ ಬರ ಕೊಡಲಾರೆಯ ದೇವ ಮಳೆಯ ವರ ಮೈಕೈ ಎಲ್ಲಾ ಬೆವರಿ ಮುದ್ದೆ ವರುಣ ನೀನು ಬಂದರೆ ನಾಗೆದ್ದೆ ಸೆಕೆಯ ಸಹಿಸಿ ಸಾಕಾಗಿ ಹೋಯ್ತು ಪಂಖದ ಗಾಳಿಯೂ ಸಾಲದಾಯ್ರು ಬಾನಿ ನಲಿ ಓಡುವ ಮೋಡವೇ ಸುರಿಸಲಾರೆಯ ಒಮ್ಮೆಮಳೆಯ ಇಳೆಗೆ ಕೆಂಡ ದಂತೆ ಸುಡುತಿಹನು ರವಿ ಹೊರಟು ಹೋಗುತ್ತಿದೆ ಜೀವನದಲ್ಲಿ ಸವಿ ಬಿರುಬಿಸಿಲಿಗೆಜೀವನೋತ್ಸಹವು ಕುಗ್ಗುತಿದೆ ಸೆಕೆಗಾಲದಲಿ ನೀರ ಸೆಳೆ ಅಳಿಯುತಿದೆ ಉಳಿಸಬೇಕಿತ್ತುನೀರಒಂದೊಂದು ಬಿಂದು ಗಿಡಮರಗಳನು ನೆಟ್ಟು ಬೆಳೆಸುತಲಂದು ಪಂಕಜಾ.ಕೆ.

ಸ್ವಾತಿ ಮಳೆ

ಸ್ವಾತಿ ಮಳೆ ಸ್ವಾತಿ ಮಳೆಯ ಮುತ್ತು ಭೂಮಿ ತಾಯಿಗೆ ಗೊತ್ತು ಬರಲಿ ಸ್ವಾತಿ ಮಳೆ ಮುತ್ತಾಗಲಿ ಇಳೆ ಸ್ವಾತಿ ಮಳೆಯಲಿ ಮಿಂದ ಇಳೆ ನಗುಮುಖದ ಧರಿತ್ರಿ  ಕಳೆ ಬಿಸಿಲ ಬೆಗೆಗೆ ಬೆಂದ ಇಳೆಗೆ ತಂಪಾಗಲಿ ಧರೆಗೆ

ಹೊಸವರ್ಷಕ್ಕೆ ಸ್ವಾಗತ

ಹೊಸವರ್ಷಕೆ ಸ್ವಾಗತ ಹೊಸವರ್ಷದಾಗಮನಕೆ ವರುಣನ ಸ್ವಾಗತ ಬೀಸುಗಾಳಿಯ ಜತೆ ಮಳೆಯ ಸಿಂಚನ ಬಿರುಬಿಸಿಲಿಗೆ ಬಳಲಿ ಬೆಂಡಾದ ಇಳೆಗೆ ಹನಿ ಮಳೆಯ ತಂಪು ಕಂಪಿನ ನೀರ ಜಳಕ ಹೊಸಮಣ್ಣಿನ ಪರಿಮಳವು ಎಲ್ಲೆಡೆ ಹಬ್ಬಿ ಮಣ್ಣಿನಡಿಯಲ್ಲಿ ಅವಿತಿದ್ದ ಬೀಜಗಳುಉಬ್ಬಿ ಯುಗಾದಿಯಶುಭದಿನಕೆಸ್ವಾಗತವಕೋರಿ ಚಿಗುರು ಹೂವು ಹಣ್ಣು ಹೊತ್ತು ನಲಿಯುತ್ತಿದೆ ಪ್ರಕೃತಿ ಪಂಕಜಾ.ಕೆ.

ಹೆಣ್ಣು ಗಂಡಿನ ಸ್ನೇಹ

ಹೆಣ್ಣು ಗಂಡಿನ ಸ್ನೇಹ ಕೂಡಿ ಆಡಿದೆವು ನಾವು ಬಾಲ್ಯದಿಂದ ಒಟ್ಟಾಗಿ ಕುಣಿದೆವು ಜತೆಯಾಗಿ  ನಲಿದೆವು ಅಕ್ಕ ತಂಗಿಯರಲ್ಲಿ ಅಣ್ಣ ತಮ್ಮಂದಿರಲ್ಲಿ ಕೊನೆಗೆಹೆತ್ತಬ್ಬೆಅಪ್ಪನಲ್ಲೂ ಹೇಳಲಾರದ ವಿಷಯ ಹಂಚಿಕೊಡೆವು ನಾವು ಅದನು.  ದಿನ ದಿನವೂ ನಕ್ಕು ನಲಿದೆವು  ಒಂದಾಗಿ ಹೆಣ್ಣುಗಂಡೆನ್ನುವಭೇದವಿಲ್ಲದೆ ನಮ್ಮ ಸ್ನೇಹದ ಬಳ್ಳಿ ಹಬ್ಬಿ ಹೆಮ್ಮರವಾಗಿ ಶುದ್ಧ ಸ್ನೇಹದ ಬಳ್ಳಿ ಎಲ್ಲೆಡೆಯೂ ಹಬ್ಬಿತಂದು ಕಲ್ಮಶವು ಇನಿತೂ ಇಲ್ಲ ನನ್ನ ನಿನ್ನ ಮನದಲಿ ತುಂಬಿತ್ತು ಅಲ್ಲೆಲ್ಲ ಶುದ್ಧ ಸ್ನೇಹದ  ಜಲ ಇಂದೀಗ ನಾವು ಬೆಳೆದೆವು ಜಗವು ನೋಡಿತು  ನಮ್ಮನು ಅರಸಿನ  ಬೆರೆತ ಕಣ್ಣಿಂದ ಶುದ್ಧ ಸ್ನೇಹದ ಜಲಕೆ ಹುಳಿಯ ನಿಂಡಿದರು ಬಾಲ್ಯದಲಿಲ್ಲದಹೆಣ್ಣುಗಂಡೆನ್ನುವ ಭೇದ ಬಾವಈಗೇಕೆ ಬಂತೋ ಮತ್ತೆ ಬಂದೀತೇ ಆ ಬಾಲ್ಯ ಇನ್ನೊಮ್ಮೆ ನಾವು ಕೂಡಿ ಆಡುವ ಕಾಲ ಹಂಗಿಲ್ಲದ ಚಿಂತೆಗಳಿಲ್ಲದ  ಆ ಬಾಲ್ಯ ಪಂಕಜಾ.ಕೆ.

ಸಮಚಿತ್ತ

ಸಮಚಿತ್ತ ಸೋಲು ಗೆಲುವುಗಳುಂಟು ನೋವು ನಲಿವುಗಳುಂಟು ಬಾಳ ಪಯಣದಲಿ ಸೋಲು ಬಂತೆಂದು ಕುಗ್ಗದೆ ಗೆಲುವು ಬಂತೆಂದು ಹಿಗ್ಗದೆ ಸಮಚಿತ್ತತೆ ಯಿರಲಿ ಚಿತ್ತ ದೇವ  ಕೊಟ್ಟಿಹ ಬಾಳು ಹಾಳುಗೆಡವಿದರೆ ಗೋಳು ಬಾಳಿನಲಿ ಬರಬಹುದು ಕಷ್ಟ  ನಷ್ಟ ಸಮಚಿತ್ತದಿಂದ ಸ್ವೀಕರಿಸದಿರೆ ನಷ್ಟ ಬಾಳಿನಲ್ಲಿ ಬರುವ ಸುಖದುಃಖ ಗಳ ಸಮಚಿತ್ತದಿಂದ ಸ್ವೀಕರಿಸಿ ಸಾಧನೆಯಮಾಡಿದರೆಬಂದೀತು ಕೀರ್ತಿ ಕೀರ್ತಿ  ಅಪಕೀರ್ತಿಗಳ ಬೆನ್ನೇರದೆ ಕಾಯಕವ ಮಾಡುತ್ತ ಜೀವಿಗಳಿ ಗೊಳಿತಾಗುವಂತೆ ಬದುಕಿ  ಬಾಳಿದರೆ ಜೀವನ ಸಾರ್ಥಕ್ಯ ಪಂಕಜಾ.ಕೆ.

ಹರೆಯ

ಹರೆಯ ಹರೆಯದಲ್ಲಿ ಹಕ್ಕಿಯಂತೆ ಆಗಸದಲಿ ರೆಕ್ಕೆ ಬಿಚ್ಚಿ ಹಾರುವ ಮನಸು ಗರಿಗೆದರಿದ ಆಶೆಗಳು ಬಾನೆತ್ತರ ಏರಿ ಕುಳಿತು ನಲಿದ ಕನಸು ಬೇಡನ ಬಲೆಯೊಳಗೆ ಸಿಕ್ಕಿ ರೆಕ್ಕೆಮುರಿದ ಹಕ್ಕಿಯಂತಾಗದಿರಲಿ ಬಾಳು ಕನಸುಗಳ ಬೆನ್ನೇರಿ ಹಾರುವ ಮನಸಿಗೆ ಕಡಿವಾಣ ಹಾಕದಿದ್ದರೆ ಬಾಳುಗೋಳು ಕಾಯುತಿರುವರು ದುಷ್ಟರು ರೆಕ್ಕೆಗಳ ಕೆಡವಲು ಅರಿಯಬೇಕು ಮನುಜರ.ಭಾವನೆಗಳ ತೆವಲು ಆಗಸದಲ್ಲಿ ಹಾರುವ ಕನಸುಗಳ ಭರದಲ್ಲಿ ದೇವ ಕೊಟ್ಟಿರುವ ಈ ಬಾಳು ಹಾಳಾಗದಿರಲಿ ಪಂಕಜಾ.ಕೆ. ಮುಡಿಪು

ಗುಬ್ಬಿಹಕ್ಕಿ

ಗುಬ್ಬಿ ಹಕ್ಕಿ ಗುಬ್ಬಿಯೊಂದು ಹಾರಿ ಬಂದು ಮಾಡಮೇಲೆ ಕುಳಿತಿತು ಅತ್ತ ಇತ್ತ ಕತ್ತು ತಿರುಗಿಸಿ ಸುತ್ತ ಮುತ್ತ ನೋಡಿತು ಗೂಡುಕಟ್ಟಲದಕೆ ಜಾಗ ಎಲ್ಲಿಯೂ ಇಲ್ಲವೆಂದು ಕಂಡಿತು ಮುಳಿಹುಲ್ಲ ಮಾಡು ಈಗ ಹುಡುಕಿದರೂಅದಕೆ ಸಿಕ್ಕಲಿಲ್ಲವೂ ಗೋಡೆಯಲ್ಲಿ  ಪಟಗಳೊಂದು ಕಾಣಲಿಲ್ಲವೆಲ್ಲಿಯೂ ಬಿರುಬಿಸಿಲು  ಮೈಯ ಸುಡಲು ಗೂಡು  ಎಲ್ಲಿ ಕಟ್ಟಲಿ ಅಂದಿನಿಂದ ಇದ್ದ  ಸ್ನೇಹಸೇತು ಎಲ್ಲಿ ಕಡಿದು ಹೋಯಿತೋ ಮನೆಯ ಮಾಡಲೆಲ್ಲಿಯೂ ಜಾಗವಿಲ್ಲದಾಯಿತೇ ಇನ್ನು ನಾನು ಹೇಗೆ ಇರಲಿ ನಿನ್ನ ಮನೆಯಲೆಂದಿಗೂ ಎನುತ ಗುಬ್ಬಿ ದುಃಖದಿಂದ ಅಳುತ ಹಾರಿ ಹೋಯಿತು ಗುಬ್ಬಿ ಹಕ್ಕಿ ಈಗ  ಚಿತ್ರಪಟದಲ್ಲಿ ಮಾತ್ರ ಕಾಣುವಂತೆ ಆಯಿತು ಎಂತ ಚಂದ ಮುದ್ದು ಹಕ್ಕಿ ಪುಟ್ಟ ಪುಟ್ಟ ಹಕ್ಕಿಯು ಇನ್ನು ಮೇಲೆ ಕಾಣದಲ್ಲ ತುಂಬಾ ದುಃಖವಾಗುವುದು ಹೇಗೆ ಉಳಿಸಲದನು ನಾವು ನಮ್ಮ ಜತೆಯಲೆಂದಿಗೂ ಪಂಕಜಾ.ಕೆ.

ಹೋಳಿ ಹಬ್ಬ

ಹೋಳಿ ಹಬ್ಬ ಶಿಶಿರನು ತೆರಳುವ ಹೊತ್ತು ವಸಂತನಾಗಮನದ ಹೊತ್ತು ಪೂರ್ಣ ಚಂದ್ರನುಬರುವ ಹೊತ್ತು ಹೋಳಿ ಹಬ್ಬದ ಸಂಭ್ರಮದ ಹೊತ್ತು ರಂಗು ರಂಗುಗಳ ಹಬ್ಬಹೋಳಿ ಎಲ್ಲೆಲ್ಲೂ ರಂಗಿನೋಕುಳಿ ಹೋಳಿ ಹುಣ್ಣಿಮೆಯ ಗೌಜು ಓಕುಳಿಯಾಟದ ಮೋಜು ಬಾನಲಿ ಪೂರ್ಣಚಂದ್ರನ ಸೊಬಗು ಮನದಲಿ ಓಕುಳಿಯಾಟದ ಬೆರಗು ಎಳೆಬಿಸಿಲಿಗೆ ಮರಗಿಡಗಳಲ್ಲಿ ಚಿಗುರು ಪ್ರಕೃತಿಯಮಡಿಲಲ್ಲಿಜೀವ ಜಂತುಗಳಉಸಿರು ಏಕತಾನತೆ ಕಳೆದುಮನಕೆ  ರಂಗುತುಂಬಿ ಪ್ರೀತಿ ಪ್ರೇಮದ ಭಾವವನು ತುಂಬಿ ಸ್ನೇಹ ಬಾಂಧವ್ಯದವೃದ್ಧಿಸುವ ಹಬ್ಬನೋಡಿ ನಲಿಯೋಣಬಣ್ಣದೋಕುಳಿಯಾಡಿ ಪಂಕಜಾ .ಕೆ. ಮುಡಿಪು

ಕೊಡುಗೆ

       ಕೊಡುಗೆ ದೇವನ  ಪ್ರೀತಿಯ ಕೊಡುಗೆಯಿದು ಪ್ರಕೃತಿ ರಮ್ಯ ಸುಂದರ ತಾಣವಿದು ಪರಿಸರ ಉಳಿಸಿಕೊಂಡರೆ ಹಸಿರು ಸಿಗುವುದು ನಿತ್ಯ ನಮಗೆ ಉಸಿರು ಬಿರುಬಿಸಿಲ   ಬೇಗೆಯಲ್ಲಿ ನಿಂದು ಗಿಡಮರಗಳು. ಬಸವಳಿದಿವೆ ನೀರಸೆಳೆಯನರಸಿ  ಪಕ್ಷಿಗಳು ವಲಸೆ  ಹೋಗುತಿವೆ ಹೆಚ್ಚುತ್ತಿದೆ ಭೂಮಿಯ  ತಾಪಮಾನ ಎಲ್ಲೆಲ್ಲೂ  ಕಾಣುತ್ತಿದೆ ನೀರಿಗೆ ಹಾಹಾಕಾರ ಅಂತರ್ಜಲದ ಒರತೆ  ಬತ್ತುತಿದೆ ದಿನ ದಿನವೂ ಗಿದಮರ ಪ್ರಕೃತಿ ನಾಶ  ಇದಕೆ  ಕಾರಣ ನೆಡಬೇಕು ಗಿಡ ರಕ್ಷಿಸಬೇಕು ಗಿಡ ಮರಗಳ ಹೆಚ್ಚಬಹುದಾಗ ಅಂತರ್ಜಲದ ಒರತೆ ಪ್ರಕೃತಿ  ಕೊಡುಗೆಯ ಉಳಿಸಬೇಕು ಸ್ವಚ್ಛ ಶುದ್ಧ ಗಾಳಿಯ ಸವಿಯಬೇಕು ಪಂಕಜಾ.ಕೆ. ಮುಡಿಪು

ಸಕಾಲ

ಸಕಾಲ ಮಳೆ ಬಂದು ಇಳೆಗೆ ತಂದಿತು ತಂಪು ಹರಡಿತು ಎಲ್ಲೆಲ್ಲೂ ಹೊಸ ಮಣ್ಣಿನ ಕಂಪು ಬೀಜ ಬಿತ್ತಲು ಇದು ಸಕಾಲ ವ್ಯರ್ಥ ಮಾಡಬೇಡ ಈ ಕಾಲ ಸಕಾಲದಲ್ಲಿ ಬೀಜ ಗಳ ಬಿತ್ತಿ ಪಡೆಯಬೇಕು ಅದರಲ್ಲಿ ಉತ್ಪತ್ತಿ ಸಾವಯವ ತರಕಾರಿಯ ಸವಿ ಸವಿದವನೆ ಬಲ್ಲ ಅದರ ಸವಿ ಪ್ರತಿ ಮನೆಯಲ್ಲೂಬೆಳೆಯಿರಿ ಸಾವಯವ  ಹಣ್ಣು ತರಕಾರಿ ಬೆಳೆಯುವಾತುರ ಕಾತುರ ತೋರಿ ನಿತ್ಯವೂ ಸಿಗುತ್ತಿದೆ ಹೊಸ ತರಕಾರಿ ಮನೆ ಸುತ್ತ  ಮುತ್ತಲೆಲ್ಲಹಸಿರಿನ ಸಿರಿ ಭೂತಾಯಿಯ ಮಡಿಲಿಗೆ ಸಂತಸದ ಗರಿ ಕಣ್ಣ ತುಂಬುವ  ಚೆಲುವಿನ ನೋಟ ನಿತ್ಯ ಮನಕದುವೆ   ರಸದೂಟ ಪಂಕಜಾ.ಕೆ. ಮುಡಿಪು

ವೀರಯೋಧ

ವೀರ ಯೋಧ ಭಾರತಾಂಬೆಯ ಶಿಖರದಲಿ ಮಳೆ ಬಿಸಿಲಿಗೆ ಮೈಯನೊಡ್ಡಿ ಮೈಯ ಕೊರೆವ ಚಳಿಗಾಳಿ ಯಲ್ಲಿ ದೇಶಕಾಯುವ ವೀರಯೋಧನೆ ಸಲ್ಲಿಸುವೆ ನಿನಗೆ ನಿತ್ಯ ವಂದನೆ ಭಾರತಾಂಬೆಯ ಸೆರಗಸೆಳೆಯುವ ವೈರಿಗಳ ಸದೆ ಬಡಿದು ನೀವು ಭಾರತಾಂಬೆಯ ಮಾನವನ್ನು ಕಾಯುತಿರುವಿರಿ ಶ್ರೀಕೃಷ್ಣನಂತೆ ಮೆರೆಯುತಿರುವಿರಿ ಕ್ಷಾತ್ರತೇಜವ ಬೆಚ್ಚಿ ಬೆದರದೆ ಅಂದುಇಂದುಎಂದೆಂದಿಗೂ ಊಟ ತಿಂಡಿಯ ಪರಿವೆ ಇಲ್ಲದೆ ಮನೆ ಮಠಗಳ ತೊರೆದು ಜೀವದ ಹಂಗು ಕಳಚಿ ನೀವು ದೇಶ ತಾಯಿಯ ಸೇವೆಗೈಯುತ ಮೆರೆಯುತಿರುವಿರಿ ನಿಮ್ಮ ವೀರ ತೇಜವ ಹಿಮಗಿರಿಯ ಮಂಜಿನ ತೆರೆಯಲಿ ಪಾತಕಿಗಳು ನುಸುಳುತಿರಲು ಜೀವದಹಂಗುತೊರೆದುಕಾಯ್ದೆ  ನೀಭಾರತಾಂಬೆಯ ವೀರಪುತ್ರ ಮರೆಯಲಾರೆವು ನಾವು ಎಂದಿಗೂ ನಿಮ್ಮ ತ್ಯಾಗ ಬಲಿದಾನಗಳ ದೇಶಸೇವೆಯೇ ಈಶ ಸೇವೆ ಎನುತ  ಮೆರೆದಿರಿನಿಮ್ಮಯ ಕ್ಷಾತ್ರತೇಜವ ಕಾರ್ಗಿಲ್ಲಿನ ರಣರಂಗದಲಂದು ಭೇದಿಸುತ ವೈರಿಗಳ ಚಕ್ರವ್ಯೂಹವ ಅಭಿಮನ್ಯುವಿನಂತೆಮೆರೆದುಮರೆಯಾಗಿ ಆಗಸದತಾರೆಯಂದದಿ ಮಿನುಗುತಿರುವಿರಿ ವರುಷ ಉರುಳಿದರೂ ಮರೆಯಲಾರೆವು ಮೈನವಿರೇಳಿಸುವ ನಿಮ್ಮ ಆ ಶೂರ ಧೀರ ನಡೆಯ ಸಲ್ಲಿಸುವೆ  ನಿಮಗೆ  ನಮ್ಮ ವಂದನೆಯ ಭಾರತಾಂಬೆಯ  ಹೆಮ್ಮೆಯ ಪುತ್ರರತ್ನಗಳೆ ಬಾಳಿದರೆ  ನಿಮ್ಮಂತೆ ಬಾಳಬೇಕು ದೇಶಸೇವೆಯ ಫಣ ತೊಡಬೇಕು ವೀರ ಯೋಧನಾಗಿಮೆರೆಯಬೇಕು ವೈರಿಗಳ ಸದೆಬಡಿಯಬೇಕು ಭಾರತಾಂಬೆಯ ಕೀರ್ತಿಯನು ಜಗದಗಲ ಹರಡಬೇಕು ಪಂಕಜಾ. ಕೆ. ಮುಡಿಪು

ಹುಚ್ಚು.ಮಳೆ

ಹುಚ್ಚು ಮಳೆ ಬಾನು ತುಂಬಿದ ಕರಿಯ ಮುಗಿಲು ಅಟ್ಟಹಾಸದಿ ಮೆರೆದು ಸುರಿಸಿದ ಮಳೆಗೆ ಮನದಲಿ ತುಂಬಿದೆ ಏನೋ ಆವೇಗ ಜೀವಜಂತುಗಳೆಲ್ಲಾ ಹನಿಮಳೆಗೆ ನೆನೆದು ಸಂಭ್ರಮಿಸುತ್ತಿರುವ ಕ್ಷಣ ಗಳಲ್ಲೇ ಆಗಸವೇ ತೂತಾಗುವಂತೆ ನೀ ಸುರಿಯಬಹುದೇ ಮನೆ ಮಠ ಗಳೆಲ್ಲಾ ಕೊಚ್ಚಿ ಹೋಗುವಂತ ಆವೇಗ  ಅಟ್ಟಹಾಸ ನಿನಗೇಕೆ ವರುಣ ನೀ ಮಾಡಿದ ಅಟ್ಟಹಾಸಕೆ ಬುವಿಯಾಯಿತು ಮಸಣ ಎಲ್ಲೆಲ್ಲೂ ತುಂಬಿದೆ ಭಗ್ನಅವಶೇಷಗಳು ಅವಶೇಷಗಳ ಅಡಿಯಲ್ಲಿ  ಹೂತ ಕನಸುಗಳು ಸುಂದರ ನಾಳೆಗಳ  ಕಾಣದ ನತದೃಷ್ಟರು ಬಾಳಾಯಿತು ಹರಿದ ಬಟ್ಟೆ ಗೋಳಾಯಿತು ಬಾಳಬಟ್ಟೆ ಸಂಬಂಧದ ಹೆಣದ ಮೇಲೆ ಹರಡಿದೆ ಬಟ್ಟೆ ಹೊಟ್ಟೆಗೆ ಕಟ್ಟಬೇಕಾದೀತು ತಣ್ಣೀರ ಬಟ್ಟೆ ಸ್ವಾರ್ಥ ದುರಾಸೆಗಳು ಕೊಚ್ಚಿ ಹೋಯಿತು ನಾನು ನನ್ನದೆನ್ನುವ ಮಮಕಾರ ಮರೆಯಿತು ಉಳಿದಿರುವುದೊಂದೆ ಆದು ನಿನ್ನ ಕರುಣೆ ಪಂಕಜಾ.ಕೆ.

ಯುಗಾದಿ

ಯುಗಾದಿ ಹೊಸ ಸಂವತ್ಸರ ವ ಸಾರುತ್ತ ಹೊಸವರ್ಷವು ಹೊಸತನದಿ  ಬಂದಿತು ಹಳತು ಕಳೆದು ಹೊಸತನವ ಮನದಲ್ಲಿ ತುಂಬುತ ಮತ್ತೆ ಬಂದಿತು  ಯುಗಾದಿ ಗಿಡಮರಗಳು ಚಿಗುರಿ ಹೂವು ಹಣ್ಣುಗಳ ತೇರನು ಕಟ್ಟಿ ನಲಿಯಿತು ಮುದದಿ ಹೊಸವರ್ಷದಾಗಮನವ ಸಾರಿ ಮೈ ಮನಕೆ ಮುದವನು ತಂದು ಕೊಟ್ಟಿತು ಯುಗಾದಿ ಹಳೆಯ ದ್ವೇಷ ಕೋಪಗಳ ತೊಳೆದು ನವವಸಂತ ನಾಗಮನವ  ಸಾರಿತು ಪಕ್ಷಿಗಳು ಸಂತಸದಿಂದ ಮಧು ಹೀರುತ ಬಾನಲಿ ಹೊಸರಾಗವ ಹಾಡುತಿವೆ ತರುಲತೆಗಳು ಚಿಗುರು ಹೂ ಹಣ್ಣಗಳ ಹೊತ್ತು ಹೊಸ ಮದುಮಗಳಂದದಿನಲಿಯುತಿವೆ ಎಲ್ಲೆಲ್ಲೂ ಸಂಭ್ರಮ ತುಂಬಿ ಬೇವು ಬೆಲ್ಲದ ಸವಿಯನ್ನು ಮನೆ ಮನದಲ್ಲಿ ತುಂಬುತಿದೆ ಸಿಹಿಕಹಿಗಳ ಸಮರಸವ ಸಾರುತ್ತಮತ್ತೆಬಂದಿತು ಯುಗಾದಿ ನವೋಲ್ಲಾಸದ ಗುಂಗನು ತುಂಬಿ ಪಂಕಜಾ.ಕೆ. ಮುಡಿಪು

ಹೊಸ ಸಂವತ್ಸರ

ಹೊಸ ಸಂವತ್ಸರ ಪ್ರಕೃತಿ  ಮಾತೆಗೆ  ತಂದಿದೆ ಪುಳಕ ಹೊಸವರ್ಷದಾಗಮನದ ಜಳಕ ಹಳೆಯ ಎಲೆಗಳ ಉದುರಿಸಿ ಚಿಗುರು  ಹೂಗಳ   ಅರಳಿಸಿ ತುಂಬುತಿದೆ ಕನಸುಗಳ ಹೂರಣ ಎಲ್ಲೆಲ್ಲೂ ಹೂ ಹಸಿರು ತೋರಣ ಅರಳಿ ನಿಂತಿವೆ ಕುಸುಮಗಳು ಎಲ್ಲೆಡೆ ಗಂಧ ಚೆಲ್ಲಿವೆ ಹೂಗಳು ಪ್ರಕೃತಿ ಮಾತೆಯ  ಹೂಂಕಾರ ಹಾರಾಡುವ ದುಂಬಿಗಳ ಝೇಂಕಾರ ಮನದಲಿ  ತುಂಬುತಿದೆ  ರಂಗು ಕೋಗಿಲೆಯ  ಹಾಡಿನ  ಗುಂಗು ಮರಗಿಡಗಳಲಿ ತುಂಬಿದೆ ಹೂವು ಸವಿಯೋಣ ನಾವು ಬೆಲ್ಲ ಬೇವು ಬೇವು ಬೆಲ್ಲದ ಸವಿಯಾದ ಹನಿ ಕಷ್ಟಸುಖಗಳ ಸಮರಸದ ಸವಿ ಹೊಸ ಸಂವತ್ಸರದಿ  ಹಳತು ಕೊಳೆ ಕಳೆ ತುಂಬಲಿ ಎಲ್ಲೆಡೆ ನವೋಲ್ಲಾಸದ ಹೊಳೆ ಚಿಗುರು ಹೂ ಎಲೆಗಳ ಹೂರಣ ನವವಸಂತನಾಗಮನದ ಬಾಣ ಸುಡುಬಿಸಿಲಬೇಗೆಯಲಿ ಗಾಳಿಯ ತಂಪು ಮನಕೆ ತರುತಿದೆ ಉಲ್ಲಾಸದ ಕಂಪು ಕವಿಮನಕೆ ತುಂಬುತಿದೆ  ಹೊಸ ಹುರುಪು ಉಲ್ಲಾಸ ಉತ್ಸಾಹದ ನವಿರು ಕಂಪು ದ್ವೇಷ ಅಸೂಯೆಗಳು ತೊಲಗಲಿ ಹೊಸ ಸಂವತ್ಸರದಲಿ ಬಾಳು ಬೆಳಗಲಿ ಒಳಿತು ಕೆಡುಕುಗಳೆರಡಕ್ಕೂ ಸ್ವಾಗತ ಅನುದಿನವೂ ಬಾಳೋಣನಾವು ನಗುತ ಪಂಕಜಾ.ಕೆ. ಮುಡಿಪು

ಸಿಕ್ಕಲಿಲ್ಲ ಹೆಣ್ಣು

ಸಿಕ್ಕಲಿಲ್ಲ ಹೆಣ್ಣು ಮೂವತೈದಾದರು.ನಿನಗೇಕಿನ್ನು ಮದುವೆ ಇಲ್ಲ ಹಂಗಿಸಿ ಕಾಡಿಸಿ ನೋಯಿಸಿ ದರೆಲ್ಲ ನೂರಾರು ಗಂಡಸರ  ಮುಂದೆ ನಿಂತು  ವಧೂಪರೀಕ್ಷೆಗೆ  ಕೊರಳು ಒಡ್ಡಿ ನಿಂತು ದಾಂಪತ್ಯದ ಮಧುರ ಕನಸನ್ನು ಹೊತ್ತು ಪೋಣಿಸಿದ  ಕನಸುಗಳ ಹೂಮಾಲೆಕಿತ್ತು ಛಿದ್ರವಾದಾಗ ಹರಿದ ಕಣ್ಣೀರ ಬಿಂದು ಹೊಳೆಯಾಗಿ ಹೊಗೆಯಾಡಿತು ಅಂದು ಅವಿವಾಹಿತರಾಗಿ ಅವಮಾನಿತರಾಗಿ ಬಾಳಬೇಕಾಗಿ ಬಂದ ದುಃಸ್ಥಿತಿ ಗಾಗಿ ಕಿವುಡಾಗಿತ್ತು ಸಮಾಜ ಇದಕೆಲ್ಲ ಅಂದು ಸಿಗುತಿಲ್ಲ ಗಂಡಿಗೆ ಎಲ್ಲಿಯೂ ಹೆಣ್ಣು ಇಂದು ಬೊಬ್ಬಿಡುತ್ತಿದ್ದಾರೆ ತಮಗೆಆಗಿದೆ ಅನ್ಯಾಯವೆಂದು ಇದಕೆ ಕಾರಣ ಹೆಣ್ಣು ಹೆತ್ತವರೆಂದು ಬಟ್ಟೆ  ತರಕಾರಿಯ ತರದಲಿ ಹೆಣ್ಣನ್ನು ಆರಿಸುವ ಭರದಲಿ ಎಷ್ಟು ಹೆಣ್ಣುಗಳ ಆಶೆ ಹೊಸಕಿದರೋ ಹೆಣ್ಣು ಹೆತ್ತವರ ನಲುಗಿಸಿದರೊ ಮಾಡಿದ ಪಾಪದ ಫಲವಿದ್ದೀತೇ ಅದು ಗಂಡಿಗೆಸಿಗುತಿಲ್ಲಎಲ್ಲಿಯೂ ಹೆಣ್ಣುಇಂದು ಪಂಕಜಾ.ಕೆ. ಮುಡಿಪು

ಬಾಳೊಂದು ಹೂಬನ

ಬಾಳೊಂದು ಹೂಬನ ಬಾಳೊಂದು  ನಂದನವನ ಬೆಳೆಸಬೇಕದರಲ್ಲಿ ಹೂಬನ ಕಷ್ಟ  ದುಃಖಗಳ  ಸಹಿಸುತ ನೋವುನಲಿವುಗಳಲಿತೇಲುತ ನಗುತ  ನಗಿಸುತಿರಲು  ಬಾಳು ರುಚಿಯಾದ  ಹಣ್ಣಿನ  ಹೋಳು ಜೀವನವೊಂದು  ಜಂಜಾಟ ಇರಲಿ ಅದರಲ್ಲಿ ನಗುವಿನಾಟ ಸಮರಸವು ತುಂಬಿದ ಜೀವನ ಮಧು ತುಂಬಿದಹೂಗಳ ಕಾನನ ಬಾಳಿನಲಿಹರಡಲಿನಗುವೆಂಬಜ್ಯೋತಿ ನಗುಹಂಚಿಎಲ್ಲರೊಡನಾಡಿದರೆ ಖ್ಯಾತಿ ಪಂಕಜಾ.ಕೆ. ಮುಡಿಪು

ಅಭಿನಂದನೆ

ಅಭಿನಂದನೆ ಅಭಿನಂದನಾ ನಿನಗೆ ಅಭಿನಂದನೆ ವೈರಿಯ ಬಂಧನದಲ್ಲಿದ್ದರೂ ಧೃತಿಗೆಡದೆ ಹಿಂಸೆಯ ಸಹಿಸುತ ಗುಟ್ಟನು ಬಿಡದೆ ಶತ್ರುಗಳ ಸದೆಬಡಿದು ಸೆರೆಯಾದೆ ಕರ್ತವ್ಯವೇ ಉಸಿರೆನುತ ಉಳಿಸಿದೆ ಭಾರತ ಕೀರ್ತಿಯ ಎದೆಗುಂದದೆ ಭಾರತದ ಶೂರ ವೀರ ಯೋಧನೆ ಸಲ್ಲಿಸುವೆ ನಿಮಗೆ ನಮ್ಮ ವಂದನೆ ಧನ್ಯವಾಯಿತು ತಾಯ್ನಾಡು ಇಂದು ನಿನ್ನಂತಹ ವೀರ ಪುತ್ರನ ಪಡೆದು ಸಾಧಿಸಿ ತೋರಿಸಿದೆ ನಿನ್ನ  ಕ್ಷಾತ್ರ ತೇಜ ಉಳಿಸಿದೆ  ಭಾರತದ ಕೀರ್ತಿಯನು ವೀರತೇಜ ಭಾರತದ  ಹೆಮ್ಮೆಯ ಪುತ್ರ ನಿನ್ನ ಹೆತ್ತವರು ವಂದ್ಯ ಸರ್ವತ್ರ ತಾಯ್ನಾಡಿಗಾಗಿ  ಕಷ್ಟ ಸಹಿಸಿದ ಯೋಧನೆ ಸಲ್ಲಿಸುವೆ ನಿಮಗೆ ನಮ್ಮ ಅಭಿನಂದನೆ ಪಂಕಜಾ.ಕೆ. ಮುಡಿಪು

ಒಲವ ಭಾವ

ಒಲವ ಭಾವ ಬಾವನೆಗಳೆಂಬ ಚೆಲುವ ಹನಿಗಳು ಮುತ್ತಿನಾಭರಣದ ಗಣಿಗಳು ಮನದಲಿ ತುಂಬಿದೆ ಒಲವ  ತನಿರಸ ಹೊಳೆಯಾಗಿ ಹರಿಯುತ್ತಿದೆ ಜೀವರಸ ಒಲವಗಾನದ ಮಳೆ ಎಲ್ಲೆಲ್ಲೂ ಹರಿದಿದೆ ಮನಕೆ   ಹೊಸತನದ  ಕಳೆ ತಂದಿದೆ ಕಾತರದಿ ಕಾಯುತಿದೆ  ನನ್ನ ಮನಸು ನನಸಾಗಲಾರವೇ ನಮ್ಮ ಕನಸು ಒಲವೆಲ್ಲಾ ಇಂದು ಚೆಲುವಾಗಿದೆ ಚೆಲುವೆಲ್ಲಾ  ನನ್ನ. ಗೆಲುವಾಗಿದೆ ಬಾಳಲ್ಲಿ   ಚೆಲುವಾದ ಹೂ  ಅರಳಿದೆ ಕಂಪನ್ನು  ಎಲ್ಲೆಡೆಯೂ ಪಸರಿಸಿದೆ ಇನಿಯಾ ನೀ ಬಂದು ನನ್ನಲ್ಲಿ  ತಂದೆ ಜೀವನಕೆ ಹೊಸತನದ ಭಾವವನುಅಂದೆ ಒಲವ ಸುಧೆಯನು  ಹರಿಸಿದೆ ನನ್ನೊಲವ ಪಡೆದು ಸಂಭ್ರಮಿಸಿದೆ ಇಂದೀಗ ಬಾಳಬಳ್ಳಿ ಅರಳಿ ನಗುತಿದೆ ಒಲವ ಬಳ್ಳಿಯಲಿ ಹೂ ಹಣ್ಣು ತುಂಬಿದೆ ಜೀವನದಲಿ ಹೊಸರಾಗ ಹಾಡಿದೆ ಒಲವ ಭಾವವು ಮೈ ಮನಕೆ ತಂಪು ತಂದಿದೆ ಪಂಕಜಾ ಕೆ ಮುಡಿಪು

ನೆನಪಿನೋಲೆ

ನೆನಪಿನೋಲೆ ಬೆಳದಿಂಗಳ ರಾತ್ರಿಯಲಿ ತಂಗಾಳಿ ಬೀಸುತ್ತಿರಲು ಮನದಲ್ಲಿ ನಿನ್ನ ನೆನಪು ತರುತಿದೆ ಒಲವ ಕಂಪು ನೈದಿಲೆಯ ಅರಳುವಿಕೆಯಲೂ ನಿನ್ನದೇ ನೆನಪು ರಾತ್ರಿರಾಣಿಯ ಕಂಪಲೂ ತುಂಬಿದೆ ನೆನಪು ನೆನಪುಗಳ ಸರಮಾಲೆ ತುಂಬುತಿದೆ ಮನವು ನಿನ್ನೊಡನಾಟವ ಬಯಸಿದೆ ನಿನ್ನಮೊಗದಲಿ ತುಂಬಿದ  ಕಾಂತಿ ಚಂದಿರನ  ನಾಚಿಸುವ  ಶಾಂತಿ ನನ್ನ  ಕಣ್ಣಲಿ ಸುರಿವ ಒಲವ ಧಾರೆ ಮೀಯುತಿರಲದರಲ್ಲಿ ಬಾರೇ ನಿನ್ನೊಡನಾಟದಲಿಹಕ್ಕಿಯಾಗುತ್ತಿದೆ ಮನ ಜೋಡಿ ಹಕ್ಕಿಗಳಂತೆಕೂಡಿ ಆಡೋಣವೆನುತಿದೆಮನ ಪಂಕಜಾ.ಕೆ. ಮುಡಿಪು

ಶಿವರಾತ್ರಿ 9...ಗಜಲ್

ಗಜಲ್. 9 ಶಿವರಾತ್ರಿಯ ದಿನವಿದು ಪೂಜಿಸಬೇಕಲ್ಲ ಶಿವನ ಭಜನೆಧ್ಯಾನವ ಮಾಡಿ ಪಡೆಯಬಹುದಲ್ಲ ಶಿವನ ಜಾಗರಣೆ ಉಪವಾಸ ಮಾಡಿದರೆ ಸಾಕೇನು ಭಕ್ತಿಯಿಂದ ಅರ್ಚಿಸಿ  ನಮಿಸಬೇಕಲ್ಲ ಶಿವನ ಹಸಿದವನಿಗೆ  ಸಿಗದ ಅನ್ನವಿದ್ದೇನು ಫಲ ಹೃದಯವಂತನಲಿ ಕಾಣಬಹುದಲ್ಲ ಶಿವನ ವ್ರತ ಉಪವಾಸ ಮಾಡಲೇ ಬೇಕೇನು ಮನಶುದ್ದಿಯಿದ್ದರೆ ನೋಡಬಹುದಲ್ಲ ಶಿವನ ಅರ್ಚಿಸಲು ಯಾವ ಹೂವಾದರೇನು ಪಂಕಜಾ ಭಕ್ತಿಯಲಿ ಒಲಿಸಬಹುದಲ್ಲ ಶಿವನ ಪಂಕಜಾ.ಕೆ. ಮುಡಿಪು

ದೇವ ಸೃಷ್ಟಿ

ದೇವ ಸೃಷ್ಟಿ ಓ ದೇವಾ ನೀ ಸೃಷ್ಟಿ ಸಿದ ತಾಣವೂ ಕಣ್ಮನ ತಣಿಯುವ ನೋಟವೂ ನಾನಂದು ನಿನ್ನಕಂಡಾಗಲೊಮ್ಮೆ ಮನಸೆಲ್ಲಾ ಖುಷಿಯಾಯಿತು ಓ ದೇವಾ ಬುವಿಯಲ್ಲಿ ತುಂಬಿರುವ ಸೌಂದರ್ಯವನು ಕಂಡು ಬೆರಗಾದೆ ನಾ ಇಂದಿಗೂ ಓ ದೇವಾ ತರ ತರದ ಹೂಗಳು ಬಗೆಬಗೆಯಹಕ್ಕಿಗಳು ವೈವಿಧ್ಯತೆಯವೈಭವಾಓ ದೇವಾ ಬಾನಲ್ಲಿ  ಹರಡಿರುವ ಬಿಳಿ ಮುಗಿಲಿನಂತೆ ಮನಸಲ್ಲಿ ಖುಷಿ ತುಂಬಿತು ಓದೇವಾ ಬಾನಲ್ಲಿತುಂಬಿರುವ ಬಿಳಿ ಚುಕ್ಕೆಗಳ ಅಂದ ಶಶಿಕಿರಣದಾ ತಂಪು ಮೈಮರೆಸಿತು ಓ ದೇವಾ ಮೈತುಂಬ ಹೂ ಹಣ್ಣುಗಳ  ತುಂಬಿ ತೊನೆದಾಡುತ್ತಿದೆ  ಈ ಪ್ರಕೃತಿ ಓ ದೇವಾ ಎಲ್ಲೆಲ್ಲೂ ತುಂಬಿರುವ ಸೌಂದರ್ಯ  ಸವಿಯುತ್ತಾ ಮನಸೆಲ್ಲಾ ಹಗುರಾಯಿತು ಓ ದೇವಾ ಪಂಕಜಾ.ಕೆ ಮುಡಿಪು