ಹರೆಯದಾಟ ಪವನ್ ಬಡವನಾದರೂ ಗುಣವಂತ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ತನ್ನ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಅವನಲ್ಲಿ ಬಲವಾಗಿ ಬೇರೂರಿತ್ತು.ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರದ ವಸತಿನಿಲಯದಲ್ಲಿ ಸ್ಥಳ ಪಡೆದು ಕಾಲೇಜಿಗೆ ಸೇರಿದ ಆತ ಮೊದ ಮೊದಲು ಚೆನ್ನಾಗಿ ಓದುತ್ತಿದ್ದರೂ ಶ್ರೀಮಂತ ಗೆಳೆಯರ ಸಹವಾಸದಿಂದ ಸಿಗರೇಟ್ ಇತ್ಯಾದಿ ಕೆಟ್ಟ ಅಭ್ಯಾಸಗಳನ್ನು ಪ್ರಾರಂಭಿಸಿ ವಿದ್ಯೆಯನ್ನು ನಿರ್ಲಕ್ಷಿಸ ತೊಡಗಿದ. ಆ ದಿನ ಶಾಲಾವಾರ್ಷಿಕೋತ್ಸವ ದಲ್ಲಿ ಪರಿಚಯವಾದ ನಳಿನಿ ಅವನ ಬಾಳಿನಲ್ಲಿ ದೊಡ್ಡದೊಂದು ಬಿರುಗಾಳಿ ಎಬ್ಬಿಸಬಹುದೆನ್ನುವ ಕಲ್ಪನೆಯೇ ಅವನಿಗೆ ಇರಲಿಲ್ಲ . ಅದು ಯಾವ ಕೆಟ್ಟ ಗಳಿಗೆಯಲ್ಲಿ ಅವಳ ಪರಿಚಯವಾಯಿತೋ, ಪವನ್ ಸಂಪೂರ್ಣ ಬದಲಾದ .ನಳಿನಿಯನ್ನು ಒಲಿಸಿಕೊಳ್ಳಲಿಕ್ಕೆಂದು ದಿನಕ್ಕೊಂದು ತರದ ಬಟ್ಟೆ ತೊಟ್ಟು ಸಿನೆಮಾ ನಟನ ತರ ನಟನೆ ಮಾಡುತ್ತಾ ಕೈಯಲ್ಲಿ ಸಿಗರೇಟ್ ಹಿಡಿದು ತಿರುಗಾಡುತ್ತಿದ್ದ ,ಅವನನ್ನು ನಳಿನಿಯು ತುಂಬಾ ಇಷ್ಟಪಟ್ಟಳು.ಇಬ್ಬರು ಮನಬಂದಂತೆ ಎಲ್ಲೆಲ್ಲೋ ತಿರುಗಾಡುತ್ತ ಇದ್ದು ಶಾಲೆಯ ಪಾಠಗಳನ್ನು ನಿರ್ಲಕ್ಷಿಸುತ್ತಿದ್ದರು. ದಿನದಿಂದ ದಿನಕ್ಕೆ ತಮ್ಮ ಮಗನ ಹಣದ ಬೇಡಿಕೆ ಜಾಸ್ತಿಯಾಗುತ್ತಿರುವುದು ತಿಳಿದು ಬಡ ತಂದೆ ತಾಯಿ ಕಂಗಾಲಾದರು ಆದರೂ ಮಗ ಕ...