ಡ್ಯುಯೆಟ್ ಸಾಂಗ್
ಪ್ರೇಮದ ಪಯಣ
ಗಂಡು .. ನಿನ್ನಂದಕೆ ನಾ ಸೋತೆನು
ನಿನ್ನ ಕಣ್ಣೋಟಕೆ ಮರುಳಾದೆನು
ಹೆಣ್ಣು. ಓಹೋಹೋ ನನ್ನ ಮನಸು ಹುಚ್ಚಾಗಿದೆ
ಮೈಮನಸು ಆಸೆಯ ಕಡಲಾಗಿದೆ
ಗಂಡು..ನಾ ತಾಳಲಾರೆ ಈ ಬೇಗೆಯಾ
ನನ್ನ ಮೈ ಮನಸು ಆಸೆಯಾ ಕಡಲಾಗಿದೆ
ಹೆಣ್ಣು..ಓಹೋ ಹೋ ಆಹಾಹಾ ನನ್ನ ಮನಸು ನಿನ್ನಲೆ ನೆಟ್ಟಿದೆ
ನನಗೂ ನಿನ್ನ ಮೇಲೆ ಒಳವಾಗಿದೆ ನಿನ್ನ ಕಂಡು ಒಲವಾಗಿದೆ
ಗಂಡು. ನಿನ್ನಂದಕೆ ನಾ ಸೋತೆನು
ನಿನ್ನ ಕುಡಿನೋಟಕೆ ನಾ ಮರುಳಾದೆನು
ಹೆಣ್ಣು. ಯಾವೂರ ಗಂಡು ನೀನು
ಕಣ್ಣೋಟದೆ ಕಾಡುವೆಯೇಕೆ
ಗಂಡು ಮನಸಿಂದು ಹುಚ್ಚಾಗಿದೆ
ನನ್ನ ಮೈಯೆಲ್ಲಾ ಬಿಸಿಯಾಗಿದೆ
ಹೆಣ್ಣು ಗಂಡು ಜತೆಯಾಗಿ
ನಾವಿಬ್ಬರು ಒಂದಾಗುವ
ಈ ರಾತ್ರಿ ಚಂದಿರನು ಮರೆಯಾದನು
ನಮ್ಮ ಪ್ರೇಮ ನೋಡಿ ನಾಚಿದನು
ಇಂದು ಒಲವೆಲ್ಲಾ ನಮದಾಗಿದೆ
ಪಂಕಜಾ.ಕೆ..ಮುಡಿಪು
Comments
Post a Comment