ಜನಪದ ಗೀತೆ
ಅಣ್ಣಯ್ಯ ಬರುತಾನ
ತಂಗಿಯ ಕರೆಯಾಕ ಅಣ್ಣಯ್ಯ ಬರುತಾನ
ಹಬ್ಬಕ್ಕೆ ತವರಿಗೆ ಕರೆದೊಯ್ದು/ತಂಗಿಗೆ
ತವರೂರ ಸಿಂಗಾರ ನೀನವ್ವ ಎನುತಾನ
ತವರೂರ ಬಾಗಿಲಲಿ ಕಾಯುತ್ತ ಕುಳಿತಾಳ
ಮಗಳನ್ನು ಸಂಭ್ರಮದಿ ಸ್ವಾಗತಿಸಲು
/ನನ್ನವ್ವ
ಯಾಕಿನ್ನೂ ಬರಲಿಲ್ಲ ಅನುತಾಳ
ಅತ್ತಿಗೆ ಒಬ್ಬಟ್ಟು ಮಾಡ್ಯಾಳ ನಿನಗಾಗಿ
ಬಾ ತಂಗಿ ಬೇಗನೆ ಹೋಗೋಣ /ತವರಲ್ಲಿ
ಜತೆಯಾಗಿ ಹಬ್ಬ ಮಾಡೋಣ
ಹಂಡ್ಯಾಗ ಬಿಸಿನೀರು ಕಾಯಿಸಿ ಇಟ್ಟಾಳ
ಜಳಕ ಮಾಡಿಸಲು ಕಾಯ್ತಾಳ /ನಿನ್ನವ್ವ
ಎಣ್ಣೆಸ್ನಾನಕ್ಕೆ ತಯಾರಿ ಮಾಡ್ಯಾಳ
ಅಂಗಳ ಗುಡಿಸಿ ರಂಗೋಲಿ ಹಾಕ್ಯಾಳ
ಹಬ್ಬಕ್ಕೆ ನಿನಕರೆದು /ನನತಂಗಿ
ಸಮ್ಮಾನ ಮಾಡಲು ಬಯಸ್ಯಾಳ
ಪಂಕಜಾ.ಕೆ ಮುಡಿಪು
Comments
Post a Comment