Skip to main content

ಸುಂದರ ಸಂಸಾರ ಕಥೆ

ಸುಂದರ ಸಂಸಾರ 


 ಚಿಕ್ಕ ಪ್ರಾಯದಲ್ಲಿ ಗಂಡ ಸತ್ತಾಗ ಇಬ್ಬರು ಚಿಕ್ಕಮಕ್ಕಳನ್ನು ಹಿಡಿದುಕೊಂಡು ದಿಕ್ಕೇ ತೋಚದೆ ನಿಂತಿದ್ದ  ಸುಗುಣಮ್ಮನಿಗೆ ಯಾರ ಸಹಾಯವೂ ಸಿಗದಾಗ ಸುತ್ತುಮತ್ತಿನ ಮನೆಯಲ್ಲಿ ಮನೆಕೆಲಸ ಮಾಡುತ್ತಾ ಅವರ ಮಕ್ಕಳಿಗೆ ತನ್ನಿಂದ ಆದಷ್ಟು ಒಳ್ಳೆಯ  ವಿಚಾರಗಳನ್ನು ಕಲಿಸುತ್ತಾ  ಒಬ್ಬಂಟಿಯಾಗಿ ಕಷ್ಟಪಟ್ಟು ಮಕ್ಕಳನ್ನು ಸಾಕಿ ವಿದ್ಯಾಭ್ಯಾಸ ಕೊಟ್ಟು ಉತ್ತಮ ಸಂಸ್ಕಾರಗಳನ್ನು ಕಲಿಸಿ ಸೂಕ್ತ ಸಮಯದಲ್ಲಿ ಮಕ್ಕಳಿಬ್ಬರ ವಿವಾಹವನ್ನು ಉತ್ತಮ ಮನೆತನದ ಹೆಣ್ಣು ಮಕ್ಕಳ ಜತೆ ನೆರವೇರಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

               ಮನೆಗೆ ಬಂದ ಸೊಸೆಯರಿಬ್ಬರೂ ಸ್ವಂತ ಅಕ್ಕ ತಂಗಿಯರಂತೆ ಹೊಂದಿಕೊಂಡಿದ್ದು ಅತ್ತೆ ಸುಗುಣಮ್ಮನನ್ನು ತಮ್ಮ ತಾಯಿಯಂತೆ ಕಾಣುವ  ಒಳ್ಳೆಯ ಗುಣದ ಹೆಣ್ಣು ಮಕ್ಕಳಾಗಿದ್ದುದರಿಂದ  ಸುಗುಣಮ್ಮ ವೃದ್ದಾಪ್ಯದಲ್ಲಿ ಯಾವುದೇ ಚಿಂತೆಯಿಲ್ಲದೆ ಸೊಸೆಯಂದಿರ  ಕೆಲಸದಲ್ಲಿ ಅಷ್ಟೋ ಇಷ್ಟೋ ಸಹಾಯ ಮಾಡುತ್ತಾ ಬಿಡುವಿನ ವೇಳೆಯಲ್ಲಿ ರಾಮಾಯಣ ಮಹಾಭಾರತ ಇತ್ಯಾದಿ ಸದ್ಗ್ರಂಥಗಳನ್ನು ಓದುತ್ತಾ  ಮೊಮ್ಮಕ್ಕಳಿಗೆ  ಕಥೆಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದ್ದರು.

               ಅಜ್ಜಿಯೆಂದರೆ ಎಲ್ಲಾ ಮಕ್ಕಳಿಗೂ ತುಂಬಾ ಇಷ್ಟ ಶಾಲೆಯಿಂದ ಬಂದ ತಕ್ಷಣ ಅಜ್ಜಿಯ ಸುತ್ತಲೂ ಕುಳಿತು  ಕಥೆಗಾಗಿ ಪೀಡಿಸುತ್ತಿದ್ದರು.ಇತ್ತಿಚೆಗೆ ಕೊರೊನಾದ  ಕಾರಣದಿಂದ   ಶಾಲೆ ಬಂದ್ ಆದಾಗ ಮಕ್ಕಳು ಮನೆಯಲ್ಲೇ ಇರಬೇಕಾದ ಸಂಧರ್ಭದಲ್ಲಿ ಮಕ್ಕಳಿಗೆ ಮನೆಯಲ್ಲೇ ಪಾಠಗಳನ್ನು ಸಣ್ಣ  ಸಣ್ಣ  ಕಥೆಗಳ ಮುಖಾಂತರ ಹೇಳುತ್ರಾ ಮಕ್ಕಳನ್ನು ಶಾಲಾ ಪಠ್ಯಪುಸ್ತಕದಿಂದ  ವಂಚಿತರಾಗದಂತೆ ನೋಡಿಕೊಳ್ಳುತ್ತಿದ್ದರು.

                ಆ ದಿನ ಮಕ್ಕಳಿಗೆ ತುಂಬಾ ಉದಾಸೀನವಾಗುತ್ತಿತ್ತು  ಹೊರಗೆ ಹೋಗಬೇಕು ಎಂದು ಹಠ ಮಾಡಿ ತಾಯಿಯ ಕೈಯಲ್ಲಿ ಪೆಟ್ಟು ತಿಂದ ಮಕ್ಕಳು ಅಜ್ಜಿಯನ್ನು ಪೀಡಿಸತೊಡಗಿದರು. ಕೊರೊನಾ ಲಾಕ್ಡೌನ್ ಇದ್ದುದರಿಂದ ಹೊರಗೆ ಹೋಗುವುದು ಆಸಾಧ್ಯವೆಂದು ಎಷ್ಟು ಹೇಳಿದರೂ ಮಕ್ಕಳು ಕೇಳದೆ ಇದ್ದುದರಿಂದ  ಆಕೆ ಮಕ್ಕಳನ್ನು ಸಮಾಧಾನ ಪಡಿಸಲು ಪಂಚತಂತ್ರದ ಕಥೆಯ ಪುಸ್ತಕವನ್ನು ಮಡಿಲಲ್ಲಿ ಇಟ್ಟುಕೊಂಡು ಕಥೆ ಹೇಳಲು ಪ್ರಾರಂಭಿಸಿದರು.ಅಜ್ಜಿಯ ಕಥೆಯನ್ನು ಕೇಳುತ್ತಾ ಮಕ್ಕಳೆಲ್ಲಾ ಸಂತೋಷದಿಂದ ತಮ್ಮ ಬೇಡಿಕೆಯನ್ನು ಮರೆತು ಅಜ್ಜಿಯ ಸುತ್ತ ಕುಳಿತು ಕುತೂಹಲದಿಂದ ಕಥೆಯನ್ನು ಕೇಳಿಸಿ ಕೊಳ್ಳುತ್ತಿದ್ದರು. ಶಾಲೆಗಳು ಬಂದ್ ಆದರೂ ಸುಗುಣಳಂತ ವಿದ್ಯಾವತಿ ಅಜ್ಜಿ ಮನೆಯಲ್ಲಿ ಇದ್ದುದರಿಂದ ಮಕ್ಕಳು ಶಾಲೆಯ ಪಾಠದ ಜತೆ ವೀರರ ಧೀರರ ಕಥೆಗಳನ್ನು  ಕೇಳುತ್ತ ಉತ್ತಮ ಸಂಸ್ಕಾರವಂತರಾಗಿ ಬೆಳೆಯುತ್ತಿದ್ದರು.  ಮನೆಯಲ್ಲಿ ಹಿರಿಯರು ಇದ್ದರೆ ಮಕ್ಕಳ ಮುಂದಿನ ಜೀವನ ಉತ್ತಮವಾಗಿ ಅವರು ಸಂಸ್ಕಾರವಂತರಾಗಿ ಬೆಳೆಯುತ್ತಾರೆ ಎನ್ನುವ ಸತ್ಯವನ್ನು ಸುಗುಣಮ್ಮ  ತನ್ನ ನಡೆ ನುಡಿಯ ಮುಖಾಂತರ ತೋರಿಸಿ  ಒಗ್ಗಟ್ಟಿನ ಸಹಬಾಳ್ವೆಯ ಮಹತ್ವವನ್ನು ಮಕ್ಕಳಿಗೆ ಕಲಿಸುತ್ತಾ ಸುಂದರ ಸಂಸಾರದ ಪರಿಕಲ್ಪನೆಯನ್ನು ನೆರೆಕರೆಯ   ಜನರಿಗೆ   ತೋರಿಸಿ ಮೇಲ್ಪಂಕ್ತಿಯಾಗಿ ಮಾದರಿಯಾದರು

                ಪಂಕಜಾ.ಕೆ. ಮುಡಿಪುU

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020