Skip to main content

Posts

Showing posts from September, 2024

ಶ್ರೀ ಕೃಷ್ಣ ಭಕ್ತಿಗೀತೆ

ಶ್ರೀ ಕೃಷ್ಣ  ಭಕ್ತಿಗೀತೆ ಶ್ರಾವಣ ಮಾಸದ  ಅಷ್ಟಮಿ ದಿನದಲಿ ದೇವಕಿ ಉದರದಲಿ ಜನಿಸುತಲಿ ಮಾವನ   ಕೈಗೆ ಸಿಗದೆಯೇ ತಾನು ಮಾಯೆಯ  ತೋರುತ  ಬೆಳೆಯುತಲಿ ಗೋಕುಲದಲ್ಲಿ ನಂದನ ಮನೆಯಲಿ ಯಶೋದೆ ಮಡಿಲಲಿ  ನಲಿದ ಬಾಲಲೀಲೆಯ ತೋರುತ ಬೆಳೆದ  ನಂದನ ಕಂದ ಮುಕುಂದ ಬೆಳೆಯುತ ಗೋವುಗಳ ಕಾಯುತಲಿರುತ ಕಳೆದನು ಪುರದೆಲ್ಲರ ಭಯವನ್ನು ರಕ್ಕಸರೆಲ್ಲರ   ಸದೆಬಡಿಯುತಲಿ ಗೆದ್ದನು ರಾಧೆಯ  ಮನವನ್ನು ಬೆಣ್ಣೆಯ ಮೆದ್ದು   ಮಣ್ಣನು ತಿಂದು  ಬಾಯಲಿ  ಜಗವನು ತೋರಿದನು  ಕೊಳಲನು ಊದಿ ಗೋಪಿಯರೆಲ್ಲರ  ಮನವನು ಸೆಳೆಯುತ  ನಲಿದಿಹನು   ಅಷ್ಟಮಿ ದಿನದಲಿ  ಭಕ್ತಿಯಲಿ  ಪೂಜಿಸಿ ವರಗಳ ಬೇಡಲು ಹರಸುವನು ಕಷ್ಟವ ಕಳೆಯುತ ಇಷ್ಟವ ಕೊಡುತಲಿ ಭಕ್ತರ  ನೋವನು ಕಳೆಯುವನು  ತುಳಸಿಯ ಅರ್ಪಿಸಿ ಕರಗಳ ಮುಗಿದು  ಭಜನೆಯ ಮಾಡುತ ಒಲಿಸುವರು  ಬಗೆ ಬಗೆ ಹೂಗಳ ಅರ್ಪಿಸಿ ಬೇಡಲು  ಹರುಷದಿ ಕೊಡುವನು  ವರಗಳನು    ಪಂಕಜಾ ಕೆ ಮುಡಿಪು