Skip to main content

ಶ್ರೀ ಕೃಷ್ಣ ಭಕ್ತಿಗೀತೆ

ಶ್ರೀ ಕೃಷ್ಣ  ಭಕ್ತಿಗೀತೆ


ಶ್ರಾವಣ ಮಾಸದ  ಅಷ್ಟಮಿ ದಿನದಲಿ

ದೇವಕಿ ಉದರದಲಿ ಜನಿಸುತಲಿ

ಮಾವನ   ಕೈಗೆ ಸಿಗದೆಯೇ ತಾನು

ಮಾಯೆಯ  ತೋರುತ  ಬೆಳೆಯುತಲಿ


ಗೋಕುಲದಲ್ಲಿ ನಂದನ ಮನೆಯಲಿ

ಯಶೋದೆ ಮಡಿಲಲಿ  ನಲಿದ

ಬಾಲಲೀಲೆಯ ತೋರುತ ಬೆಳೆದ 

ನಂದನ ಕಂದ ಮುಕುಂದ


ಬೆಳೆಯುತ ಗೋವುಗಳ ಕಾಯುತಲಿರುತ

ಕಳೆದನು ಪುರದೆಲ್ಲರ ಭಯವನ್ನು

ರಕ್ಕಸರೆಲ್ಲರ   ಸದೆಬಡಿಯುತಲಿ

ಗೆದ್ದನು ರಾಧೆಯ  ಮನವನ್ನು



ಬೆಣ್ಣೆಯ ಮೆದ್ದು   ಮಣ್ಣನು ತಿಂದು

 ಬಾಯಲಿ  ಜಗವನು ತೋರಿದನು

 ಕೊಳಲನು ಊದಿ ಗೋಪಿಯರೆಲ್ಲರ

 ಮನವನು ಸೆಳೆಯುತ  ನಲಿದಿಹನು

 

ಅಷ್ಟಮಿ ದಿನದಲಿ  ಭಕ್ತಿಯಲಿ  ಪೂಜಿಸಿ

ವರಗಳ ಬೇಡಲು ಹರಸುವನು

ಕಷ್ಟವ ಕಳೆಯುತ ಇಷ್ಟವ ಕೊಡುತಲಿ

ಭಕ್ತರ  ನೋವನು ಕಳೆಯುವನು


 ತುಳಸಿಯ ಅರ್ಪಿಸಿ ಕರಗಳ ಮುಗಿದು

 ಭಜನೆಯ ಮಾಡುತ ಒಲಿಸುವರು

 ಬಗೆ ಬಗೆ ಹೂಗಳ ಅರ್ಪಿಸಿ ಬೇಡಲು 

ಹರುಷದಿ ಕೊಡುವನು  ವರಗಳನು

 

 ಪಂಕಜಾ ಕೆ ಮುಡಿಪು

 

 

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...