ಅಮ್ಮ ನಿನ್ನ ಕಂಡ ಕಣ್ಣು
ಇಂದು ಧನ್ಯವಾಯಿತು
ಶಿರವು ನಿನ್ನ ಚರಣ ಕಮಲಕೆ
ಎರಗಿ ಪಾವನವಾಯಿತು
ನಿನ್ನ ದರುಶನ ದಿಂದ ಇಂದು
ಮನವು ತುಂಬಿ ಬಂದಿತು
ನಿನ್ನ ಧ್ಯಾನದಲ್ಲಿ ಮನವು
ಕರಗಿ ಹೋಯಿತು
ತಾಯೆ ನಿನ್ನ ಕರುಣೆಯಿಂದ
ಬಾಳು ಬೆಳಗಿತು
ನಿತ್ಯ ಇರಲು ನಿನ್ನ ಕರುಣೆ
ಭಯವು ಎಲ್ಲಿದೆ
ತುಂಬಿ ಹರಿವ ತೊರೆಯ
ತೆರದಿ ಮನಸು ಕುಣಿದಿದೆ
ನಿನ್ನ ನೆನೆವ ಮನವು
ಇಂದು ಶಾಂತಿ ಗೊಂಡಿದೆ
ನಿತ್ಯ ನಿನ್ನ ಹಾಡ ಹಾಡಿ
ದಣಿಯದಾಗಿದೆ
ಮನವು ಕುಣಿದು ಹರುಷ
ತುಂಬಿದ ಕಡಲು ಆಗಿದೆ
ತಾಯ ಕಂಡ ಕರುವಿನಂತೆ
ತನುವು ಕುಣಿದಿದೆ
ನಿನ್ನ ರೂಪ ವರ್ಣಿಸಲು
ಪದಗಳೊಂದೂ ಇಲ್ಲದಾಗಿದೆ
ತಾಯೆ ನಿನ್ನ ಕರುಣೆ ಜಲವು
ಇರಲಿ ಎಂದಿಗೂ
ಆಯುರಾರೋಗ್ಯ ಭಾಗ್ಯಗಳ
ಕರುಣಿಸೆಂದಿಗೂ
ನಿತ್ಯ ಇರಲಿ ನಮಗೆ ಯವ್ವನ
ಆಯುರಾರೋಗ್ಯ ಜೀವನ
ಬಾಳು ಆಗಲಿ ಹೂಬನ
ಕೊಡು ತಾಯೆ ವರವ ಈ ದಿನ
ಪಂಕಜಾ. ಕೆ. ಮುಡಿಪು.ಕುರ್ನಾಡು
Comments
Post a Comment