ವರವ ಕೊಡುವ ತಾಯಿಯೇ
ವರಮಹಾಲಕ್ಷ್ಮಿ ದೇವಿಯೇ
ಬೇಡಿಕೊಳ್ಳುವೆ ನಾನು ನಿನ್ನ
ಚರಣ ಕಮಲಕೆ ಎರಗುತ
ಬಂದು ಹರಸು ಇಂದು ನೀನು
ನಮ್ಮನ್ನೆಲ್ಲ ಚಂದದಿ
ನಿತ್ಯ ನಮ್ಮ ಮನೆಯಲಿದ್ದು
ಸೇವೆ ಗೈಯುವ ಭಾಗ್ಯವ
ನಮಗೆ ಕರುಣಿಸಿ ಕಾಯು
ಎಂದು ಕೈಯ ಮುಗಿದು
ಬೇಡುವೆನು
ತುಂಬಿ ಹರಿಯಲಿ
ನಮ್ಮ ಮನೆಯಲಿ
ಸುಖ ಶಾಂತಿ ಸಮೃದ್ಧಿ
ಕರುಣಿಸೆಮಗೆ ನಿತ್ಯ
ನೀನು ಆಯುರಾರೋಗ್ಯ
ನೆಮ್ಮದಿ
ಭಕ್ತಿಯಿಂದಲಿ ಕೈಯ
ಮುಗಿಯುತ್ತಾ ಶಿರವ
ಬಾಗಿ ನಮಿಸುವೆ
ಅಮ್ಮ ನಮ್ಮನು ನಿತ್ಯ
ನೀನು ಕರುಣೆಯಿಂದಲಿ
ಕಾಯುತ ಚಿಂತೆ ಇಲ್ಲದೆ
ನಗುತ ಬಾಳುವ ಭಾಗ್ಯವನ್ನು
ಕರುಣಿಸು
ಪಂಕಜರಾಮ್
Comments
Post a Comment