29 07 2018 ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ
ಸುರಿಯುತ್ತಿದೆ ವರ್ಷಧಾರೆ
ಮನದಿ ತುಂಬಿದೆ ಹರ್ಷದಾರೆ
ತರುಲತೆಗಳು ಬೀಸುಗಾಳಿಗೆ ತೊನೆದು
ನಲಿಯುತ್ತಿದೆ ಹರ್ಷದಿಂದ ಕಳೆಯ ತೊಳೆದು
ಎಲ್ಲೆಲ್ಲೂ ತೋರುತ್ತಿದೆ ಹಸಿರ ಸಿರಿ
ಭೂತಾಯಿ ಒಡಲಲ್ಲಿ ಸಂತಸದ ಗರಿ
ಗಿಡದಲ್ಲಿ ತುಂಬಿರುವ ಹೂವುಗಳು
ಹಾರಾಡುತಿರುವ ದುಂಬಿಗಳು
ಕುಣಿಯುತ್ತಿದೆ ವರ್ಷಧಾರೆಯಲಿ ನವಿಲು
ಎಲ್ಲೆಲ್ಲೂ ತುಂಬುತ್ತಿದೆಸಂತಸದ ಅಮಲು
ಬಾನು ಬುವಿ ಒಂದಾಗುವ ಮಳೆ
ಜೀವ ಸಂಕುಲಕೆ ತುಂಬಿಸುತಿದೆ ಕಳೆ
ತುಂಬಿ ಹರಿಯುತಿದೆ ತೊರೆ
ಎಲ್ಲೆಲ್ಲೂ ಹರಿಯುತಿದೆ ನೀರ ಧಾರೆ
ಸುರಿಯಲಿ ವರ್ಷಧಾರೆ
ತುಂಬಿ ತುಳುಕಲಿ ಹರ್ಷದಾರೆ
ಪಂಕಜಾ. ಕೆ. ಮುಡಿಪು .ಕುರ್ನಾಡು
Comments
Post a Comment