Skip to main content

ಪರಿಸರ ಕಾಳಜಿ

17 06 2018  ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರಕಟಿತ

ಪರಿಸರ ದಿನಾಚರಣೆ
ಬಂತೆಂದರೆ ಸಾಕು
ಎಲ್ಲರ ಬಾಯಲಿ ಬರುವುದು
ಪರಿಸರ ಕಾಳಜಿ ಮಂತ್ರ

ಎಲ್ಲೆಡೆ ಗಿಡಗಳ  ನೆಡುವ
ಕಾರ್ಯಕ್ರಮವನು ನಡೆಸುವರು
ನೆಡುವರುಕೆಲವರು ಪ್ರಸಿದ್ದಿಗಾಗಿ
ತೋರಿಕೆಗಾಗಿ ಕೆಲವರ ಕಾಳಜಿ

ದಿನಕಳೆದಂತೆ ಮರೆಯುವರಲ್ಲ
ಪರಿಸರ ಕಾಳಜಿಯ
ಹಸಿರಿನ ಕಾಡನು ಕಡಿದು
ಕಾಂಕ್ರೀಟ್ ಕಾಡನುಕಟ್ಟುವರಲ್ಲ

ಕಾಂಕ್ರೀಟ್ ಕಾಡು ಎಲ್ಲೆಡೆ ತುಂಬಿ
ಉಸಿರಿಗೆ ಗಾಳಿಯು ಎಲ್ಲಿಯೂ ಇಲ್ಲದೆ
ಮನುಕುಲ ನಾಶವೇಆದೀತು 

ಪರಿಸರ ಕಾಳಜಿ ಬೆಳೆಸದೆ
ಕೇವಲದಿನವನುಆಚರಿಸಿದರೇನು ಫಲ
ಪರಿಸರ ಕಾಳಜಿ ಬೆಳೆಸಿದಿರಾದರೆ
ಹಸಿರಿನಕಾಡದುಬೆಳೆಯುವುದು

ಹಸಿರಿನಕಾನನದಿಂದಉಳಿಯುವುದು
ನಮ್ಮಯ ಉಸಿರು ಪರಿಸರ
ಸ್ನೇಹಿ ಜೀವನ ಕ್ರಮವನು ಅಳವಡಿಸಿ
ಸುಂದರ ಪರಿಸರ  ಕಟ್ಟೋಣ

ಪ್ಲಾಸ್ಟಿಕ್ ಮುಕ್ತ  ಪರಿಸರವನ್ನು ಕಟ್ಟುತ
ಹಸಿರು ಕ್ರಾಂತಿಯ ಮಾಡುತ
ಎಲ್ಲೆಡೆ ಹಸಿರನು ಬೆಳೆಸುತ
ಸುಂದರ  ಜೀವನ ನಡೆಸೋಣ

ನೆಲ ಜಲ ಉಳಿಸಿ  ನೀರಿಂಗಿಸಿ
ಹಸಿರೇ ಉಸಿರು ಎನ್ನುವುದ ತಿಳಿದು
ಗಿಡ ಮರಗಳನು ಬೆಳೆಸುತ
ಪ್ರಕೃತಿ ಜತೆ ನಲಿಯೋಣ

ಪಂಕಜಾ.ಕೆ. ಮುಡಿಪು ಕುರ್ನಾಡು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...