ಮುಸ್ಸಂಜೆಯ ಈ
ಇಳಿ ಹೊತ್ತಿನಲ್ಲಿ
ಸೂರ್ಯನು ಮುಳುಗಿದ
ಪಡುವಣದಿ
ಕಾಮನ ಬಿಲ್ಲಿನ
ಬಣ್ಣಗಳಿಂದ
ಓಕುಳಿಯಾಡಿದ ತೆರದಿ
ಬಾನಲಿ ಮೂಡಿತು
ಚೆಲುವಿನ ಚಿತ್ತಾರ
ಹಕ್ಕಿಗಳೆಲ್ಲ ಹಾರಡುತ್ತ
ಮನೆ ಕಡೆ ಸಾಗಿದವು
ಚಂದಿರ ಮರೆಯಲಿ
ಇಣುಕುತ ಬಂದ
ಸುತ್ತಲೂ ತುಂಬಿದ
ತಾರೆಗಳಂದ
ರಾತ್ರಿಯ ಹೂಗಳು ಅರಳಿ
ಪರಿಮಳ ಹರಡಿತು ಭರದಿ
ಕಂಪನು ಸೂಸುವ ಮಲ್ಲಿಗೆ ಜಾಜಿ
ಸಂಜೆ ಮಲ್ಲಿಗೆ ಸೊಬಗು
ಮಂದ ಮಾರುತ ಬೀಸುತ
ಕಂಪನು ಎಲ್ಲೆಡೆ ಪಸರಿಸಿತು
ತಂಪಿನ ಗಾಳಿಯು
ಕಂಪನು ತರಲು
ತುಂಬಿತು ಮನದಲಿ ಆನಂದ
ಪಂಕಜಾ.ಕೆ. ಮುಡಿಪು ಕುರ್ನಾಡು
Comments
Post a Comment