ಸೆಖೆಗಾಲ
ಸೆಖೆ ಸೆಖೆ ಸೆಖೆ ಸೆಖೆ
ತಾಳೆನು ಈ ಸೆಖೆಯ
ವರುಣನು ಬಾರೆಯ ಇಳೆಗೆ
ತಂಪನು ತಾರೆಯ ಧರೆಗೆ
ಮಳೆ ಬರುವ ಸೂಚನೆ ತೋರಿ
ಓಡುವ ಮೋಡ ವ ನೋಡಿ
ತಂಪಿನ ಗಾಳಿಯು ಕೂಡಾ
ತನ್ನಯ ಪಯಣ ವ ನಿಲ್ಲಿಸಿತು
ಬಾಂದಳವೆಲ್ಲಾ ಮುಗಿಲೇ ಇದ್ದರೂ
ಹನಿ ಮಳೆಯ ಸುಳಿವಿಲ್ಲ
ಕಾದೂ ಕಾದು ಸಾಕಾಯ್ತಲ್ಲಾ
ಈ ಸೆಖೆಯ ತಾಳೆನಲ್ಲ
ಆಶೆಯ ತೋರಿಸಿ
ಮುಗಿಲನು ಕಟ್ಟಿ
ಓಡುವೆ ಎಲ್ಲಿಗೆ ನೀನು
ಮಳೆಯನು ಸುರಿಸದೆ ಮುಂದೆ
ಕಾಯುತಲಿರುವೆವು ನಾವೆಲ್ಲ
ನಿನ್ನಯ ಆಗಮನಕಾಗಿ
ಸಹಿಸಲಾರೆವು ಈ ಉರಿ ಸೆಖೆಯ
ಮಳೆಯನುಸುರಿಸಿತಂಪನುತಾ ವರುಣ
ಪಂಕಜಾ.ಕೆ. ಮುಡಿಪು ಕುರ್ನಾಡು
Comments
Post a Comment