ಭೂ ಸ್ವರ್ಗ
ಕಾರ್ಮೋಡಗಳು ನಭವನು ತುಂಬಿ
ಬುವಿಯದು ಮುಳುಗಿತು ಕತ್ತಲಲಿ
ಕೋಲ್ಮಿಂಚುಗಳು ಕೋರೈಸಿ
ಗುಡುಗಿನ ಅಬ್ಬರ ಮೇಳೈಸಿ
ಸುರಿಯಿತು ಮಳೆ ಬಿರುಸಿನಲಿ
ತುಂಬಿತು ಕೆರೆ ಕಟ್ಟೆಗಳು
ಹರಿಯಿತು ಉಕ್ಕಿ ಕಡಲು
ಎಲ್ಲೆಡೆ ತುಂಬಿತು ನೀರು
ಗಿಡಮರಗಳು ನೀರನು ಕುಡಿದು
ಸಂತಸದಿಂದ ಬೀಗುತಿವೆ
ನೀರಲಿ ಮಿಂದ ಪ್ರಕೃತಿ
ಹೊಸಮದುಮಗಳಂದದಿ
ನಾಚಿ ತಲೆಯನು ಬಾಗುತಿದೆ
ಹಸಿರಿನ ಸೀರೆ ಯ ಹೊದ್ದು
ಪ್ರಕೃತಿಯು ಕುಣಿಯುತಿದೆ
ದಟ್ಟೈಸಿ ಬರುವ ಮೊಡಗಳಾಟ
ಬಿಸಿಲು ಮಳೆಯಲಿ ವರುಣನ ಆಟ
ಮನಕೆ ಮುದವನು ತುಂಬುತಿದೆ
ಗಿಡಮರಗಳಲಿ ಹೂಗಳು ಅರಳಿ
ದುಂಬಿಗಳನ್ನು ಕರೆಯುತಿದೆ
ಬಾನಂಚಿನಲಿ ಮಳೆಬಿಲ್ಲಿನ ನೃತ್ಯ
ಬುವಿಯಲಿಕುಣಿಯುವ ನವಿಲಿನ ನಾಟ್ಯ
ಬಿರಿದರಳಿದ ಹೂಗಳ ಗಂಧ
ಮೈ ಮನಕೆ ಮುದವನು ತುಂಬಿ
ಮೈಯನು ಮರೆಸುತಿದೆ
ಸ್ವರ್ಗದ ಬಾಗಿಲು ತೆರೆದಂತೆ
ಭೂತಾಯಿಯ ಮಡಿಲಿನ ಸ್ಪರ್ಶ
ಸ್ವರ್ಗವೇ ಧರೆಗಿಳಿದಂತ
ಚೆಲುವಿನ ನೋಟವು
ಕಣ್ಮನ ತುಂಬುತಿದೆ
ಪಂಕಜಾ .ಕೆ. ಮುಡಿಪು
Comments
Post a Comment