ಕುಣಿಯೋಣ ಬಾರ
ಬೆಳದಿಂಗಳ ಈ ದಿನಗಳಲಿ
ಅಂಗಳ ತುಂಬಾ ತುಂಬಿದೆ
ಚಂದ್ರನ ಶೀತಲ ಕಿರಣಗಳು
ಹಾಲಿನ ಹೊಳೆಯೇ ಹರಿದಂತೆ
ತಾವರೆ ಕೊಳದಲಿ ಹೂವಿನ
ಜತೆಗೆ ಸ್ಪರ್ಧೆಗೆ ಇಳಿದಿದೆ ಶಶಿ ಬಿಂಬ
ಅಂಗಳ ತುಂಬಾ ಅರಳಿದ
ಹೂಗಳು ಕಂಪನು ಸೂಸುತಿವೆ
ರಾತ್ರಿರಾಣಿ ಮಲ್ಲಿಗೆ ಹೂಗಳ ಕಂಪನು
ತರುತಿದೆ ಬೀಸುವ ತಂಗಾಳಿ
ಕೊಳದಲಿ ಅರಳಿದ ನೈದಿಲೆ
ಶಶಿಯನು ಕಂಡು ಕುಣಿಯುತಿದೆ
ಹಾಲಿನ ಮಳೆಯಲಿ
ಮಿಂದ ಹಸಿರಿನ ಕಾನನವು
ಜೀರುಂಡೆಯ ಝೇಂಕಾರಕೆ
ನಲಿಯುತ ತಾಳವಹಾಕುವುದು
ಬಾಬಾರೊ ನಾವುಕುಣಿಯೋಣ
ಪ್ರಕೃತಿಯಮಡಿಲಲಿ ನಲಿಯೋಣ
ಮನದಲಿ ತುಂಬಾ ಮುದವನು ತುಂಬುತ
ಹಾಡುತ ಮೈಮರೆಯೋಣ
ಬಾರೋ ಬಾರ ಕುಣಿಯೋಣ
ಪಂಕಜಾ ಕೆ.ಮುಡಿಪು. ಕುರ್ನಾಡು
Comments
Post a Comment