ಅಪ್ಪನೆಂಬುವ ವಿಶಾಲ
ಆಲದ ಮರದಡಿ
ಭಯವಿಲ್ಲದೆ ಬಾಳು ಸಾಗಿ
ಕಷ್ಟ ದುಃಖಗಳ ಮೆಟ್ಟಿ
ತಲೆಯೆತ್ತಿ ಬಾಳಲು
ಕಲಿಸಿದೆ ನೀ ನಮಗೆ ಅಪ್ಪಾ
ಕಷ್ಟದಲಿ ಧೈರ್ಯ ತುಂಬಿ
ಸುಖದಲ್ಲಿ ಹಾರೈಸಿ
ಬದುಕ ಕಲಿಸಿದ
ಧೀರ ನನ್ನ ಅಪ್ಪ
ಅಪ್ಪನೆಂಬುವ ಎರಡಕ್ಷರ
ಕರೆಯಲೆಷ್ಟು ಮಧುರ
ನೀವು ಕಲಿಸಿದ ಆ ಪಾಠ
ಮರೆಯಲೇಗೆ ಹೇಳು ನೀಅಪ್ಪ
ಪ್ರತಿಯೊಂದು ಕೆಲಸಕ್ಕೂ
ಮೆಚ್ಚುಗೆಯ ನುಡಿಯಾಡಿ
ಪ್ರೋತ್ಸಾಹಿಸಿ ಮುಂದೆ ತಂದೆ
ನೀ ಎನ್ನ ಅಪ್ಪ
ನೀನಿದ್ದರೆ ಮನೆ ತುಂಬಿದಂತೆ
ಮಕ್ಕಳ ಶ್ರೇಯಸ್ಸಿಗೆ
ನೀ ಮೌನವಾಗಿ ದುಡಿದೆ
ಎಲೆಮರೆಯ ಕಾಯಿಯಂತೆ
ನಿನ್ನ ನೋವು ಬೇಸರವ
ತೋರಿಸದೆಯೇ ನಗು ನಗುತ
ಸಂಸಾರ ನೌಕೆಯನು ದಡ
ಸೇರಿಸಿದೆ ನೀ ಎನ್ನ ಅಪ್ಪ
ನಂದಗೋಕುಲದಂತಿದ್ದ ಮನೆ
ನೀ ನಿಲ್ಲದೆ ಈಗಸುರಿಯುತ್ತಿದೆಹಾಳು
ನಿಮ್ಮ ನೆನಪೇ ಈಗ
ಆ ಮನೆಯ ಶಕ್ತಿ
ಅಪ್ಪ ನಿಮ್ಮ ನೆನಪಿಗೆ
ಒಂದು ದಿನ ವೇಕೆ
ನಿತ್ಯವೂ ನಿಮ್ಮ ನೆನಪೇ
ಈ ಬಾಳ ಬುತ್ತಿ
ಪಂಕಜಾ. ಕೆ. ಮುಡಿಪು ಕುರ್ನಾಡು
Comments
Post a Comment