ಮೌನ ರಾಗ
ಹೆಪ್ಪುಗಟ್ಟಿದ ಮೌನ
ಪರದೆಯೊಳಿರಲು
ಹೃದಯ ಹಾಡಿದೆ
ಮೂಕರಾಗ
ಮನವು ನರಳಿದೆ
ಮೌನರಾಗದಲಿ
ಬೆನ್ನು ತಿರುಗಿಸಿ ನಿಂತೆಯೇಕೆ
ನನ್ನ ಒಲವ ತಿಳಿಯದೆ
ಪ್ರೀತಿ ಮಾಲೆಯ ಹಿಡಿದು
ಕಾಯುತಿರುವುದು ಕಾಣದೇ
ಮುಖವ ತಿರುಗಿಸಿ ಒಮ್ಮೆ ನೋಡು
ನೋವು ತುಂಬಿದೆ ಎದೆಯಲಿ
ಜೀವ ಬಯಸಿದೆ ಸಾಂತ್ವನ
ನಿನ್ನ ಒಲವಿನ ಆಮಂತ್ರಣ
ಆಕಾಶವೇ ಧರೆಗಿಳಿದರೂ
ನಿನ್ನ ಕೈಯನು ಬಿಡೆನು ಎಂದು
ಮಾತು ಕೊಟ್ಟಿರುವಿಯಲ್ಲವೇ
ಹೀಗೆ ಮುನಿದುಕೆಣಕುವಿಯೇಕೆ
ಮೌನರಾಗದಿ ಕೊಲುವೆಯೇಕೆ
ಸಹಿಸಲಾರೆನು ಮೌನವ
ಕೋಪ ಬಿಟ್ಟು ಬಾರೆ ನಲ್ಲೇ
ಸವಿವ ನಾವು ಪ್ರೀತಿ ಹನಿಯ ಇಲ್ಲೇ
ಪಂಕಜಾ.ಕೆ. ಮುಡಿಪು ಕುರ್ನಾಡು
Comments
Post a Comment