ಮಾತೆಗೊಂದು ನುಡಿ ನಮನ(ನನ್ನ ಅಳಿಯನ ಅಜ್ಜಿ ಯವರಿಗೆ ನಮನ)
ಮಾತೇ ನಿಮ್ಮ ನನ್ನ ಪರಿಚಯ
ಆದ ಆ ಸುದಿನದ ನೆನಪು
ಇಂದಿಗೂ ಮನದಲಿಹಸಿರಾಗಿದೆ
ಮರೆಯಲೆಂತುನಿಮ್ಮಮಮತೆಯನು
ನಮ್ಮ ಮುದ್ದಿನ ಮಗಳನು
ನಿಮ್ಮ ಉಡಿಯಲ್ಲಿಟ್ಟಸುದಿನವು
ನೀವು ಕೊಟ್ಟ ಆ ಭರವಸೆ
ಉಳಿಸಿದಿರದನು ಕೊನೆವರೆಗೆ
ಹೆತ್ತಮ್ಮನ ಮಮತೆಯನು ಕೊಟ್ಟು
ಮನಕೆ ಮುದ ತಂದಿರಿ
ಜಗದ ಜಂಜಾಟವತೊರೆದು
ಮುಕ್ತಿ ಪಥದಲ್ಲಿ ನಡೆದು
ಅನಾಥರಾಗಿಸಿದಿರಿ ಇಂದು ನಮ್ಮನು
ಮನೆ ಮಂದಿಯರ ಬಗ್ಗೆ
ನಿತ್ಯ ಕಾಳಜಿ ತೋರಿ
ನಮ್ಮೆಲ್ಲರ ಮನೆ ಮನದಲಿ
ನಿತ್ಯವೂ ಹಸಿರಾಗಿ ನಿಂತಿರಿ
ಕಾಯ ಅಳಿದರೂ ನಿಮ್ಮ
ಆ ಸುಂದರ ನಗುಮುಖ
ಅತಿಥಿ ಸತ್ಕಾರದ ಆ ಮನವ
ಮರೆಯಲಾರೆವಮ್ಮ
ನೀವಿಲ್ಲವೆಂಬ ಭಾವ
ಇನಿತೂ ಬರದಂತೆ
ತುಂಬಿ ನಿಂತಿರಿ ನಮ್ಮ ಮನದಲಿ
ನಿಮ್ಮ ನೆನಪಿನ ಬುತ್ತಿಯಿಟ್ಟು
ನೀವಿಂದು ಅಮರರಾದಿರಿ
ಇರಲಿ ನಿಮ್ಮ ಅಶೀರ್ವಾದ
ಅನವರತವೂ ನಮ್ಮ ಮೇಲೆ
ಆಗಸದ ತಾರೆಯಂದದಿಬಾಳಿ
ಬದುಕಿ ಜೀವ ಸಾರ್ಥಕ್ಯವಪಡೆದ
ನಿಮಗಿದೋನಮ್ಮಭಾವಪೂರ್ಣಶ್ರದ್ಧಾಂಜಲಿ
ಪಂಕಜಾ ಕೆ. ಮುಡಿಪು ಕುರ್ನಾಡು
Comments
Post a Comment