ಬಳೆಯ ನಾದ
ಬಳೆಗಾರ ಬಂದಿಹನು
ಬಳೆಗಳನು ಮಾರುತ್ರ
ಮನೆಯ ಬಾಗಿಲಿಗೆ
ಬಣ್ಣ ಬಣ್ಣದ ಬಳೆಯು
ಹೊಳೆ ಹೊಳೆಯುವ ಬಳೆಯು
ಕಣ್ಣ ಸೆಳೆಯುವುದು
ಕೈತುಂಬಾ ತೊಟ್ಟದನು
ಸಂಭ್ರಮದಿ ಕುಣಿಯುತ್ತ
ಓಡುತ್ತಿರುವ ಜಿಂಕೆಯಂತಿರುವ
ನಿನ್ನ ನೋಡುವುದೇ ಚೆನ್ನ
ಬಳೆಯ ಘಲ್ ಘಲ್ ನಾದಕ್ಕೆ
ನಿನ್ನ ನಗುವಿನ ನಾದ
ಸೇರಿ ಅಲ್ಲಾಯಿತು ಒಂದು ಹೊಸರಾಗ
ಮನವು ಕುಣಿಯಿತು
ಹೊಸರಾಗದಿಂದ
ನಾ ಸೋತೆ ನಿನ್ನ ಕುಡಿಗಣ್ಣ ನೋಟಕ್ಕೆ
ನೀ ಬಂದೆ ಕೈತುಂಬಾ ಬಳೆಗಳ
ತೊಟ್ಟು ಪಡಿಯಕ್ಕಿ ಎಡವಿ
ತುಂಬಿಸಿದೆ ನನ್ನ
ಬರಿದಾದ ಮನೆ ಮನವ
ಬಳೆಯ ನಾದದಿ ಮನಸು ತುಂಬಿ
ನಿನ್ನ ಪ್ರೀತಿಯ ಹನಿಯಲಿ ನಾ ದುಂಬಿ
ಚೆಲುವೆ ನೀನಿರಲು ನನ್ನ ಮನೆ ಮನ ತುಂಬಿ
ಪಂಕಜಾ.ಕೆ.. ಮುಡಿಪು ಕುರ್ನಾಡು
Comments
Post a Comment