ಬೀಡಾಡಿ ನಾಯಿ
ಬೀಡಾಡಿ ನಾಯಿಗಳು
ಅಲೆಯುತ್ತಿವೆ ಎಲ್ಲೆಡೆ
ಹುಚ್ಚು ನಾಯಿಯ ತೆರದಲಿ
ಅಡ್ಡ ಗಟ್ಟುತ ದಾರಿಯ
ಕಾರಣವಾಗುತ್ತಿದೆ
ಅಪಘಾತಕೆ
ಪ್ರಾಣಿದಯ ಸಂಘದವರು
ಕೊಲ್ಲಲು ಬಿಡದೆ ಅವುಗಳ
ಸಂತತಿಗಳು ವೃದ್ಧಿಸುತಿದೆ
ವರ್ಷದಿಂದ ವರ್ಷಕೆ
ನಾಯಿಗಳ ಮೇಲಿರುವ
ಕರುಣೆ ಹಾಲು ಕೊಟ್ಟು
ನಮ್ಮ ಪೊರೆವ ಕಾಮಧೇನು
ವಿನ ಮೇಲಿಲ್ಲವು
ನಿತ್ಯ ಗೋವುಗಳ ಕಡಿದು
ತಿಂದು ಹರಣವಾಯಿತು
ಅವುಗಳ ಸಂತತಿ
ಗೋವು ನಮ್ಮ ಎರಡನೇ
ತಾಯಿ ಎನ್ನುವುದು
ತಿಳಿಯಲಾರದೆ ಇವರಿಗೆ
ಬೀಡಾಡಿ ನಾಯಿಗಳ ಹಿಡಿದು
ಮಾಡಬೇಕುಅವಕೆ
ಸಂತಾನಹರಣವ
ತಪ್ಪಿದರೆ ತುಂಬಿಹೋದೀತು
ಎಲ್ಲ ಕಡೆಯೂ ಅವುಗಳೇ
ಪಂಕಜಾ. ಕೆ ಮುಡಿಪು ಕುರ್ನಾಡು
Comments
Post a Comment