ಗಣೇಶನಾಗಮನ
ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಗೆಜ್ಜೆ ಕಾಲ ಕುಣಿಸುತಲಿ
ಬಂದನಲ್ಲ ನಮ್ಮ ಗಣಪ ಬಂದನಲ್ಲ
ಸೊಂಡಿಲನನ್ನು ಆಡಿಸುತ್ತ
ದೊಡ್ಡ ಕಿವಿಯಲಿ ಗಾಳಿ ಹಾಕುತ
ವಕ್ರದಂತವ ತೋರಿಸುತ್ತಾ ಬಂದನಲ್ಲ
ಬಗೆ ಬಗೆಯ ತಿಂಡಿಗಳ
ಬೇಗದಲ್ಲಿ ತಿನ್ನುತ್ತ
ದೊಡ್ಡ ಹೊಟ್ಟೆಯ ಕುಣಿಸುತ್ತ ಬಂದನಲ್ಲ
ಭಕ್ತರನ್ನು ಹರಸುತ್ತ
ಭಕ್ತಿಗವನು ಒಲಿಯುತ್ತ
ತಿಂಡಿ ತೀರ್ಥ ಎಲ್ಲಕ್ಕಿಂತ
ಭಕ್ತಿಯಿಂದ. ಭಜಿಸುದೇ ಇಷ್ಟ ಎಂದನಲ್ಲ
ನಿತ್ಯವೂ ಭಜಿಸುವವರ
ಇಷ್ಟಾರ್ಥಗಳ ಈಡೇರಿಸುವೆ
ಎಂದನಲ್ಲತಾಯಿ ಪಾರ್ವತಿಯ ಕುವರ
ಭಕ್ತವತ್ಸಲ ಮುದ್ದು ಗಣಪ
ಪಂಕಜಾ .ಕೆ ಮುಡಿಪು ಕುರ್ನಾಡು
Comments
Post a Comment