ನೆನಪಿನೋಲೆ
ನವಿಲು ಗರಿಯಲಿ
ನೆನಪಿನ ನಗಾರಿ
ನವಿರು ಪುಳಕ
ನೋವ ಮರೆಸುವ ಭಾವ
ಭಾವದಲಿ ಬೆಸುಗೆ
ಬಾಹು ಬಂಧನದಲ್ಲಿ ಒಲವು
ಭರಪೂರ ಖುಷಿ
ನೆನಪುಗಳ ಮಾಲೆ
ನನಸಾಗುತ ಸಾಗಿ
ನವಿರು ಭಾವದಲಿ
ನಲಿಯುತಿರಲು
ಮನಕೆ ಮುದತರುವ ಓಲೆ
ಮನದಲಿ ಮಾಧವನ ಬಲೆ
ಮೋಹನಾಂಗನ ಲೀಲೆ
ಮನದಿ ರಿಂಗಣಿಸುವ ಒಲವು
ಯಮುನೆಯ ತೀರದಲಿ
ಯೋಚನೆಯ ಭಾರದಲಿ
ಯಾವತ್ತೂ ಇಲ್ಲದ ಭಾವ
ಯವ ಜನ್ಮದ ಮೈತ್ರಿ
ಕೊಳಲಿನ ನಾದ
ಕಿವಿಗಳಲಿ ತುಂಬಿ
ಕಂಬನಿಯ ಭಾರಕ್ಕೆ
ಕಣ್ಣು ಮಂಜಾಗುತ
ಕಾಯುವಿಕೆಯ ತಪದಲಿ
ಕರಗುತ ನಿಂದಳು ರಾಧೆ
ಪಂಕಜಾ. ಕೆ. ಮುಡಿಪು.ಕುರ್ನಾಡು
Comments
Post a Comment