ಗಣಪಗೆ ನಮನ
ನಮಿಸುವೆನು ಗಣಪ
ನಿನ್ನ ಚರಣ ಕಮಲಗಳಿಗೆ
ಗಜಮುಖವದನ ಗಜಾನನ
ವಿಘ್ನನಿವಾರಕ ವಿಘ್ನೇಶ್ವರ
ಈಶ್ವರ ನಂದನ ಗಣೇಶ್ವರ
ಪಾರ್ವತಿ ತನಯ ಗಜಮುಖನೆ
ಮೊದಲ ವಂದನೆಯ ಸಲ್ಲಿಸುವೆ ನಿನಗೆ
ಭಾದ್ರಪದ ಚೌತಿಯಶುಭದಿನದಿ
ಹರಸು ಬಾ ನಮ್ಮನು
ಚಕ್ಕುಲಿ ಉಂಡೆ ಕಡುಬುಗಳ
ನೈವೇದ್ಯವನಿಟ್ಟು ಭಕ್ತಿಲಿ
ನಿನಗೆ ಕರ ಮುಗಿವೆ
ಕರುಣೆಯ ತೋರಿ ಕಾಯು ನಮ್ಮನೆಲ್ಲರನು
ಪಂಕಜಾ.ಕೆ. ಮುಡಿಪು ಕುರ್ನಾಡು
Comments
Post a Comment