ಒಲವ ಕರೆ
ಅಬ್ಬರದ ಉಬ್ಬರದಿ
ಎದ್ದೆದ್ದು ಬಂದು
ಹಗಲಲ್ಲೂ ಇರುಳ
ಕಲ್ಪನೆಯ ತೋರುತ್ತ
ಗುಡುಗು ಮಿಂಚುಗಳ
ಅಬ್ಬರದಿಂದ ಸುರಿದು
ಮನೆ ಮಠ ಗಳ ಕೊಚ್ಚಿ
ತರಿದು ಸುರಿದು
ಸಿಡಿಲಬ್ಬರಕೆ ಚಂಡಮಾರುತ
ದುಬ್ಬರಕೆ ಜನಜೀವನವ
ತಲ್ಲಣಿಸಿ ಸುರಿದು ದಣಿದು
ಇಂದೀಗ ವರುಣ ನೀನೆಲ್ಲಿ
ಮಳೆಯ ಸಿಂಚನದಿಂದ
ಮೇಲೆದ್ದ ಗಿಡಗಳು
ರವಿಯ ಕಡು ಕಿರಣಕ್ಕೆ
ನೊಂದು ಬೆಂಡಾದವು
ಸುರಿಸು ಮಳೆಯ ಇಳೆಗೆ
ಒಲವ ಹನಿಸು ಧರೆಗೆ
ಮುನಿಸು ತರವೇ ವರುಣಾ
ಬೆಗಿದಪ್ಪು ನೀ ಬಂದುಇಳೆಯ
ಕಾಯುತಿರುವುದು ಇಳೆ
ಮಳೆ ಮೋಡಗಳ ನಿಟ್ಟಿಸುತ
ಒಲವ ಕರೆಯನು ಆಲಿಸಿ
ಸುರಿಸು ನೀ ವರ್ಷಧಾರೆಯ
ಪಂಕಜಾ. ಕೆ. ಮುಡಿಪು ಕುರ್ನಾಡು
Comments
Post a Comment