ವಸಂತನಾಗಮನ
ಮಾವಿನ ಮರದಲಿ
ಹೂವುಗಳರಲಿ
ಮನದಲಿ ಸಂತಸ
ಭಾವವ ತುಂಬಿ
ಮಧುವನು ಹೀರಲು
ಬರುತಿಹ ಹಕ್ಕಿಗಳ ಕಲರವ
ಸಂತಸ ಸಂಭ್ರಮ
ಮನದಲಿ ತುಂಬಿ
ಪ್ರಕೃತಿಯ ಚೆಲುವು
ಇಮ್ಮಡಿಯಾಗಿ
ಕಣ್ಮನವೆಲ್ಲಾ ತುಂಬಿ
ಮೈಯನು ಮರೆಸುತಿದೆ
ಹಿಗ್ಗಿನ ಸುಗ್ಗಿಯು ಉಕ್ಕಿ
ಮನದಲಿ ಸಂತಸದ
ಬುಗ್ಗೆಯು ಅರಳಿ
ಜೀವನ ಪ್ರೀತಿಯ ತುಂಬುತಿದೆ
ಮಾವಿನ ಮರದಲಿ
ಹಾಡುವ ಕೋಗಿಲೆ
ಹಾರುವ ದುಂಬಿಗಳಾಟ
ಮೈಮನ ಮರೆಸುವ ನೋಟ
ವಸಂತನಾಗಮನದಿಂದ
ಎಲ್ಲೆಡೆ ತುಂಬಿತು
ಹಸಿರಿನ ಉಸಿರು
ಮನದಲಿ ಸಂತಸದುಸಿರು
ಪಂಕಜಾ.ಕೆ. ಮುಡಿಪು ಕುರ್ನಾಡು
Comments
Post a Comment