ಒಲುಮೆಯಲಿ
ನಿನ್ನ ಒಲುಮೆಯಲಿ ಮಿಂದು
ಅರಳಿ ನಗುತ್ತಿರುವ ಹೂವು ನಾನು
ನಿನ್ನ ಸಾಂಗತ್ಯದಲಿ ನಲಿದು
ಹಾರುತಿರುವ ಹಕ್ಕಿ ನಾನು
ನೀ ಬಂದ ಕ್ಷಣದಿಂದ
ಕನಸು ಮನಸಲಿ ನೀನೇ ನಲ್ಲ
ಮಳೆಯ ಸವಿ ಮುದ್ದಿಗೆ
ಬಿರಿದರಳಿದ ಹೂವಿನಂತೆ
ನಿನ್ನ ಒಡನಾಟದಲಿ
ಬಾಳಾಯಿತು ಹಾಲುಜೇನು
ಹೂವಾಗಿ ಕಾಯಾಗಿಹಣ್ಣಾಗುತ
ನಗುತಲಿರುವೆ ನಿತ್ಯ ನಿನಗಾಗಿ
ನೀ ನನ್ನ ಬಾಳ ತೇರು
ನೋವಿರಲಿ ನಲಿವಿರಲಿ
ಜತೆಯಾಗಿ ನೀನಿರಲು
ಬಾಳಲ್ಲಿ ಅರಳುತಿದೆ ಹೂವು
ಬಣ್ಣಬಣ್ಣದ ಹೂವು
ಅರಳಿರುವ ಗಿಡದಂತೆ
ನಿತ್ಯ ನಗುತ್ತಿರುವ ನಾವು
ಕಷ್ಟ ಸುಖಗಳಲಿ ಜತೆಯಾಗಿ
ಪಂಕಜಾ.ಕೆ
Comments
Post a Comment