ಹೂ ಮನಸು
ಮಂಜಿನಾ ಸ್ಪರ್ಶದಲಿ
ಮೈಮರೆತು ನಿಂತಾಗ
ಮೆಲ್ಲ ಮೆಲ್ಲನೆ ಬಂದು
ಮನಕೆ ಲಗ್ಗೆಯಿಟ್ಟೆಯೇಕೆ
ಮಂಜು ಹನಿಗಳು ಕರಗಿ
ಮುತ್ತಾಗಿ ಸಾಗುತಿರಲು
ಮನದಿ ತುಂಬಿದ ಭಾವನೆಗೆ
ಮುನಿದು ಕರಗಿದೆಯೇಕೆ
ನಿನ್ನ ಕೋಪದ ಬಿಸಿಲಝಳ
ಸೋಕಿ ನಾ ನಿಂದು ಬೆಂದೆ
ಆಸರೆಯು ನೀ ನನಗೆ ಎಂದೆ
ಹೂ ಮನಸಲಿ ನೀನಂದು
ಕನಸ ಬಿತ್ತಿದೆಯೇಕೆ
ವರುಣ ಬಂದನು ಇಂದು
ಬಿಸಿಲ ತಾಪವ ತಣಿಸಿ
ಮುದಕೊಟ್ಟ ಮೈ ಮನಕೆ
ಅರಳಿ ನಲಿಯಿತು ಜೀವ
ಮನಸು ತಂಪಾಯಿತೇಕೆ
ತುಂಬಿ ನಿಂತಿತು ಚಿಗುರುಹೂವು
ಕಣ್ಣು ತುಂಬುವ ಚೆಲುವು
ದುಂಬಿಗಳಾಕರ್ಷಣೆಗೆ ತುತ್ತಾಗಿ
ಇಂದು ನಿನ್ನ ಸೇವೆಯಲಿ ನಾ ಧನ್ಯಳಾದೆ
ನೀ ನಗುವ ಬೀರುವೆಯೇಕೆ
ಪಂಕಜಾ.ಕೆ.
Comments
Post a Comment