ಕಾಮದೇನು
ಕಾಮಧೇನುವು ನೀನು
ಹಾಲಹೊಳೆಯನು ಹರಿಸಿ
ಬುವಿಯಲ್ಲಿ ನಮ್ಮನ್ನು
ಪೊರೆದಾಕೆ ಅಂದು ಇಂದು
ನಿನ್ನ ಅಮೃತದ ಪಾನದಿಂದ
ಬದುಕಿ ಇಂದು ನಾವು
ನಿಂತಿರುವೆವು ಆರೋಗ್ಯ
ತುಂಬಿ ತುಳುಕಿ
ಮತಿಹೀನ ಜನರಿಂದು
ನಿನ್ನ ಕರುಣೆಯ ಮರೆತು
ಕಾಡುವರು ಅನವರತ
ತಟ್ಟದೇ ಅವರಿಗೆ ನಿನ್ನ ಶಾಪ
ಕಡಿದು ತಿನ್ನುವರು ನಿನ್ನ
ಸಂತತಿಯ ಉಳಿಸದೆಯೇ
ಉಳಿದೀತೆ ಅವರ ಸಂತತಿ
ಕೊಚ್ಚಿಹೋಗದೆ ಅದು
ನಿನ್ನ ಕಣ್ಣೀರಿನಲಿ
ಅಂದು ಮಾಧವನು ನಿನ್ನ
ಕಾಯ್ದಂತೆ ಇಂದು ನಮ್ಮ
ಗುರುವರರು ತೊಟ್ಟಿಹರು ದೀಕ್ಷೆ
ಗುರುಕರುಣೆಯಿರಲು
ನೀನಲ್ಲ ಅಬಲೆ
ಅಮೃತ ಸಮಾನವಾದ ಹಾಲು
ಮಲಮೂತ್ರಗಳಲೂ ಔಷದಿಯ ಪಾಲು
ಸಕಲ ಲೋಕಗಳುಇರುವ ತಾಣ
ಭಗವಂತನ ನೆಲೆ ನೀನಿರುವ ತಾಣ
ಅದು ತಿಳಿದು ಕಾಯಬೇಕು ನಿನ್ನ ಪ್ರಾಣ
ಪಂಕಜಾ.ಕೆ .ಮುಡಿಪು.ಕುರ್ನಾಡು
Comments
Post a Comment