ನಿನಗಾಗಿ
ಇಬ್ಬನಿಯ ಹನಿಯಂತೆ
ತಬ್ಬಿರಲು ಮನಸನ್ನು
ಕೋಪತಾಪದ ಬಿಸಿಗೆ
ನಲುಗಿ ಹೋಯಿತು ಮನಸು
ಪ್ರಿಯೆ ನೀ ನೇಕೆ ಮುಖತಿರುವಿ
ನಿಂತಿರುವೆ ತಾಳಲಾರೆನುನಾನು
ನಿನ್ನ ಈ ಉರಿ ಕೋಪವ
ಬಿಡು ನಿನ್ನ ಈ ಹುಸಿಕೊಪವ
ನಗುಮುಖವ ತೋರು ಬಾನಲ್ಲೇ
ಕೊಡುವೆ ನಿನಗೆ ನನ್ನೊಲವಿನ ಓಲೆ
ಮುಸಿ ಮುಸಿಯೆಂದು ನಗಬೇಡ
ನನ್ನ ಹೃದಯಕೆ ಲಗ್ಗೆಯಿಟ್ಟು
ಮುನಿದು ದೂರಸರಿಯಬೇಡ
ಒಮ್ಮೆ ನೀನು ಬಂದುಬಿಡು
ನನ್ನ ಮನ ಮನೆಯೊಳಗೆ
ನಿನಗಾಗಿ ಕದ ತೆರೆದು
ಕಾದಿರುವೆ ನಗುತ ಬಾ ಚೆಲುವೆ
ಪಂಕಜಾ .ಕೆ.
Comments
Post a Comment