ನೇಗಿಲಯೋಗಿ
ಮಳೆಬಿಸಿಲೆನ್ನದೆ ಗದ್ದೆಯ ಕೆಸರಲಿ
ಹಾಡುತ ಕುಣಿಯುತ ದುಡಿಯುವನು
ಗದ್ದೆಯ ಉತ್ತುನೇಜಿಯ ನೆಟ್ಟು
ಬೆಳೆಯನು ಬೆಳೆಯುತ
ಉಣಿಸುವನದನು ನಮಗೆಲ್ಲ
ಕಷ್ಟ ನಷ್ಟ ಗಳ ಅನುದಿನ ಬರಿಸಿ
ಬಿಸಿಲು ಮಳೆ ಗಾಳಿಯ ಸಹಿಸಿ
ಸುಗ್ಗಿಯ ಬೇಸಾಯವನು ಮಾಡುತ
ಭೂತಾಯಿಯ ಮಡಿಲಿಗೆ
ಹಸಿರಿನಹೊದಿಕೆಯಹೊದಿಸುವನು
ಕಾಯಕವೇ ಕೈಲಾಸವೆನುತ
ದುಡಿಯುತತೃಪ್ತಿಯಕಾಣುವನು
ನೇಗಿಲಯೋಗಿ ಅನ್ನದಾತನಿವ
ದೇಶದ ಹಸಿವನು ಕಳೆಯುವನು
ನಮಿಸಿರಿ ಇವನಿಗೆ ದಿನವೆಲ್ಲ
ಬರಗಾಲದ ಹೊಳೆಅತಿವೃಷ್ಟಿಯ ನೆರೆ
ಕಂಗೆಡಿಸದಿರಲವನತನುಮನವ
ಎತ್ತರಕ್ಕೇರಲಿ ಅನ್ನದಾತನ ಹಿರಿಮೆ
ಹಸಿರು ಉಸಿರಾಗಲಿ ನಮ್ಮಯ ನಾಡು
ಪಂಕಜಾ.ಕೆ.
Comments
Post a Comment