ಹಸಿರು. ... ಉಸಿರು
ಹಸಿರು ಉಸಿರೆಂದು
ಉದ್ದುದ್ದ ಭಾಷಣವ
ನಾ ಬಿಗಿಯಲಿಲ್ಲ
ಸಭೆ ಸಮಾರಂಭಗಳ ನಡೆಸಿ
ಪರಿಸರ ದಿನಾಚರಣೆಯ
ನಾ. ಆಚರಿಸಲಿಲ್ಲ
ನೆಟ್ಟಿರುವೆ ಗಿಡಗಳನು
ಮನೆ ಸುತ್ತ ಮುತ್ತ
ಹಸಿರು ಉಸಿರಾಗಲೆಂದು
ಪರಿಸರ ಕಾಳಜಿಯ ತೋರಿ
ಹಸಿರು ಕಾಡನು ಬೆಳೆಸಿ
ನೆಲ ಜಲ ಉಳಿಸಿ
ಹಸಿರೇ ಉಸಿರೆಂದು
ತಿಳಿದು ಗುಡ್ಡ ಬೆಟ್ಟಗಳ
ಉಳಿಸಿ ಕಾಡು ಬೆಳೆಸಿ
ಕಾಂಕ್ರೀಟ್ ಕಾಡುಗಳು
ಆಗುತ್ತಿದೆ ಎಲ್ಲೆಲ್ಲೂ
ಗುಡ್ಡ ಬೆಟ್ಟಗಳ ಕಡಿದು
ಹರಿದು ಓಡುತ್ತಿದೆ ನೀರು
ತುಂಬಿತು ಮನೆ ಒಳಗೆ
ಹೊರಗೆ ಎಲ್ಲೆಲ್ಲೂ ನೀರು
ನೀರಿಂಗಿಸಲು ಜಾಗವಿಲ್ಲ
ಹಸಿರು ಕಾಡುಗಳಿಲ್ಲ
ಪ್ರಕೃತಿ ಮುನಿಯದಿರಲೇ
ಭಾಷಣವ ಬಿಗಿಯುತ್ತ
ಬೀಗುವ. ಬದಲು
ಕಾರ್ಯರೂಪಕ್ಕೆ ತರುತ
ಹಸಿರು ಬೆಳೆಸಿ ಉಸಿರ ಉಳಿಸಿ
ಪಂಕಜಾ. ಕೆ ಮುಡಿಪು ಕುರ್ನಾಡು
Comments
Post a Comment