ಒಲವಹನಿ
ಇನಿಯ ಸುರಿಸಿದ ಒಲವ ಹನಿಗಳು
ಬಾಳ ಬಳ್ಳಿಯಲಿ ಸುರಿದವು ಮುತ್ತುಗಳು
ಮುದುಡಿದ ಮನಗಳು ಅರಳುತಿದೆ
ಒಲವ ಧಾರೆಯ ಸವಿದ ಇನಿಯಳಂತೆ
ಮನದ ಕರಿ ಮೋಡಗಳು ಬಿರಿದು
ಒಲವ ಸಿಂಚನಕೆ ಅರಳಿತು ಕನಸು
ಇನಿಯನೊಲುಮೆಯ ಧಾರೆ
ತುಂಬುತಿದೆ ಮನದಲ್ಲಿ ಹರ್ಷಧಾರೆ
ಬಾಳಲಿ ಉಕ್ಕುತಿದೆ ಹರ್ಷದ ಹೊನಲು
ಮಳೆ ಬಂದು ತಂಪಾದ ಇಳೆಯ ತೆರದಿ
ಪಂಕಜಾ.ಕೆ.
Comments
Post a Comment