ಬೆಡಗಿ
ಬಣ್ಣದ ಲಂಗವ
ಚಂದಕೆ ಬಿಗಿದು
ಬಂದಳು ಮೆಲ್ಲಗೆ
ಚೆಲುವಿನ ಬೆಡಗಿ
ನವಿಲಿನ ನಡಿಗೆಯ
ಕೋಗಿಲೆ ದ್ವನಿಯ
ಮೈಮನ ಮರೆಸುವ
ಚೆಲುವಿನ ಬೆಡಗಿ
ಎದೆಯನು ಬಗೆದು
ಬಿಗಿಯಲಿ ನಿಂದು
ತನುವಿಗೆ ತಂದಳು
ಬಿಸಿ ಬುಗ್ಗೆಯನು
ಮೈಮನ ಮರೆಸಿ
ನವೋಲ್ಲಾಸವ ಹರಿಸಿ
ನಗುತಲಿ ನಿಂದಳು
ಚೆಲುವಿನ ಬೆಡಗಿ
ಕಾಲ್ಗಳ ಗೆಜ್ಜೆಯ ಕುಣಿಸುತಲಿ
ಕೈಗಳ ಬಳೆಗಳ ಘಳಿರೆನಿಸುತಲಿ
ಮನಸಿನ ಕದವನು ತೆರೆಸುತಲಿ
ನಲಿಯುತ ಬಂದಳುಮನದರಸಿ
ಪಂಕಜಾ .ಕೆ. ಮುಡಿಪು
Comments
Post a Comment