ಹೃದಯವೀಣೆ
ಹೃದಯವೆಂಬ ಮಾಂಸ ಮುದ್ದೆಯು
ಮಿಡಿಯುತಿರುವುದು ನಿತ್ಯವೂ
ಎಂದು ನೀನು ಬಂದು ಕುಳಿತೆ
ನನ್ನ ಹೃದಯ ದ ಗುಡಿಯಲಿ
ಕನಸು ಮನಸಲು ತುಂಬುತ್ತಿರುವುದು
ನಿನ್ನ ಹೃದಯದ ಮಿಡಿತವು
ಹೃದಯ ಹೃದಯಕೆ ಬೇಧವೆಲ್ಲಿ
ಇರುವುದೊಂದೇ ರಕ್ತ ವು
ಚೆಲುವ ನಿನ್ನಯ ಹೃದಯ ಮಂದಿರದಲ್ಲಿನೆಲೆಸಿ
ನಕ್ಕು ನಲಿಯುವ ಬಯಕೆಯು
ಕದವ ತೆರೆದು ಕಾಯಲೇನು
ನಿನ್ನ ಹೃದಯವ ಅರಿಯಲು
ಮಿಡಿಯುತಿರುವ ಹೃದಯವು
ಇರುವ ತನಕ ಜೀವವು
ನಗುತ ಬಾಳಿನ ಸವಿಯ ಸವಿಯುವ
ಹೃದಯ ಮಿಡಿಯುವ ತನಕವೂ
ಹೃದಯ ವೀಣೆಯ ನುಡಿಸುತ
ಭಾವ ದಲೆಗಳಲಿ ತೇಲುವ
ಪಂಕಜಾ .ಕೆ.
Comments
Post a Comment