ಹವ್ಯಾಸ
ಹಸಿರಿನ ಹುಲ್ಲಿನ ಮೇಲೆ
ಮುತ್ತಿನ ಮಣಿಗಳ ಸಾಲೆ
ಬರಿಗಾಲಿನಲಿನಡೆಯುತಲಿರಲು
ತುಂಬುವುದುಮೈಯಲಿಉಲ್ಲಾಸ
ಗಡಗುಟ್ಟುವ ಚಳಿಯಲಿ
ಬೆಳಗಿನಜಾವದಿನಡೆಯುತಲಿರಲು
ರವಿ ಕಿರಣದ ಬೆಚ್ಚನೆ ಸ್ಪರ್ಶ
ಮೈಕೈ ನೋವಿನ ಪರಿಹಾರ
ನಿತ್ಯವೂ ನಡಿಗೆಯ ಹವ್ಯಾಸ
ಮನದಲಿ ತುಂಬುವುದು ಉಲ್ಲಾಸ
ಪ್ರಕೃತಿಯಜತೆಯಲಿನಲಿಯುತಲಿದ್ದರೆ
ತುಂಬುವುದು ಜೀವನೋತ್ಸಾಹ
ಮನಸಿನ ಬೇಸರ ಕಳೆಯಲು
ಇರಬೇಕು ಉತ್ತಮ ಹವ್ಯಾಸ
ಹವ್ಯಾಸಗಳ ಬೆಳೆಸುತಲಿದ್ದರೆ
ಉಲ್ಲಾಸ ಹುರುಪು ತುಂಬುವುದು
ಪಂಕಜಾ.ಕೆ
Comments
Post a Comment