Skip to main content

ತಾಳ್ಮೆ

ತಾಳ್ಮೆ

ತಾಳ್ಮೆಯೆನ್ನುವ ಬುತ್ತಿ
ನಾ ಅದನು ಮನದಲ್ಲಿ ಬಿತ್ತಿ
ಪಡೆದೆನಂದು ನಿನ್ನ ಒಲವು
ಅದೆನ್ನ ಜೀವನದ ಗೆಲುವು

ಜೀವನಕೆ ತಾಳ್ಮೆಯ ಬುನಾದಿ
ಅದುವೇ ನನ್ನ  ಬಾಳಿನ ಹಾದಿ
ಗೆದ್ದಿತು ನಿನ್ನ ಮನಸು
ನನಸಾಯಿತು ಕಂಡ ಕನಸು

ತಾಳ್ಮೆಯಿಂದ ಪಡೆದೆ ಗೆಲುವು
ಸಿಕ್ಕಿತು ಸಂಬಂಧದಲ್ಲಿ ಬಲವು
ತಾಳ್ಮೆ ನನ್ನ    ಮನಸಿನ ಬಲ
ತಿಳಿಯಬೇಡಿ ನಾನು ದುರ್ಬಲ

ತಾಳ್ಮೆಯೊಂದು   ತಪಸ್ಸು
ಸಿಕ್ಕೀತು  ಇದರಿಂದ  ಯಶಸ್ಸು
ತಾಳ್ಮೆಯಿಂದ ಮಾಡುವ ಕೆಲಸ
ಇರಬಹುದದರಲ್ಲಿ  ಪ್ರಯಾಸ

ಒತ್ತಡದ ಬದುಕಿಗೆ ವರ
ಈಗೀಗ ಅದಕೆ ಬರ
ತಾಳ್ಮೆಯುತ ನಿರ್ಧಾರ
ಮಾಡಿ ನೀನಾಗುವೆ  ಸರದಾರ

ತಾಳ್ಮೆಯಲಿ ಇರುವ ಬುದ್ದಿ
ಕೆಲಸದಲ್ಲಿ ಸಿಗಬಹುದು ಸಿದ್ದಿ
ಜೀವನಕ್ಕೆ ಇದು ಬಹಳ ಮುಖ್ಯ
ಇದರಿಂದ ಸಿಕ್ಕೀತು ಬಾಳಲ್ಲಿ  ಸೌಖ್ಯ

ತಾಳ್ಮೆಯಿದ್ದರೆ  ಎಲ್ಲವೂ ಸಾಧ್ಯ
ಇರಲಾರದು ಯಾವದೂ ಅಸಾಧ್ಯ
ಬೇಗ ಬೇಗ ಆಗಬೇಕೆನ್ನುವ ಆಶೆ ಬಿಡು
ತಾಳ್ಮೆಯಲಿ ಕಾದರೆ  ಗೆಲುವು ನೋಡು

ತಾಳಿದವನು ಬಾಳಿಯಾನು ಗಾದೆ
ಆಚರಿಸಿದರೆ ಇಲ್ಲ ಬಾದೆ
ತಾಳ್ಮೆಯ ನಂಟನು ಮಾಡೋಣ ನಾವೆಲ್ಲ
ಪಡೆಯೋಣ ಪ್ರೀತಿ ವಿಶ್ವಾಸದ ಬೆಲ್ಲ

ಪಂಕಜಾ.ಕೆ.

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...