Skip to main content

ಜೀವನ ಸಂತೋಷ

ಜೀವನ ಸಂತೋಷ

ಹಳ್ಳಿಲಿ  ಏನುಂಟು
ಡೆಲ್ಲಿಲಿ ಎಲ್ಲಉಂಟು
ಹೊರಟವಿನಿ ಡೆಲ್ಲಿಗೆ  ನೋಡವ್ವ
ಹೊರಟಿವಿನಿ ಡೆಲ್ಲಿಗೆ ನೋಡವ್ವ

ಡೆಲ್ಲಿಗೆ ಹೋದಮೇಲೆ
ಗೊತ್ತಾಯ್ತು  ನೋಡವ್ವ
ಹಳ್ಳಿಯ ಜೀವನದ ಆನಂದ
ಹಳ್ಳಿಯ ಜೀವನದ ಆನಂದ ನೋಡವ್ವ

ಹಳ್ಳಿಲಿ ಇರುವಂತ
ತಿಳಿನೀರಕೊಳವೆಲ್ಲಿ
ಡೆಲ್ಲಿಯ ಕೊಳಕು ನೀರೆಲ್ಲಿ
ನಮ್ಮವ್ವ ಕೊಳಕು ನೀರೆಲ್ಲಿ

ಹಕ್ಕಿಗಳ ಹಾಡು ಕಿವಿಗಿಂಪು ನನ್ನವ್ವ
ಡೆಲ್ಲಿಲಿ ಮೈಕಾಸುರನ ಅಬ್ಬರ ನೋಡವ್ವ
ಹಳ್ಳಿಯ ಸಂತೋಷ ಇಲ್ಲೆಲ್ಲವ್ವ
ಹಳ್ಳಿಯ ಸಂತೋಷ ಇಲ್ಲೆಲ್ಲವ್ವ

ಹುಡುಕಿದರೂ ಸಿಗದವ್ವ
ಪ್ರೀತಿ ವಿಶ್ವಾಸ ನೋಡವ್ವ
ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ
ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ

ಹಳ್ಳಿಲಿ ಇರುವೆವು ಎಲ್ಲರೂ ಒಂದಾಗಿ
ಪ್ರೀತಿ ವಿಶ್ವಾಸದ ತವರೂರು
ಪ್ರೀತಿವಿಶ್ವಾಸದ ತವರೂರು ನಮ್ಮವ್ವ
ಹಳ್ಳಿಯ ಜೀವನ ಸೊಗಸವ್ವ

ಕಷ್ಟ ಸುಖದಲ್ಲೂಜತೆಯುಂಟು ನೋಡವ್ವ
ಡೆಲ್ಲಿ ಲಿ ಇವೆಲ್ಲಾ ಎಲ್ಲವ್ವ
ಇರುವುದು ದುಡ್ಡು ಒಂದೇ ನೋಡವ್ವ
ದುಡ್ಡು ಒಂದೇ ನೋಡವ್ವ

ಬೆಳಗಾತ ಮೂಡಣದಿಮೂಡೈತೆ
ಬಂಗಾರ ಬಟ್ಟಲು  ನೋಡವ್ವ
ಓಬೇಲೆ ಹಾಡುತ್ತ ಹೊಂಟ್ಯಾನು ರೈತ
ಓಬೇಲೆ ಹಾಡುತ್ತ ಹೊಂಟ್ಯಾನು

ಎತ್ತುಗಳ ಕೊರಳ ಗಂಟ್ಯಾ ಕೇಳ್ಳ್ಯಾವ
ಸುತ್ತೆಲ್ಲ ಹಸಿರೆ ತುಂಬ್ಯಾವ
ಸುತ್ತೆಲ್ಲ ಹಸಿರೆ ತುಂಬ್ಯಾವ ನಮ್ಮವ್ವ
ಹಳ್ಳಿಯ ಸೊಗಡ ನೋಡವ್ವ

ಜೀವನ ಸಂತೋಷ ಹಳ್ಳಿಲಿ ತುಂಬೈತೆ
ಡೆಲ್ಲಿ ಲಿ ಎನೈತೆ ಹೇಳವ್ವ
ಡೆಲ್ಲಿ ಲಿ ಎನೈತೆ ನಮ್ಮವ್ವ
ಬಸ್ ಕಾರಿನ ಧೂಳವ್ವ

ಪಂಕಜಾ .ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020