ಹೃದಯ ರಾಗ
ಬಾಳ ಪಯಣದ ದಾರಿಯಲ್ಲಿ
ನಿನ್ನ ಜತೆಯಲ್ಲಿ ಸಾಗಲು
ಮನದಿ ತುಂಬಾ ತುಂಬುತ್ತಿ ರುವುದು
ಒಲವ ಜೇನಿನ ಹನಿಗಳು
ಕೈಗಳೆರಡನು ಸೇರಿಸಿ
ಸಾಗುತಿರೋಣ ನಿತ್ಯವೂ
ಹೃದಯಹೃದಯವಒಂದುಗೂಡಿಸಿ
ನಲಿಯುತಿರೋಣ ನಿತ್ಯವೂ
ಕನಸು ಮನಸಲು ಪ್ರೀತಿ ತುಂಬಿ ಒಲವ ಜ್ಯೋತಿಯ ಉರಿಸುವ
ಒಲವ ಸುಧೆಯನು ಹರಿಸಿ ಬದುಕಲಿ
ಜೇನ ಸವಿಯನು ಸವಿಯುವ
ಹೃದಯ ರಾಗಹಾಡುತಿರುವುದು
ಉಲಿವ ಕೋಗಿಲೆಯಂದದಿ
ಕನಸು ಮನಸಲು ತುಂಬುತ್ತಿರುವುದು
ಬಣ್ಣ ಬಣ್ಣದ ತೇರನು
ಪಂಕಜಾ.ಕೆ
Comments
Post a Comment